ಸಾಧು ಗೆಟಪ್‌ನಲ್ಲಿ ಗಾಡ್ ಆಫ್ ಮಾಸ್ ನಂದಮೂರಿ ಬಾಲಕೃಷ್ಣ; 'ಅಖಂಡ 2' ರಿಲೀಸ್ ಯಾವಾಗ?
ತೆಲುಗು ಚಿತ್ರರಂಗದ ದಿಗ್ಗಜ ನಂದಮೂರಿ ಬಾಲಕೃಷ್ಣ ಸೋತು ಸುಣ್ಣವಾಗಿದ್ದಾಗ ಮತ್ತೆ ಗೆಲುವು ಅಂತ ಕಂಡಿದ್ದು 'ಅಖಂಡ'. ಬೊಯಪಾಟಿ ಶ್ರೀನು ನಿರ್ದೇಶಿಸಿದ್ದ ಈ ಸಿನಿಮಾ ಕೇವಲ ಆಂಧ್ರ, ತೆಲಂಗಾಣದಲ್ಲಿ ಅಷ್ಟೇ ಅಲ್ಲ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿಯೂ ಸಖತ್ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಆಗ ವೇಳೆ ಬಾಲಕೃಷ್ಣ ಹಾಗೂ ನಿರ್ದೇಶಕ ಬೊಯಪಾಟಿ ಶ್ರೀನು ಇಬ್ಬರೂ ಸೋಲಿನಿಂದ ತತ್ತರಿಸಿ ಹೋಗಿದ್ದರು. ಆ ವೇಳೆ ಇಬ್ಬರಿಗೂ 'ಅಖಂಡ' ಸೂಪರ್ ಸಕ್ಸಸ್ ಕೊಟ್ಟಿತ್ತು. ಈಗ ಅದೇ ಜೋಷ್‌ನಲ್ಲಿ 'ಅಖಂಡ 2'ಗೆ ಮತ್ತೆ ಒಂದಾಗಿದ್ದಾರೆ.
ಇಂದು (ಜೂನ್ 10) ಬಾಲಕೃಷ್ಣ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಖುಷಿಯಲ್ಲಿ ಒಂದು ದಿನ ಮುನ್ನವೇ 'ಅಖಂಡ 2' ಸಿನಿಮಾ ಟೀಸರ್ ಅನ್ನು ರಿಲೀಸ್ ಮಾಡಲಾಗಿತ್ತು. ಟೀಸರ್ ಬಿಡುಗಡೆಯಾದ 24 ಗಂಟೆಯೊಳಗೆ ಸುಮಾರು 20 ಮಿಲಿಯನ್ ಮಂದಿ ಕೇವಲ ತೆಲುಗು ಟೀಸರ್ ಅನ್ನು ವೀಕ್ಷಣೆ ಮಾಡಿದ್ದಾರೆ. ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಈ ಟೀಸರ್ ರಿಲೀಸ್ ಆಗಿದೆ.

ನಂದಮೂರಿ ಬಾಲಕೃಷ್ಣರನ್ನು 'ಗಾಡ್ ಆಫ್ ಮಾಸ್' ಅಂತಲೇ ಕರೆಯುವ ಸಿನಿ ಪ್ರಿಯರು 'ಅಖಂಡ 2' ಟೀಸರ್‌ಗೆ ಸಖತ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಾಲಯ್ಯ ಹಾಗೂ ಬೊಯಪಾಟಿ ಶ್ರೀನು ಇಬ್ಬರದ್ದೂ ಬಹುನಿರೀಕ್ಷಿತ ಕಾಂಬಿನೇಷನ್ ಆಗಿದ್ದು, ನಂದಿ ಮುಖ ಇರುವ ತ್ರಿಶೂಲ ಹಿಡಿದು ಮಾಸ್ ಅವತಾರವೆತ್ತಿರುವ ಲುಕ್ ಸಿನಿಪ್ರಿಯರನ್ನು ಗಮನ ಸೆಳೆದಿದೆ. ಎಲ್ಲಾ ಭಾಷೆಯಲ್ಲೂ ಟೀಸರ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಮುಂದೆ ಓದಿ
'ಅಖಂಡ 2' ಸಿನಿಮಾ ಬಿಡುಗಡೆ ಯಾವಾಗ?
ಐದು ಭಾಷೆಯಲ್ಲಿ ಟೀಸರ್‌ಗೆ ರೆಸ್ಪಾನ್ಸ್ ಹೇಗಿದೆ?
ಬಾಲಯ್ಯ ಜೋಡಿಯಾಗಿ ನಟಿಸುತ್ತಿರೋದ್ಯಾರು?
ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಅಖಂಡ' ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ನಂದಮೂರಿ ಬಾಲಕೃಷ್ಣ ಅವತಾರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಈಗ ರಿಲೀಸ್ ಆಗಿರುವ 'ಅಖಂಡ 2' ಟೀಸರ್ ಕೂಡ ಕಿಕ್ ಕೊಡುತ್ತಿದೆ. ಹಿಮದಿಂದ ಆವೃತವಾದ ಕೈಲಾಸ, ಭರ್ಜರಿ ಆಕ್ಷನ್ಸ್ 'ಅಖಂಡ 2' ಟೀಸರ್‌ನ ಹೈಲೈಟ್. ಎಸ್. ಥಮನ್ ಮ್ಯೂಸಿಕ್ ಈ ಸಿನಿಮಾಗೆ ಹೊಸ ಕಿಕ್ ಕೊಡುತ್ತಿದೆ. ಸಾಧು ಗೆಟಪ್‌ನಲ್ಲಿ ಬಾಲಕೃಷ್ಣ ಎಂಟ್ರಿ ಕೊಟ್ಟು ದುಷ್ಟರನ್ನು ಸಂಹಾರ ಮಾಡುವ ಖದರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ.
'ಅಖಂಡ' ಸಿನಿಮಾದಲ್ಲಿ ಬಾಲಯ್ಯ ಅಘೋರಿ ಅವತಾರದಲ್ಲಿ ನಟಿಸಿದ್ದರು. ಈ ಸಿನಿಮಾ ನಾಲ್ಕು ವರ್ಷಗಳ ಹಿಂದೆ ಅಂದರೆ, 2021ರಲ್ಲಿ ರಿಲೀಸ್ ಆಗಿತ್ತು. ಈಗ ಅದರ ಸೀಕ್ವೆಲ್ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಇನ್ನೊಂದು ವಿಶೇಷ ಅಂದರೆ, ಈ ಸಿನಿಮಾದಲ್ಲಿಯೂ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಐದು ಭಾಷೆಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ತೆಲುಗು ಪ್ರಮುಖ ಭಾಷೆಯಾಗಿದ್ದರೂ, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾದ ಬಜೆಟ್ ಸುಮಾರು 200 ಕೋಟಿ ರೂಪಾಯಿ ಎನ್ನಲಾಗಿದೆ.
ಅಂದ್ಹಾಗೆ ಇದು, ನಂದಮೂರಿ ಬಾಲಕೃಷ್ಣ ಮತ್ತು ಬೊಯಪಾಟಿ ಶ್ರೀನು ಕಾಂಬಿನೇಷನ್‌ನಲ್ಲಿ ಬರುತ್ತಿರುವ ನಾಲ್ಕನೇ ಸಿನಿಮಾ. ಈ ಹಿಂದೆ 'ಸಿಂಹ', 'ಲೆಜೆಂಡ್' ಹಾಗೂ 'ಅಖಂಡ' ಸಿನಿಮಾ ರಿಲೀಸ್ ಆಗಿವೆ. ಈಗ 'ಅಖಂಡ 2' ಈ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಸಿನಿಮಾ ಆಗಿದೆ. ಹೀಗಾಗಿ ನಿರೀಕ್ಷೆಗಳು ಹೆಚ್ಚಿದ್ದು, ಈ ಬಾರಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
'ಅಖಂಡ 2' ರಂದು ಜಾರ್ಜಿಯಾದ ಅದ್ಭುತ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಬಾಲಯ್ಯನಿಗೆ ನಾಯಕಿಯಾಗಿ ಸಂಯುಕ್ತಾ ನಟಿಸುತ್ತಿದ್ದರೆ, ಅತ್ತ ಆದಿ ಪಿನಿಸೆಟ್ಟಿ ಖಳನಾಯಕನಾಗಿ ಅಬ್ಬರಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ ಹೈ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 25ರಂದು ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.


Click it and Unblock the Notifications











