ಮೆಗಾ ಫ್ಯಾಮಿಲಿಯ ನಿಹಾರಿಕಾ ಕೊನಿಡೇಲಾ ನಟನೆಗೆ ವಿದಾಯ? ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

ಟಾಲಿವುಡ್‌ನಲ್ಲಿ ಮೆಗಾ ಕುಟುಂಬ ಇರೋ ಗತ್ತೇ ಬೇರೆ. ಬಹುತೇಕ ಇಡೀ ಕುಟುಂಬವೇ ಚಿತ್ರರಂಗದಲ್ಲಿದೆ. ಮೆಗಾಸ್ಟಾರ್ ಚಿರಂಜೀವಿ ಹೆಸರೇ ಆ ಕುಟುಂಬದ ಕಲಾವಿದರಿಗೆ ಶ್ರೀರಕ್ಷೆ ಎನ್ನಬಹುದು. ಅವರಲ್ಲಿ ಚಿರಂಜೀವಿ ಸಹೋದರ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೇಲಾ ಕೂಡ ಒಬ್ಬರು. ಚಿತ್ರರಂಗದಲ್ಲಿ ಇವರು ಕೂಡ ಒಳ್ಳೆಯ ನಟಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.

ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೇಲಾ ಟಾಲಿವುಡ್‌ನಲ್ಲಿ ನಟಿಯಾಗಿ ಮೆರೆಯುವಲ್ಲಿ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಆದರೆ, ನಿರ್ಮಾಪಕಿಯಾಗಿ ನಿಹಾರಿಕಾಗೆ ಒಳ್ಳೆಯ ಯಶಸ್ಸು ಸಿಕ್ಕಿದೆ. ಅವರದ್ದೇ 'ಪಿಂಕ್ ಎಲಿಫೆಂಟ್ ಪಿಕ್ಚರ್ಸ್' ಬ್ಯಾನರ್‌ನಲ್ಲಿ ಹಲವು ಪ್ರಾಜೆಕ್ಟ್‌ಗಳನ್ನು ಅವರು ಕೈಗೆತ್ತಿಕೊಂಡಿದ್ದಾರೆ.

Niharika Konidela confirms she continue acting at Rakasa movie event

ನಿಹಾರಿಕಾ ಕೊನಿಡೇಲಾ 2015ರಲ್ಲಿ 'ಢೀ ಜೂನಿಯರ್ಸ್' ರಿಯಾಲಿಟಿ ಶೋನ ನಿರೂಪಕಿಯಾಗಿ ವೃತ್ತಿ ಆರಂಭಿಸಿದರು. ಬಳಿಕ 2016ರಲ್ಲಿ 'ಒಕ ಮನಸು' ಮೂಲಕ ಬೆಳ್ಳಿತೆರೆಗೆ ಬಂದರು. ಇಲ್ಲಿಂದ ಹಲವು ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರಿಗೆ ನಿರೀಕ್ಷೆ ಮಾಡಿದ ಯಶಸ್ಸು ಕಂಡಿಲ್ಲ. ನಟಿಯಾಗಿ ಯಶಸ್ಸು ಸಿಗದಿದ್ದಾಗ ನಿರ್ಮಾಣ ಕ್ಷೇತ್ರದತ್ತ ತಿರುಗಿದ ನಿಹಾರಿಕಾ ಮುಂದಾಗಿದ್ದರು.

'ಪಿಂಕ್ ಎಲಿಫೆಂಟ್ ಪಿಕ್ಚರ್ಸ್' ಬ್ಯಾನರ್ ಮೂಲಕ ಈಗಾಗಲೇ 'ಮುದ್ದಪಪ್ಪು ಅವಕಾಯ್', 'ನನ್ನ ಕೂಚಿ', 'ಮ್ಯಾಡ್ ಹೌಸ್', 'ಒಕ ಚಿನ್ನಾ ಫ್ಯಾಮಿಲಿ ಸ್ಟೋರಿ', 'ಹೆಲೋ ವರ್ಲ್ಡ್', 'ಬೆಂಚ್ ಲೈಫ್'ನಂತಹ ವೆಬ್ ಸರಣಿ ನಿರ್ಮಿಸಿ ಗೆದ್ದಿದ್ದಾರೆ. 'ಕಮಿಟಿ ಕುರ್ರೋಳು' ಸಿನಿಮಾ ಮೂಲಕ ಸಿನಿ ನಿರ್ಮಾಣಕ್ಕಿಳಿದು ಮೊದಲ ಪ್ರಯತ್ನದಲ್ಲೇ ಉತ್ತಮ ಯಶಸ್ಸು ಕಂಡಿದ್ದಾರೆ.

ಇದೀಗ ತೆಲುಗಿನಲ್ಲಿ 'ರಕಸ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಇದನ್ನು ಪಿಂಕ್ ಎಲಿಫೆಂಟ್ ಪಿಕ್ಚರ್ಸ್ ಮತ್ತು ಝೀ ಸ್ಟುಡಿಯೋಸ್ ಸಹಯೋಗದಲ್ಲಿ ಉಮೇಶ್ ಕುಮಾರ್ ಬನ್ಸಲ್ ಹಾಗೂ ನಿಹಾರಿಕಾ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಸಿನಿಮಾವನ್ನು ಮಾನಸ ಶರ್ಮಾ ನಿರ್ದೇಶನ ಮಾಡಿದ್ದು, ಸಂಗೀತ ಶೋಭನ್, ನಯನಾ ಸಾರಿಕಾ ಲೀಡ್‌ ರೋಲ್‌ನಲ್ಲಿ ಇದ್ದಾರೆ. ವೆನ್ನೆಲಾ ಕಿಶೋರ್, ಬ್ರಹ್ಮಾಜಿ, ತನಿಕೆಲ್ಲ ಭರಣಿ, ಆಶಿಶ್ ವಿದ್ಯಾರ್ಥಿ, ಗೆಟಪ್ ಸೀನು, ಸುಖ್ವಿಂದರ್ ಸಿಂಗ್, ಅನೂಪ್ ಸಿಂಗ್, ವಾಸು ಇಂತೂರಿ, ರೋಹಿಣಿ, ರೋಹನ್ ರಾಯ್ ಮುಂತಾದವರು ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ.

'ರಕಸ' ಸಿನಿಮಾ ಗುಡ್ ಫ್ರೈಡೇ ರಜೆಯ ಹಿನ್ನೆಲೆಯಲ್ಲಿ ಏಪ್ರಿಲ್ 3ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಜೊತೆಗೆ, ನಿಹಾರಿಕಾ ತಮ್ಮ ಸಹೋದರ ವರುಣ್ ತೇಜ್ ನಟನೆಯ ಕ್ರೀಡಾ ಕಥೆಯುಳ್ಳ 'ಬರಿ' ಸಿನಿಮಾವನ್ನೂ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿದೆ. ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದರು.

ಪ್ರಸ್ತುತ 'ರಕಸ' ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದ ನಿಹಾರಿಕಾಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಮದ ಪ್ರಶ್ನೆಯೊಂದು ಎದುರಾಗಿತ್ತು. "ನೀವು ನಿರ್ಮಾಪಕಿಯಾಗಿಯೇ ಮುಂದುವರಿಯುತ್ತೀರಾ? ಇಲ್ಲವೇ ನಟನಾ ವೃತ್ತಿಗೆ ವಿದಾಯ ಹೇಳಿದ್ದೀರಾ?" ಎಂಬ ಪ್ರಶ್ನೆ ಹಾಕಲಾಗಿತ್ತು. ಅದಕ್ಕೆ ನಿಹಾಇರಕ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾರೆ. "ನಿಮ್ಮ ಮುಖದಲ್ಲಿ ಆ ನಗುವೇಕೆ ಸರ್?" ಎಂದು ಗಂಭೀರವಾಗಿ ಪ್ರತಿಕ್ರಿಯಿಸುತ್ತಾ "ನಟನೆ ನಿಲ್ಲಿಸುವುದಿಲ್ಲ.. ಮುಂದುವರೆಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.

ಸಿನಿಮಾಗಳು ವಿಭಿನ್ನವಾಗಿದ್ದರೆ ನಟಿಸುವುದಾಗಿ ಹೇಳಿದ್ದಾರೆ. "ನಾನು ಚಿಕ್ಕಂದಿನಿಂದಲೂ ನನ್ನ ದೊಡ್ಡಪ್ಪ (ಚಿರಂಜೀವಿ)ನ 'ರೌಡಿ ಅಲ್ಲುಡು', 'ಶ್ರೀ ಮಂಜುನಾಥ', 'ಮುಠಾ ಮೇಸ್ತ್ರಿ', 'ಠಾಕೂರ್' ನಂತಹ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಸಿನಿಮಾಗಳು ಜನರನ್ನು ರಂಜಿಸುವಂತೆ ವಿಭಿನ್ನವಾಗಿರಬೇಕು." ಎಂದು ನಿಹಾರಿಕಾ ಹೇಳಿದ್ದಾರೆ.

More from Filmibeat

English summary
Niharika Konidela confirms she continue acting at Rakasa movie event.
Read more about: actress telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X