ಮೆಗಾಸ್ಟಾರ್ ಚಿರಂಜೀವಿಗೆ ಭಾವಿ ಸೊಸೆಯನ್ನು ಪರಿಚಯಿಸಿದ ನಾಗಾರ್ಜುನ; ವೈರಲ್ ವಿಡಿಯೋ ನೋಡಿ

ನಾಗ ಚೈತನ್ಯ ಮದುವೆ ಹಾಗೂ ವಿಚ್ಛೇದನ ಕಳೆದ ನಾಲ್ಕು ವರ್ಷಗಳಿಂದ ಸುದ್ದಿಯಾಗುತ್ತಲೇ ಇದೆ. ಸಮಂತಾ ಜೊತೆ ಬೇರೆಯಾದ ಕ್ಷಣದಿಂದಲೂ ನೆಟ್ಟಿಗರು ವಿಚ್ಛೇದನಕ್ಕೆ ಕಾರಣವನ್ನು ಹುಡುಕುತ್ತಲೇ ಇದ್ದಾರೆ. ಇಬ್ಬರೂ ಬೇರೆಯಾಗುತ್ತಿದ್ದೇವೆ ಎಂದು ಘೋಷಣೆ ಮಾಡಿದ ವೇಳೆ ಸ್ನೇಹಿತರಾಗಿಯೂ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಲ್ಲಿಂದ ಈ ಜೋಡಿ ಮುಂದಿನ ಹೆಜ್ಜೆ ಬಗ್ಗೆ ಚರ್ಚೆಯಾಗುತ್ತಲೇ ಇತ್ತು.

ವಿಚ್ಛೇದನ ಪಡೆದು ನಾಲ್ಕು ವರ್ಷಗಳ ಬಳಿಕ ನಾಗಚೈತನ್ಯ ಎರಡನೇ ಮದುವೆಗೆ ತಯಾರಿ ನಡೆಸಿದ್ದಾರೆ. ನಟಿ ಶೋಭಿತಾ ಧೂಳಿಪಾಲ ಜೊತೆ ಸಪ್ತಪದಿ ತುಳಿಯುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಇವರಿಬ್ಬರ ನಿಶ್ಚಿತಾರ್ಥ ಕೂಡ ನಡೆದು ಹೋಗಿದೆ. ನಾಗಾರ್ಜುನ ಕುಟುಂಬಕ್ಕೆ ಸೊಸೆಯಾಗಿ ಕಾಲಿಡಲಿರುವ ಶೋಭಿಯಾ ಟಾಕ್ ಆಪ್‌ ದಿ ಟೌನ್ ಆಗಿದ್ದಾರೆ.

Nagarjuna introduced his future daughter-in-law Sobhita Dhulipala to Chiranjeevi video viral

ಇತ್ತೀಚೆಗೆ ನಾಗಾರ್ಜುನ ಅಕ್ಕಿನೇನಿ ತನ್ನ ಭಾವಿ ಸೊಸೆಯಲ್ಲಿ ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿಗೆ ಪರಿಚಯಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಮೆಗಾಸ್ಟಾರ್ ಚಿರಂಜೀವಿಗೆ ಶೋಭಿತಾರನ್ನು ನಾಗಾರ್ಜುನಾ ಪರಿಚಯ ಮಾಡಿಕೊಟ್ಟಿದ್ದು ಯಾಕೆ? ಯಾವ ಕಾರ್ಯಕ್ರಮದಲ್ಲಿ ಈ ಭೇಟಿ ಆಯ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಇತ್ತೀಚೆಗೆ ಅಕ್ಕಿನೇನಿ ಕುಟುಂಬ ಎಎನ್‌ಆರ್ ನ್ಯಾಷನಲ್ ಅವಾರ್ಡ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿಕೊಟ್ಟಿದೆ. ಈ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿಯನ್ನು ಸನ್ಮಾನ ಮಾಡಲಾಗಿತ್ತು. ಟಾಲಿವುಡ್‌ನ ಮೆಗಸ್ಟಾರ್‌ ಅನ್ನು ಬಾಲಿವುಡ್ ಮೆಗಾಸ್ಟಾರ್ ಸನ್ಮಾನ ಮಾಡಿದ್ದು ಸಿನಿಮಾ ಪ್ರೇಮಿಗಳಿಗೆ ಅಪರೂಪ ಕ್ಷಣವಾಗಿತ್ತು.

ಈ ಕಾರ್ಯಕ್ರಮಕ್ಕೆ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮದುವೆಗೂ ಮುನ್ನ ಇಂತಹ ಕಾರ್ಯಕ್ರಮವೊಂದರಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಮದುವೆಗೂ ಮುನ್ನ ಈ ಜೋಡಿ ಸಾರ್ವಜನಿಕರ ಮುಂದೆ ಒಟ್ಟಿಗೆ ಬಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಇದೇ ವೇಳೆ ಅಕ್ಕಿನೇನಿ ನಾಗಾರ್ಜುನಾ ತನ್ನ ಭಾವಿ ಸೊಸೆಯನ್ನು ಮೆಗಾಸ್ಟಾರ್ ಚಿರಂಜೀವಿಗೆ ಪರಿಚಯ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಅಕ್ಕಿನೇನಿ ನಾಗಾರ್ಜುನ ತನ್ನ ಸೊಸೆಯನ್ನು ಕರೆದು ಮೆಗಾಸ್ಟಾರ್ ಚಿರಂಜೀವಿಗೆ ಪರಿಚಯ ಮಾಡಿಸುತ್ತಾರೆ. ತಿಳಿನೀಲಿ ಹಾಗೂ ಹಸಿರು ಬಣ್ಣದ ಸೀರೆಯುಟ್ಟು ಬಂದಿದ್ದ ಶೋಭಿತಾ ಕೈ ಮುಗಿದು ಪರಚಯ ಮಾಡಿಕೊಳ್ಳುತ್ತಾರೆ. ಇದೇ ವೇಳೆ ನಾಗಚೈತನ್ಯ ಕೂಡ ಅವರನ್ನು ಸೇರಿಕೊಳ್ಳುತ್ತಾರೆ. ಬಳಿಕ ಮೆಗಾಸ್ಟಾರ್ ಚಿರಂಜೀವಿ ಈ ಜೋಡಿಯನ್ನು ನಗೆಗಡಲ್ಲಿ ತೇಲಿಸುವ ವಿಡಿಯೋ ಸದ್ದು ಮಾಡುತ್ತಿದೆ.

ಡಿವೋರ್ಸ್ ಬಳಿಕ ನಾಗ ಚೈತನ್ಯ ನಟಿ ಶೋಭಿತಾ ಧೂಳಿಪಾಲ ಅವರನ್ನು ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ವಿಷಯದ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿರಲಿಲ್ಲ. ಕೆಲವು ತಿಂಗಳ ಹಿಂದಷ್ಟೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈಗ ಟಾಲಿವುಡ್‌ನಲ್ಲಿ ಅವರ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ಟಾಲಿವುಡ್ ಮೂಲಗಳ ಪ್ರಕಾರ ಇದೇ ಡಿಸೆಂಬರ್ ತಿಂಗಳಲ್ಲಿ ಮದುವೆ ನಡೆಯಲಿದೆ ಅನ್ನೋ ಮಾತು ಹೇಳಿ ಬರುತ್ತಿದೆ.

More from Filmibeat

English summary
Nagarjuna introduced his future daughter-in-law Sobhita Dhulipala to Chiranjeevi video viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X