'ಆದಿಪುರುಷ್' ಟ್ರೈಲರ್ ಲಾಂಚ್‌ಗೆ ಬಂದಿದ್ದು 1 ಲಕ್ಷ: NTR 'ಆಂಧ್ರವಾಲ'ಗೆ ಸೇರಿದ್ದು 10 ಲಕ್ಷ.. ಫ್ಯಾನ್ಸ್ ನಡುವೆ ಕಿತ್ತಾಟ!

ನಿನ್ನೆ (ಜೂನ್ 6) ತಿರುಪತಿಯಲ್ಲಿ 'ಆದಿಪುರುಷ್' ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮ ದೊಡ್ಡ ಮಟ್ಟಕ್ಕೆ ನಡೆದಿದೆ. ಇಡೀ 'ಆದಿಪುರುಷ್' ತಂಡವೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಆಧ್ಯಾತ್ಮ ಗುರು ಚಿನ್ನ ಜೀಯರ್ ಸ್ವಾಮಿ ಈ ಕಾರ್ಯಕ್ರಮದ ಪ್ರಮುಖ ಅತಿಥಿಯಾಗಿದ್ದರು.

ತಿರುಪತಿಯಂತಹ ದೈವಿಕ ಸ್ಥಳದಲ್ಲಿ ನಡೆದ 'ಆದಿಪುರುಷ್' ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು ಎಂದು ಅಂದಾಜಿಸಲಾಗಿದೆ. ಕಾರ್ಯಕ್ರಮ ನೋಡಿದರೆ, ಆ ಸಂಖ್ಯೆ ಕಣ್ಣಿಗೂ ಕಾಣಿಸುತ್ತೆ. ಹೀಗಾಗಿ ಕಾರ್ಯಕ್ರಮದ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ.

NTR Andhrawala function 10 lakh fans attended while Adipurush has 1 lakh fans fighting on this

ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ಶುರುವಾಗಿದೆ. ಯಾರಿಗೆ ಹೆಚ್ಚು ಫ್ಯಾನ್ಸ್ ಸೇರುತ್ತಾರೆ ಎನ್ನುವ ಕಾರಣಕ್ಕೆ ಕಿತ್ತಾಟ ಶುರುವಾಗಿದೆ. ಆರಂಭದಲ್ಲಿ ಪವನ್ ಕಲ್ಯಾಣ್ ಹಾಗೂ ಪ್ರಭಾಸ್ ಫ್ಯಾನ್ಸ್ ನಡುವೆ ಟ್ಟಿಟರ್ ವಾರ್ ಶುರುವಾಗಿದೆ ಅಂದುಕೊಳ್ಳುವಾಗಲೇ ಈಗ, ಜೂ.ಎನ್‌ಟಿಆರ್ ಫ್ಯಾನ್ಸ್ ಕಡೆ ತಿರುಗಿದೆ.

ಜೂ.ಎನ್‌ಟಿಆರ್ ಅಭಿಮಾನಿಗಳು ಅಖಾಡಕ್ಕೆ ಇಳಿದಿದ್ದು, 'ಆಂಧ್ರವಾಲ' ಸಿನಿಮಾದ ಆಡಿಯೋ ಲಾಂಚ್‌ಗೆ 10 ಲಕ್ಷ ಫ್ಯಾನ್ಸ್ ಸೇರಿದನ್ನು ನೆನಪಿಸುತ್ತಿದ್ದಾರೆ. ಈ ಹಿಂದೆ RRR ಸಿನಿಮಾ ಪ್ರಚಾರ ಮಾಡುವಾಗ, ಸ್ವತ: ಜೂ.ಎನ್‌ಟಿಆರ್ ಕಪಿಲ್ ಶರ್ಮಾ ಶೋನಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಅದನ್ನೇ ಇಟ್ಟುಕೊಂಡು ಎನ್‌ಟಿಆರ್ ಫ್ಯಾನ್ಸ್ ತಿರುಗಿಬಿದ್ದಿದ್ದಾರೆ.

ಟಾಲಿವುಡ್‌ನಲ್ಲಿ ಫ್ಯಾನ್ಸ್ ವಾರ್ ಕಾಮನ್. ಯಾವುದೇ ಸ್ಟಾರ್ ನಟನ ಸಿನಿಮಾಗಳು ರಿಲೀಸ್ ಆಗುವಾಗಲೂ, ಆನ್‌ಲೈನ್‌ನಲ್ಲಿ ಈ ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತೆ. ಜೂ.ಎನ್‌ಟಿಆರ್, ಪವನ್ ಕಲ್ಯಾಣ್, ಮಹೇಶ್ ಬಾಬು, ಪ್ರಭಾಸ್ ಅಭಿಮಾನಿಗಳು ಅಖಾಡಕ್ಕೆ ಇಳಿದು ಬಿಡುತ್ತಾರೆ. ಈಗ 'ಆದಿಪುರುಷ್' ಬಿಡುಗಡೆ ಹೊತ್ತಲ್ಲೂ ಕೂಡ ಅದೇ ನಡೆಯುತ್ತಿದೆ.

NTR Andhrawala function 10 lakh fans attended while Adipurush has 1 lakh fans fighting on this

ಜೂ.ಎನ್‌ಟಿಆರ್ ಹಾಗೂ ಪ್ರಭಾಸ್ ಅಭಿಮಾನಿಗಳ ನಡುವಿನ ಕಿತ್ತಾಟವನ್ನು ಗಮನಿಸಿದ ನೆಟ್ಟಿಗರು ತೆಲುಗು ಸಿನಿಮಾವನ್ನು ಸೆಲೆಬ್ರೆಟ್ ಮಾಡಿ ಎನ್ನುತ್ತಾರೆ. ತೆಲುಗಿನ ಸಿನಿಮಾಗಳು ವಿಶ್ವದಾದ್ಯಂತ ಸದ್ದು ಮಾಡುತ್ತಿವೆ. ಅದಕ್ಕೆ ಹೆಮ್ಮೆ ಪಡಿ ಎಂದು ಇಬ್ಬರ ಅಭಿಮಾನಿಗಳಿಗೂ ಬುದ್ದಿ ಹೇಳುತ್ತಿದ್ದಾರೆ. ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ RRR ಸಿನಿಮಾ ಮೂಲಕ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದಾರೆ. ಈಗ 'ಆದಿಪುರುಷ್‌' ಸಿನಿಮಾ ಪ್ರಭಾಸ್ ಸದ್ದು ಮಾಡುತ್ತಾರೆ ಎನ್ನುತ್ತಿದ್ದಾರೆ ತೆಲುಗು ಮಂದಿ.

More from Filmibeat

English summary
NTR Andhrawala function 10 lakh fans attended while Adipurush has 1 lakh fans fighting on this, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X