ನಾಗ ಚೈತನ್ಯ- ಶೋಭಿತಾ ಮದುವೆ; ₹200 ಕೋಟಿಯ ಮದುವೆಗೆ ಸಮಂತಾ ಪ್ರತಿಕ್ರಿಯೆ ಏನು?
ಹೈದರಾಬಾದ್: ನಾಗಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಮದುವೆ ಇಂದು (ಡಿಸೆಂಬರ್ 4) ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಸಕಲ ಸಿದ್ಧತೆಗಳು ಕೂಡ ಆರಂಭ ಆಗಿವೆ. ನಾಗ ಚೈತನ್ಯ ಹಾಗೂ ಶೋಭಿತಾ ಮದುವೆಗೆ ಈಗಾಗಲೇ ಎರಡೂ ಕುಟುಂಬಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸಂಭ್ರಮ ಮನೆ ಮಾಡಿದೆ.
ಮೊದಲ ಪತ್ನಿಯ ಮಗ ನಾಗ ಚೈತನ್ಯ ಮದುವೆಯನ್ನು ನಾಗಾರ್ಜುನ ಧೂಮ್ ಧಾಮ್ ಆಗಿ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಸುಮಾರು 200 ಕೋಟಿ ರೂಪಾಯಿ ಖರ್ಚು ಮಾಡಿ ಈ ವಿವಾಹ ಮಾಡುತ್ತಿದ್ದಾರೆ ಎನ್ನಲಾಗಿದೆ. ಅನ್ನಪೂರ್ಣ ಸ್ಟುಡಿಯೋದಲ್ಲಿರುವ ತನ್ನ ತಂದೆಯ ಪುತ್ಥಳಿ ಮುಂದೆ ಮಗನ ಮದುವೆ ಮಾಡುವುದಕ್ಕೆ ನಾಗಾರ್ಜುನ ನಿರ್ಧರಿಸಿದ್ದರು. ಅದರಂತೆಯೇ ಇಂದು (ಡಿಸೆಂಬರ್ 4) ನಾಗ ಚೈತನ್ಯ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಈ ಜೋಡಿ ದಾಂಪತ್ಯವನ್ನು ಮುರಿದುಕೊಂಡು ಬೇರೆಯಾದರು. ಆ ಬಳಿಕ ನಾಗಚೈತನ್ಯ ಹೆಸರು ಶೋಭಿತಾ ಧುಲಿಪಾಲ ಜೊತೆ ತಳುಕು ಹಾಕಿಕೊಂಡಿತ್ತು. ಎರಡು ವರ್ಷ ಜೊತೆಯಾಗಿ ಅಡ್ಡಾಡಿದ್ದ ಈ ಜೋಡಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ವೇಳೆ ಈ ಜೋಡಿ ಬಗ್ಗೆ ಸಮಂತಾ ಪೋಸ್ಟ್ ಮಾಡಿದ ಪೋಸ್ಟ್ ವೈರಲ್ ಆಗಿದೆ.
ಹಾಗಂತ ಇದು ನಟಿ ಸಮಂತಾ ರುಥ್ ಪ್ರಭು ಪೋಸ್ಟ್ ಎಂದು ಭಾವಿಸಬೇಕಾಗಿಲ್ಲ. ಶೋಭಿತಾ ಧುಲಿಪಾಲ ಅವರ ಸಹೋದರಿ ಹೆಸರು ಕೂಡ ಸಮಂತಾ. ಅಕ್ಕನ ಮದುವೆ ಸಂಭ್ರಮದ ಖುಷಿಯಲ್ಲಿ ಸಮಂತಾ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವುದಕ್ಕೆ ಶುರುವಾಗಿದೆ.
ಶೋಭಿತಾ ಧುಲಿಪಾಲ ಸಹೋದರಿ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಭಾವಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ ನಾಗಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಫೋಟೊಗಳನ್ನು ಶೇರ್ ಮಾಡಿಕೊಂಡು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದರಲ್ಲಿ " ಈ ಜಗತ್ತಿನ ಅತೀ ಸುಂದರವಾದ ಮದುಮಗಳು ನೀನು. ತುಂಬಾನೇ ಪ್ರೀತಿಸುವಂತ ವ್ಯಕ್ತಿ ನೀನು. ನಿನ್ನ ಪ್ರೀತಿಯ ಶುಭಾಶಯಗಳು" ಎಂದು ಹೇಳಿದ್ದಾರೆ.

ಇದೇ ವೇಳೆ ಸಮಂತಾ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ನಾಗ ಚೈತನ್ಯ ಬಗ್ಗೆ ಸಮಂತಾ ಮಾಡಿರುವ ಪೋಸ್ಟ್‌ಗಳಿಗೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡುವಂತೆ ಹೇಳುತ್ತಿದ್ದಾರೆ. ಈಗ ಈ ಫೋಟೊಗಳನ್ನು ಇಟ್ಟುಕೊಂಡರೇ ಏನು ಪ್ರಯೋಜನ ಎಂದು ಹೇಳುತ್ತಿದ್ದಾರೆ. ನಾಗ ಚೈತನ್ಯ ಹಾಗೂ ಸಮಂತಾ ಮದುವೆ ಹಾಗೂ ಕೆಲವು ಹಳೆಯ ಫೋಟೊಗಳನ್ನು ಡಿಲೀಟ್ ಮಾಡಲು ಸೂಚಿಸುತ್ತಿದ್ದಾರೆ.
ಇನ್ನು ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಹೈದರಾಬಾದ್‌ನಲ್ಲಿ ಇರುವ 22 ಎಕರೆ ವಿಸ್ತೀರ್ಣದ ಅನ್ನಪೂರ್ಣ ಸ್ಡುಡಿಯೋದಲ್ಲಿ ನಡೆಯಲಿದೆ. ಸುಮಾರು 8 ಗಂಟೆಗಳ ಕಾಲ ಈ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಟಾಲಿವುಡ್, ಬಾಲಿವುಡ್‌ನಿಂದ ಗಣ್ಯರು ಈ ಮದುವೆಗೆ ಬರುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಶಾರುಖ್ ಖಾನ್, ಆಮಿರ್ ಖಾನ್, ರಾಜಮೌಳಿ ಅಂತಹ ಹೆಸರುಗಳು ಓಡಾಡುತ್ತಿವೆ.


Click it and Unblock the Notifications











