'ಫ್ಯಾಮಿಲಿ ಮ್ಯಾನ್'ನಿಂದಲೇ ಸಮಂತಾ-ನಾಗಚೈತನ್ಯ ಡಿವೋರ್ಸ್? ಕ್ಲಾರಿಟಿ ಕೊಟ್ಟ ಚೈತು
ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನ ಟಾಲಿವುಡ್ ಮಂದಿಗೆ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಇಬ್ಬರೇ ಬೇರೆಯಾಗುತ್ತಿರೋ ವಿಷಯ ಹೊರಬಿದ್ದು ಹೆಚ್ಚು ಕಡಿಮೆ ಎರಡು ವರ್ಷ ಆಗುತ್ತಿದೆ. ಹೀಗಿದ್ದರೂ, ಇವರಿಬ್ಬರ ವಿಚ್ಛೇದನದ ಸುದ್ದಿ ಮಾತ್ರ ಕಮ್ಮಿಯಾಗಿಲ್ಲ.
ಸಮಂತಾ ಹಾಗೂ ನಾಗಚೈತನ್ಯ ಸಿನಿಮಾಗಳು ಸುದ್ದಿಯಾಗುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ, ಇವರ ವಿಚ್ಛೇದನ ಮಾತ್ರ ಸುದ್ದಿಯಾಗುತ್ತಲೇ ಇರುತ್ತೆ. ಈಗ ನಾಗ ಚೈತನ್ಯ ನಟಿಸಿದ ಹೊಸ ಸಿನಿಮಾ 'ಕಸ್ಟಡಿ' ನಾಳೆ(ಮೇ 12) ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ಸಾಕಷ್ಟು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಅವರ ವಿಚ್ಛೇದನದ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ.

ನಾಗಚೈತನ್ಯಗೆ ಎದುರಾಗುತ್ತಿರೋ ಒಲ್ಲದ ಪ್ರಶ್ನೆಗೆ ತಾಳ್ಮೆಯಿಂದಲೇ ಉತ್ತರ ನೀಡುತ್ತಿದ್ದಾರೆ. ಇತ್ತೀಚೆಗೆ ಇದೇ ವಿಷಯವಾಗಿ ಮತ್ತೊಂದು ಪ್ರಶ್ನೆ ಎದುರಾಗಿತ್ತು. ಇಬ್ಬರ ವಿಚ್ಛೇದನಕ್ಕೆ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ಕಾರಣನಾ? ಅಂತ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಚೈತು ಕೊಟ್ಟ ಉತ್ತರ ಇಬ್ಬರ ಅಭಿಮಾನಿಗಳನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದೆ.
ವಿಚ್ಛೇದನಕ್ಕೆ 'ಫ್ಯಾಮಿಲಿ ಮ್ಯಾನ್' ಕಾರಣನಾ?
ನಾಗಚೈತನ್ಯ ಇದೇ ಮೊದಲ ಬಾರಿಗೆ ತಮ್ಮ ವಿಚ್ಛೇನದ ಬಗ್ಗೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಡಿವೋರ್ಸ್ ಬಗ್ಗೆ ಎಂತಹದ್ದೇ ಪ್ರಶ್ನೆ ಕೇಳಿದರೂ, ಮುಕ್ತವಾಗಿಯೇ ಉತ್ತರ ಕೊಡುತ್ತಿದ್ದಾರೆ. ಇನ್ನೇನು ಬಿಡುಗಡೆಗೆ ಒಂದು ದಿನ ಬಾಕಿ ಇದೆ ಅನ್ನುವಾಗಲೇ ಡಿವೋರ್ಸ್‌ಗೆ 'ಫ್ಯಾಮಿಲಿ ಮ್ಯಾನ್' ಕಾರಣನಾ? ಅನ್ನೋ ಪ್ರಶ್ನೆ ಎದ್ದಿತ್ತು. ಇದಕ್ಕೆ ನಾಗಚೈತನ್ಯ 'ದಿ ಫ್ಯಾಮಿಲಿ ಮ್ಯಾನ್' ಕಾರಣವಲ್ಲ ಅಂತ ಪರೋಕ್ಷವಾಗಿ ಹೇಳಿದ್ದಾರೆ.

ನಾಗಚೈತನ್ಯ "ನಮ್ಮಿಬ್ಬರ ಡಿವೋರ್ಸ್‌ಗೆ 'ದಿ ಫ್ಯಾಮಿಲಿ ಮ್ಯಾನ್' ಕಾರಣ ಅಲ್ಲವೇ ಅಲ್ಲ. ನನಗೆ ಫ್ಯಾಮಿಲಿ ಮ್ಯಾನ್ ಸೀರಿಸ್ ತುಂಬಾನೇ ಇಷ್ಟ. ಈ ಹಿಂದೆ ಕೇಳಿ ಬರುತ್ತಿರುವ ಸುದ್ದಿಗಳೆಲ್ಲ ಸುಳ್ಳು" ಎಂದು ಸಂದರ್ಶನವೊಂದರಲ್ಲಿ ನಾಗಚೈತನ್ಯ ಹೇಳಿದ್ದಾರೆ. ಈ ಮೂಲಕ ವೆಬ್ ಸೀರಿಸ್‌ನಿಂದಲೇ ಇಬ್ಬರು ಬ್ರೇಕಪ್ ಆಗಿರಬೇಕು ಅನ್ನೋ ಸುದ್ದಿಗೆ ಬ್ರೇಕ್ ಬಿದ್ದಿತ್ತು.
"ಸಮಂತಾ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ"
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನಾಗಚೈತನ್ಯ ಕುತೂಹಲಕಾರಿ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. "ಸಮಂತಾ ಇದೂವರೆಗೂ ನಟಿಸಿದ ಪ್ರತಿಯೊಂದು ಸಿನಿಮಾವನ್ನು ನೋಡಿದ್ದೇನೆ" ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಸಮಂತಾ ತುಂಬಾನೇ ಹಾರ್ಡ್ ವರ್ಕರ್. ಏನನ್ನಾದರೂ ಸಾಧಿಸಬೇಕು ಅಂತ ಪಣತೊಟ್ಟು ನಿಂತರೆ, ಅದನ್ನು ಸಾಧಿಸುವವರೆಗೂ ಬಿಡುವುದಿಲ್ಲ" ಎಂದೂ ಹೇಳಿದ್ದಾರೆ. ನಾಗಚೈತನ್ಯ ಆಡಿದ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಮೇ 12ಕ್ಕೆ 'ಕಸ್ಟಡಿ' ರಿಲೀಸ್
ನಾಗಚೈತನ್ಯ ಹೊಸ ಸಿನಿಮಾ 'ಕಸ್ಟಡಿ' ಮೇ 12ರಂದು ರಿಲೀಸ್ ಆಗುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್ ಪ್ರಭು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.
'ಕಸ್ಡಡಿ' ಸಿನಿಮಾವನ್ನು ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲಿ ಒಟ್ಟೊಟ್ಟಿಗೆ ಶೂಟ್ ಮಾಡಲಾಗಿದೆ. ಈ ಮೂಲಕ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದಂತಾಗಿದೆ. ಈ ಸಿನಿಮಾ ಕೃತಿ ಶೆಟ್ಟಿ, ಅರವಿಂದ್ ಸಾಮಿ, ಶರತ್ ಕುಮಾರ್, ಪ್ರಿಯಾಮಣಿ ಹಾಗೂ ಸಂಪತ್ ಕುಮಾರ್ ನಟಿಸಿದ್ದಾರೆ.


Click it and Unblock the Notifications











