ಅನುಪಮಾ ಪರಮೇಶ್ವರನ್ ಹಸಿ ಬಿಸಿ ದೃಶ್ಯ ; ನಾಚಿ ನೀರಾದ ತಾತ.!
ಸಿನಿಮಾಗೆ ಜಾತಿ ಮತ ಧರ್ಮದ ಭೇದ ಭಾವ ಇಲ್ಲ. ಚಿಕ್ಕವರಿಂದ ಹಿಡಿದು ಹಣ್ಣು ಹಣ್ಣು ಮುದುಕರನ್ನೂ ಸೆಳೆಯುವಂತಹ ಶಕ್ತಿ ಸಿನಿಮಾಗೆ ಇದೆ. ಇದಕ್ಕೆ ಸದ್ಯದ ಅತ್ಯುತ್ತಮ ಉದಾಹರಣೆ ಟಿಲ್ಲು ಸ್ಕ್ವೇರ್
ಹೌದು..ಟಿಲ್ಲು ಸ್ಕ್ವೇರ್ ಮೊನ್ನೆಯಷ್ಟೇ ತೆರೆಗೆ ಬಂದ ಸಿನಿಮಾ. ಆರಂಭದಿಂದಲೂ ಅನುಪಮಾ ಪರಮೇಶ್ವರನ್ ಅವರ ಹಾಟ್ ಅವತಾರಗಳಿಂದನೇ ಹೆಚ್ಚು ಚರ್ಚೆಯಾದ ಟಿಲ್ಲು ಸ್ಕ್ವೇರ್ ಕೇವಲ ಪಡ್ಡೆಹೈಕ್ಳಿಗೆ ಮಾಡಲಾದ ಸಿನಿಮಾ ಎಂದೇ ಬಹುತೇಕರು ಅಂದುಕೊಂಡಿದ್ದರು. ಕಾಲೇಜ್ ಸ್ಟೂಡೆಂಟ್ಸ್ ಗಳಿಂದ ಸಿನಿಮಾಗೆ ಎಷ್ಟು ಅಂತ ಮೈಲೇಜ್ ಸಿಗುತ್ತೆ ಬಿಡ್ರೀ ಎಂದು ಪಕ್ಕದ ಆಂಧ್ರದಲ್ಲಿ ಅನೇಕರು ಮೂಗು ಮುರಿದಿದ್ದರು.

ಆದರೆ ಈ ಲೆಕ್ಕಚಾರವನ್ನ ಟಿಲ್ಲು ಸ್ಕ್ವೇರ್ ಬುಡಮೇಲಾಗಿಸಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಷ್ಟೇ ಅಲ್ಲ ಸಂಸಾರಸ್ಥರು, ಹಿರಿಯ ನಾಗರೀಕರು ಕೂಡ ಬಂದು ಸಿನಿಮಾವನ್ನ ನೋಡುತ್ತಿದ್ದಾರೆ. ಮನಸಾರೆ ನಗುತ್ತಿದ್ದಾರೆ. ಇದಕ್ಕೆ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ.
ಹೌದು, ಈಗಾಗಲೇ ಜಗಜ್ಜಾಹೀರು ಆದಂತೆ, ಅನುಪಮಾ ಪರಮೇಶ್ವರನ್ ಟಿಲ್ಲು ಸ್ಕ್ವೇರ್ ನಲ್ಲಿ ತುಸು ಹೆಚ್ಚೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅನುಪಮಾ ಅವರ ಹಾಟ್ ಅವತಾರದ ಬಗ್ಗೆ ಚಿತ್ರ ಬಿಡುಗಡೆಯಾದ ನಂತರವೂ ಕೂಡ ವ್ಯಾಪಕ ಚರ್ಚೆ ಆಗ್ತಿದೆ. ಇದರ ನಡುವೆ ಚಿತ್ರವನ್ನ ಚಿತ್ರಮಂದಿರದಲ್ಲಿ ಕಣ್ತುಂಬಿಕೊಂಡಿರುವ ಹಿರಿಯ ವ್ಯಕ್ತಿಯೊಬ್ಬರು ಚಿತ್ರದಲ್ಲಿನ ದೃಶ್ಯವೊಂದನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಮನಸಾರೆ ನಕ್ಕಿದ್ದಾರೆ. ಸದ್ಯಕ್ಕೆ ಹಿರಿಯ ವ್ಯಕ್ತಿಯ ಈ ಸಂಭ್ರಮದ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸದ್ಯಕ್ಕೆ ಈ ವಿಡಿಯೋ ನೋಡಿದ ಅನೇಕರು, ಅನೇಕ ರೀತಿಯ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ವಯಸ್ಸಾದ ವ್ಯಕ್ತಿಯ ಜೀವನೋತ್ಸಾಹವನ್ನ ಕೊಂಡಾಡುತ್ತಿದ್ದರೆ, ಇನ್ನೂ ಕೆಲವರು ಅಜ್ಜನಲ್ಲಿರುವ ಸಿನಿಮೋತ್ಸಾಹವನ್ನೂ ಮೆಚ್ಚಿಕೊಳ್ಳುತ್ತಿದ್ದಾರೆ. ಕೆಲವರ ಕಣ್ಣಿಗೆ ರಸಿಕನಂತೆಯೂ ಕಾಣುತ್ತಿದ್ದಾರೆ ಈ ತಾತ
ಬಾಕ್ಸಾಫೀಸ್ ನಲ್ಲಿ ಟಿಲ್ಲು ಸ್ಕ್ವೇರ್ ಮೋಡಿ..!
ಬಿಡುಗಡೆಯಾದ ಮೊದಲನೇ ದಿನ 23 ಕೋಟಿಯನ್ನ ಗಳಿಸಿದ್ದ ಟಿಲ್ಲು ಸ್ಕ್ವೇರ್ ಸಿನಿಮಾ, ಎರಡನೇ ದಿನ ಅಂದರೆ ಶನಿವಾರ 21 ಕೋಟಿಯನ್ನ ಗಳಿಸಿದೆ. ಈ ಮೂಲಕ ಎರಡು ದಿನದಲ್ಲಿ 44 ಕೋಟಿ ಗಳಿಸುವ ಮೂಲಕ ಹೊಸ ಇತಿಹಾಸವನ್ನೂ ಟಿಲ್ಲು ಸ್ಕ್ವೇರ್ ಬರೆದಿದೆ.
ಇನ್ನೂ ಇವತ್ತು ಕೂಡ ಆಂಧ್ರದ ಬಹುತೇಕ ಕಡೆ ಚಿತ್ರ ಹೌಸ್ ಫುಲ್ ಪ್ರದರ್ಶನವನ್ನ ಕಂಡಿದೆ. ಕರ್ನಾಟಕದಲ್ಲಿಯೂ ಕೂಡ ದಿನದಿಂದ ದಿನಕ್ಕೆ ಟಿಲ್ಲು ಸ್ಕ್ವೇರ್ ಗೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸದ್ಯಕ್ಕೆ ವ್ಯಕ್ತವಾಗುತ್ತಿರುವ ಸಾರ್ವತ್ರಿಕ ಅಭಿಪ್ರಾಯ ಹಾಗೂ ಸಿಕ್ತಿರುವ ಬೆಂಬಲವನ್ನ ಗಮನಿಸಿರುವ ಟ್ರೆಡ್ ಪಂಡಿತರು ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ಈ ಸಿನಿಮಾ ಕಡಿಮೆ ಅಂದರೂ 75 ಕೋಟಿಯನ್ನಾದರೂ ದೋಚುವುದು ಪಕ್ಕಾ ಅನ್ನುವ ಭವಿಷ್ಯವಾಣಿಯನ್ನ ನುಡಿಯುತ್ತಿದ್ದಾರೆ.
ಬಿಡುಗಡೆಗೂ ಮುನ್ನವೇ ಭರ್ಜರಿ ವ್ಯಾಪಾರ..!
ಇನ್ನೂ ಬಿಡುಗಡೆಗೂ ಮುನ್ನವೇ, ಟಿಲ್ಲು ಸ್ಕ್ವೇರ್ ಸಿನಿಮಾ ಭರ್ಜರಿ ವ್ಯಾಪಾರವನ್ನೂ ಮಾಡಿದೆ. ಹೈದ್ರಾಬಾದ್ ನಲ್ಲಿ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಈ ಸಿನಿಮಾದ ನಿಜಾಮ್ ಥಿಯೇಟ್ರಿಕಲ್ ರೈಟ್ಸ್ 8 ಕೋಟಿ ರೂಪಾಯಿಗೆ ಮತ್ತು ಆಂಧ್ರ ರೈಟ್ಸ್ 14 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇನ್ನೂ ತೆಲುಗು ರಾಜ್ಯದಲ್ಲಿ 22 ಕೋಟಿಯನ್ನ ಚಿತ್ರ ಆಗಲೇ ಕೊಳ್ಳೆ ಹೊಡೆದಿದೆ. ಇನ್ನೂ ಕರ್ನಾಟಕದಲ್ಲಿ ಈ ಚಿತ್ರದ ಹಕ್ಕುಗಳನ್ನ 2 ಕೋಟಿ ರೂಪಾಯಿಗೆ ಖರೀದಿಸಲಾಗಿದೆ ಅನ್ನುವ ಸುದ್ದಿಯೂ ಇದೆ. ಉಳಿದಂತೆ ಸಪ್ತಸಾಗರದಾಚೆಯ ವ್ಯಾಪಾರ ವಹಿವಾಟು 4 ಕೋಟಿ ರೂಪಾಯಿಗೆ ಮುಕ್ತಾಯವಾಯಿತು ಅನ್ನುವ ಸುದ್ದಿಯೂ ಇದೆ. ಒಟ್ಟಾರೆ ಬಿಡುಗಡೆಗೆ ಮುನ್ನವೇ 28 ಕೋಟಿ ರೂಪಾಯಿಯನ್ನ ಚಿತ್ರ ಗಳಿಸಿದೆ ಅನ್ನುವ ಎಂಬ ಮಾತು ಹೈದ್ರಾಬಾದ್ ತುಂಬಾ ಪಸರ್ ಆಗಿದೆ. ಟಿಲ್ಲು ಸ್ಕ್ವೇರ್ ಚಿತ್ರದ ಈ ಗೆಲುವು ಟಾಲಿವುಡ್ ನವರ ಉತ್ಸಾಹವನ್ನೂ ಹೆಚ್ಚಿಸಿದೆ.


Click it and Unblock the Notifications












