ಭಾರತದ ಅತ್ಯಂತ ಜನಪ್ರಿಯ ನಟ ಯಾರು? ಇವರೇ ನೋಡಿ ಟಾಪ್ 10 ಹೀರೋಗಳು!
ಭಾರತೀಯ ಚಿತ್ರರಂಗದಲ್ಲಿ ಪ್ರತಿ ತಿಂಗಳು ಸೂಪರ್‌ಸ್ಟಾರ್‌ಗಳು ಸದ್ದು ಮಾಡುತ್ತಲೇ ಇರುತ್ತಾರೆ. ಒಂದು ಒಂದು ಸಿನಿಮಾ ಗೆದ್ದಲ ಎಬ್ಬಿಸುತ್ತಲೇ ಇರುತ್ತೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗಗಳು ಪೈಪೋಟಿಗೆ ಬಿದ್ದು ಸಿನಿಮಾ, ವೆಬ್ ಸೀರಿಸ್ ಅನ್ನು ರಿಲೀಸ್ ಮಾಡುತ್ತಲೇ ಇರುತ್ತವೆ. ಇನ್ನೊಂದು ಕಡೆ ಸೂಪರ್‌ಸ್ಟಾರ್‌ಗಳು ಕೂಡ ತಮ್ಮ ಸಿನಿಮಾ ಮೂಲಕ ಸದ್ದು ಮಾಡುತ್ತಾರೆ.
ಭಾರತದ ತಾರೆಯರ ಜನಪ್ರಿಯತೆ ಮೇಲೆ ಕಣ್ಣು ಇಟ್ಟಿರುವ ಓರ್ಮಾಕ್ಸ್ ಮೀಡಿಯಾ ಸಂಸ್ಥೆ ಪ್ರತಿ ತಿಂಗಳು ಸಮೀಕ್ಷೆ ನಡೆಸಿ ಟಾಪ್ 10 ಪಟ್ಟಿಯನ್ನು ರಿಲೀಸ್ ಮಾಡುತ್ತೆ. ಅದೇ ರೀತಿ ಜುಲೈ ತಿಂಗಳಲ್ಲೂ ಭಾರತದ ಟಾಪ್ 10 ಹೀರೋಗಳು ಪಟ್ಟಿಯನ್ನು ರಿಲೀಸ್ ಮಾಡಿದೆ. ಓರ್ಮಾಕ್ಸ್ ಮೀಡಿಯಾ ನಡೆಸಿದ ಸಮೀಕ್ಷೆಯಲ್ಲಿ ಕೆಲವು ಇಂಟ್ರೆಸ್ಟಿಂಗ್ ಹೆಸರು ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಜುಲೈ ತಿಂಗಳ ಭಾರತದ ಅತ್ಯಂತ ಜನಪ್ರಿಯ ಹೀರೋ ಯಾರು ಎಂಬುವುದನ್ನು ಓರ್ಮಾಕ್ಸ್ ಮೀಡಿಯಾ ಸಮೀಕ್ಷೆ ನಡೆಸಿ ರಿವೀಲ್ ಮಾಡಿದೆ. ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು ಟಾಪ್ 10 ಪಟ್ಟಿಯಲ್ಲಿದ್ದಾರೆ. ಆದರೆ, ಸ್ಯಾಂಡಲ್‌ವುಡ್‌ನಿಂದ ಒಬ್ಬ ಹೀರೋ ಹೆಸರು ಕೂಡ ಇಲ್ಲ. ಹಾಗಿದ್ದರೆ, ಟಾಪ್‌ನಲ್ಲಿ ಯಾವ ಹೀರೋ ಹೆಸರು ಇದೆ? ಟಾಪ್ 10 ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಜುಲೈ ತಿಂಗಳ ಟಾಪ್ ನಟ ಯಾರು?
ಓರ್ಮಾಕ್ಸ್ ಮೀಡಿಯಾ ಸಮೀಕ್ಷೆಯಲ್ಲಿ ಜುಲೈ ತಿಂಗಳ ಟಾಪ್ ಹೀರೋ ಆಗಿ ಮತ್ತೆ ಪ್ರಭಾಸ್ ಹೊರ ಹೊಮ್ಮಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಅಗ್ರಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಜುಲೈನಲ್ಲಿ ಸಿನಿಪ್ರಿಯರು ಬೇರೆ ಸ್ಟಾರ್‌ಗಳಿಗಿಂತ ಪ್ರಭಾಸ್ ಬಗ್ಗೆನೇ ಹೆಚ್ಚಾಗಿ ಹುಡುಕಾಟವನ್ನು ನಡೆಸಿದ್ದಾರೆ. ಹಾಗಂತ ಇದು ಮೊದಲೇನು ಅಲ್ಲ. ಕಳೆದ ಕೆಲವು ತಿಂಗಳುಗಳಿಂದ ಪ್ರಭಾಸ್ ಅವರೇ ಟಾಪ್‌ನಲ್ಲಿ ಇರುವುದು ವಿಶೇಷ. ಪ್ರಭಾಸ್ ಈ ವರ್ಷ ವಿಷ್ಣು ಮಂಚು ನಾಯಕನಾಗಿ ನಟಿಸಿರುವ 'ಕಣ್ಣಪ್ಪ' ಸಿನಿಮಾದಲ್ಲಿ ರುಧ್ರನ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಸದ್ಯ ಪ್ರಭಾಸ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಮಾರುತಿ ನಿರ್ದೇಶಿಸಿರುವ 'ದಿ ರಾಜಾ ಸಾಬ್' ಇದೇ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತಿದೆ. ಇದರೊಂದಿಗೆ 'ಸಲಾರ್ 2', 'ಕಲ್ಕಿ 2', 'ಸ್ಪಿರಿಟ್' ಹಾಗೂ 'ಫೌಜಿ' ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ.
ಟಾಪ್ 5 ರಿಂದ 2ನೇ ಸ್ಥಾನದಲ್ಲಿ ಯಾರಿದ್ದಾರೆ?
ಓರ್ಮಾಕ್ಸ್ ಮೀಡಿಯಾ ರಿಲೀಸ್ ಮಾಡಿದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ತಮಿಳು ನಟ ಇಳಯ ದಳಪತಿ ವಿಜಯ್ ಇದ್ದಾರೆ. 3ನೇ ಸ್ಥಾನದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ನಾಲ್ಕನೇ ಸ್ಥಾನದಲ್ಲಿ ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ 5ನೇ ಸ್ಥಾನದಲ್ಲಿ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಇದ್ದಾರೆ. ಮೊದಲ ಟಾಪ್ 5 ಸ್ಥಾನಗಳಲ್ಲಿ ದಕ್ಷಿಣ ಭಾರತದ ನಾಲ್ಕು ಸ್ಟಾರ್‌ಗಳಿದ್ದರೆ, ಒಬ್ಬರೇ ಒಬ್ಬರು ಬಾಲಿವುಡ್ ಸ್ಟಾರ್‌ಗೆ ಸ್ಥಾನ ಪಡೆದುಕೊಂಡಿದ್ದಾರೆ.
ಟಾಪ್ 10 ರಿಂದ 6ನೇ ಸ್ಥಾನದಲ್ಲಿ ಯಾರಿದ್ದಾರೆ?
ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನಟಿಸಿದ 'ಹರಿಹರ ವೀರ ಮಲ್ಲು' ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಇದರ ಹೊರತಾಗಿಯೂ ಪವನ್ ಕಲ್ಯಾಣ್ ಟಾಪ್‌ಗೆ ಬರಲು ಸಾಧ್ಯವಾಗಿಲ್ಲ. ಇವರು 10ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ 9ನೇ ಸ್ಥಾನದಲ್ಲಿದ್ದರೆ, ತೆಲುಗಿನ ಮೆಗಾ ಪವರ್‌ಸ್ಟಾರ್ 9ನೇ ಸ್ಥಾನದಲ್ಲಿದ್ದಾರೆ. ಜೂ.ಎನ್‌ಟಿಆರ್ 7ನೇ ಸ್ಥಾನದಲ್ಲಿ ಹಾಗೂ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು 6ನೇ ಸ್ಥಾನದಲ್ಲಿ ಇದ್ದಾರೆ. ಓರ್ಮಾಕ್ಸ್ ಮೀಡಿಯಾ ಜುಲೈ ತಿಂಗಳ ಸರ್ವೆಯಲ್ಲಿ ದಕ್ಷಿಣ ಭಾರತದ 8 ಮಂದಿ ಹೀರೋಗಳಿದ್ದರೆ, ಬಾಲಿವುಡ್‌ನ ಇಬ್ಬರು ಸ್ಟಾರ್‌ಗಳು ಸ್ಥಾನ ಪಡೆದುಕೊಂಡಿದ್ದಾರೆ.


Click it and Unblock the Notifications











