'ಬಂಧನದಲ್ಲಿಡುವ ಪ್ರೀತಿಗಿಂತ ಸ್ವತಂತ್ರವಾಗಿ ಬಿಡುವ ಪ್ರೀತಿ ದೊಡ್ಡದು': ಸಮಂತಾಗೆ ನಾಗಚೈತನ್ಯ ಟಾಂಗ್?
ನಾಗಚೈತನ್ಯ ಕಳೆದ ಕೆಲವು ವಾರಗಳಿಂದ ಭರ್ಜರಿ ಸುದ್ದಿಯಲ್ಲಿದ್ದಾರೆ. ನಾಗಚೈತನ್ಯ ಹೊಸ ಸಿನಿಮಾ 'ಥ್ಯಾಂಕ್ ಯೂ' ಟಾಲಿವುಡ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಇನ್ನೊಂದು ಕಡೆ ಸಮಂತಾ ವಿಚಾರದಲ್ಲಿ ನಾಗಚೈತನ್ಯ ಮತ್ತೆ ಸುದ್ದಿಯಾಗುತ್ತಿದ್ದಾರೆ.
'ಬಂಗಾರ್‌ರಾಜು' ಸಿನಿಮಾದ ಯಶಸ್ಸಿನ ಬಳಿಕ ನಾಗ ಚೈತನ್ಯ ಅಭಿನಯದ ಮತ್ತೊಂದು ಸಿನಿಮಾ ಬಿಡುಗಡೆಯಾಗಿದೆ. 'ಥ್ಯಾಂಕ್ ಯೂ' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ, ನಾಗಚೈತನ್ಯ ಬಿಟ್ಟ ಆ ಒಂದು ಡೈಲಾಗ್.
ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಬೇರೆ ಬೇರೆಯಾಗಿರುವುದು ಗೊತ್ತೇ ಇದೆ. ಹಲವು ವರ್ಷ ಪ್ರೀತಿಸಿದ ಬಳಿಕ ಮದುವೆಯಾಗಿದ್ದ ಈ ಜೋಡಿ ಈಗ ನಾನೊಂದು ತೀರ. ನೀವೊಂದು ತೀರ ಎಂದಿದೆ. ಈ ಮಧ್ಯೆ ಇಬ್ಬರ ನಡುವೆ ಪರೋಕ್ಷವಾಗಿ ವಾಗ್ದಾಳಿಗಳು ನಡೆಯುತ್ತಲೇ ಇವೆ. ಈಗ ನಾಗಚೈತನ್ಯ ನಟನೆಯ 'ಥ್ಯಾಂಕ್ ಯೂ' ಸಿನಿಮಾದ ಒಂದು ಡೈಲಾಗ್ ಬೇಜಾನ್ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಸಮಂತಾಗೆ ಟಾಂಗ್ ಕೊಟ್ಟ ಆ ಡೈಲಾಗ್ ಯಾವುದು? ಟಾಲಿವುಡ್‌ನಲ್ಲಿ ಗುಲ್ಲೆದ್ದಿರುವುದೇನು ? ತಿಳಿಯಲು ಮುಂದೆ ಓದಿ.

ಸಮಂತಾಗೆ ಟಾಂಗ್ ಕೊಟ್ರಾ ನಾಗಚೈತನ್ಯ?
ನಾಗಚೈತನ್ಯ ಹೊಸ ಸಿನಿಮಾ 'ಥ್ಯಾಂಕ್ ಯೂ' ಟ್ರೈಲರ್ ರಿಲೀಸ್ ಆಗಿದೆ. ಇಷ್ಟು ದಿನ ಟ್ರೈಲರ್‌ಗಾಗಿ ಕಾದು ಕೂತಿದ್ದ ನಾಗ ಚೈತನ್ಯ ಫ್ಯಾನ್ಸ್‌ಗೆ ಈ ಟ್ರೈಲರ್ ಕಿಕ್ ಕೊಟ್ಟಿದೆ. ಅದಕ್ಕೆ ಮೊದಲ ಕಾರಣ ಸಿನಿಮಾದ ಕಂಟೆಂಟ್ ಅಲ್ಲ. ಚಿಕ್ಕದೊಂದು ಡೈಲಾಗ್. ಈ ಟ್ರೈಲರ್‌ನಲ್ಲಿ ನಾಗಚೈತನ್ಯ ಮಾಜಿ ಪತ್ನಿ ಸಮಂತಾಗೆ ಪರೋಕ್ಷವಾಗಿ ಬಿಟ್ಟ ಡೈಲಾಗ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಅಷ್ಟಕ್ಕೂ ಆ ಡೈಲಾಗ್‌ನಲ್ಲಿ ಇರುವುದು ಏನು? ಮುಂದೆ ಓದಿ.

ಸ್ವತಂತ್ರವಾಗಿ ಬಿಡುವ ಪ್ರೀತಿ ದೊಡ್ಡದು!
ಅಷ್ಟಕ್ಕೂ 'ಥ್ಯಾಂಕ್ ಯೂ' ಸಿನಿಮಾದ ಟ್ರೈಲರ್ ಇಷ್ಟು ಸದ್ದು ಮಾಡುತ್ತಿರುವುದಕ್ಕೆ ಕಾರಣ ಚಿಕ್ಕದೊಂದು ಡೈಲಾಗ್. "ಒಬ್ಬ ವ್ಯಕ್ತಿನ ಬಂಧನದಲ್ಲಿ ಇಡುವ ಪ್ರೀತಿಗಿಂತ ಸ್ವತಂತ್ರವಾಗಿ ಬಿಡುವ ಪ್ರೀತಿ ದೊಡ್ಡದು." ಅನ್ನುವ ಡೈಲಾಗ್ ಟಾಲಿವುಡ್‌ನಲ್ಲಿ ಬೇಜಾನ್ ಸದ್ದು ಮಾಡಿದೆ. ಇದು ಸಮಂತಾಗೆ ಬೇಕಂತಲೇ ನಾಗಚೈತನ್ಯ ಕೊಟ್ಟ ಡೈಲಾಗ್ ಎಂದು ಫ್ಯಾನ್ಸ್ ಗುಲ್ಲೆಬ್ಬಿಸಿದ್ದಾರೆ. ಇತ್ತ ನಾಗಚೈತನ್ಯ ಅಭಿಮಾನಿಗಳು ಸಮಂತಾಗೆ ವಿಚ್ಛೇದನ ನೀಡುವುದಕ್ಕೆ ಇದೇ ಕಾರಣ ಎಂದು ಡೈಲಾಗ್ ಇಟ್ಟು ಟ್ರೋಲ್ ಮಾಡುತ್ತಿದ್ದಾರೆ.

ಶ್ವಾನದೊಂದಿಗೆ ಫೋಟೊ ವೈರಲ್
ಕೆಲವು ದಿನಗಳ ಹಿಂದೆ ನಾಗಚೈತನ್ಯ ಮೂರು ಪ್ರೀತಿ ಪಾತ್ರರಾದವರಿಗೆ ಧನ್ಯವಾದಗಳನ್ನು ಹೇಳಿದ್ದರು. ಅದರಲ್ಲಿ ಮೊದಲು ಅಮ್ಮ, ಬಳಿಕ ತಂದೆ ನಾಗಚೈತನ್ಯ ಹಾಗೂ ಮೂರನೇಯವರು ನಾಗಚೈತನ್ಯ ಹಾಗೂ ಸಮಂತಾ ಇಬ್ಬರ ಪ್ರೀತಿಯ ಶ್ವಾನ. ಆ ಶ್ವಾನದೊಂದಿಗಿನ ಫೋಟೊವನ್ನು ಶೇರ್ ಮಾಡಿ, ಸಮಂತಾ ಬಗ್ಗೆ ಪರೋಕ್ಷವಾಗಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಈಗ ಸಿನಿಮಾದ ಡೈಲಾಗ್ ಮೂಲಕ ಮತ್ತೆ ತನ್ನ ಸಮಂತಾ ಮೇಲೆ ತನ್ನ ಪ್ರೀತಿಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಸಮಂತಾ ಪ್ರತಿಕ್ರಿಯೆ ಏನು?
ಡೈಲಾಗ್ ಮೂಲಕ ಟಾಂಗ್ ಕೊಟ್ಟ ನಾಗಚೈತನ್ಯಗೆ ಸಮಂತಾ ತಿರುಗೇಟು ನೀಡುತ್ತಾರಾ? ಎಂದು ಟಾಲಿವುಡ್ ಎದುರು ನೋಡುತ್ತಿದೆ. 'ಥ್ಯಾಂಕ್ ಯೂ' ಸಿನಿಮಾ ಇದೇ ತಿಂಗಳು 22ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇನ್ನೊಂದು ಕಡೆ ಸಮಂತಾ ಈಗಾಗಲೇ ನಟಿಸಿರುವ ಎರಡು ಸಿನಿಮಾ 'ಯಶೋದಾ' ಹಾಗೂ 'ಶಾಕುಂತಲಂ' ಸಿನಿಮಾದಲ್ಲಿ ರಿಲೀಸ್‌ಗಾಗಿ ಎದುರು ನೋಡುತ್ತಿದ್ದಾರೆ.


Click it and Unblock the Notifications











