ಪ್ರಭಾಸ್ ಯಾಕೆ ಮದುವೆಯಾಗಿಲ್ಲ.. ಸಿನಿಮಾಗೆ ಬಂದಿದ್ದು ಹೇಗೆ ಗೊತ್ತಾ: ವೇಣು ಸ್ವಾಮಿ ಮತ್ತೊಮ್ಮೆ ಪ್ರತಿಕ್ರಿಯೆ
ಟಾಲಿವುಡ್ ಹೀರೊಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. 'ಬಾಹುಬಲಿ' ಬಳಿಕ ತೆಲುಗಿನ ಕೆಲ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಅಲ್ಲು ಅರ್ಜುನ್, ರಾಮ್ ಚರಣ್, ಜೂ.ಎನ್‌ಟಿಆರ್ ಕೂಡ ಪ್ರಭಾಸ್ ಹಾದಿಯನ್ನೇ ಹಿಡಿದಿರೋದು ಗೊತ್ತೇ ಇದೆ. ಅದರಲ್ಲಿ ಪ್ರಭಾಸ್‌ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ.
'ಬಾಹುಬಲಿ' ಬಳಿಕ ಪ್ರಭಾಸ್ ನಟಿಸಿದ ಪ್ಯಾನ್ ಇಂಡಿಯಾ ಸಿನಿಮಾಗಳು ಸಾಲು ಸಾಲಾಗಿ ಸೋತಿದ್ದು ಗೊತ್ತೇ ಇದೆ. 'ಸಾಹೋ', 'ರಾಧೆಶ್ಯಾಮ್', 'ಆದಿಪುರುಷ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿರೋದು ಹೊಸ ವಿಷಯವೇನಲ್ಲ. ಇದೇ ಸಂದರ್ಭದಲ್ಲಿ ತೆಲುಗು ತಾರೆಯರ ಭವಿಷ್ಯ ಹೇಳುವ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಪ್ರಭಾಸ್‌ಗೆ ಇನ್ಮುಂದೆ ಯಶಸ್ಸು ಸಿಗೋದಿಲ್ಲ ಅಂತ ಹೇಳಿದ್ದರು.

ಪ್ರಭಾಸ್ ಜಾತಕದಲ್ಲಿ ಸಮಸ್ಯೆಯಿದೆ. ಹೀಗಾಗಿ ಮುಂದೆ ನಟಿಸುವ ಸಿನಿಮಾಗಳು ಸೋಲುತ್ತವೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದ್ದ 'ಸಲಾರ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಈ ಬಾರಿ ವೇಣು ಸ್ವಾಮಿ ನುಡಿದ ಭವಿಷ್ಯ ಸುಳ್ಳಾಯಿತು. ಇದನ್ನೇ ಇಟ್ಟುಕೊಂಡು ಪ್ರಭಾಸ್ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಆದರೂ ನಿಲ್ಲಿಸದ ವೇಣುಸ್ವಾಮಿ ಮತ್ತೆ ಪ್ರಭಾಸ್ ಮದುವೆ ಬಗ್ಗೆ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರ ಬಗ್ಗೆ ಭವಿಷ್ಯ ನುಡಿಸಿದ್ದಾರೆ.
ಮತ್ತೆ ಗೆಲುವು ಕಂಡ ಡಾರ್ಲಿಂಗ್ ಪ್ರಭಾಸ್
ಡಾರ್ಲಿಂಗ್ ಪ್ರಭಾಸ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲನ್ನು ಅನುಭವಿಸಿದ್ದರು. ಸತತ ಮೂರು ಸೋಲುಗಳನ್ನು ಕಂಡಿದ್ದ ಪ್ರಭಾಸ್ ಭವಿಷ್ಯ ಇಲ್ಲಿ ಮುಗಿದೇ ಹೋಯ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರಭಾಸ್ ಕತೆ ಮುಗೀತು. ಮತ್ತೆ ತೆಲುಗು ಸಿನಿಮಾಗಳನ್ನು ಮಾಡಿಕೊಂಡು ಇರಬೇಕು ಅಂತ ಭಾವಿಸಲಾಗಿತ್ತು. ಅದಕ್ಕೆ ಸರಿಯಾಗಿ ವೇಣು ಸ್ವಾಮಿ ಕೂಡ ಪ್ರಭಾಸ್ ಜಾತಕ ಚೆನ್ನಾಗಿಲ್ಲ. ಮತ್ತೆ 'ಬಾಹುಬಲಿ'ಯಂತಹ ಯಶಸ್ಸು ಸಿಗೋದಿಲ್ಲ ಅಂತ ಹೇಳಿದ್ದರು. ಆದರೆ, 'ಸಲಾರ್' ಅವರ ಭವಿಷ್ಯವನ್ನೇ ತಲೆಕೆಳಗೆ ಮಾಡಿತ್ತು.

ಕೈಯಲ್ಲಿವೆ ಬಿಗ್ ಬಜೆಟ್ ಸಿನಿಮಾಗಳು
'ಸಲಾರ್' ಬಳಿಕ ಪ್ರಭಾಸ್ ಕೈಯಲ್ಲಿ ಬಿಗ್ ಬಜೆಟ್ ಸಿನಿಮಾಗಳಿವೆ. ನಾಗ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಸಿನಿಮಾ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಇದರೊಂದಿಗೆ 'ಸಲಾರ್ 2', 'ದಿ ರಾಜಾ ಸಾಬ್' ಹಾಗೂ 'ಸ್ಪಿರಿಟ್' ಅಂತಹ ಸಿನಿಮಾಗಳಿವೆ. ಈ ಸಿನಿಮಾಗಳ ಜೊತೆಗೆ ಹನು ರಾಘವಪುಡಿ ನಿರ್ದೇಶಿಸುತ್ತಿರುವ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ವೇಳೆನೇ ಮತ್ತೆ ಪ್ರಭಾಸ್ ವೃತ್ತಿ ಬದುಕಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಪ್ರಭಾಸ್ ಜಾತಕದಲ್ಲಿ ದೋಷ
ತೆಲುಗು ಜ್ಯೋತಿಷಿ ವೇಣು ಸ್ವಾಮಿ ಯಾಕೋ ಪ್ರಭಾಸ್ ಅನ್ನು ಬಿಡುವ ಹಾಗೆ ಕಾಣಿಸುತ್ತಿಲ್ಲ. ಪ್ರಭಾಸ್ ಅಭಿಮಾನಿಗಳಿಂದ ಹೀನಾಯವಾಗಿ ಟ್ರೋಲ್‌ಗೆ ಒಳಗಾಗಿದ್ದರೂ, ಮತ್ತೆ ಪ್ರಭಾಸ್ ಭವಿಷ್ಯ ನುಡಿದಿದ್ದಾರೆ. ಅವರ ಜಾತಕದಲ್ಲಿ ಸಮಸ್ಯೆಯಿದ್ದು, ಸಿನಿಮಾ ಹಾಗೂ ವೈಯಕ್ತಿಕ ಜೀವನದಲ್ಲಿ ತುಂಬಾನೇ ಸಮಸ್ಯೆಗಳಿವೆ ಎಂದಿದ್ದಾರೆ. ತನಗೆ 13 ವರ್ಷದವನಿದ್ದಾಗಲೇ ಚಿತ್ರರಂಗಕ್ಕೆ ಬಂದ್ದು, ರೆಬೆಲ್ ಸ್ಟಾರ್ ಕೃಷ್ಣಂ ರಾಜು ತುಂಬಾ ಪರಿಚಿತರು. ಆ ಕುಟುಂಬದಲ್ಲಿರೋ ಪ್ರತಿಯೊಬ್ಬರ ಜಾತಕ ಚೆನ್ನಾಗಿ ಗೊತ್ತಿದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ. ಪ್ರಭಾಸ್‌ಗೆ ಮೊದಲ ಸಿನಿಮಾ ಈಶ್ವರ್‌ಗೆ ಅವಕಾಶ ಸಿಕ್ಕಿದ್ದು ಹೇಗೆ ಅಂತ ಗೊತ್ತಿದೆ. ಇಷ್ಟೇ ಅಲ್ಲದೆ ಇನ್ನೂ ಕೆಲವು ವಿಷಯಗಳು ಗೊತ್ತಿದೆ ಎಂದಿದ್ದಾರೆ.
ಇನ್ನೂ ಯಾಕೆ ಮದುವೆ ಆಗಿಲ್ಲ ಅಂತ ಗೊತ್ತು
ಡಾರ್ಲಿಂಗ್ ಪ್ರಭಾಸ್ ಮದುವೆ ಬಗ್ಗೆ ಮತ್ತೆ ಸಂದರ್ಶನದಲ್ಲಿ ಹೇಳಿದ್ದಾರೆ. ಪ್ರಭಾಸ್ ಮದುವೆ ಆಗೋ ವಯಸ್ಸು ಇನ್ನೂ ಬಂದಿಲ್ಲ. ಯಾಕಿನ್ನೂ ಮದುವೆ ಆಗಿಲ್ಲ ಅನ್ನೋದು ನನಗೆ ಗೊತ್ತಿದೆ. ಅವರ ಜಾತಕದಲ್ಲಿ ಸಮಸ್ಯೆಗಳು ಇರುವುದರಿಂದ ಹೀಗೆ ಆಗುತ್ತಿದೆ ಎಂದು ಜ್ಯೋತಿಷಿ ವೇಣು ಸ್ವಾಮಿ ಹೇಳಿಕೊಂಡಿದ್ದಾರೆ.


Click it and Unblock the Notifications











