ಕೇದಾರನಾಥದಲ್ಲಿ 'ಕಣ್ಣಪ್ಪ' ತಂಡ; ದೇಶದ ಎಲ್ಲ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಮುಂದಾದ ತೆಲುಗು ನಟ ವಿಷ್ಣು ಮಂಚು
ಪ್ಯಾನ್ ಇಂಡಿಯಾ ಸಿನಿಮಾ ಕ್ರೇಜ್ ಶುರುವಾದಲ್ಲಿಂದ ಸ್ಟಾರ್ ನಟರೆಲ್ಲರೂ ಬಿಗ್ ಬಜೆಟ್ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹದಲ್ಲಿ ತೆಲುಗು ನಟ ವಿಷ್ಣು ಮಂಚು ನಿರ್ಮಿಸಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕಣ್ಣಪ್ಪ' ಕೂಡ ಒಂದು. ಈ ಸಿನಿಮಾ ಮೇಕಿಂಗ್ ಅದ್ಧೂರಿಯಾಗಿ ನಡೆಯುತ್ತಿದ್ದು, ಕೇದಾರನಾಥ ಸನ್ನಿಧಿಗೆ ಭೇಟಿ ನೀಡಿದ್ದಾರೆ.
ತೆಲುಗಿನ ಲೆಜೆಂಡರಿ ಆಕ್ಟರ್ ಮೋಹನ್ ಬಾಬು ಪುತ್ರ ವಿಷ್ಣು ಮಂಚು ನಟಿಸುತ್ತಿರುವ ಸಿನಿಮಾ 'ಕಣ್ಣಪ್ಪ'. ಶಿವನ ಅಪ್ರತಿಮ ಭಕ್ತ 'ಕಣ್ಣಪ್ಪ'ನ ಕಥೆಯನ್ನು ಇಟ್ಟುಕೊಂಡಿ ಸಿನಿಮಾ ಮಾಡುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾವನ್ನು ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬಹುತೇಕ ಸಿನಿಮಾ ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡ ಈಗ ಭಾರತದ ಪವಿತ್ರಾ ಯಾತ್ರ ಸ್ಥಳಗಳಿಗೆ ಭೇಟಿ ಕೊಡುತ್ತಿದೆ.

ತೆಲುಗಿನ ಹಿರಿಯ ನಟ ಮೋಹನ್ ಬಾಬು, ವಿಷ್ಣು ಮಂಜು ಹಾಗೂ ಕಣ್ಣಪ್ಪ ಸಿನಿಮಾ ತಂಡ ಕೇದಾರನಾಥಮ ಬದರಿನಾಥ, ಋಷಿಕೇಶ ಸೇರಿದಂತೆ ದೇಶಾದ್ಯಂತ ಇರುವ ಸುಮಾರು 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಕಣ್ಣಪ್ಪ ಸಿನಿಮಾ ತಂಡ ಸಿನಿಮಾ ಬಿಡುಗಡೆಗೂ ಮುನ್ನ ಆಧ್ಯಾತ್ಮಿಕ ಯಾತ್ರೆಯನ್ನು ಮಾಡುವುದಕ್ಕೆ ನಿರ್ಧರಿಸಿದ್ದಾರೆ.
ತೆಲುಗಿನ ಲೆಜೆಂಡರಿ ಆಕ್ಟರ್ ಮೋಹನ್ ಬಾಬು ಅವರಿಗೆ ಪುತ್ರ ವಿಷ್ಣು ಮಂಚು, ನಿರ್ಮಾಪಕ ಮುಖೇಶ್ ಕುಮಾರ್, ನಟ ಅರ್ಪಿತ್ ರಂಕಾ ಸಾಥ್ ಕೊಟ್ಟಿದ್ದಾರೆ. ಸದ್ಯ ಕೇದಾರನಾಥ, ಬದರಿನಾಥ್ ಮತ್ತು ಋಷಿಕೇಶದ ಶಿವನ ದೇವಾಲಯಗಳಿಗೆ ಭೇಟಿ ನೀಡಿ ಆಧ್ಯಾತ್ಮಿಕ ಯಾತ್ರೆಯನ್ನು ಕೈಗೊಂಡಿರುವುದು ಗಮನ ಸೆಳೆದಿದೆ. ಹಿಮಾಲಯದಲ್ಲಿ ನೆಲೆಸಿರುವ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥಕ್ಕೆ ಕಣ್ಣಪ್ಪ ತಂಡ ಭೇಟಿ ಕೊಟ್ಟು ದರ್ಶನವನ್ನು ಪಡೆದಿದೆ. ಆ ಬಳಿಕ ಬದರಿನಾಥದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಋಷಿಕೇಶದಲ್ಲೂ ದರ್ಶನವನ್ನು ಪಡೆದಿದೆ.
ಕೇದಾರನಾಥ, ಬದರಿನಾಥ ಹಾಗೂ ಋಷಿಕೇಶದಲ್ಲಿ ದರ್ಶನ ಪಡೆದ ಬಳಿಕ ಯಾತ್ರೆಯ ಬಗ್ಗೆ ಕಣ್ಣಪ್ಪ ಸಿನಿಮಾದ ನಟ ವಿಷ್ಣು ಮಂಚು ಮಾಹಿತಿ ಹಂಚಿಕೊಂಡಿದ್ದಾರೆ. "ಕಣ್ಣಪ್ಪ ಸಿನಿಮಾ ರಿಲೀಸ್‌ಗೂ ಮುನ್ನ ಎಲ್ಲಾ 12 ಜ್ಯೋತಿರ್ಲಿಂಗ ಪುಣ್ಯ ಕ್ಷೇತ್ರಗಳಿಗೆ ತೆರಳುವುದು ನಮ್ಮ ಗುರಿ. ಆ ಪ್ಲ್ಯಾನ್‌ನಂತೆಯೇ ಮೊದಲಿಗೆ ಕೇದಾರನಾಥ ದೇವಾಲಯಕ್ಕೆ ತೆರಳಿ ಅಲ್ಲಿ ದರ್ಶನವನ್ನು ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನು ಉಳಿದಿರುವ 10 ಜ್ಯೋತಿರ್ಲಿಂಗಗಳನ್ನು ದರ್ಶನ ಮಾಡುತ್ತೇವೆ." ಎಂದು ಕಣ್ಣಪ್ಪ ಸಿನಿಮಾದ ನಟಿ ವಿಷ್ಣು ಮಂಚು ಹೇಳಿದ್ದಾರೆ.

'ಕಣ್ಣಪ್ಪ' ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಈ ಸಿನಿಮಾವನ್ನು ಚಿತ್ರತಂಡವೇ ಹೇಳಿಕೊಂಡಂತೆ 'ದಿ ಲಾರ್ಡ್ ಆಫ್ ದಿ ರಿಂಗ್ಸ್' ಅಂತಹ ಫ್ಯಾಂಟಸಿ ಸಿನಿಮಾದಿಂದ ಸ್ಫೂರ್ತಿ ಪಡೆದ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ 'ಕಣ್ಣಪ್ಪ' ಸಿನಿಮಾದಲ್ಲಿ ದೃಶ್ಯ ವೈಭವವನ್ನು ನಿರೀಕ್ಷೆ ಮಾಡಬಹುದು. ಈ ಸಿನಿಮಾಗೆ ಹಾಲಿವುಡ್ ಜನಪ್ರಿಯ ಕ್ಯಾಮರಾಮ್ಯಾನ್ ಶೆಲ್ಡನ್ ಚೌ ನ್ಯೂಜಿಲೆಂಡ್‌ನ ರಮಣೀಯ ಪ್ರದೇಶಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.
ಈ ಸಿನಿಮಾವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ವಿಷ್ಣು ಮಂಚು 'ಕಣ್ಣಪ್ಪ'ನಾಗಿ ನಟಿಸಿದ್ದರೆ, ಮೋಹನ್‌ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಬಾಬು, ಶರತ್ ಕುಮಾರ್, ಬ್ರಹ್ಮಾನಂದಂ, ಕಾಜಲ್ ಅಗರ್‌ವಾಲ್ ಅಂತಹ ದಿಗ್ಗಜರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾತಂಡವೇ ಹೇಳಿಕೊಂಡಂತೆ ಬಹುತೇಕ ಸಿನಿಮಾವನ್ನು ನ್ಯೂಜಿಲ್ಯಾಂಡ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ.


Click it and Unblock the Notifications











