ಭಾರತದ ಟಾಪ್ 10 ಹೀರೋಗಳು ಯಾರು? ಪ್ರಭಾಸ್.. ಅಲ್ಲು ಅರ್ಜುನ್.. ವಿಜಯ್ ಓಕೆ.. ಯಶ್ ಎಲ್ಲಿ?

ಭಾರತದಲ್ಲಿ ಪ್ರತಿಯೊಬ್ಬ ಹೀರೋನ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನಂ 1 ಸ್ಥಾನದಲ್ಲಿ ನೋಡಬೇಕು ಅಂತ ಆಸೆ ಪಡುತ್ತಾರೆ. ಹೀಗಾಗಿ ಓರ್ಮ್ಯಾಕ್ಸ್ ಮೀಡಿಯಾ (Ormax Media) ಪ್ರತಿ ತಿಂಗಳು ಅತೀ ಹೆಚ್ಚು ಜನಪ್ರಿಯತೆ ಪಡೆದಿರುವ ಹೀರೋ, ಹೀರೋಯಿನ್ಸ್ ಹಾಗೂ ಸಿನಿಮಾಗಳು, ಓಟಿಟಿ ಕಂಟೆಂಟ್‌ಗಳನ್ನು ಪಟ್ಟಿ ಮಾಡಿ ಬಿಡುಗಡೆ ಮಾಡುತ್ತೆ. ಮಾರ್ಚ್ 2026ರಲ್ಲಿ ಟಾಪ್ 10 ಸ್ಥಾನದಲ್ಲಿರುವ ಹೀರೋಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.

ಅಭಿಮಾನಿಳು ಇಟ್ಟುಕೊಂಡಿರುವ ನಿರೀಕ್ಷೆ, ಸ್ಟಾರ್‌ಗಳ ಜನಪ್ರಿಯತೆ, ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳು, ಸಿನಿಮಾದ ಪ್ರಚಾರ, ರಾಷ್ಟ್ರ ಮಟ್ಟದಲ್ಲಿ ಅವರ ಜನಪ್ರಿಯತೆ ಹೀಗೆ ಹತ್ತು ಹಲವು ಅಂಶಗಳನ್ನು ಇಟ್ಟುಕೊಂಡು ಮಾರ್ಚ್ 2026ರ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಟಾಪ್ 10 ಪಟ್ಟಿಗಳು ಇಲ್ಲಿವೆ.

Ormax Media released top 10 Most popular male film stars in India on March 2026

ಪ್ರಭಾಸ್- ನಂ 1

ಓರ್ಮ್ಯಾಕ್ಸ್ ಟಾಪ್ 10 ಹೀರೋಗಳ ಪಟ್ಟಿಯಲ್ಲಿ ಪ್ರಭಾಸ್ ನಂ 1 ಸ್ಥಾನದಲ್ಲಿ ಇದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಮತ್ತೆ ನಂ 1 ಸ್ಥಾನಕ್ಕೇರಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ನಂ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇತ್ತೀಚೆಗೆ ತೆರೆಕಂಡ ಪ್ರಭಾಸ್ ಸಿನಿಮಾ ಸೋತಿದ್ದರೂ, ಅವರ ಅಪ್‌ಕಮಿಂಗ್ ಸಿನಿಮಾಗಳ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಹೀಗಾಗಿ ಅವರನ್ನು ನಂ 1 ಸ್ಥಾನದಲ್ಲಿ ಇರಿಸಲಾಗಿದೆ.

ಅಲ್ಲು ಅರ್ಜುನ್ -ನಂ 2

ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ 2ನೇ ಸ್ಥಾನದಲ್ಲಿ ಇದ್ದಾರೆ. ಈ ಬಾರಿ ಅಲ್ಲು ಅರ್ಜುನ್ ದಳಪತಿ ವಿಜಯ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿರುವುದು ವಿಶೇಷ. ಇತ್ತೀಚೆಗೆ ಅವರು ನಟಿಸುತ್ತಿರುವ 'ರಾಕಾ' ಸಿನಿಮಾದ ಲುಕ್ ಚರ್ಚೆಯಲ್ಲಿತ್ತು. ಹೀಗಾಗಿ ಅಲ್ಲು ಅರ್ಜುನ್ 2ನೇ ಸ್ಥಾನದಲ್ಲಿದ್ದಾರೆ.

ದಳಪತಿ ವಿಜಯ್-ನಂ 3

ದಳಪತಿ ವಿಜಯ್ ತಮ್ಮ ಸಿನಿಮಾ 'ಜನ ನಾಯಗನ್' ಹಾಗೂ ಟಿವಿಕೆ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದಾ ಚರ್ಚೆಯಲ್ಲಿ ಇದ್ದಾರೆ. ಜೊತೆಗೆ ವಿಚ್ಛೇದನ ಪ್ರಕರಣ ಸೇರಿದಂತೆ ಹಲವು ವಿವಾದಗಳ ಮೂಲಕ ಸುದ್ದಿಯಲ್ಲಿ ಇದ್ದರು.

ಶಾರುಖ್ ಖಾನ್- ನಂ 4

ಸದ್ಯ ಶಾರುಖ್ ಖಾನ್ ನಟಿಸುತ್ತಿರುವ ಸಿನಿಮಾಗಳು ಯಾವುದೂ ರಿಲೀಸ್ ಆಗುತ್ತಿಲ್ಲ. ಆದರೂ ಶಾರುಖ್ ಖಾನ್ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಫೆಬ್ರವರಿ ತಿಂಗಳಲ್ಲೂ ಶಾರುಖ್ ಖಾನ್ 4ನೇ ಸ್ಥಾನದಲ್ಲಿ ಇದ್ದರು. ಮಾರ್ಚ್‌ನಲ್ಲೂ ಅದೇ ಸ್ಥಾನ ಉಳಿಸಿಕೊಂಡಿದ್ದಾರೆ.

ಮಹೇಶ್ ಬಾಬು- ನಂ 5

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಐದನೇ ಸ್ಥಾನದಲ್ಲಿ ಇದ್ದಾರೆ. ರಾಜಮೌಳಿ ನಿರ್ದೇಶಿಸುತ್ತಿರುವ 'ವಾರಾಣಾಸಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್‌ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಿದೆ. ಹೀಗಾಗಿ ಮಾರ್ಚ್‌ ತಿಂಗಳಲ್ಲಿ ಒಂದು ಸ್ಥಾನ ಮೇಲಕ್ಕೆರಿದ್ದಾರೆ.

ರಾಮ್ ಚರಣ್- ನಂ 6

ರಾಮ್ ಚರಣ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಇದ್ದಾರೆ. 'ಪೆದ್ದಿ' ಇದೇ ತಿಂಗಳು ರಿಲೀಸ್ ಆಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಹೀಗಿದ್ದರೂ ರಾಮ್ ಚರಣ್ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ. ಫೆಬ್ರವರಿಗೆ ಹೋಲಿಕೆ ಮಾಡಿದರೆ, ಮಾರ್ಚ್‌ನಲ್ಲಿ ಒಂದು ಸ್ಥಾನ ಕುಸಿದು 6ನೇ ಸ್ಥಾನಕ್ಕೆ ಬಂದಿದ್ದಾರೆ.

ಸಲ್ಮಾನ್ ಖಾನ್-ನಂ 7

ಬಾಲಿವುಡ್‌ ನಟ ಸಲ್ಮಾನ್ ಖಾನ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುತ್ತಿವೆ. ಹೀಗಿದ್ದರೂ, ಸಲ್ಮಾನ್ ಖಾನ್‌ಗೆ ಕ್ರೇಜ್ ಕಮ್ಮಿಯಾಗಿಲ್ಲ. ಮಾಸ್ ಇಮೇಜ್ ಇರುವ ನಟ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಇದ್ದಾರೆ.

ರಣ್‌ವೀರ್ ಸಿಂಗ್-ನಂ 8

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ಧುರಂಧರ್ 2' ಸಿನಿಮಾ ಮೂಲಕ ರಣ್‌ವೀರ್ ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದಾರೆ. ಹೀಗಾಗಿ ಬಹಳ ದಿನಗಳ ಬಳಿಕ ಇದೇ ಮೊದಲ ಬಾರಿಗೆ ಓರ್ಮ್ಯಾಕ್ಸ್ ಟಾಪ್ 10 ಲಿಸ್ಟ್‌ನಲ್ಲಿದ್ದಾರೆ. ಸದ್ಯ ಇವರು ಏಳನೇ ಸ್ಥಾನದಲ್ಲಿದ್ದಾರೆ.

ಜೂನಿಯರ್ ಎನ್‌ಟಿಆರ್-ನಂ 9

ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ಡ್ರ್ಯಾಗನ್' ಟ್ರೆಂಡಿಂಗ್‌ನಲ್ಲಿದೆ. ಹೀಗಾಗಿ ಜೂನಿಯರ್‌ ಎನ್‌ಟಿಆರ್ ಟಾಪ್ 9ರ ಸ್ಥಾನದಲ್ಲಿ ಇದ್ದಾರೆ.

ಅಕ್ಷಯ್ ಕುಮಾರ್- ನಂ 10

ಅಕ್ಷಯ್ ಕುಮಾರ್ ಹಾಗೂ ಪ್ರಿಯಾದರ್ಶನ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಭೂತ್ ಬಂಗ್ಲ' ಇತ್ತೀಚೆಗೆ ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ 10ನೇ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯಲ್ಲಿ ತೆಲುಗು ಸ್ಟಾರ್ ನಟರೇ ಹೆಚ್ಚಿದ್ದಾರೆ. ಟಾಪ್‌ 10 ಪಟ್ಟಿಯಲ್ಲಿ ಇವರೇ ಐದು ಸ್ಟಾರ್‌ಗಳು ಇದ್ದಾರೆ. ಹೀಗಾಗಿ ತೆಲುಗು ಸಿನಿಮಾಗಳು ಮುಂದಿನ ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸೋದು ಗ್ಯಾರಂಟಿ.

Read more about: prabhas allu arjun vijay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X