ನಾಗ ಚೈತನ್ಯ-ಶೋಭಿತಾ ಧುಲಿಪಾಲ ವಿವಾಹದ ಫೋಟೊ ಔಟ್;
ಹೈದರಾಬಾದ್: ಅಕ್ಕಿನೇನಿ ಕುಟುಂಬದ ಕುಡಿ ನಾಗಚೈತನ್ಯ ಎರಡನೇ ವಿವಾಹ ಅದ್ಧೂರಿಯಾಗಿ ನಡೆದಿದೆ. ಹೈದರಾಬಾದ್‌ನಲ್ಲಿರುವ ಅವರದ್ದೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಮೊದಲನೇ ನಿಗದಿಯಾಗಿದ್ದಂತೆ ವಿವಾಹ ಜರುಗಿದೆ. ಟಾಲಿವುಡ್ ದಿಗ್ಗಜ ದಿವಂಗತ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪ್ರತಿಮೆ ಮುಂದೆನೇ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ವಿವಾಹದ ಮೊದಲ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಟ್ರೆಡಿಷನಲ್ ಲುಕ್‌ನಲ್ಲಿ ನಾಗಚೈತನ್ಯ ಹಾಗೂ ಶೋಭಿತಾ ಕಂಗೊಳಿಸಿದ್ದು, ಇಬ್ಬರ ಮುಖದಲ್ಲೂ ಮದುವೆಯ ಸಂಭ್ರಮ ಕಳೆ ಕಟ್ಟಿತ್ತು. ಟಾಲಿವುಡ್ ಸ್ಟಾರ್ ಜೋಡಿಯ ಈ ಮದುವೆಗೆ ಚಿತ್ರರಂಗದ ಗಣ್ಯರು ಆಗಮಿಸಿದ್ದಾರೆ.

ವೈರಲ್ ಆಗಿರುವ ಫೋಟೊದಲ್ಲಿ ಹಸೆ ಮಣೆ ಮೇಲೆ ಕೂತಿರುವ ನಾಗಚೈತನ್ಯ ರೇಷ್ಮೆ ಧೋತಿ, ಶಲ್ಯ ಧರಿಸಿದ್ದರೆ. ಶೋಭಿತಾ ಧುಲಿಪಾಲ ಕಾಂಜಿವರಂ ರೇಷ್ಮೆ ಸೀರೆಯನ್ನು ಧರಿಸಿ ಮದುವೆ ಶಾಸ್ತ್ರದಲ್ಲಿ ಕಂಗೊಳಿಸಿದ್ದಾರೆ. ಸದ್ಯ ಎರಡು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇಬ್ಬರ ಅಭಿಮಾನಿಗಳು ಜನ ಜೋಡಿಗೆ ಶುಭವನ್ನು ಹಾರೈಸುತ್ತಿದ್ದಾರೆ.
ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ವಿವಾಹದ ಮುಹೂರ್ತ ಇಂದು ರಾತ್ರಿ 8.15ಕ್ಕೆ ಇತ್ತು ಎಂದು ವರದಿಯಾಗಿತ್ತು. ಅದರಂತೆ ಅಕ್ಕಿನೇನಿ ಕುಟುಂಬದ ಸಂಪ್ರದಾಯದಂತೆ ನಾಗ ಚೈತನ್ಯ ಹಾಗೂ ಶೋಭಿತಾ ವಿವಾಹ ಜರುಗಿದೆ. ತಂದೆ ನಾಗಾರ್ಜುನ ಮುಂದೆ ನಿಂತು ಮಗನ ಎರಡನೇ ಮದುವೆಯನ್ನು ನೆರವೇರಿಸಿರುವುದು ವೈರಲ್ ಆದ ಫೋಟೊದಲ್ಲಿ ರಿವೀಲ್ ಆಗಿದೆ.
ಈ ವಿವಾಹವನ್ನು ಪಕ್ಕಾ ತೆಲುಗು ಸಂಪ್ರದಾಯದಂತೆ ನಡೆದಿದೆ. ನಾಗ ಚೈತನ್ಯ ಹಾಗೂ ಶೋಭಿತಾ ಇಬ್ಬರೂ ತೆಲುಗು ಭಾಷಿಗರಾಗಿದ್ದರಿಂದ ಅದೇ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಮದುವೆ ಸಂದರ್ಭದಲ್ಲಿ ತೆಲುಗು ಮದುಮಗಳಂತೆ ಕಾಣಿಸಿಕೊಂಡಿದ್ದಾರೆ. ಶೋಭಿತಾ ಧುಲಿಪಾಲ ಕಾಂಜೀವರಂ ಗೋಲ್ಡನ್ ಕಲರ್ ರೇಷ್ಮೆ ಸೀರೆಯುಟ್ಟಿದ್ದರು. ಅದಕ್ಕೆ ಡಿಸೈನರ್ ಗೋಲ್ಡ್ ಜ್ಯುವೆಲರಿ ಧರಿಸಿದ್ದರು. ಮದುಮಗಳು ಶೋಭಿತಾಳ ಡ್ರೆಸ್ ಮದುವೆ ಸಂಭ್ರಮದ ಮೆರುಗನ್ನು ಹೆಚ್ಚಿಸಿತ್ತು.
ಈ ನವ ಜೋಡಿಯ ವಿವಾಹಕ್ಕೆ ಮೆಗಾಸ್ಟಾರ್ ಚಿರಂಜೀವಿ, ಪುತ್ರ ರಾಮ್ ಚರಣ್ ಆಗಮಿಸಿ ಶುಭ ಹಾರೈಸಿದ್ದಾರೆ. ಸುಮಾರು 8 ಗಂಟೆಗಳ ಕಾಲ ಈ ಮದುವೆ ಸಂಭ್ರಮ ನಡೆದಿದ್ದು, 400 ಮಂದಿ ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು. ಇನ್ನು ವಿವಾಹದ ಬಳಿಕ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಸಂಪ್ರದಾಯದಂತೆ ದೇವಸ್ಥಾನಗಳಿಗೆ ಭೇಟಿ ಕೊಡಲಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಅಥವಾ ಶ್ರೀಶೈಲಂಗೆ ಹೋಗಿ ಅಲ್ಲಿ ದೇವರ ದರ್ಶನವನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ವಿವಾಹದ ಬಳಿಕ ನಾಗ ಚೈತನ್ಯ ಹಾಗೂ ಶೋಭಿತಾ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಹೆಚ್ಚು ದಿನ ಗ್ಯಾಪ್ ಕೊಡದೆ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಮುಗಿಸಲಿದ್ದಾರೆ ಎನ್ನಲಾಗಿದೆ. ಆಗ ನಾಗ ಚೈತನ್ಯ ಜನವರಿ ತಿಂಗಳಿನಿಂದ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿಲಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲಗೆ ನಾಗಾರ್ಜುನ 2.5 ಕೋಟಿ ರೂಪಾಯಿ ವೆಚ್ಚದ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ನಾಗ ಚೈತನ್ಯ ಹಾಗೂ ಶೋಭಿತಾ ವಿವಾಹ ಅದ್ಧೂರಿಯಾಗಿ ನಡೆದಿದ್ದು, ಈ ಮದುವೆಗೆ ಬರೋಬ್ಬರು 200 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅನ್ನೋ ಸುದ್ದಿನೂ ಹರಿದಾಡಿತ್ತು.


Click it and Unblock the Notifications











