'ಸೀತಾ ರಾಮಂ','ಲಕ್ಕಿ ಭಾಸ್ಕರ್' ಬಳಿಕ ದುಲ್ಖರ್ ಸಲ್ಮಾನ್ ಮತ್ತೊಂದು ತೆಲುಗು ಸಿನಿಮಾ; 41ನೇ ಚಿತ್ರಕ್ಕೆ ನಾನಿ ಸಾಥ್!

ಮಲಯಾಳಂ ನಟ ದುಲ್ಖರ್ ಸಲ್ಮಾನ್ ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ಮಾತೃಭಾಷೆಗಿಂತ ಹೆಚ್ಚಾಗಿ ಪರಭಾಷೆಯ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸುತ್ತಿರುವ ದುಲ್ಖರ್ ಸಲ್ಮಾನ್ ಮತ್ತೊಂದು ತೆಲುಗು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಿನಿಪ್ರಿಯರಿಗೆ ಮನರಂಜನೆ ನೀಡುವಂತಹ ಸ್ಟೋರಿಗಳನ್ನೇ ಆಯ್ಕೆ ಮಾಡಿಕೊಳ್ಳುವ ನಟನ ಹೊಸ ಸಿನಿಮಾಗೆ ನ್ಯಾಚುರಲ್ ಸ್ಟಾರ್ ನಾನಿ ಸಾಥ್ ಕೊಟ್ಟಿದ್ದಾರೆ.

ದುಲ್ಖಾರ್ ಸಲ್ಮಾನ್ ಸಿನಿಮಾಗಳು ಅಂದರೆ ಸಿನಿಪ್ರಿಯರ ಕಣ್ಣುಗಳು ಅರಳುತ್ತವೆ. ಅದರಲ್ಲೂ ತೆಲುಗು ಮಂದಿಗೂ ಇವರ ಸಿನಿಮಾಗಳು ಇಷ್ಟ ಆಗುತ್ತಿವೆ. 'ಸೀತಾ ರಾಮಂ' ಸಿನಿಮಾ ಬಳಿಕ ತೆಲುಗು ಮಂದಿ ದುಲ್ಖರ್ ಅನ್ನು ಇಷ್ಟ ಪಡುವುದಕ್ಕೆ ಶುರು ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ತೆರೆಕಂಡಿದ್ದ ಮತ್ತೊಂದು ತೆಲುಗು ಸಿನಿಮಾ 'ಲಕ್ಕಿ ಭಾಸ್ಕರ್' ಕೂಡ ಸೂಪರ್ ಹಿಟ್ ಆಗಿತ್ತು. ಹೀಗಾಗಿ ಇನ್ನೊಂದು ತೆಲುಗು ಸಿನಿಮಾ ಟೇಕ್ ಆಫ್ ಆಗಿದೆ.

Natural Star Nani Claps For Dulquer Salmaan 41st movie with debutant director Ravi Nelakuditi

'ಲಕ್ಕಿ ಭಾಸ್ಕರ್' ಯಶಸ್ಸಿನ ಬಳಿಕ ದುಲ್ಖಾರ್ ಸಲ್ಮಾನ್ ಬಳಿ ಕೈ ತುಂಬಾ ಸಿನಿಮಾಗಳಿವೆ. ಆ ಸಿನಿಮಾಗಳ ಹಿಂದೇನೆ ಇನ್ನೊಂದು ಸಿನಿಮಾ ಟೇಕಾಫ್ ಆಗಿದೆ. ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಈ ಸಿನಿಮಾಗೆ ಕ್ಲಾಪ್ ಮಾಡಿ ಗೆಳೆಯನ ಸಿನಿಮಾಗೆ ಶುಭ ಹಾರೈಸಿದ್ದಾರೆ. ಇಬ್ಬರು ಸ್ಟಾರ್ ನಟರನ್ನು ನೋಡಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹಾಗಿದ್ದರೆ, ದುಲ್ಖರ್ ಸಲ್ಮಾನ್ 41ನೇ ಸಿನಿಮಾದ ಹೈಲೈಟ್ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ದುಲ್ಖನ್ ಸಲ್ಮಾನ್ 41ನೇ ಸಿನಿಮಾ ಹಲವು ಕಾರಣಗಳಿಗೆ ಗಮನ ಸೆಳೆಯುತ್ತಿದೆ. ಯಾಕಂದ್ರೆ, ಇದೇ ಮೊದಲ ಬಾರಿಗೆ ಅನುಭವವೇ ಇಲ್ಲ ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾ ಕೇವಲ ತೆಲುಗು ಅಷ್ಟೇ ಅಲ್ಲ, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

Natural Star Nani Claps For Dulquer Salmaan 41st movie with debutant director Ravi Nelakuditi

ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್‌ನಲ್ಲಿ ನೆರವೇರಿದೆ. ಎಸ್‌ಎಲ್‌ವಿ ಸಿನಿಮಾಸ್ ಮೂಲಕ ಸುಧಾಕರ್ ಚೆರುಕುರಿ ನಿರ್ಮಾಣ ಮಾಡುತ್ತಿದ್ದಾರೆ. ಇದು ಈ ನಿರ್ಮಾಣ ಸಂಸ್ಥೆಯಿಂದ ಮೂಡಿಬರುತ್ತಿರುವ 10ನೇ ಸಿನಿಮಾ ಅನ್ನೋದು ವಿಶೇಷ. ಈ ಸಿನಿಮಾಗೆ ನ್ಯಾಚುಲರ್ ಸ್ಟಾರ್ ಅತಿಥಿಯಾಗಿ ಆಗಮಿಸಿ ಕ್ಲ್ಯಾಪ್ ಮಾಡಿದ್ದಾರೆ. 'ಪೆದ್ದಿ' ಸಿನಿಮಾದ ನಿರ್ದೇಶಕ ಬುಚಿ ಬಾಬು ಸನಾ ಕ್ಯಾಮರಾ ಚಾಲನೆ ಮಾಡಿದ್ದಾರೆ.

ದುಲ್ಖರ್ ಸಲ್ಮಾನ್ ಅವರ 41ನೇ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಅದ್ಧೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಅನುಭವಿ ತಂತ್ರಜ್ಞರ ತಂಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಟ್ಯೂನ್ ಹಾಕುತ್ತಿದ್ದರೆ, ಅನಯ್ ಓಂ ಗೋಸ್ವಾಮಿ ಕ್ಯಾಮರಾ ಚಾಲನೆ ಮಾಡುತ್ತಿದ್ದಾರೆ. ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.

ಇಂದಿನ ಮಾಡರ್ನ್ ಲವ್, ಲೈಫ್ ಹಾಗೂ ಮಾನವ ಸಂಬಂಧಗಳನ್ನು ಈ ಸಿನಿಮಾ ಮೂಲಕ ಪ್ರೇಕ್ಷಕರ ಮುಂದಿಡುವುದಕ್ಕೆ ಹೊರಟಿದ್ದಾರೆ. ಸದ್ಯ ದುಲ್ಖರ್ ಸಲ್ಮಾನ್ ಸಿನಿಮಾ ಸೆಟ್ಟೇರಿದಯಷ್ಟೇ. ಇನ್ನೂ ಉಳಿದ ತಾರಾಗಣ ಹಾಗೂ ಇನ್ನಿತರ ವಿಷಯಗಳು ಹೊರ ಬೀಳಬೇಕಿದೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ದುಲ್ಖರ್ ಸಲ್ಮಾನ್ ಹ್ಯಾಟ್ರಿಕ್ ಹಿಟ್ ಕೊಡುವ ತವಕದಲ್ಲಿದ್ದಾರೆ. ಈಗಾಗಲೇ ದುಲ್ಖರ್ ಸಲ್ಮಾನ್ 'ಸೀತಾ ರಾಮಂ' ಹಾಗೂ 'ಲಕ್ಕಿ ಭಾಸ್ಕರ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಮತ್ತೊಂದು ತೆಲುಗು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Natural Star Nani Claps For Dulquer Salmaan 41st movie with debutant director Ravi Nelakuditi. Here is the highlights;
Read more about: nani dulquer salmaan telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X