'ಹರಿ ಹರ ವೀರ' ಮಲ್ಲು'ಗೆ ಸಿನಿಮಾಗೆ ಸ್ಪೂರ್ತಿ ಎನ್‌ಟಿಆರ್-ಎಂಜಿಆರ್; 'ವೀರಮಲ್ಲು' ಪವನ್ ಕಲ್ಯಾಣ್

ಪವರ್‌ಸ್ಟಾರ್ ಪವನ್ ಕಲ್ಯಾಣ್ ಬಹಳ ದಿನಗಳಿಂದ ನಟಿಸುತ್ತಿದ್ದ 'ಹರಿ ಹರ ವೀರ ಮಲ್ಲು' ಕೊನೆಗೂ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಪವನ್‌ ಕಲ್ಯಾಣ್ ಅಭಿಮಾನಿಗಳು ಈ ಐತಿಹಾಸಿಕ ಸಿನಿಮಾವನ್ನು ಕಣ್ತುಂಬಿ ಕೊಳ್ಳುವುದಕ್ಕೆ ಎದುರು ನೋಡುತ್ತಿದ್ದಾರೆ. ರಾಜಕೀಯದ ಕಡೆಗೆ ಹೆಚ್ಚು ವಾಲಿದ್ದರೂ, ಪವನ್‌ ಕಲ್ಯಾಣ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆಗ ಶುರುವಾಗಿದ್ದ ಈ ಸಿನಿಮಾ ಕುಂಠಿತಾಗಿ ಚಿತ್ರೀಕರಣ ಸಾಗಿತ್ತು.

ಇನ್ನು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಆದ್ಮೇಲಂತೂ ಪವನ್ ಕಲ್ಯಾಣ್ ಅಭಿಮಾನಿಗಳು 'ಹರಿ ಹರ ವೀರ' ಮಲ್ಲು' ಸಿನಿಮಾ ನೋಡುವ ಆಸೆಯನ್ನು ಕೈ ಬಿಟ್ಟಿದ್ದರು. ಆದರೆ, ಅಭಿಮಾನಿಗಳ ಆಸೆಯನ್ನು ಈಡೇರಿಸುವುದಕ್ಕೆ ಪವನ್ ಕಲ್ಯಾಣ್ ಹಾಗೂ ಅವರ ತಂಡ ಪಣ ತೊಟ್ಟಿದ್ದರು. ಅದರಂತೆ ಈಗ 'ಹರಿ ಹರ ವೀರ' ಮಲ್ಲು' ಸಿನಿಮಾವನ್ನು ಮುಗಿಸಿದ್ದು, ಬಿಡುಗಡೆ ಮುಂದಾಗಿದ್ದಾರೆ.

NTR and MGR inspired Telugu power star Pawan Kalyan s role in the Harihara Veera Mallu movie

ಪವನ್‌ ಕಲ್ಯಾಣ್ ಅವರಿಂದ 'ವೀರಮಲ್ಲು' ಪಾತ್ರವನ್ನು ಮಾಡಿಸುವುದಕ್ಕೆ ಬಲವಾದ ಕಾರಣವಿದೆ. ಅದೇನು ಅನ್ನೋದನ್ನು ನಿರ್ದೇಶಕ ಜ್ಯೋತಿ ಕೃಷ್ಣ ಅವರು ರಿವೀಲ್ ಮಾಡಿದ್ದಾರೆ. ಈ ಸಿನಿಮಾ ಪವನ್ ಕಲ್ಯಾಣ್ ಪಾತ್ರವನ್ನು ವಿನ್ಯಾಸಗೊಳಿಸುವುದಕ್ಕೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಹಾಗೇ ಎನ್‌ಟಿಆರ್‌ ಹಾಗೂ ಎಂಜಿಆರ್‌ ಅಂತಹ ದಿಗ್ಗಜರನ್ನು ಪ್ರೇರಣೆಯಾಗಿಟ್ಟುಕೊಂಡು ಪಾತ್ರವನ್ನು ಸೃಷ್ಟಿಸಲಾಗಿದೆ. ಹೀಗಾಗಿ ಇದು ದಕ್ಷಿಣ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಈ ಸಿನಿಮಾಗೆ ದಕ್ಷಿಣ ಭಾರತದ ದಿಗ್ಗಜರಾದ ಎನ್‌ಟಿಆರ್ ಹಾಗೂ ಎಂಜಿಆರ್ ಅವರೇ ಪ್ರೇರಣೆ ಎಂದು ನಿರ್ದೇಶಕ ಹೇಳಿಕೊಂಡಿದ್ದಾರೆ.

ಮುಂದೆ ಓದಿ

'ಹರಿ ಹರ ವೀರ ಮಲ್ಲು' ಸಿನಿಮಾಗೆ ಪ್ರೇರಣೆ ಎನ್‌ಟಿಆರ್-ಎಂಜಿಆರ್‌
ಪವನ್‌ ಕಲ್ಯಾಣ್‌ ಬಳಿ ಇರುವ ಎನ್‌ಟಿಆರ್-ಎಂಜಿಆರ್‌ ಗುಣಗಳೇನು?
ಈ ಸಿನಿಮಾದಲ್ಲಿ ಪವನ್‌ ಕಲ್ಯಾಣ್ ಇಮೇಜ್ ಏನು?
300 ವರ್ಷಗಳ ಹಿಂದಿನ ಈ 'ವೀರಮಲ್ಲು' ಯಾರು?

'ಹರಿ ಹರ ವೀರ ಮಲ್ಲು' ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ. ಇದು ಜುಲೈ 24 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಹೀಗಾಗಿ ಚಿತ್ರತಂಡ ಭರ್ಜರಿಯಾಗಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಈ ವೇಳೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕಿ ಜ್ಯೋತಿ ಕೃಷ್ಣ ಈ ಸಿನಿಮಾದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. "ಪವನ್ ಕಲ್ಯಾಣ್ ಪಾತ್ರವನ್ನು ವಿನ್ಯಾಸಗೊಳಿಸುವುದಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದ ದಂತಕಥೆಗಳಾದ ಎನ್‌ಟಿಆರ್ ಮತ್ತು ಎಂಜಿಆರ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಎನ್‌ಟಿಆರ್ ಮತ್ತು ಎಂಜಿಆರ್‌ರಂತಹ ಐಕಾನಿಕ್ ವ್ಯಕ್ತಿಗಳನ್ನು ಪವನ್ ಅವರಲ್ಲಿ ಗಮನಿಸಿದ್ದೆ. ಆ ಬಳಿಕವೇ ಪವನ್ ಪಾತ್ರವನ್ನು ಬರೆಯಲು ಶುರು ಮಾಡಿದೆ" ಎಂದು ಹೇಳಿಕೊಂಡಿದ್ದಾರೆ.

NTR and MGR inspired Telugu power star Pawan Kalyan s role in the Harihara Veera Mallu movie

ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಅವರ ಧರ್ಮಪರ, ಬಲಶಾಲಿ ಹಾಗೂ ಜನರ ಪರ ಇರುವ ನುಷ್ಯ ಎಂಬ ಇಮೇಜ್ ಅನ್ನು ಇಟ್ಟುಕೊಂಡು ಪಾತ್ರವನ್ನು ಹೆಣೆದಿದ್ದಾರಂತೆ. " ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಪಾತ್ರವನ್ನು ಎಚ್ಚರಿಕೆಯಿಂದ ಸೃಷ್ಟಿಸಲಾಗಿದೆ. ಎಂಜಿಆರ್ ಮುಖ್ಯಮಂತ್ರಿ ಆದ ಬಳಿಕವೂ ಸಂದೇಶ ಸಾರುವ, ಪ್ರಾಮಾಣಿಕ ಸಿನಿಮಾ ಮಾಡುವ ಮೂಲಕ ನಟನೆಯನ್ನು ಮುಂದುವರಿಸಿದ್ದರು. ಈ ಅಂಶವೇ ನನಗೆ ಸ್ಫೂರ್ತಿ. ಈ ಕಾರಣಕ್ಕೆ 'ಹರಿಹರ ವೀರಮಲ್ಲು' ಚಿತ್ರದಲ್ಲಿ "ಮಾತು ಕೇಳಿ" ಎಂಬ ಹಾಡನ್ನು ಇಟ್ಟಿದ್ದು. ಇದು ಪವನ್‌ ಅವರ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ" ಎಂದು ನಿರ್ದೇಶಕಿ ಜ್ಯೋತಿ ಕೃಷ್ಣ ಹೇಳಿದ್ದಾರೆ.

ಇನ್ನು ಶ್ರೀರಾಮನ ಪಾತ್ರದಲ್ಲಿ ನಟಿಸಿ ಎನ್‌ಟಿಆರ್ ಜನಮನ ಗೆದ್ದಿದ್ದರು. ಶ್ರೀರಾಮನ ಅವತಾರದಲ್ಲಿ ಬಿಲ್ಲು ಬಾಣವನ್ನು ಹಿಡಿದು ನಿಂತರೆ, ಪ್ರೇಕ್ಷಕರು ಚಪ್ಪಾಳೆಗಳನ್ನು ಸೃಷ್ಟಿಸುತ್ತಿದ್ದರು. ಇದರಿಂದಲೇ ಸ್ಪೂರ್ತಿಯನ್ನು ಪಡೆದು 'ಹರಿ ಹರ ವೀರಮಲ್ಲು' ಸಿನಿಮಾವನ್ನು ವಿನ್ಯಾಸಗೊಳಸಲಾಗಿದೆ. ಈ ಸಿನಿಮಾದ ಪ್ರತಿಯೊಂದು ದೃಶ್ಯವನ್ನು ವಿಶೇಷವಾಗಿ ಸೃಷ್ಟಿಸುವುದಕ್ಕೆ ನಿರ್ದೇಶಕಿ ಜ್ಯೋತಿ ಕೃಷ್ಣ ಪ್ರಯತ್ನ ಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಅಂದ್ಹಾಗೆ 'ಹರಿ ಹರ ವೀರಮಲ್ಲು' ಸಿನಿಮಾ 17ನೇ ಶತಮಾನದ ವೀರನ ಕಥೆಯನ್ನು ಹೇಳುತ್ತಿದೆ. ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ವೀರನ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. 300 ವರ್ಷಗಳ ಹಿಂದಿನ ಐತಿಹಾಸಿಕ ಘಟನೆಗಳನ್ನು ತೆರೆಮೇಲೆ ತರಲಾಗಿದೆ. 'ವೀರಮಲ್ಲು' ಪಾತ್ರದಲ್ಲಿ ಪವನ್ ಕಲ್ಯಾಣ್ ಲುಕ್, ಗೆಟಪ್ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಅನ್ನೋ ನಿರೀಕ್ಷೆಯಿದೆ. ಈ ಸಿನಿಮಾವನ್ನು ಜ್ಯೋತಿ ಕೃಷ್ಣ ಹಾಗೂ ಕ್ರಿಶ್ ಜಗರ್ಲಮುಡಿ ಇಬ್ಬರು ನಿರ್ದೇಶಿಸಿದ್ದು, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಲಿದೆ. ಪವನ್ ಕಲ್ಯಾಣ್‌ಗೆ ನಾಯಕಿಯಾಗಿ ನಿಧಿ ಅಗರ್‌ವಾಲ್ ನಟಿಸಿದ್ದು, ಇವರೊಂದಿಗೆ ಬಾಬಿ ಡಿಯೋಲ್, ನರ್ಗೀಸ್ ಫಕ್ರಿ, ಆದಿತ್ಯಾ ಮೆನನ್, ಶುಭಲೇಖ ಸುಧಾಕರ್ ನಟಿಸಿದ್ದಾರೆ.

More from Filmibeat

English summary
NTR and MGR inspired Telugu power star Pawan Kalyan's role in the Harihara Veera Mallu movie:
Read more about: pawan kalyan movie telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X