'ಕಿಚ್ಚ ತೆಲುಗಿನವರು' ಎಂದಿದ್ದೇಕೆ ನಾಗಾರ್ಜುನ? 'ಸುದೀಪ್ ಕನ್ನಡದವರಲ್ವಾ?

ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮುಂಬೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ಎಲ್ಲಾ ಕಡೆ ಕಿಚ್ಚ ಸುದೀಪ್ ಪ್ರೀ-ರಿಲೀಸ್ ಈವೆಂಟ್ ಮಾಡುತ್ತಿದ್ದಾರೆ. ಇಂದು (ಜುಲೈ 26) ಹೈದರಾಬಾದ್‌ನಲ್ಲಿ ಕಿಚ್ಚ ಸುದೀಪ್ ಪ್ರೀ-ರಿಲೀಸ್ ಈವೆಂಟ್ ಮಾಡಿದ್ದು, ನಾಗಾರ್ಜುನ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

ಇದೇ ವೇಳೆ ನಾಗಾರ್ಜುನ 'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ, ಕಿಚ್ಚ ಸುದೀಪ್ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ. ಕಿಚ್ಚ ಸುದೀಪ್ ಹಾಗೂ ನಾಗಾರ್ಜುನ ಇಬ್ಬರೂ ಮೊದಲಿನಿಂದಲೂ ಉತ್ತಮ ಸ್ನೇಹಿತರು. ಸುದೀಪ್ 'ಈಗ' ಸಿನಿಮಾ ರಿಲೀಸ್ ಆದಾಗ, ಸ್ವತ: ನಾಗಾರ್ಜುನ ಕರೆ ಮಾಡಿ ಕಿಚ್ಚನಿಗೆ ವಿಶ್ ಮಾಡಿದ್ದರು. ಈ ಮಾತನ್ನು ಸುದೀಪ್ ವೇದಿಕೆ ಮೇಲೆ ನೆನಪಿಸಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ವೇದಿಕೆಯಲ್ಲಿ ಇಡೀ 'ವಿಕ್ರಾಂತ್ ರೋಣ' ತಂಡವೇ ಇತ್ತು. ಈ ವೇಳೆ ಸುದೀಪ್ ಬಗ್ಗೆ ಟಾಲಿವುಡ್ ಮನ್ಮಥ ಇಂಟ್ರೆಸ್ಟಿಂಗ್ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ "ಕನ್ನಡದವರಲ್ಲ. ತೆಲುಗಿನವರು ಎಂದು ಹೇಳಿದ್ದಾರೆ. ಇದೇ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸುದೀಪ್ ಧ್ವನಿ ಕೇಳಿದರೆ ಭಯ

ಸುದೀಪ್ ಧ್ವನಿ ಕೇಳಿದರೆ ಭಯ

ಟಾಲಿವುಡ್ ಮನ್ಮಥ ನಾಗಾರ್ಜುನ ಮೊದಲಿನಿಂದಲೂ ಕಿಚ್ಚನ ವಾಯ್ಸ್‌ಗೆ ಫ್ಯಾನ್. ಈ ಮಾತನ್ನು ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮುಕ್ತವಾಗಿ ಹೇಳಿದ್ದಾರೆ. "ಆ ವಾಯ್ಸ್ ಕೇಳಿದರೆ ನನಗೆ ಭಯ ಆಗುತ್ತೆ. ಸುದೀಪ್‌ಗೆ ಅದ್ಭುತವಾದ ಧ್ವನಿಯಿದೆ. ಯಾವಾಗಲೂ ನಾನು ಅಭಿಮಾನಿ. ಈ ವೇದಿಕೆಯಲ್ಲಿ ನನ್ನ ಹಲವು ಸಿನಿಮಾಗಳನ್ನು ನೆನಪಿಸಿದ್ದಾರೆ. ಈ ವೇದಿಕೆ ಮೇಲೆ ನಾನಿರುವುದಕ್ಕೆ ತುಂಬಾನೇ ಖುಷಿಯಾಗುತ್ತಿದೆ. " ಎಂದು ಹೇಳಿದ್ದಾರೆ.

ಕಿಚ್ಚ ಸುದೀಪ್ ತೆಲುಗಿನವರು

ಕಿಚ್ಚ ಸುದೀಪ್ ತೆಲುಗಿನವರು

" ಸುದೀಪ್ ಕನ್ನಡ ಹುಡುಗ ಅಲ್ಲ. ನಮ್ಮ ತೆಲುಗು ಹುಡುಗ. ಹೈದರಾಬಾದ್‌ನವರು. ಅವರು ಇಲ್ಲೇ ಇರುತ್ತಾರೆ. ಸುದೀಪ್ ತುಂಬಾ ದೊಡ್ಡ ಸಿನಿಮಾ ಮಾಡುತ್ತಿದ್ದಾರೆ ಅನ್ನುವುದಲ್ಲ. ಈಗಾಗಲೇ ಎಲ್ಲಾ ಭಾಷೆಯಲ್ಲೂ ಟ್ರೈ ಮಾಡಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ನಟಿಸಿದ್ದೀರಿ ಎಂದು ಗೊತ್ತಿದೆ. ಮಲಯಾಳಂ ಕೂಡ ಮಾಡುತ್ತಿದ್ದೀರ ಎಂದು ನಾನು ಕೇಳಿಪಟ್ಟಿದ್ದೇನೆ. ಈಗಾಗಲೇ ಸುದೀಪ್ ಭಾರತದಾದ್ಯಂತ ಎಲ್ಲರಿಗೂ ಗೊತ್ತಿದೆ. ಈಗ ವಿಕ್ರಾಂತ್ ರೋಣ ಮೂಲಕ ಮತ್ತೆ ಒಂದೇ ಸಿನಿಮಾ ಮೂಲಕ ಎಲ್ಲಾರಿಗೂ ಪರಿಚಿತರಾಗಲಿದ್ದಾರೆ." ಎಂದು ಕಿಚ್ಚನಿಗೆ ಶುಭ ಹಾರೈಸಿದ್ದಾರೆ.

ಸ್ಟುಡಿಯೋದಲ್ಲಿ ವಿಕ್ರಾಂತ್ ರೋಣ ಪೋಸ್ಟರ್

ಸ್ಟುಡಿಯೋದಲ್ಲಿ ವಿಕ್ರಾಂತ್ ರೋಣ ಪೋಸ್ಟರ್

"ಅನ್ನಪೂರ್ಣ ಸ್ಟುಡಿಯೋದಲ್ಲಿ ನಮಗೆ ಈ ಸಿನಿಮಾವನ್ನು ಇಲ್ಲಿ ತೆಗೆದಿದ್ದಾರೆ ಅಂತ ಹೆಮ್ಮೆಯಾಗಿ ಅಲ್ಲಿ ದೊಡ್ಡ ದೊಡ್ಡ ಪೋಸ್ಟರ್ ಹಾಕುತ್ತೇವೆ. ಈ ಹಿಂದೆ 'ಬಾಹುಬಲಿ'ಯನ್ನು ಹಾಕಿದ್ದೆವು. ಬಳಿಕ 'RRR' ಪೋಸ್ಟರ್ ಹಾಕಿದ್ದೇವೆ. ನನಗೆ ತುಂಬಾನೇ ನಂಬಿಕೆಯಿದೆ. ಮೊನ್ನೆ ಟ್ರೈಲರ್ ನೋಡಿದ ಬಳಿಕವೇ ಅಂದುಕೊಂಡಿದ್ದೆ, ಈ ಸಿನಿಮಾ ಬಿಡುಗಡೆಯಾದ ಬಳಿಕ 'ವಿಕ್ರಾಂತ್ ರೋಣ' ಪೋಸ್ಟರ್ ಕೂಡ ಇಲ್ಲಿ ಇರುತ್ತೆ ಅಂತ. "

3ಡಿ ನೋಡಿ ಬಹಳ ದಿನ ಆಯ್ತು

3ಡಿ ನೋಡಿ ಬಹಳ ದಿನ ಆಯ್ತು

"ಟ್ರೈಲರ್ ನಾನು ಮೊದಲ ಪೋನ್‌ನಲ್ಲಿ ನೋಡಿದೆ. ತುಂಬಾನೇ ಚೆನ್ನಾಗಿದೆ ಅಂತ ಅನಿಸಿತ್ತು. ಇಲ್ಲಿ ನೋಡಿದ ಬಳಿಕ ಕಳೆದು ಹೋಗಿದ್ದೇನೆ. ಹಾಗೇ ಸಿನಿಮಾ ಹೇಗಿದೆ ಅನ್ನೋದು ಕಣ್ಣ ಮುಂದೆ ಬಂದಿದೆ. 3ಡಿಯಲ್ಲಿ ತೆಗೆದಿದ್ದಾರೆ ಎನ್ನುತ್ತಿದ್ದಾರೆ. 3ಡಿ ಸಿನಿಮಾ ನೋಡಿ ತುಂಬಾನೇ ದಿನಗಳಾಗಿವೆ. ಈ ಸಿನಿಮಾ ಅದ್ಭುತವಾಗಿರುತ್ತೆ ಎನ್ನುವ ನಂಬಿಕೆ ಇದೆ. "

ತೆಲುಗಿನವರು ಒಳ್ಳೆಯರು

ತೆಲುಗಿನವರು ಒಳ್ಳೆಯರು

" ಸುದೀಪ್ ನಾನು ನಿಮಗೊಂದು ಮಾತು ಹೇಳುತ್ತೇನೆ. ತೆಲುಗು ಮಂದಿ ತುಂಬಾ ಒಳ್ಳೆಯ ಜನರು. ಬೇರೆ ಪ್ರೇಕ್ಷಕರು ಹೇಗಿದ್ದಾರೋ ಗೊತ್ತಿಲ್ಲ. ನಮ್ಮವರಿಗೆ ಸಿನಿಮಾ ಇಷ್ಟ ಆಯ್ತು ಅಂದ್ರೆ, ಅದನ್ನು ಮುಗಿಲೆತ್ತರಕ್ಕೆ ತೆಗೆದುಕೊಂಡ ಹೋಗ್ತಾರೆ. ಈ ಉದಾರ ಮನೋಭಾವವನ್ನು ನೀವು ಶೀಘ್ರದಲ್ಲಿಯೇ ನೋಡುತ್ತೀರಾ."

More from Filmibeat

English summary
Nagarjuna About Vikrant Rona And Kichcha Sudeep In Pre-Release Event Hyderabad, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X