ಸಮಂತಾಳನ್ನು ಟಾರ್ಗೆಟ್ ಮಾಡುತ್ತಿದೆ ನಾಗಚೈತನ್ಯ ಹೇಳಿಕೆ: ಆ ವಿಡಿಯೋ ಫ್ಯಾನ್ಸ್ ಶೇರ್ ಮಾಡುತ್ತಿರುವುದೇಕೆ?
ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ವಿಚ್ಛೇದನ ಪಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡ ಬಳಿಕ ಇಬ್ಬರು ಅಭಿಮಾನಿಗಳಲ್ಲೂ ಅಲ್ಲೋಲ ಕಲ್ಲೋಲ ಆಗಿತ್ತು. 9 ವರ್ಷ ಪ್ರೀತಿಸಿ ಮದುವೆಯಾದ ಜೋಡಿ ಮೂರು ವರ್ಷದಲ್ಲೇ ಬೇರೆಯಾಗಿದ್ದನ್ನು ತಡೆದುಕೊಳ್ಳಲು ಆಗಿರಲಿಲ್ಲ. ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಒಂದೇ ಪೋಸ್ಟ್ ಅನ್ನು ಶೇರ್ ಮಾಡಿ, ವಿಚ್ಛೇದನ ಬಗ್ಗೆ ಪ್ರಸ್ತಾಪ ಮಾಡಿದ್ದರು.
ವಿಚ್ಛೇದನ ಪಡೆದುಕೊಳ್ಳುತ್ತಿರುವ ಬಗ್ಗೆ ಇಬ್ಬರೂ ಘೋಷಣೆ ಮಾಡುತ್ತಿದ್ದಂತೆ ಅಭಿಮಾನಿಗಳು ಕಾರಣ ಹುಡುಕಲು ಆರಂಭಿಸಿದ್ದರು. ಆದರೆ, ಈ ಜೋಡಿ ವಿಚ್ಛೇದನದ ಬಗ್ಗೆ ಎಲ್ಲಿಯೂ ಹೇಳಿಕೆಗಳನ್ನು ನೀಡಿರಲಿಲ್ಲ. ಕೆಲವು ದಿನಗಳ ಹಿಂದೆ ಸಮಂತಾ ಡಿವೋರ್ಸ್ ಬಗ್ಗೆ, ಸಮಂತಾ ಎದುರಿಸಿದ ಟೀಕೆಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಇದನ್ನು ನಾಗಚೈತನ್ಯ ಅಭಿಮಾನಿಗಳಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ನಾಗಚೈತನ್ಯ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಯನ್ನು ವೈರಲ್ ಮಾಡುತ್ತಿದ್ದಾರೆ.

ಸಮಂತಾ ಹೇಳಿಕೆಯಿಂದ ಚೈತನ್ಯ ಫ್ಯಾನ್ಸ್ ಗರಂ
ಕೆಲವು ದಿನಗಳ ಹಿಂದೆ ಬಾಲಿವುಡ್ ಮಾಧ್ಯಮಗಳಿಗೆ ಸಮಂತಾ ವಿಚ್ಛೇದನದ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು. ಇದು ನಾಗಚೈತನ್ಯರನ್ನು ಗುರಿಯಾಗಿಸಿಕೊಂಡು ನೀಡಿದ ಹೇಳಿಕೆಯಾಗಿತ್ತು. ಇಷ್ಟೆಲ್ಲಾ ಆದರೂ ನಾಗಚೈತನ್ಯ ಮಾತ್ರ ಪ್ರತಿಕ್ರಿಯೆ ನೀಡಲು ಮುಂದಾಗಿರಲಿಲ್ಲ. ಹೀಗಾಗಿ ಚೈತನ್ಯ ಅಭಿಮಾನಿಗಳು ಸಮಂತಾ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ. ತಾವೇ ಅಖಾಡಕ್ಕಿಳಿದು, ಸಮಂತಾ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಅಭಿಮಾನಿಗಳಿಂದಲೇ ವೈರಲ್ ಆಗುತ್ತಿದೆ ಚೈತನ್ಯ ಹೇಳಿಕೆ
ಸಮಂತಾ ವಿಚ್ಛೇದನದ ಬಗ್ಗೆ ಮಾತಾಡುತ್ತಿದ್ದರೂ, ನಾಗಚೈತನ್ಯ ಮಾತ್ರ ಸೈಲೆಂಟಾಗೇ ಇದ್ದಾರೆ. ಹೀಗಾಗಿ ಚೈತನ್ಯ ಅಭಿಮಾನಿಗಳ ಕೋಪ ನೆತ್ತಿಗೇರಿದೆ. ಹೀಗಾಗಿ ನಾಗಚೈತನ್ಯ ಸಂದರ್ಶವೊಂದರಲ್ಲಿ ನೀಡಿದ ಹೇಳಿಕೆಯನ್ನು ವೈರಲ್ ಮಾಡುತ್ತಿದ್ದಾರೆ. " ನಾನು ಎಲ್ಲಾ ವಿಧವಾದ ಪಾತ್ರಗಳನ್ನು ಮಾಡಲು ಬಂದಿದ್ದೇನೆ. ಆದರೆ, ಆ ಪಾತ್ರಗಳು ನಮ್ಮ ಕುಟುಂಬ ಹಾಗೂ ನಮ್ಮ ಗೌರವಕ್ಕೆ ಧಕ್ಕೆ ತರಬಾರದು. ನನ್ನ ಕುಟುಂಬವನ್ನು ಮುಜುಗರಗೊಳಿಸುವ ಪಾತ್ರಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ." ಸಂದರ್ಶನವೊಂದರಲ್ಲಿ ನಾಗ ಚೈತನ್ಯ ಈ ಹೇಳಿಕೆಯನ್ನು ನೀಡಿದ್ದರು. ಅದೇ ಹೇಳಿಕೆಯನ್ನು ಚೈ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.

ಚೈ ಫ್ಯಾನ್ಸ್‌ನಿಂದ ಸ್ಯಾಮ್ ಟಾರ್ಗೆಟ್
ವಿಚ್ಛೇದನದ ಬಗ್ಗೆ ನಾಗಚೈತನ್ಯ ಹೇಳಿಕೆಗಳನ್ನು ನೀಡುತ್ತಿಲ್ಲ. ಹೀಗಾಗಿ ನಾಗ ಚೈತನ್ಯ ಅಭಿಮಾನಿಗಳೇ ಅಖಾಡಕ್ಕೆ ಇಳಿದಿದ್ದಾರೆ. ಚೈತನ್ಯ ಸಂದರ್ಶನದಲ್ಲಿ ಕೊಟ್ಟ ಹೇಳಿಕೆಯನ್ನು ಸಮಂತಾಗೆ ಟಾರ್ಗೆಟ್ ಮಾಡಲೆಂದೇ ವೈರಲ್ ಮಾಡುತ್ತಿದ್ದಾರೆ ಎಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ. ಸಮಂತಾ 'ದಿ ಫ್ಯಾಮಿಲಿ ಫ್ಯಾನ್' ಸಿರೀಸ್‌ನಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ.

ಯೋಜನೆಗಳೆಲ್ಲವೂ ನಾಶವಾಗಿವೆ ಎಂದ ಸಮಂತಾ
ಸಮಂತಾ ವಿಚ್ಛೇದನದ ಬಳಿಕ ಮೊದಲ ಬಾರಿ ಬಾಲಿವುಡ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. " ಜಾಗರೂಕತೆಯಿಂದ ರೂಪಿಸಿದ ಎಲ್ಲಾ ಯೋಜನೆಗಳೂ ನಾಶವಾಗಿವೆ" ಎಂದು ಹೇಳಿದ್ದರು. ಅಲ್ಲದೆ, " ವಿಚ್ಛೇದನ ಅನ್ನುವುದೇ ಒಂದು ನೋವಿನ ಪ್ರಕ್ರಿಯೆ. ಒಂಟಿತನವೇ ಈ ನೋವಿನಿಂದ ಹೊರಬರಲು ಸಹಾಯ ಮಾಡುತ್ತದೆ. ವೈಯಕ್ತಿಕವಾಗಿ ಮಾಡುತ್ತಿರುವ ದಾಳಿ ನಿರಂತರವಾಗಿ ನಡೆಯುತ್ತಿದೆ. ಆದರೆ, ನಿಮಗೆ ಭಾಷೆ ನೀಡುತ್ತೇನೆ. ಇದೆಲ್ಲವೂ ನನ್ನನ್ನು ಬ್ರೇಕ್ ಮಾಡಲು ಬಿಡುವುದಿಲ್ಲ." ಎಂದು ಸಂದರ್ಶನ ನೋವು ಹೊರ ಹಾಕಿದ್ದರು.


Click it and Unblock the Notifications











