"ನನಗೆ ಪಶ್ಚಾತ್ತಾಪವಿಲ್ಲ, ಅದರ ಬಗ್ಗೆ ಗೊತ್ತಿಲ್ಲ" : ವಿಚ್ಛೇದನ.. ಶೋಭಿತಾ ಜೊತೆ ಡೇಟಿಂಗ್ ಬಗ್ಗೆ ನಾಗಚೈತನ್ಯ ಪ್ರತಿಕ್ರಿಯೆ!
ಟಾಲಿವುಡ್‌ನಲ್ಲಿ ಸಿನಿಮಾ ಬಗ್ಗೆನೂ ಇಷ್ಟೊಂದು ಚರ್ಚೆ ಆಗುತ್ತೋ ಇಲ್ಲವೋ. ಆದರೆ, ನಾಗಚೈತನ್ಯ ಹಾಗೂ ಸಮಂತಾ ಬಗ್ಗೆ ಪ್ರತಿದಿನ ಏನಾದರೂ ಒಂದು ವಿಷಯಕ್ಕೆ ಚರ್ಚೆಯಾಗುತ್ತಲೇ ಇರುತ್ತೆ. ಇಬ್ಬರ ಪ್ರತ್ಯಕ್ಷವಾಗಿಯೋ.. ಪರೋಕ್ಷವಾಗಿಯೋ ಟಾಂಗ್ ಕೊಡುತ್ತಲೇ ಇರುತ್ತಾರೆ.
ವಿಚ್ಛೇದನದ ಬಗ್ಗೆನೇ ಸಮಂತಾ ಮುಕ್ತವಾಗಿ ಮಾತಾಡಿದ್ದರೂ, ಕಾರಣವೇನು? ಅನ್ನೋದನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಪರೋಕ್ಷವಾಗಿ ನಾಗಚೈತನ್ಯಗೆ ಟಾಂಗ್ ಕೊಟ್ಟಿದ್ದಿದೆ. ಆದರೆ, ನಾಗಚೈತನ್ಯ ಮಾತ್ರ ಡಿವೋರ್ಸ್ ಬಗ್ಗೆ ಮುಕ್ತವಾಗಿ ಮಾತಾಡುವುದಕ್ಕೆ ಹೋಗಿಲ್ಲ. ಹಾಗೇ ಗಾಳಿ ಸುದ್ದಿಗಳ ಬಗ್ಗೆನೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ.

ನಾಗಚೈತನ್ಯ ಕೆಲವು ದಿನಗಳಿಂದ ದಕ್ಷಿಣ ಭಾರತದ ನಟಿ ಶೋಭಿತಾ ಧೂಲಿಪಾಲಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಅಲ್ಲದೆ ಲಂಡನ್ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಜೊತೆಗಿದ್ದ ಫೋಟೊಗಳು ವೈರಲ್ ಆಗಿದ್ದವು. ಹೀಗಿದ್ದರೂ ನಾಗಚೈತನ್ಯ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ತಮ್ಮ ಸಿನಿಮಾ 'ಏಜೆಂಟ್' ಬಗ್ಗೆ ನೀಡಿದ ಸಂದರ್ಶನದಲ್ಲಿ ಇವೆಲ್ಲದರ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ.
ಶೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್
ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ನಾಗಚೈತನ್ಯ ಬೇರೊಬ್ಬ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಗುಲ್ಲೆದ್ದಿತ್ತು. 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾದ ನಟಿ ಶೋಭಿತಾ ಧೂಲಿಪಾಲ ಹಾಗೂ ನಾಗಚೈತನ್ಯ ನಡುವೆ ಸಮ್‌ಥಿಂಗ್ ಏನೋ ನಡೆಯುತ್ತಿದೆ ಅನ್ನೋ ಗುಸು ಗುಸು ಇದೆ.
ಕಳೆದ ಕೆಲ ದಿನಗಳಿಂದ ನಾಗ ಚೈತನ್ಯ ಹಾಗೂ ಸೋಭಿತಾ ಧೂಲಿಪಾಲಾ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ವರದಿ ಬಂದಿದ್ದವು. ಇದರೊಂದಿಗೆ ಸಮಂತಾ ಜೊತೆಗೆ ವಿಚ್ಛೇದನ ಪಡೆದ ಬಳಿಕ ನಾಗಚೈತನ್ಯ ಖಿನ್ನತೆಗೆ ಒಳಗಾಗಿದ್ದರು ಎಂಬ ಸುದ್ದಿನೂ ಇತ್ತು. ಈ ವಿಷಯಗಳ ಬಗ್ಗೆ ನಾಗ ಚೈತನ್ಯ ಪ್ರತಿಕ್ರಿಯೆ ನೀಡಿದ್ದಾರೆ. ವಿಚ್ಛೇದನದ ಬಳಿಕ ತಮ್ಮ ಜೀವನ ಹೇಗಿದೆ? ಸೋಭಿತಾ ಜೊತೆಗಿನ ಸಂಬಂಧ ಏನು? ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ.

"ನನಗೆ ಪಶ್ಚಾತ್ತಾಪವಿಲ್ಲ, ಅದರ ಬಗ್ಗೆ ಗೊತ್ತಿಲ್ಲ"
ಕೆಲವು ದಿನಗಳ ಹಿಂದಷ್ಟೇ ನಾಗಚೈತನ್ಯ ಸಹೋದರ ಅಖಿಲ್ ಅಕ್ಕಿನೇನಿ ಅಭಿನಯದ 'ಏಜೆಂಟ್' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಬಗ್ಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಸಮಂತಾ, ವಿಚ್ಛೇದನ ಹಾಗೂ ಶೋಭಿತಾ ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ಖಿನ್ನತೆ ಜಾರಿದ್ದರು ಅನ್ನೋ ಸುದ್ದಿಗೆ "ನನ್ನ ಜೀವನದಲ್ಲಿ ಯಾವುದೇ ನನಗೆ ಯಾವುದೇ ಪಶ್ವಾತ್ತಾಪವಿಲ್ಲ. ಎಲ್ಲವೂ ಪಾಠ ಅಷ್ಟೇ" ಎಂದು ನಾಗಚೈತನ್ಯ ಪ್ರತಿಕ್ರಿಯಿಸಿದ್ದಾರೆ. ಹಾಗೇ ಶೋಭಿತಾ ಧೂಲಿಪಾಲಾ ಜೊತೆಗಿನ ಡೇಟಿಂಗ್ ಮ್ಯಾಟರ್ ಬಗ್ಗೆ ಪ್ರತಿಕ್ರಿಯಿಸಿದ್ದು, "ಆ ಬಗ್ಗೆ ನನಗೇನೂ ಗೊತ್ತಿಲ್ಲ" ಎಂದು ಹೇಳಿದ್ದಾರೆ.
ಲಂಡನ್‌ನಲ್ಲಿ ಚೈತನ್ಯ, ಶೋಭಿತಾ
ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ನಾಗಚೈತನ್ಯ ಡೇಟಿಂಗ್ ವಿಷಯ ವೈರಲ್ ಆಗಿತ್ತು. ಲಂಡನ್‌ನಲ್ಲಿ ಶೋಭಿಯಾ ಧೂಲಿಪಾಲ ಹಾಗೂ ನಾಗಚೈತನ್ಯ ಇಬ್ಬರೂ ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿನ ಶೆಫ್ ಪಕ್ಕ ನಿಂತು ನಾಗಚೈತನ್ನ ಪೋಸ್ ಕೊಟ್ಟಿದ್ದರು. ಆ ಫೋಟೊದ ಬ್ಯಾಕ್‌ಗ್ರೌಂಡ್‌ನಲ್ಲಿ ಶೋಭಿತಾ ಮುಖ ಮುಚ್ಚಿಕೊಂಡಿದ್ದರು. ಇದೇ ಫೋಟೊ ವೈರಲ್ ಆಗಿತ್ತು.
ಕಳೆದ ಆರು ತಿಂಗಳಿನಿಂದ ನಾಗಚೈತನ್ಯ ಹಾಗೂ ಶೋಭಿತಾ ಧೂಲಿಪಾಲ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ಧಿ ವರದಿಯಾಗಿತ್ತು. ಆದರೆ, ಶೋಭಿತಾ ಹಾಗೂ ನಾಗಚೈತನ್ಯ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ.


Click it and Unblock the Notifications











