ಪ್ರಮೋದ್ ನಟನೆಗೆ ಬೆರಗಾದ ನಾಗಾರ್ಜುನ;'ಲೆನಿನ್' ಇವೆಂಟ್‌ನಲ್ಲಿ ಕನ್ನಡ ನಟನ ಹಾಡಿ ಹೊಗಳಿದ ಮನ್ಮಥ

ಕನ್ನಡ ಚಿತ್ರರಂಗದ ಉದಯೋನ್ಮುಖ ನಟರಲ್ಲಿ ಪ್ರಮೋದ್ ಕೂಡ ಒಬ್ಬರು. ಈಗಾಗಲೇ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ತಮ್ಮ ಪ್ರತಿಭೆ ಏನು ಅನ್ನೋದನ್ನು ತೋರಿಸಿದ್ದಾರೆ. ಹಾಗಂತ ಕನ್ನಡ ಅಷ್ಟೇ ಅಲ್ಲ ಇತ್ತೀಚೆಗೆ ತೆಲುಗು ಮಂದಿಗೂ ಪ್ರಮೋದ್ ಸಿಕ್ಕಾಪಟ್ಟೆ ಇಷ್ಟ ಆಗಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಅಂದರೆ, ಇತ್ತೀಚೆಗೆ ನಡೆದ 'ಲೆನಿನ್' ತೆಲುಗು ಸಿನಿಮಾದ ಸಕ್ಸಸ್ ಮೀಟ್.

ನಾಗಾರ್ಜುನ ಅವರ 2ನೇ ಪುತ್ರ ಅಖಿಲ್ ಅಕ್ಕಿನೇನಿ ನಟಿಸಿದ 'ಲೆನಿನ್' ಸಿನಿಮಾ ರಿಲೀಸ್ ಆಗಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಸಿನಿಮಾದಲ್ಲಿ ಕನ್ನಡದ ನಟ ಪ್ರಮೋದ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಪರ್ಫಾಮೆನ್ಸ್ ಬಗ್ಗೆ ಈ ಸಿನಿಮಾ ಸಕ್ಸಸ್ ಮೀಟ್‌ನಲ್ಲಿ ಟಾಲಿವುಡ್‌ನ ಮನ್ಮಥ ನಾಗಾರ್ಜುನ ಮನಸಾರೆ ಹಾಡಿ ಹೊಗಳಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ಸೀನ್‌ ಅಂತೂ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ.

Nagarjuna praised Kannada actor Pramod for his performance in Akhil Akkineni movie Lenin

ತೆಲುಗು ವೇದಿಕೆ ಮೇಲೆ ಟಾಲಿವುಡ್‌ನ ಸೂಪರ್‌ಸ್ಟಾರ್ ಒಬ್ಬರಿಂದ ಮೆಚ್ಚಿಗೆ ಪಡೆದುಕೊಳ್ಳುವುದು ಹೆಮ್ಮೆಯ ವಿಷಯ. ಅದರಲ್ಲೂ ಪ್ರಮೋದ್ ನಟನೆ ಬಗ್ಗೆ ಪುತ್ರ ಅಖಿಲ್ ಅಕ್ಕಿನೇನಿಯನ್ನು ಮುಂದಿಟ್ಟುಕೊಂಡು ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪ್ರಮೋದ್ ಬಗ್ಗೆ ನಾಗಾರ್ಜುನ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ನಾಗಾರ್ಜುನರಿಂದ ಪ್ರಮೋದ್ ಗುಣಗಾನ

ಅಖಿಲ್ ಅಕ್ಕಿನೇನಿ ಟಾಲಿವುಡ್‌ನಲ್ಲಿ ಒಂದು ಹಿಟ್‌ ಸಿನಿಮಾಗಾಗಿ ಅದೆಷ್ಟೋ ವರ್ಷಗಳಿಂದ ಕಾಯುತ್ತಿದ್ದರು. ಅದೆಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಹಿಟ್ ಸಿನಿಮಾ ಸಿಗುತ್ತಿರಲಿಲ್ಲ. ಆದ್ರೀಗ 'ಲೆನಿನ್' ಮೂಲಕ ಸಕ್ಸಸ್ ರುಚಿ ಕಂಡಿದ್ದಾರೆ. ಹೀಗಾಗಿ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ವೇದಿಕೆ ಮೇಲೆ ಇದ್ದರನ್ನು ಖುದ್ದಾಗಿ ನಾಗಾರ್ಜುನ ಈ ಸಿನಿಮಾಗೆ ಕೆಲಸ ಮಾಡಿದವರನ್ನು ಹಾಡಿ ಹೊಗಳಿದ್ದರು. ಆದರೆ, ಪ್ರಮೋದ್ ಈ ಇವೆಂಟ್‌ನಲ್ಲಿ ಗೈರಾಗಿದ್ದರು. ಹೀಗಾಗಿ ಪ್ರಮೋದ್‌ ಬಗ್ಗೆ ಮಾತಾಡುವುದನ್ನೇ ಮರೆತಿದ್ದರು. ಈ ವೇಳೆ ನಾಗಾರ್ಜುನಾಗೆ ಅಖಿಲ್ ಅಕ್ಕಿನೇನಿ ವೇದಿಕೆ ಮೇಲೆ ನೆನಪಿಸಿದ್ದರು. ಆಗಲೇ ಪ್ರಮೋದ್ ಬಗ್ಗೆ ನಾಗಾರ್ಜನ ಅವರು ಥ್ರಿಲ್ ಆಗಿ ಹೀಗೆ ಹೊಗಳಿ ಕೊಂಡಾಡಿದ್ದಾರೆ.

Also Read
'ಹಲ್ಕಾ ಡಾನ್' ಸಿನಿಮಾಗೆ ಎಂಟ್ರಿ ಕೊಟ್ಟ ಬಹುಭಾಷಾ ನಟ ಜಾನ್ ವಿಜಯ್; ಯಾರಿವರು?
'ಹಲ್ಕಾ ಡಾನ್' ಸಿನಿಮಾಗೆ ಎಂಟ್ರಿ ಕೊಟ್ಟ ಬಹುಭಾಷಾ ನಟ ಜಾನ್ ವಿಜಯ್; ಯಾರಿವರು?

ಇಡೀ ಸಿನಿಮಾನಾ ಜೇಬಿನಲ್ಲಿ ಇಟ್ಕೊಂಡು ಹೋಗ್ತಾನೆ

'ಲಿನಿನ್' ಸಿನಿಮಾದಲ್ಲಿ ಪ್ರಮೋದ್ ಪಾತ್ರವನ್ನು ನೋಡಿ ನಾಗಾರ್ಜುನ ಥ್ರಿಲ್ ಆಗಿದ್ದರು. ಅದಕ್ಕೆ ಮಗನಿಗೆ ಒಂದು ಸಲಹೆ ನೀಡಿದನ್ನು ನೆನಪಿಸಿಕೊಂಡಿದ್ದಾರೆ. "ಇನ್ನೊಬ್ಬರ ಬಗ್ಗೆ ನಾನು ಮಾತಾಡಲೇಬೇಕು. ಪ್ರಮೋದ್.. ವಸಂತ್ ಎಂತಹ ಅದ್ಭುತ ಪರ್ಫಾಮೆನ್ಸ್. ಪ್ರಿ ಕ್ಲೈಮ್ಯಾಕ್ಸ್ ಸೀಸ್‌ನಲ್ಲಿ ಅವರ ನಟನೆ ಅದ್ಭುತ. ಅಖಿಲ್ ಅನ್ನು ನೋಡಿ ನೀನು ಜಾಗೃತೆಯಿಂದ ಇಲ್ಲ ಅಂದರೆ, ಅವನು ಇಡೀ ಸಿನಿಮಾವನ್ನು ಜೀಬಿನಲ್ಲಿ ಇಟ್ಟುಕೊಂಡು ಹೋಗುತ್ತಾನೆ. ನಾನು ಅಖಿಲ್‌ಗೆ ಹೀಗೆ ಅಂದಿದ್ದೆ. ಆನಂತರ ಕ್ಲೈಮ್ಯಾಕ್ಸ್ ಬರುತ್ತೆ. ಆಗ ನೀವು ಮಾಡುತ್ತಿರೋ ನನಗೆ ಗೊತ್ತಿಲ್ಲ. ನೀನು ಅದ್ಭುತವಾಗಿ ಮಾಡಲೇಬೇಕು ಅಂದಿದ್ದೆ. ಇಬ್ಬರೂ ಪೈಪೋಟಿಗೆ ಬಿದ್ದು ನಟಿಸಿದ್ದಾರೆ." ಎಂದು ಪ್ರಮೋದ್‌ರನ್ನು ಹಾಡಿ ಹೊಗಳಿದ್ದಾರೆ.

ಪ್ರಮೋದ್ ಶುಭ ಹಾರೈಸಿದ ನಾಗಾರ್ಜುನ

ಇದೇ ವೇದಿಕೆ ಮೇಲೆ ಪ್ರಮೋದ್ ನಟಿಸುತ್ತಿರುವ ಸಿನಿಮಾಗೆ ನಾಗಾರ್ಜುನ ಶುಭ ಹಾರೈಸಿದ್ದಾರೆ. "ಪ್ರಮೋದ್ ನಿನ್ನನ್ನೇ ಕೇಳಿದೆ ನಾನು. ನೀನು ಹೀರೋ ಆಗಿ ನಟಿಸುತ್ತಿದ್ದೇನೆ ಎಂದು ಹೇಳಿದೆ. ಈಗ ನೀವು ಬೆಂಗಳೂರಿಲ್ಲಿ ಹೀರೋ ಆಗಿ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೀರ. ನಿಮಗೆ ನಾನು ಶುಭ ಕೋರುತ್ತೇನೆ." ಎಂದು ನಾಗಾರ್ಜುನ ವೇದಿಕೆ ಮೇಲೆ ಕನ್ನಡ ನಟ ಪ್ರಮೋದ್ ಅವರನ್ನು ಹಾಡಿ ಹೊಗಳಿದ್ದಾರೆ.

'ಹಲ್ಕಾ ಡಾನ್‌'ನಲ್ಲಿ ಬ್ಯುಸಿ

ಪ್ರಮೋದ್ ಕನ್ನಡ ಸಿನಿಮಾ ಜೊತೆ ತೆಲುಗಿನಲ್ಲೂ ನಟಿಸುತ್ತಿದ್ದಾರೆ. 'ಸಲಾರ್' ಅವರಿಗೆ ಒಂದೊಳ್ಳೆ ಬ್ರೇಕ್ ಕೊಟ್ಟಿತ್ತು. ಈಗ 'ಲೆನಿನ್'ನಲ್ಲೂ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಕನ್ನಡದಲ್ಲಿ ಕೆಪಿ ಶ್ರೀಕಾಂತ್ ನಟಿಸುತ್ತಿರುವ 'ಹಲ್ಕಾ ಡಾನ್' ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಜೋರಾಗಿ ನಡೆಯುತ್ತಿದೆ. ಈ ಕಾರಣಕ್ಕೆ 'ಲೆನಿನ್' ಇವೆಂಟ್‌ನಲ್ಲಿ ಪ್ರಮೋದ್ ಭಾಗವಹಿಸುವುದಕ್ಕೆ ಸಾಧ್ಯವಾಗಿಲ್ಲ.

English summary
Akkineni Nagarjuna praised Kannada actor Pramod for his performance in Akhil Akkineni movie Lenin.
Read more about: nagarjuna akhil akkineni
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X