ಹೊಸ ವರ್ಷದಂದು ಬೆನ್ನು ತೋರಿಸಿದ ಅನಸೂಯಾ.. ನೆಟ್ಟಿಗರ ಕಾಮೆಂಟ್ ಒಂದೆರಡಲ್ಲ
ಟಾಲಿವುಡ್ ಗ್ಲಾಮರಸ್ ನಟಿ ಅನಸೂಯಾ ಭಾರದ್ವಾಜ್ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಕೆಲವೊಮ್ಮೆ ಬೇಡ ಬೇಡ ಅಂದರೂ ವಿವಾದವನ್ನು ಅವರೇ ಮೈಮೇಲೆ ಎಳೆದುಕೊಳ್ಳುತ್ತಾರೆ. ಈಗ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ನಟಿ ಕೆಲವು ಫೋಟೊಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅದನ್ನು ನೋಡಿ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.
ಟಾಲಿವುಡ್ ನಟಿ ಅನಸೂಯಾ ಭಾರದ್ವಾಜ್ ಮೊದಲ ನಿರೂಪಕಿಯಾಗಿ ಗುರುತಿಸಿಕೊಂಡಿದ್ದವರು. ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಕೊಂಡ ಬಳಿಕ ನಟಿಯಾಗಿ ಮಿಂಚುತ್ತಿದ್ದಾರೆ. ಅದರಲ್ಲೂ ಅಲ್ಲು ಅರ್ಜುನ್ ನಟಿಸಿದ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'ದಲ್ಲಿ ನಟಿಸಿದ ಬಳಿಕ ಅನಸೂಯಾ ಭಾರದ್ವಾಜ್ ಜನಪ್ರಿಯತೆ ದುಪ್ಪಟ್ಟಾಗಿತ್ತು.

40ರ ಸಮೀಪದಲ್ಲಿರುವ ಈ ನಟಿ ಗ್ಲಾಮರಸ್ ಲುಕ್ ಕೊಡುವುದಕ್ಕೆ ಹಿಂದೇಟು ಹಾಕುವುದಿಲ್ಲ. ಸಿನಿಮಾದಲ್ಲಿ ಅಲ್ಲದೆ ಹೋದರೂ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ವಯಸ್ಸನ್ನೂ ಮೀರಿಸುವಷ್ಟು ಗ್ಲಾಮರ್ ಲುಕ್ ಕೊಡುತ್ತಾರೆ. ತನ್ನ ಫೋಟೊ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅದು ಕೆಲವೊಮ್ಮೆ ಟೀಕೆಗಳಿಗೂ ಗುರಿಯಾಗುತ್ತೆ. ಈಗ ಹೊಸ ವರ್ಷದ ಸಂಭ್ರಮದಂದು ಹಂಚಿಕೊಂಡು ಫೋಟೊಗಳು ಕೂಡ ಹಾಗೇ ಇವೆ. ಇವುಗಳನ್ನು ನೋಡಿ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಅನಸೂಯಾ ಭಾರದ್ವಾಜ್ ಜಬರ್ದಸ್ತ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಈ ಶೋ ಅನ್ನು ಬ್ಲಾಕ್‌ಬಸ್ಟರ್ ಮಾಡುವಲ್ಲಿ ಯಶಸ್ವಿಯಾದರು. ಸ್ಪರ್ಧಿಗಳ ಪರ್ಫಾಮೆನ್ಸ್ ಒಂದು ಕಡೆಯಾದರೆ, ಇನ್ನೊಂದು ಕಡೆ ಅನಸೂಯಾ ನಿರೂಪಣೆ ಕೂಡ ಅಷ್ಟೇ ಜನಪ್ರಿಯತೆ ಪಡೆದುಕೊಂಡಿತ್ತು. ಅದ್ಯಾವಾಗ ಅನಸೂಯಾ ವೀಕ್ಷಕರಿಗೆ ಇಷ್ಟ ಆದರೋ ಸಿನಿಮಾ ಮಂದಿಯ ಕಣ್ಣಿಗೆ ಬಿದ್ದಿದ್ದರು. ಇಲ್ಲಿಂದ ಅವರ ವೃತ್ತಿ ಬದುಕು ಮತ್ತಷ್ಟು ಉತ್ತುಂಗಕ್ಕೆ ಏರಿದೆ.
ಅನಸೂಯಾ ಈಗಾಗಲೇ 'ರಂಗಸ್ಥಳಂ', 'ವಿನ್ನರ್', 'ಗಾಯತ್ರಿ', 'ಎಫ್ 2', 'ಯಾತ್ರಾ', 'ಕಥನಂ', 'ಚೌ ಕಬ್ಬೂರು ಛಾಜಾ', 'ಭೀಷ್ಮ ಪರ್ವಂ', 'ಖಿಲಾಡಿ', ' ಪೆದ್ದಕಾಪು', 'ರಜಾಕಾರ್' ಅಂತಹ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ, 'ಪುಷ್ಪ ಪಾರ್ಟ್ 1' ಹಾಗೂ ಪಾರ್ಟ್ 2 ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ನಟಿಸಿ ತೆಲುಗು ಮಂದಿಯಿಂದ ಭೇಷ್ ಎನಿಸಿಕೊಂಡಿದ್ದಾರೆ. ಇವರ ಜನಪ್ರಿಯತೆಯನ್ನು ಮನಗಂಡ ಸಿನಿಮಾ ಮಂದಿ ಅವರಿಗಾಗಿಯೇ ಪಾತ್ರಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನಲಾಗಿದೆ.
ಒಂದು ಕಡೆ ಸಿನಿಮಾದಲ್ಲಿ ಸದ್ದು ಮಾಡಿದೆ, ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗುತ್ತಾರೆ. ಈಕೆಯ ಡ್ರೆಸ್ಸಿಂಗ್ ಸೆನ್ಸ್, ಪಬ್ಲಿಕ್‌ನಲ್ಲಿ ಚುಂಬಿಸುವುದು, ಅಪ್ಪಿಕೊಳ್ಳುವುದು, ಬಿಕಿನಿಯಲ್ಲಿ ಪೋಸ್ ಕೊಡುವುದು ನೆಟ್ಟಿಗರನ್ನು ಕೆರಳಿಸುತ್ತಿದೆ. ಅದೇ ಫೋಟೊಗಳನ್ನು ಹಿಡಿದು ಟ್ರೋಲ್ ಮಾಡುತ್ತಾರೆ. ಇದರಿಂದ ರೊಚ್ಚಿಗೆದ್ದಿದ್ದ ಅನಸೂಯಾ ಸೈಬರ್ ಕ್ರೈಂಗೆ ದೂರನ್ನು ನೀಡಿದ್ದರು. ಈಗ ಹೊಸ ವರ್ಷದ ವೇಳೆ ಹಂಚಿಕೊಂಡ ಫೋಟೊಗಳಿಗೂ ಹಾಗೇ ಟೀಕೆಗಳು ವ್ಯಕ್ತವಾಗುತ್ತಿವೆ.
ಹೊಸ ವರ್ಷದ ಸಂಭ್ರಮದ ವೇಳೆ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಬೀಚ್‌ನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಅದು ನೆಟ್ಟಿಗರ ಪಿತ್ತ ಹೆಚ್ಚಿಸಿದೆ. ಅದಕ್ಕೆ ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಇಂತಹ ಬಟ್ಟೆಗಳನ್ನು ಧರಿಸಿದ್ದಕ್ಕೆ ನಿಮಗೆ ನಾಚಿಕೆಯಾಗಿಲ್ವಾ?"ಅಂತ ಒಬ್ಬರು ಅಂದರೆ, ಇನ್ನೊಬ್ಬರು "ರಾತ್ರಿಯ ಮದ್ದು ಹೆಚ್ಚಾಗಿರುವಂತೆ ತೋರುತ್ತಿದೆ", "ಚಿಕ್ಕಮ್ಮ ಎಲ್ಲ ಜಾರಿಸಿದರು" ಅಂತ ಇನ್ನೂ ಕೆಟ್ಟದಾಗಿ ಕಾಮೆಂಟ್ ಹಾಕಿದ್ದಾರೆ. ಇನ್ನೊಬ್ಬರು "ಬೆನ್ನು ನೋಡಿ ಅಸಭ್ಯವಾಗಿ ಕಾಮೆಂಟ್ ಮಾಡಿದರೆ ಥಳಿಸುತ್ತಾಳೆ" ಅಂತಾನೂ ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











