ಪತಿ ಎದುರು ಅಲ್ಲು ಅರ್ಜುನ್‌ಗೆ ಅವಮಾನ; ತೆಲುಗಿನಲ್ಲಿ ಆಫರ್ ಕಳೆದುಕೊಂಡ ನಯನತಾರಾ?

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಯಾರಿಗೂ ಬಗ್ಗೋ ನಟಿನೇ ಅಲ್ಲ. ಇಂಡಸ್ಟ್ರಿಯಲ್ಲಿ ಅದ್ಯಾರೇ ಸೂಪರ್‌ಸ್ಟಾರ್ ಜೊತೆ ನಟಿಸಿದರೂ ತನ್ನ ತನವನ್ನು ಬಿಟ್ಟು ಕೊಡದ ನಟಿ. ದಕ್ಷಿಣ ಭಾರತದಲ್ಲಿ ನಯನತಾರಾ ತನ್ನ ನಟನೆಯಿಂದ ಎಷ್ಟು ಸದ್ದು ಮಾಡುತ್ತಿದ್ದಾರೋ ಅಷ್ಟೇ ತನ್ನ ಆಟಿಟ್ಯೂಡ್‌ಗೂ ಫೇಮಸ್. ಅದೇ ಕಾರಣಕ್ಕೆ ಈ ನಟಿ ತೆಲುಗಿನ ಒಳ್ಳೊಳ್ಳೆ ಆಫರ್‌ಗಳನ್ನು ಕಳೆದುಕೊಂಡಿದ್ದಾರೆ ಅನ್ನೋದು ಸುದ್ದಿ.

ಅಲ್ಲು ಅರ್ಜುನ್ ಹಾಗೂ ನಯನತಾರಾ ನಡುವಿನ ಸಂಬಂಧ ಚೆನ್ನಾಗಿಲ್ಲ. ಅದಕ್ಕೆ ಟಾಲಿವುಡ್‌ನಲ್ಲಿ ಲೇಡಿ ಸೂಪರ್‌ಸ್ಟಾರ್‌ಗೆ ಒಳ್ಳೊಳ್ಳೆ ಆಫರ್‌ಗಳು ಸಿಗುತ್ತಿಲ್ಲ ಅನ್ನೋ ಸದ್ಯ ನಡೆಯುತ್ತಿರುವ ಚರ್ಚೆ. ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳು ಇಂತಹದ್ದೊಂದು ಚರ್ಚೆಯನ್ನು ಮಾಡುತ್ತಿದ್ದಾರೆ. ಅಸಲಿಗೆ ಇವರಿಬ್ಬರ ನಡುವೆ ಅಂತಹದ್ದೇನು ನಡೆದಿದೆ? ತಿಳಿಯಲು ಮುಂದೆ ಓದಿ.

Nayanthara not getting telugu movie offer because of Allu Arjun know the reason

ನಯನತಾರಾ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ಕಿಂಗ್ ಶಾರುಖ್ ಖಾನ್‌ಗೆ ನಾಯಕಿಯಾಗಿಯೂ ನಟಿಸಿ ಸೈ ಎನಿಸಿಕೊಂಡಿದ್ದರು. ಮದುವೆ ಬಳಿಕವೂ ತನ್ನ ಕ್ರೇಜ್ ಅನ್ನು ಹಾಗೇ ಉಳಿಸಿಕೊಂಡಿರುವ ನಟಿಯರಲ್ಲಿ ನಯನತಾರಾ ಕೂಡ ಒಬ್ಬರು.

ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಗೂ ಪ್ಯಾನ್ ಇಂಡಿಯಾ ಸ್ಟಾರ್‌ ಅಲ್ಲು ಅರ್ಜುನ್ ಸಂಬಂಧ ಹಳಸಿದೆಯೇ? ಅಲ್ಲು ಅರ್ಜುನ್ ಅಭಿಮಾನಿಗಳು ಇದ್ದಕ್ಕಿದ್ದ ಹಾಗೇ ನಯನತಾರಾ ವಿರುದ್ಧ ಯಾಕೆ ತಿರುಗಿಬಿದ್ದಿದ್ದಾರೆ? ಸೋಶಿಯಲ್ ಮೀಡಿಯಾ ಅಲ್ಲು ಅರ್ಜುನ್ ಅಭಿಮಾನಿಗಳು ಮಾಡುತ್ತಿರುವ ಚರ್ಚೆಯಾದರೂ ಏನು? ಈ ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ಉತ್ತರ.

ನಯನತಾರಾ ಬ್ಯಾಕ್ ಟು ಬ್ಯಾಕ್ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ತೆಲುಗು ಚಿತ್ರಗಳಲ್ಲೂ ಬ್ಯುಸಿಯಾಗಿದ್ದರು. ಟಾಲಿವುಡ್‌ನ ಸೂಪರ್‌ಸ್ಟಾರ್‌ ಸಿನಿಮಾಗಳಿಗೆ ಬಹುಬೇಡಿಕೆಯ ನಟಿಯಾಗಿದ್ದರು. ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ, ರವಿತೇಜಾ ಸೇರಿದಂತೆ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಟಾಲಿವುಡ್‌ನಲ್ಲಿ ತುಸು ದೂರವೇ ಉಳಿದಿದ್ದಾರೆ. ಇದಕ್ಕೆ ಕಾರಣ ಅಲ್ಲು ಅರ್ಜುನ್‌ಗೆ ಮಾಡಿದ ಅವಮಾನ ಎಂದು ಹೇಳಲಾಗುತ್ತಿದೆ.

Nayanthara not getting telugu movie offer because of Allu Arjun know the reason

2016ರಲ್ಲಿ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿತ್ತು. ಆ ಸಮಾರಂಭದಲ್ಲಿ ಅಲ್ಲು ಅರ್ಜುನ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ನಯನತಾರಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದರು. ಆ ವೇಳೆ ನಯನತಾರಾಗೆ ಪ್ರಶಸ್ತಿ ನೀಡುವುದಕ್ಕೆ ಅಲ್ಲು ಅರ್ಜುನ್ ಅವರನ್ನು ವೇದಿಕೆ ಕರೆಯಲಾಗಿತ್ತು. ಆದರೆ, ವೇದಿಕೆ ಏರಿದ ನಯನತಾರಾ ಐಕಾನ್ ಸ್ಟಾರ್ ಕೈಯಿಂದ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕೆ ಹಿಂದೇಟು ಹಾಕಿದ್ದರು.

ಆ ವೇಳೆ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಪ್ರೀತಿಯಲ್ಲಿ ಬಿದ್ದಿದ್ದರು. ಹೀಗಾಗಿ ವೇದಿಕೆ ಮೇಲೆ ಅಲ್ಲು ಅರ್ಜುನ್ ಅವರಿಂದ ಪ್ರಶಸ್ತಿ ಪಡೆಯುವುದಕ್ಕೆ ನಿರಾಕರಿಸಿದ್ದರು. ವಿಘ್ನೇಶ್ ಶಿವನ್ ಅವರ ಕೈಯಿಂದಲೇ ಪ್ರಶಸ್ತಿ ಪಡೆಯಲು ನಿರ್ಧರಿಸಿದ್ದರು. ಇದು ಟಾಲಿವುಡ್ ಮಂದಿಯನ್ನು ಕೆರಳಿಸಿತ್ತು. ಅದಕ್ಕಾಗಿ ನಯನತಾರಾ ಜೊತೆ ಸಿನಿಮಾ ಮಾಡದೇ ಇರಲು ತೆಲುಗು ಸ್ಟಾರ್‌ಗಳು ನಿರ್ಧರಿಸಿದ್ದರು. ಅದಕ್ಕೆ ನಯನತಾರಾ ಈಗ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದು ಅಲ್ಲು ಅರ್ಜುನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

More from Filmibeat

English summary
Nayanthara not getting telugu movie offer because of Allu Arjun. Know the reason;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X