ಸಮಂತಾ ಹೇಳಿಕೆಗಳಿಂದ ಪೀಕಲಾಟಕ್ಕೆ ಸಿಲುಕಿದ ಅಕ್ಕಿನೇನಿ ಕುಟುಂಬ

ಸಮಂತಾ ಈಗ ಕೇವಲ ದಕ್ಷಿಣ ಭಾರತದ ನಟಿಯಾಗಿ ಉಳಿದಿಲ್ಲ. ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್‌ನಲ್ಲಿ ನಟಿಸಿದ ಬಳಿಕ ಸಮಂತಾ ಬಹುಭಾಷಾ ನಟಿಯಾಗಿದ್ದಾರೆ. ಇತ್ತೀಚೆಗೆ ಸಮಂತಾ ಸಿನಿಮಾಗಳಿಗಿಂತ ಅವರ ವೈಯುಕ್ತಿಕ ಜೀವನ ಹೆಚ್ಚು ಚರ್ಚೆಯಲ್ಲಿದೆ. ಅದಲ್ಲೂ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ವಿಚ್ಛೇದನ ಪಡೆದಿದ್ದು ಸಿನಿಪ್ರಿಯರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಸಿ ಮದುವೆಯಾಗಿದ್ದರೂ, ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಹೇಗೆ ಅಂತ ಅವರ ಅಭಿಮಾನಿಗಳ ನಿದ್ದೆ ಕೆಡಿಸಿದೆ.

ಇಲ್ಲಿವರೆಗೂ ಸೈಲೆಂಟಾಗಿದ್ದ ಸಮಂತಾ ಈಗ ತನ್ನ ವಿಚ್ಚೇದನದ ಬಗ್ಗೆ ಮನಬಿಚ್ಚಿ ಮಾತಾಡಲು ಶುರುಮಾಡಿದ್ದಾರೆ. ಬಾಲಿವುಡ್‌ನಲ್ಲಿ ನಡೆದ ಸಂದರ್ಶನದಲ್ಲಿ ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಸಮಂತಾ ಮಾತಾಡುತ್ತಿದ್ದಂತೆ ಇತ್ತ ಅಕ್ಕಿನೇನಿ ಕುಟುಂಬಕ್ಕೆ ಟೆನ್ಷನ್ ಶುರುವಾಗಿದೆ. ಸಮಂತಾ ಆಡಿದ ಒಂದೊಂದು ಮಾತು ಆಕೆಯ ಮೇಲೆ ಅನುಕಂಪ ಹೆಚ್ಚಾಗುತ್ತಿದ್ದು, ನಾಗ ಚೈತನ್ಯ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ ಎನ್ನಲಾಗಿದೆ.

ನಾಗಚೈತನ್ಯಗೆ ಹೆಚ್ಚಿದ ಆತಂಕ

ನಾಗಚೈತನ್ಯಗೆ ಹೆಚ್ಚಿದ ಆತಂಕ

ಸಮಂತಾ ನೀಡಿರುವ ಸಂದರ್ಶನದಲ್ಲಿ ನಾಗ ಚೈತನ್ಯ ಬಗ್ಗೆ ಎಲ್ಲಿಯೂ ಒಂದೇ ಒಂದು ಮಾತು ಕೂಡ ಆಡಿಲ್ಲ. ನಾಗಚೈತನ್ಯ ಆಗಲಿ ಅಥವಾ ಅಕ್ಕಿನೇನಿ ಕುಟುಂಬದ ಬಗ್ಗೆ ತೆಗಳುವ ಒಂದೇ ಒಂದು ಮಾತು ಕೂಡ ಆಡಿಲ್ಲ. ತನ್ನ ಬದುಕಿನಲ್ಲಿ ವಿಚ್ಛೇದನ ಬಿರುಗಾಳಿ ಎದುರಾದಾಗ, ತನ್ನ ಪರಿಸ್ಥಿತಿ ಹೇಗಿತ್ತು? ಆ ಶಾಕ್‌ನಿಂದ ಹೊರಬರಲು ಸಮಂತಾ ಏನು ಮಾಡಿದರು? ಆ ಸಂದರ್ಭದಲ್ಲಿ ಆಕೆ ತೆಗೆದುಕೊಂಡ ನಿರ್ಧಾರವೇನು? ಅನ್ನುವುದರ ಬಗ್ಗೆ ಸಮಂತಾ ಮನಬಿಚ್ಚಿ ಮಾತಾಡಿದ್ದರು. ಈ ವಿಚ್ಛೇದನ ಅನ್ನುವ ನೋವಿನ ಪ್ರಕ್ರಿಯೆಯಲ್ಲಿ ತಾನು ಬಲಿಪಶುವಾಗಿದ್ದೇನೆ ಅನ್ನುವುದನ್ನು ಪರೋಕ್ಷವಾಗಿ ಹೇಳಿದ್ದರು. ಇದೇ ಈಗ ಅಕ್ಕಿನೇನಿ ಕುಟುಂಬಕ್ಕೆ ತಲೆನೋವಾಗಿದೆ.

ನಾಗಚೈತನ್ಯಕ್ಕೆ ಸಂಕಷ್ಟ?

ನಾಗಚೈತನ್ಯಕ್ಕೆ ಸಂಕಷ್ಟ?

ನಾಗಚೈತನ್ಯ ಇಲ್ಲಿವರೆಗೂ ತನ್ನ ವಿಚ್ಛೇದನದ ಬಗ್ಗೆ ಎಲ್ಲೂ ಹೇಳಿಕೆ ನೀಡಿಲ್ಲ. ಇಷ್ಟು ದಿನ ಸೈಲೆಂಟಾಗಿದ್ದ ಸಮಂತಾ ತನ್ನ ವೈಯುಕ್ತಿಕ ಜೀವನದ ಬಗ್ಗೆ ಮಾತಾಡಲು ಆರಂಭಿಸಿದ್ದಾರೆ. ಇದು ಅಕ್ಕಿನೇನಿ ಕುಟುಂಬದ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ. ಸಮಂತಾ ಹೇಳಿಕೆಯಿಂದ ಜನರಿಗೆ ನಾಗ ಚೈತನ್ಯ ಹಾಗೂ ಅಕ್ಕಿನೇನಿ ಕುಟುಂಬದ ವಿರುದ್ಧ ಬೇಸರಗೊಂಡಿದ್ದು, ವಿಚ್ಛೇದನಕ್ಕೆ ನಾಗಚೈತನ್ಯನೇ ಕಾರಣವೆಂದು ತೆಗಳಬಹುದೆಂಬ ಆತಂಕ ಶುರುವಾಗಿದೆ. ಅಲ್ಲದೆ ಮಗನ ಭವಿಷ್ಯದ ಬಗ್ಗೆನೂ ನಾಗಾರ್ಜುನ ಅಕ್ಕಿನೇನಿಗೆ ಚಿಂತೆ ಕಾಡುತ್ತಿದೆ ಎನ್ನಲಾಗಿದೆ.

ಅಕ್ಕಿನೇನಿ ಫ್ಯಾಮಿಲಿ ಜೊತೆ ಸಂಬಂಧ ಚೆನ್ನಾಗಿಲ್ಲ

ಅಕ್ಕಿನೇನಿ ಫ್ಯಾಮಿಲಿ ಜೊತೆ ಸಂಬಂಧ ಚೆನ್ನಾಗಿಲ್ಲ

ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ವಿಚ್ಛೇದನದ ಬಗ್ಗೆ ಅನೌನ್ಸ್ ಮಾಡುತ್ತಿದ್ದಂತೆ ಟಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಸಮಂತಾ ವಿರುದ್ಧ ಜನರು ತಿರುಗಿಬಿದ್ದರು. ವಿವಾದಗಳಿಗೆ ಸಿಕ್ಕಿಕೊಳ್ಳದ ನಾಗಚೈತನ್ಯ ಪರವಾಗಿ ನಿಂತಿದ್ದರು. ಮಗು ಪಡೆಯಲು ಇಚ್ಚೆ ಇಲ್ಲದೆ ವಿಚ್ಛೇದನ ಪಡೆದಿದ್ದಾಳೆ, ಗರ್ಭಪಾತ ಮಾಡಿಸಿಕೊಂಡಿದ್ದಾಳೆ. ಬಾಯ್ ಫ್ರೆಂಡ್ ಇದ್ದಾನೆ ಅಂತೆಲ್ಲಾ ಮಾತಾಡಿಕೊಂಡಿದ್ದರು. ಇದರಿಂದ ನೊಂದಿದ್ದ ಸಮಂತಾ ಆ ವೇಳೆ ವಿಚ್ಛೇದನದ ಬಗ್ಗೆ ಎಲ್ಲೂ ಹೇಳಿಕೆಗಳನ್ನು ಕೊಟ್ಟಿರಲಿಲ್ಲ. ಆದ್ರೀಗ ನಿಧಾನವಾಗಿ ಮಾತನಾಡಲು ಆರಂಭಿಸಿದ್ದಾರೆ.

ನನ್ನ ಬಗ್ಗೆ ನನಗೆ ಹೆಮ್ಮೆ ಇದೆ

ನನ್ನ ಬಗ್ಗೆ ನನಗೆ ಹೆಮ್ಮೆ ಇದೆ

ಸಂದರ್ಶನದಲ್ಲಿ ಸಮಂತಾ ಆಡಿದ ಮಾತುಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ವಿಚ್ಛೇದನದ ಬಳಿಕ ನಾನು ಕುಗ್ಗಿ ಹೋಗುತ್ತೇನೆ ಎಂದುಕೊಂಡಿದ್ದೆ. ಆದರೆ, ನನ್ನ ಮನಸ್ಥಿತಿ ಇಷ್ಟು ಬಲವಾಗಿದೆ ಅದುಕೊಂಡಿರಲಿಲ್ಲ. ಸತ್ತೇ ಹೋಗುಬಹುದು ಎಂದು ಭಾವಿಸಿದ್ದೆ. ನಾನು ಈ ಸಂಕಷ್ಟದಿಂದ ಹೊರಬಂದಿದ್ದು ಕಂಡು ನನ್ನ ಬಗ್ಗೆ ನನಗೆ ಹೆಮ್ಮೆ ಮೂಡಿದೆ. ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೇ ಸಮಂತಾ ವಿಚ್ಛೇದನದ ಬಳಿಕ ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದು, ಒಂದು ಹಾಲಿವುಡ್ ​​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Akkineni family is worried that people will start blaming Naga Chaitanya due Samantha recent comments on divorce. They are worried about Naga Chaitanya career.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X