ಹೈದರಾಬಾದ್‌ನಲ್ಲಿ ನಾಗಚೈತನ್ಯ- ಶೋಭಿತಾ ಧುಲಿಪಾಲ ಅದ್ಧೂರಿ ಮದುವೆ; ಇಲ್ಲಿದೆ ಸೆಲೆಬ್ರಿಟಿಗಳ ಗೆಸ್ಟ್ ಲಿಸ್ಟ್

ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಮದುವೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು (ಡಿಸೆಂಬರ್ 4) ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಜೋಡಿಯ ವಿವಾಹ ನಡೆಯಲಿದ್ದು, ಈಗಾಗಲೇ ಶಾಸ್ತ್ರಗಳು ಆರಂಭ ಆಗಿವೆ. ನಾಗ ಚೈತನ್ಯ ಹಾಗೂ ಶೋಭಿತಾ ಇಬ್ಬರೂ ಸಿನಿಮಾ ತಾರೆಯರೇ ಆಗಿರುವುದರಿಂದ ತಾರೆಯ ದೊಡ್ಡ ದಂಡು ಈ ಮದುವೆ ಆಗಮಿಸಲಿದೆ ಎನ್ನಲಾಗಿದೆ.

ಅಕ್ಕಿನೇನಿ ಕುಟುಂಬಕ್ಕೆ ಟಾಲಿವುಡ್‌ನಲ್ಲಿ ವಿಶೇಷವಾದ ಗೌರವವಿದೆ. ಟಾಲಿವುಡ್ ದಿಗ್ಗಜ ದಿವಂಗತ ನಾಗೇಶ್ವರ ರಾವ್, ಅವರ ಪುತ್ರ ನಾಗಾರ್ಜುನಗೆ ಚಿತ್ರರಂಗದಲ್ಲಿ ತಮ್ಮದೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಗ ಅವರ ಹಾದಿಯಲ್ಲಿ ನಾಗಚೈತನ್ಯ ಸಾಗುತ್ತಿದ್ದಾರೆ. ಅಲ್ಲದೆ ಈ ಕುಟುಂಬ ಎಲ್ಲಾ ಚಿತ್ರರಂಗದೊಂದಿಗೆ ಆತ್ಮೀಯವಾದ ಒಡನಾಟವನ್ನು ಇಟ್ಟುಕೊಂಡಿದೆ.

Naga Chaitanya and Sobhita Dhulipala wedding in Hyderabad here is the guest List

ಈ ಹಿನ್ನೆಲೆಯಲ್ಲಿ ಕೇವಲ ತೆಲುಗು ಚಿತ್ರರಂಗ ಅಷ್ಟೇ ಅಲ್ಲ. ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಿಂದಲೂ ತಾರೆಯರು ಈ ಮದುವೆ ಆಗಮಿಸುತ್ತಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಮದುವೆಗೆ ಆಗಮಿಸುತ್ತಿರುವ ಸೆಲೆಬ್ರಿಟಿಗಳ ದೊಡ್ಡ ಪಟ್ಟಿನೇ ಇಲ್ಲಿದೆ.

ಟಾಲಿವುಡ್‌ನ ಮೆಗಾ ಕುಟುಂಬ ಮೆಗಾಸ್ಟಾರ್ ಚಿರಂಜೀವಿ, ಅವರ ಪುತ್ರ ರಾಮ್‌ ಚರಣ್, ಪತ್ನಿ ಉಪಾಸನಾ ಕೊನಿಡೆಲಾ, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು, ಅವರ ಪತ್ನಿ ನಮ್ರತಾ ಶಿರೋಡ್ಕರ್ ಆಗಮಿಸುವ ಬಗ್ಗೆ ಮಾಹಿತಿ ಇದೆ. ಹಾಗೇ ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್ ಎಸ್‌ ಎಸ್ ರಾಜಮೌಳಿ ಕೂಡ ಈ ವಿವಾಹದ ಪ್ರಮುಖ ಆಕರ್ಷಣೆ ಎಂದು ಹೇಳಲಾಗುತ್ತಿದೆ.

ಹಾಗೇ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್, ಲೇಡಿ ಸೂಪರ್‌ಸ್ಟಾರ್ ನಯನತಾರಾ ಆಗಮಿಸಲಿದ್ದಾರೆ ಎನ್ನಲಾಗಿದೆ. ಹಾಗೇ ಬಾಲಿವುಡ್‌ನಿಂದ ಶಾರುಖ್ ಖಾನ್, ಆಮಿರ್ ಖಾನ್, ಕಿರಣ್ ರಾವ್, ರಣ್‌ಬೀರ್, ಆಲಿಯಾ ಭಟ್ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿರುವುದರಿಂದ ಇವರೆಲ್ಲರೂ ಆಗಮಿಸಿ, ನವ ವಧುವಿಗೆ ಶುಭ ಹಾರೈಸಲಿದ್ದಾರೆ ಎಂದು ವರದಿಯಾಗಿವೆ.

More from Filmibeat

Read more about: naga chaitanya marriage hyderabad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X