ಶಿವರಾತ್ರಿಗೆ ಭೋಲೇನಾಥನ ಪರಮ ಭಕ್ತ 'ಕಣ್ಣಪ್ಪ'ನ ಫಸ್ಟ್ ಲುಕ್ ರಿಲೀಸ್; ಪರಮ ಶಿವನ ಸಿನಿಮಾದಲ್ಲಿ ಶಿವಣ್ಣಇರದಿದ್ರೆ ಹೇಗೆ?

ಇಂದು (ಮಾರ್ಚ್ 8) ಮಹಾಶಿವರಾತ್ರಿ. ಎಲ್ಲೆಡೆ ಶಿವನ ಆರಾಧನೆ ಜೋರಾಗಿಯೇ ನಡೆಯುತ್ತಿದೆ. ಹಾಗೆಯೇ ಸಿನಿಮಾರಂಗದಲ್ಲೂ ಕೂಡ ಶಿವರಾತ್ರಿ ಸಂಭ್ರಮ ಜೋರಾಗಿದೆ. ಅದರಲೂ ಶಿವನ ಪರಮ ಭಕ್ತನಾಗಿದ್ದ 'ಕಣ್ಣಪ್ಪ' ಕುರಿತು ಟಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿರೋದು ಗೊತ್ತೇ ಇದೆ. ಆ ಸಿನಿಮಾ ತಂಡ ಶಿವ ಭಕ್ತರಿಗಾಗಿ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದೆ.

ತೆಲುಗು ಚಿತ್ರರಂಗದಲ್ಲಿ ಬಹುಕೋಟಿ ವೆಚ್ಚದಲ್ಲಿ 'ಕಣ್ಣಪ್ಪ; ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍' ಸಿನಿಮಾ ಸೆಟ್ಟೇರಿದ್ದು ಗೊತ್ತೇ ಇದೆ. ಈ ಸಿನಿಮಾ ಅನೌನ್ಸ್ ಆದಲ್ಲಿಂದ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಲೇ ಇದೆ. ತೆಲುಗು ಚಿತ್ರರಂಗದ ಲೆಜೆಂಡರಿ ನಟ ಮೋಹನ್ ಬಾಬು ಅವರ ಪುತ್ರ ವಿಷ್ಣು ಮಂಚು ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಅವರೇ ನಿರ್ಮಾಣವನ್ನೂ ಮಾಡುತ್ತಿದ್ದಾರೆ.

On the occasion of Maha Shivarathri Vishnu Manchu movie Kannappa first look out

ಮಹಾಶಿವರಾತ್ರಿಯ ಈ ವಿಶೇಷ ದಿನದಂದು 'ಕಣ್ಣಪ್ಪ; ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍' ಸಿನಿಮಾದ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ಮುಕೇಶ್‍ ಕುಮಾರ್ ಸಿಂಗ್‍ ಈ ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದು, ಈ ಹಿಂದೆ ರಿಲೀಸ್ ಆಗಿರುವ ಸಿನಿಮಾದ ಫಸ್ಟ್‌ ಲುಕ್‌ ಈಗಾಗಲೇ ಕುತೂಹಲ ಮೂಡಿಸಿತ್ತು. ಈಗ ಮಹಾಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ಮತ್ತೊಂದು ಹೊಸ ಲುಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಲುಕ್ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.

ಅಂದ ಹಾಗೆ 'ಕಣ್ಣಪ್ಪ; ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍' ನಲ್ಲಿ ವಿಷ್ಣು ಮಂಚು ಭಕ್ತ ಕಣ್ಣಪ್ಪನಾಗಿ ನಟಿಸುತ್ತಿದ್ದಾರೆ. ಫಸ್ಟ್ ಲುಕ್‌ನಲ್ಲಿ ವಿಷ್ಣು ಮಂಚು ಬಿಲ್ಲು ಹಾಗೂ ಬಾಣವನ್ನು ಹಿಡಿದು ಗುರಿ ಇಟ್ಟಿದ್ದಾರೆ. ಈ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲವನ್ನು ಕೆರಳಿಸಿದೆ. ಇದೊಂದು ಭಕ್ತ ಪ್ರಧಾನ ಸಿನಿಮಾ ಆಗಿದ್ದರೂ, ಆಕ್ಷನ್ ಸೀಕ್ವೆನ್ಸ್‌ ಅನ್ನು ನಿರೀಕ್ಷೆ ಮಾಡಬಹುದು.

'ಕಣ್ಣಪ್ಪ; ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍' ಸಿನಿಮಾ ನ್ಯೂಜಿಲ್ಯಾಂಡ್‌ನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಇದರಲ್ಲಿ ಸುಮಾರು 600 ಮಂದಿ ಭಾಗವಹಿಸಿದ್ದು, ಸಿನಿಮಾ ಸ್ಕೇಲ್ ಎಷ್ಟಿದೆ ಅನ್ನೋದನ್ನು ಸಾರಿ ಹೇಳುತ್ತಿದೆ. 24 ಫ್ರೇಮ್ಸ್‌ ಫ್ಯಾಕ್ಟರಿ ಮತ್ತು AVA ಎಂಟರ್‌ಟೈನ್‌ಮೆಂಟ್‌ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಇದು ಟಾಲಿವುಡ್‌ನಲ್ಲಿ ಈ ವರ್ಷದ ಅತೀ ದೊಡ್ಡ ಸಿನಿಮಾ ಆಗುವ ಎಲ್ಲಾ ಸಾಧ್ಯತೆಗಳೂ ಇವೆ.

On the occasion of Maha Shivarathri Vishnu Manchu movie Kannappa first look out

ವಿಷ್ಣು ಮಂಚು ಈ ಸಿನಿಮಾದಲ್ಲಿ ಭಕ್ತ ಕಣ್ಣಪ್ಪನಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ಇವರಿಗೆ ದಕ್ಷಿಣ ಭಾರತದ ಸೂಪರ್‌ಗಳು ಸಾಥ್ ಕೊಡುತ್ತಿದ್ದಾರೆ. ಪ್ಯಾನ್‍ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್‍, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‍ ಲಾಲ್‍, ಸ್ಯಾಂಡಲ್‌ವುಡ್‌ ಸೂಪರ್‌ಸ್ಟಾರ್ ಶಿವರಾಜಕುಮಾರ್, ಲೆಜೆಂಡರಿ ಸ್ಟಾರ್‌ಗಳಾದ ಮೋಹನ್‌ ಬಾಬು, ಶರತ್‌ ಕುಮಾರ್‌, ಬ್ರಹ್ಮಾನಂದಂ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಇದು ಟಾಲಿವುಡ್‌ನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಸಾಲಿನಲ್ಲಿ ನಿಲ್ಲುತ್ತೆ.

ಶಿವರಾತ್ರಿ ಹಬ್ಬದ ಹೊತ್ತಲೇ ಫಸ್ಟ್ ಲುಕ್ ನೋಡಿ ವಿಷ್ಣು ಮಂಚು ಥ್ರಿಲ್ ಆಗಿದ್ದಾರೆ. "ಕಣ್ಣಪ್ಪ ಸಿನಿಮಾ ಚಿತ್ರೀಕರಣ ಕೆಲಸಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಒಳ್ಳೆಯ ತಂಡದ ಜತೆಗೆ ನಿರೀಕ್ಷೆಗೂ ಮೀರಿ ಚಿತ್ರ ಮೂಡಿಬರುತ್ತಿರುವುದು ಖುಷಿ ನೀಡಿದೆ. ಕಣ್ಣಪ್ಪ ಇಲ್ಲಿ ಒಬ್ಬ ಶಿವನ ಭಕ್ತನಾಗಿ ಮಾತ್ರವಲ್ಲ, ಒಬ್ಬ ಯೋಧನಂತೆಯೂ ಕಾಣಿಸಲಿದ್ದಾನೆ. ಈ ಚಿತ್ರದ ಝಲಕ್‌ ಹೇಗಿರಲಿದೆ ಎಂಬುದನ್ನು ನಿಮ್ಮ ಮುಂದಿಡಲು ತುಂಬ ಉತ್ಸಾಹದಲ್ಲಿದ್ದೇನೆ" ಎಂದು ವಿಷ್ಣು ಮಂಚು ಹೇಳಿದ್ದಾರೆ.

More from Filmibeat

English summary
Vishnu Manchu movie Kannappa first look released:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X