ನಿಖಿಲ್ ಸಿದ್ಧಾರ್ಥ್‌ಗೆ 'ಸ್ಪೈ'ಗೆ ಭಾರೀ ಡಿಮ್ಯಾಂಡ್: ತೆಲುಗಿನಲ್ಲಿ ದಾಖಲೆ ಬ್ಯುಸಿನೆಸ್.. ಕರ್ನಾಟಕದಲ್ಲೆಷ್ಟು?

ತೆಲುಗು ನಟ ನಿಖಿಲ್ ಸಿದ್ಧಾರ್ಥ್ 'ಕಾರ್ತಿಕೇಯ 2' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಕೇವಲ ತೆಲುಗು ಅಷ್ಟೇ ಅಲ್ಲ. ಹಿಂದಿ ಬಾಕ್ಸಾಫೀಸ್‌ನಲ್ಲೂ ದೊಡ್ಡ ಮೊತ್ತ ಕಲೆಕ್ಷನ್ ಮಾಡಿತ್ತು. ಅಲ್ಲಿಂದ ನಿಖಿಲ್‌ಗೆ ಬೇಡಿಕೆ ಹೆಚ್ಚಾಗಿದೆ.

ನಿಖಿಲ್ ಸಿದ್ಧಾರ್ಥ್ ನಟಿಸಿರೋ ಹೊಚ್ಚ ಹೊಸ ಸಿನಿಮಾ 'ಸ್ಪೈ'(SPY)ಗೂ ಬೇಡಿಕೆ ಹೆಚ್ಚಾಗಿದೆ. ಬಿಡುಗಡೆಗೂ ಮುನ್ನವೇ ನಿಖಿಲ್ ವೃತ್ತಿ ಬದುಕಿನಲ್ಲೇ ದೊಡ್ಡ ಮೊತ್ತಕ್ಕೆ ಸಿನಿಮಾ ಬ್ಯುಸಿನೆಸ್ ಮಾಡಿದೆ. ಇದೂವರೆಗೂ ಇಷ್ಟು ದೊಡ್ಡ ಮೊತ್ತಕ್ಕೆ ಈ ನಟನ ಸಿನಿಮಾ ಸೇಲ್ ಆಗಿದ್ದೇ ಇಲ್ಲ.

Nikhil Siddharthas SPY Movie Pre-release Business Rs.58 crore what about Karnataka Rights

'ಸ್ಪೈ' ಸಿನಿಮಾ ನಾನ್ ಥಿಯೇಟ್ರಿಕಲ್ ಹಕ್ಕುಗಳು ಹಾಗೂ ಥಿಯೇಟ್ರಿಕ್ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಒಂದು ವೇಳೆ ಬಾಕ್ಸಾಫೀಸ್‌ನಲ್ಲಿ 'ಕಾರ್ತಿಕೇಯ 2' ಸಿನಿಮಾದಷ್ಟೇ ಸದ್ದು ಮಾಡಿದರೆ, ನಿಖಿಲ್ ಲೆವೆಲ್ ಬೇರೆನೇ ಆಗಿರುತ್ತೆ. ಸದ್ಯಕ್ಕೆ ನಿಖಿಲ್ ಸಿದ್ಧಾರ್ಥ್ ಸಿನಿಮಾ 'ಸ್ಪೈ' ಮಾಡಿದ ಪ್ರಿ ರಿಲೀಸ್ ಬ್ಯುಸಿನೆಸ್ ಎಷ್ಟು? ಕರ್ನಾಟಕದಲ್ಲಿ ಯಾವ ಮೊತ್ತಕ್ಕೆ ಮಾರಾಟ ಆಗಿದೆ ಅನ್ನೋದು ತಿಳಿಯಲು ಮುಂದೆ ಓದಿ.

'ಸ್ಪೈ' ಯಾವ್ಯಾವ ಹಕ್ಕಿಗೆ ಎಷ್ಟು?

ನಿಖಿಲ್ ಸಿದ್ದಾರ್ಥ್ 'ಕಾರ್ತಿಕೇಯ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು 100 ಕೋಟಿ ರೂ. ಕಲೆ ಹಾಕಿತ್ತು. ಇಲ್ಲಿಂದ ಐದು ಪ್ರಮುಖ ಭಾಷೆಗಳ ಸಿನಿಮಾ ಮಂದಿಯ ಗಮನ ಸೆಳೆದಿದ್ದಾರೆ. ಹೀಗಾಗಿ 'ಸ್ಪ್ರೈ' ಡಿಜಿಟಲ್, ಸ್ಯಾಟಲೈಟ್ ಸೇರಿದಂತೆ ಇನ್ನಿತರ ಹಕ್ಕುಗಳು ಸುಮಾರು 40 ಕೋಟಿ ರೂ. ಮಾರಾಟ ಆಗಿದೆ ಎಂದು ನ್ಯೂಸ್‌18 ವರದಿ ಮಾಡಿದೆ.

'ಸ್ಪೈ' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. 'ಕಾರ್ತಿಕೇಯ 2' ಕೂಡ ಈ ಮೊತ್ತಕ್ಕೆ ಸೇಲ್ ಆಗಿರಲಿಲ್ಲ. ಅಲ್ಲದೆ ಈ ಸಿನಿಮಾದಲ್ಲೂ ದೇಶ ಪ್ರೇಮ, ಸುಭಾಷ್ ಚಂದ್ರ ಬೋಸ್ ಅಂತಹ ಕಂಟೆಂಟ್ ಇರೋದ್ರಿಂದ ಪ್ರೇಕ್ಷಕರಿಗೆ ಸಿನಿಮಾ ಮೇಲೆ ಕುತೂಹಲವಿದೆ.

Nikhil Siddharthas SPY Movie Pre-release Business Rs.58 crore what about Karnataka Rights

'ಸ್ಪೈ' ವಿತರಣೆ ಹಕ್ಕು.. ಎಲ್ಲೆಲ್ಲಿ ಎಷ್ಟಕ್ಕೆ ಸೇಲ್

ಟಾಲಿವುಡ್ ಮೂಲಗಳ ಪ್ರಕಾರ ನಿಖಿಲ್ ಸಿದ್ಧಾರ್ಥ್ ಸಿನಿಮಾ 'ಸ್ಪೈ' ಬಿಡುಗಡೆಗೂ ಮುನ್ನವೇ ಲಾಭದಲ್ಲಿದೆ. ವಿತರಕರು ಒಳ್ಳೆ ಮೊತ್ತ ಕೊಟ್ಟು ಆಂಧ್ರ ಹಾಗೂ ತೆಲಂಗಾಣ ಏರಿಯಾಗಳಲ್ಲಿ ಸಿನಿಮಾಗಳನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿರ್ಮಾಪಕರು ಲಾಭದಲ್ಲಿದ್ದಾರೆ ಎಂದು ವರದಿಯಾಗಿದೆ.

ನ್ಯೂಸ್ 18 ವರದಿ ಪ್ರಕಾರ, ಆಂಧ್ರ, ತೆಲಂಗಾಣ ಸೇರಿದಂತೆ ಎಲ್ಲಿ ಎಷ್ಟೆಷ್ಟು ಮೊತ್ತಕ್ಕೆ ಸಿನಿಮಾದ ಡಿಸ್ಟ್ರಿಬ್ಯೂಷನ್ ಹಕ್ಕುಗಳು ಸೇಲ್ ಆಗಿವೆ. ಅನ್ನೋ ಡಿಟೈಲ್ಸ್ ಇಲ್ಲಿವೆ. ಆಂಧ್ರ ಪ್ರದೇಶ್ ಹಾಗೂ ತೆಲಂಗಾಣದಾದ್ಯಂತ ಸುಮಾರು 13 ಕೋಟಿ ರೂ.ಗೆ ಸೇಲ್ ಆಗಿದೆ. ಹಾಗೇ ವಿದೇಶದ ಹಕ್ಕು 1.80 ಕೋಟಿ ರೂ. ಸೇಲ್ ಆಗಿದೆ.

ಕರ್ನಾಟಕದಲ್ಲಿ 'ಸ್ಪೈ' ಎಷ್ಟು?

ನಿಖಿಲ್ ಸಿದ್ಧಾರ್ಥ್ 'ಸ್ಪ್ರೈ' ಟ್ರೈಲರ್ ಹಾಗೂ ಟೀಸರ್‌ನಿಂದ ಸದ್ದು ಮಾಡಿತ್ತು. ಅಲ್ಲದೆ ಕೆಲವೇ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ನಿಖಿಲ್ ಸಿದ್ಧಾರ್ಥ್ ಹಾಗೂ ನಟಿ ಐಶ್ವರ್ಯಾ ಮೆನನ್ ಪ್ರಚಾರ ಮಾಡಿದ್ದರು. ಹೀಗಿದ್ದರೂ ಕರ್ನಾಟಕದ ವಿತರಣೆ ಹಕ್ಕು 1 ಕೋಟಿ ರೂ ದಾಟಿಲ್ಲಿ. 70 ಲಕ್ಷ ರೂ. ಖರೀದಿ ಆಗಿದೆ ಎಂದು ಹೇಳಲಾಗುತ್ತಿದೆ.

ನಿಖಿಲ್ ಸಿದ್ಧಾರ್ಥ್ ಸ್ಟಾರ್‌ಡಮ್‌ಗೆ ಕರ್ನಾಟಕದಲ್ಲಿ ದೊಡ್ಡ ಮೊತ್ತಕ್ಕೆ ಸೇಲ್‌ ಆಗಿದೆ ಎಂದು ಅಂದಾಜಿಸಲಾಗುತ್ತಿದೆ. ಇದರೊಂದಿಗೆ ತೆಲುಗು ಬಿಟ್ಟು ಬೇರೆ ಬೇರೆ ಭಾಷೆಗಳಲ್ಲಿ ಒಟ್ಟಾಗಿ 2 ಕೋಟಿ ರೂ.ಗೆ ಸೇಲ್ ಆಗಿದೆ ಎನ್ನಲಾಗಿದೆ.

More from Filmibeat

English summary
Nikhil Siddhartha's SPY Movie Pre-release Business Rs.58 crore what about Karnataka Rights, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X