ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋಗಿದ್ರಾ? ರಾಮ್ ಚರಣ್ ಮೇಲೆ ಬೇಸರ.. ಅಲ್ಲೂ ಅರ್ಜುನ್ ಭಾಗಿ

ಸಿನಿಮಾ ರಂಗ ಅಂದ್ಮೇಲೆ ಪಾರ್ಟಿ, ಮೋಜು ಮಸ್ತಿ ಎಲ್ಲಾ ಇದ್ದೇ ಇರುತ್ತೆ. ಪ್ರತಿ ವೀಕೆಂಡ್‌ನಲ್ಲೂ ಯಾರಾದರೂ ಪಾರ್ಟಿ ಮಾಡುತ್ತಲೇ ಇರುತ್ತಾರೆ. ಅವರ ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತವೆ. ಅದರಲ್ಲೂ ಸ್ಟಾರ್‌ಗಳ ಮದುವೆ ಅಂದರೆ ಕೇಳ್ಬೇಕಾ? ಇನ್ನೊಂದು ಲೆವಲ್ ಇರುತ್ತೆ. ಟಾಲಿವುಡ್‌ನಲ್ಲಿ ಅಲ್ಲು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅಲ್ಲು ಕುಟುಂಬ ಹಾಗೂ ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸಹೋದರನ ಮದುವೆಗೂ ಮುನ್ನ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಗಣ್ಯರನ್ನು, ಆತ್ಮೀಯರನ್ನು ಆಹ್ವಾನಿಸಿದ್ದರು. ಆ ಪಾರ್ಟಿಗೆ ರಾಮ್ ಚರಣ್ ಕೂಡ ಹೋಗಿದ್ದರು.

Netizens critisizing Ram Charan for attending party while wearing Ayyappa Swamy Mala

ಪತ್ನಿ ಉಪಾಸನಾ ಜೊತೆ ರಾಮ್ ಚರಣ್ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಈ ಪಾರ್ಟಿಗೆ ಹೋಗಿದ್ದಕ್ಕೆ ರಾಮ್ ಚರಣ್ ವಿರುದ್ಧ ನೆಟ್ಟಿಗರು ಅಸಮಧಾನ ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ಅಸಮಧಾನಕ್ಕೆ ಕಾರಣ ಅಲ್ಲು ಅರ್ಜುನ್ ಅಲ್ಲ. ಬದಲಿಗೆ ಅವರು ಧರಿಸಿದ್ದ ಮಾಲೆ. ಅಷ್ಟಕ್ಕೂ ವಿಷಯ ಏನು ಅಂತ ನೋಡುವುದಾರೇ?

'ಪುಷ್ಪ 2' ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್ ಸಹೋದರ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅಲ್ಲು ಸಿರೀಶ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಬ್ಯಾಚುಲರ್ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಇನ್ನೊಂದು ಕಡೆ ತನ್ನ ಕುಟುಂಬಕ್ಕೆ, ಚಿತ್ರರಂಗದ ಗಣ್ಯರಿಗಾಗಿ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಮದುವೆ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.

ಇದೇ ಖುಷಿಯಲ್ಲಿ ಸಹೋದರನಿಗಾಗಿ ಅಲ್ಲು ಅರ್ಜುನ್ ಕೂಡ ಪಾರ್ಟಿ ಆಯೋಜನೆ ಮಾಡಿ, ರಾಮ್ ಚರಣ್‌ಗೆ ಆಹ್ವಾನ ನೀಡಿದ್ದರು. ಈ ಪಾರ್ಟಿಯಲ್ಲಿ ಮೋಜು-ಮಸ್ತಿಗೇನು ಕಮ್ಮಿಯಿರಲಿಲ್ಲ. ಜೊತೆಗೆ ಪಾರ್ಟಿ ಅಂದ್ಮೇಲೆ ಗುಂಡು-ತುಂಡು ಇದ್ದೇ ಇರುತ್ತೆ. ಇಂತಹ ಪಾರ್ಟಿಯಲ್ಲಿ ರಾಮ್‌ ಚರಣ್ ಹೋಗಿದ್ದು ನೆಟ್ಟಿಗರಿಗ್ಯಾಕೆ ಸರಿ ಕಂಡಿಲ್ಲ. ಹೀಗಾಗಿ ವಿಡಿಯೋಗಳಿಗೆ ನೆಗೆಟಿವ್ ಆಗಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ರಾಮ್ ಚರಣ್ ಪಾರ್ಟಿಗೆ ಹೋಗಿದ್ದಕ್ಕೆ ಗರಂ ಆಗಿದ್ದಕ್ಕೆ ಕಾರಣ ಅವರು ಧರಿಸಿದ್ದ ಅಯ್ಯಪ್ಪ ಸ್ವಾಮಿ ಮಾಲೆ. ರಾಮ್ ಚರಣ್ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಜೊತೆಗೆ ಪ್ರತಿ ವರ್ಷ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸುತ್ತಾರೆ. ದೇವರ ಮೇಲೆ ಅಪಾರ ಭಕ್ತಿ, ನಂಬಿಕೆಯನ್ನು ಇಟ್ಟುಕೊಂಡಿರುವ ರಾಮ್ ಚರಣ್ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಎಣ್ಣೆ, ಮಾಂಸ ಪದಾರ್ಥಗಳು ಇರುವ ಇಂತಹ ಪಾರ್ಟಿಗೆ ಯಾಕೆ ಹೋದರು? ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ವಿಡಿಯೋಗೆ ನೆಗೆಟಿವ್ ಕಮೆಂಟ್‌ಗಳು ಬರುತ್ತಿದ್ದಂತೆ ಅಲ್ಲು ಸಿರೀಶ್ ಕಮೆಂಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಪಾರ್ಟಿ ಆರಂಬ ಆಗುವುದಕ್ಕೂ ಮುನ್ನವೇ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಬಂದು ಶುಭ ಕೋರಿ ಹೊರಟು ಹೋದರು." ಎಂದು ಹೇಳಿದ್ದು, ನೆಟ್ಟಿಗರ ಅಸಮಧಾನವನ್ನು ಕಡಿಮೆ ಮಾಡುವುದಕ್ಕೆ ಅಲ್ಲು ಸಿರೀಶ್ ಪ್ರಯತ್ನ ಪಟ್ಟಿದ್ದಾರೆ. ಇಷ್ಟಕ್ಕೆ ನೆಟ್ಟಿಗರು ಸುಮ್ಮನಾಗುತ್ತಾರಾ? ನೋಡಬೇಕಿದೆ. ಈ ಬಗ್ಗೆ ರಾಮ್ ಚರಣ್ ಪ್ರತಿಕ್ರಿಯೆ ಇನ್ನೂ ನೀಡುವುದಕ್ಕೆ ಹೋಗಿಲ್ಲ. ಮುಂದೆ ದಿನಗಳಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ.

More from Filmibeat

English summary
Netizens critisizing Ram Charan for attending party while wearing Ayyappa Swamy Mala.
Read more about: ram charan ayyappa swamy party
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X