Daaku Maharaaj Box Office Day 1; ಮೊದಲ ದಿನ ಗೆದ್ದು ಬೀಗಿದ 'ಡಾಕು ಮಹಾರಾಜ್'; ಬಾಲಯ್ಯನಿಗೆ ಬಹುಪರಾಕ್

ಸಂಕ್ರಾಂತಿ ಬಂತು ಅಂದರೆ ಟಾಲಿವುಡ್‌ ಆಕ್ಟಿವ್ ಆಗಿಬಿಡುತ್ತೆ. ತೆಲುಗು ಸೂಪರ್‌ಸ್ಟಾರ್‌ಗಳು ಕ್ಯೂನಲ್ಲಿ ನಿಂತು ಸಿನಿಮಾವನ್ನು ರಿಲೀಸ್ ಮಾಡುತ್ತಾರೆ. ಈ ವರ್ಷ ಕೂಡ ಮೂವರು ದಿಗ್ಗಜರ ಸಿನಿಮಾಗಳು ಸಂಕ್ರಾಂತಿ ರಿಲೀಸ್ ಅಖಾಡದಲ್ಲಿವೆ. ರಾಮ್ ಚರಣ್ 'ಗೇಮ್ ಚೇಂಜರ್', ಬಾಲಯ್ಯ ನಟಿಸಿದ 'ಡಾಕು ಮಹಾರಾಜ್' ಈಗಾಗಲೇ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ವೆಂಕಟೇಶ್ ಸಿನಿಮಾ ಜನವರಿ 14ಕ್ಕೆ ರಿಲೀಸ್ ಆಗಲಿದೆ.

'ಗೇಮ್ ಚೇಂಜರ್' ಬಳಿಕ 'ಡಾಕು ಮಹಾರಾಜ್' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಮೊದಲ ದಿನವೇ ಸಿನಿಮಾ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ತೆಲುಗು ಸಿನಿಮಾ ಪ್ರೇಮಿಗಳಿಗೆ ಹಾಗೂ ಬಾಲಯ್ಯನ ಅಭಿಮಾನಿಗಳಿಗೆ ಪರ್ಫೆಕ್ಟ್ ಸಿನಿಮಾ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಈ ಸಿನಿಮಾ ಮನರಂಜನೆಗೆ ಹೇಳಿ ಮಾಡಿಸಿದ ಸಿನಿಮಾ ಎನ್ನಲಾಗಿದೆ.

Nandamuri Balakrishna film Daaku Maharaaj Day 1 Karnataka box office collection report

ಈ ಬೆನ್ನಲ್ಲೇ ಸಂಕ್ರಾಂತಿ ಬಾಕ್ಸಾಫೀಸ್‌ ಬಗ್ಗೆ ಲೆಕ್ಕಾಚಾರಾ ಹಾಕುವುದಕ್ಕೆ ಶುರು ಮಾಡಿದ್ದಾರೆ. 'ಗೇಮ್ ಚೇಂಜರ್' ನೆಲಕ್ಕಚ್ಚಿದ ಬೆನ್ನಲ್ಲೇ 'ಡಾಕು ಮಹಾರಾಜ್' ಬಾಕ್ಸಾಫೀಸ್ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದಾರೆ. ಮೊದಲ ದಿನ ಬಾಲಕೃಷ್ಣ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಗೆದ್ದಿದೆ ಅನ್ನೋ ವರದಿ ಹೊರಬಿದ್ದಿದೆ. ಡಾಕು ಮಹಾರಾಜ್ ಮೊದಲ ದಿನ ಗಳಿಸಿದ್ದೆಷ್ಟು? ಕರ್ನಾಟಕದಲ್ಲಿ ಈ ಸಿನಿಮಾಗೆ ಹೇಗಿದೆ ರೆಸ್ಪಾನ್ಸ್? ನೋಡೋಣ ಬನ್ನಿ..

'ಡಾಕು ಮಹಾರಾಜ್' ಮೊದಲ ದಿನದ ಕಲೆಕ್ಷನ್

ನಂದಮೂರಿ ಬಾಲಕೃಷ್ಣ ಸಿನಿಮಾ ಬಗ್ಗೆ ವಿಶೇಷವಾದ ಕುತೂಹಲವಿರುತ್ತೆ. ಅದರಲ್ಲೂ ಬಾಲಯ್ಯನ ಗೆಟಪ್ ಹಾಗೂ ಲುಕ್‌ನಿಂದ 'ಡಾಕು ಮಹಾರಾಜ್' ಗಮನ ಸೆಳೆದಿತ್ತು. ಡಾಕು ಅವತಾರದಲ್ಲಿ ಬಾಲಯ್ಯ ಅಬ್ಬರಿಸಿದ್ದು, ಮೊದಲ ಬಾಕ್ಸಾಫೀಸ್‌ನಲ್ಲೂ ಗೆದ್ದಿದ್ದಾರೆ. ಬಾಕ್ಸಾಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ಪ್ರಕಾರ ಪ್ರಕಾರ ಬಾಲಕೃಷ್ಣ ಸಿನಿಮಾ ಮೊದಲ ದಿನ 22.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತೆಲುಗು ಒಂದೇ ಭಾಷೆಯಲ್ಲಿ ಬಿಡುಗಡೆಯಾಗಿರುವ ಸಿನಿಮಾದ ಕಲೆಕ್ಷನ್ ಬಗ್ಗೆನೂ ಖುಷಿಯಾಗಿದೆ.

ಕರ್ನಾಟಕದಲ್ಲಿ ಹೇಗಿದೆ ರಿಪೋರ್ಟ್

'ಡಾಕು ಮಹಾರಾಜ್' ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಪಾಸಿಟಿವ್ ಆಗಿದೆ. ಸಂಕ್ರಾಂತಿ ಬಾಕ್ಸಾಫೀಸ್ ಯುದ್ಧದಲ್ಲಿ ಈ ಬಾರಿ ಬಾಲಯ್ಯನಿಗೆ ಗೆಲುವು ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಕರ್ನಾಟಕದ ವಿಷಯಕ್ಕೆ ಬಂದರೆ, ಆ ಲೆಕ್ಕಾಚಾರ ತಲೆಕೆಳಗಾಗುತ್ತೆ. ಯಾಕಂದ್ರೆ, ಕರ್ನಾಟಕದಲ್ಲಿ ಸಂಕ್ರಾಂತಿಗೆ ರಿಲೀಸ್‌ ಆದ ಸಿನಿಮಾಗಳು ಗೆದ್ದ ಉದಾಹರಣೆಗಳು ಇಲ್ಲ. ಇನ್ನು ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರುವ ಲೆಕ್ಕದ ಪ್ರಕಾರ 'ಡಾಕು ಮಹಾರಾಜ್' 1.5 ರಿಂದ 1.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

Nandamuri Balakrishna film Daaku Maharaaj Day 1 Karnataka box office collection report

'ಡಾಕು ಮಹಾರಾಜ್' ಆಕ್ಯೂಪೆನ್ಸಿ ಹೇಗಿದೆ?

ನಂದಮೂರಿ ಬಾಲಕೃಷ್ಣ ಸಿನಿಮಾ 'ಡಾಕು ಮಹಾರಾಜ್' ಮೊದಲ ದಿನ ಆಕ್ಯೂಪೆನ್ಸಿ ಪಾಸಿಟಿವ್ ಆಗಿದೆ. ತೆಲುಗು ರಾಜ್ಯಗಳಲ್ಲಿ ಸುಮಾರು ಶೇ.72.61ರಷ್ಟು ಆಕ್ಯೂಪೆನ್ಸಿ ಇತ್ತು. ಇದು ಚಿತ್ರರಂಗ ಹೊಸ ಹುರುಪು ನೀಡಿದೆ. ಮೆಹಬೂಬ್ ನಗರ, ಕಾಕಿನಾಡ, ವಾರಂಗಲ್‌ನಲ್ಲಿ ಸಖತ್ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಬೆಂಗಳೂರಿನಲ್ಲಿ ಸುಮಾರು 396 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಅದರಲ್ಲಿ ಶೇ.48ರಷ್ಟು ಆಕ್ಯೂಪೆನ್ಸ್ ಇತ್ತು ಎಂದು ಸ್ಯಾಕ್ನಿಲ್ಕ್ ವೆಬ್ ಸೈಟ್ ವರದಿ ಮಾಡಿದೆ.

ಸ್ಟಾರ್‌ ಕಾಸ್ಟ್ ಹೈಲೈಟ್

ಮಾಸ್ ಎಂಟರ್‌ಟೈನ್ಮೆಂಟ್ ಸಿನಿಮಾಗಳಿಗೆ ಹೆಸರು ವಾಸಿಯಾಗಿರುವ ಬಾಬಿ 'ಡಾಕು ಮಹಾರಾಜ್‌'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಲಕೃಷ್ಣ ಜೊತೆ ಬಾಬಿ ಡಿಯೋಲ್ ನಟನೆಗೆ ಜನರು ಫಿದಾ ಆಗಿದ್ದಾರೆ. ಹಾಗೇ ಪ್ರಗ್ಯಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್ ಹಾಗೂ ಊರ್ವಶಿ ರೌಟೇಲ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಥಮನ್ ಮ್ಯೂಸಿಕ್ ಕೂಡ ಈ ಸಿನಿಮಾ ಹೈಲೈಟ್.

Disclaimer: ಈ ಸಿನಿಮಾದ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ್ದು, ಚಿತ್ರತಂಡ ಇನ್ನೂ ಅಧಿಕೃತವಾಗಿ ಕಲೆಕ್ಷನ್ ಘೋಷಣೆ ಮಾಡಬೇಕಿದೆ.

More from Filmibeat

English summary
Nandamuri Balakrishna film Daaku Maharaaj Day 1 Karnataka box office collection report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X