Pavithra Lokesh: ನರೇಶ್ ಜೊತೆ ಮದುವೆ ಆದ್ಮೇಲೆ ಪವಿತ್ರಾ ಲೋಕೇಶ್ ಬಳಿ ಇರುವ ಆಸ್ತಿ ಎಷ್ಟು ಗೊತ್ತೇ?

ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಇತ್ತೀಚೆಗೆ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕನ್ನಡ ಹಾಗೂ ತೆಲುಗಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಜನ ಮನ ಗೆದ್ದಿದ್ದರು. ತೆಲುಗಿನ ಹಿರಿಯ ನಟ ನರೇಶ್ ಜೊತೆಗಿನ ವಿವಾಹದ ಬಳಿಕ ಪವಿತ್ರಾ ಲೋಕೇಶ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಪರೂಪಕ್ಕೆ ತೆರೆಮೇಲೆ ಪ್ರತ್ಯಕ್ಷ ಆಗುತ್ತಿರುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ವೃತ್ತಿಜೀವನ ಆರಂಭಿಸಿದ ಪವಿತ್ರಾ ಲೋಕೇಶ್‌ಗೆ ಜನಪ್ರಿಯತೆ ಸಿಕ್ಕಿದ್ದು ತೆಲುಗು ಚಿತ್ರರಂಗದಲ್ಲಿ. ಪೋಷಕರ ಪಾತ್ರಗಳ ಮೂಲಕ ಪವಿತ್ರಾ ಲೋಕೇಶ್ ತೆಲುಗು ಮಂದಿಯ ಫೇವರಿಟ್ ನಟಿಯಾದರು. ಅಮ್ಮ ಹಾಗೂ ಕೌಟುಂಬಿಕ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಇವರ ತೆಲುಗು ಚಿತ್ರರಂಗದ ಭಾಗವಾಗಿ ಹೋದರು. ಜನಪ್ರಿಯತೆಯ ಉತ್ತುಂಗದಲ್ಲಿ ಇರುವಾಗಲೇ ನರೇಶ್‌ ಜೊತೆಗೆ ಸಂಬಂಧ ಅವರನ್ನು ವಿವಾದಕ್ಕೆ ಸಿಲುಕಿಸಿತ್ತು.

Pavithra Lokesh net worth details after marriage with Naresh is trending

ತೆಲುಗು ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಲಿವ್‌-ಇನ್‌ರಿಲೇಷನ್‌ಶಿಪ್‌ನಲ್ಲಿದ್ದರು. ಈ ವಿಷಯ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ತೆಲುಗು ನಟ ನರೇಶ್ ಮೂರನೇ ಪತ್ನಿ ರಮ್ಯಾ ಇವರಿಬ್ಬರ ವಿಷಯವನ್ನು ಮಾಧ್ಯಮಗಳಲ್ಲಿ ಪ್ರಸ್ತಾಪ ಮಾಡಿದ್ದರು. ಅದು ದೊಡ್ಡ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಎಲ್ಲಾ ವಿವಾದಗಳ ಹೊರತಾಗಿಯೂ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾಹವಾಗಿ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ಸದ್ಯ ತೆಲುಗು ಮಾಧ್ಯಮಗಳಲ್ಲಿ ಪವಿತ್ರಾ ಲೋಕೇಶ್ ಆಸ್ತಿ ಮೌಲ್ಯದ ಬಗ್ಗೆ ಚರ್ಚೆಗಳಾಗುತ್ತಿವೆ.

ತೆಲುಗು ನಟ ನರೇಶ್ ತೆಲುಗು ಚಿತ್ರರಂಗದ ಶ್ರೀಮಂತ ನಟರಲ್ಲಿ ಒಬ್ಬರು. ಅವರ ತಾಯಿ ವಿಜಯ ನಿರ್ಮಲಾ ಕೂಡ ಚಿತ್ರರಂಗದಲ್ಲಿ ನಟಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದರು. ಅವರು ಬಿಟ್ಟು ಹೋದ ಅಪಾರ ಆಸ್ತಿಯ ಒಡೆಯರು ನರೇಶ್. ತೆಲುಗು ಮಾಧ್ಯಮಗಳು ವರದಿ ಮಾಡಿದಂತೆ ನರೇಶ್ ಬಳಿ ಸುಮಾರು ಸಾವಿರ ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಹೀಗಾಗಿ ಪವಿತ್ರಾ ಲೋಕೇಶ್ ಈ ನಟನನ್ನು ಮದುವೆ ಆಗಿದ್ದು ದೊಡ್ಡ ಮಟ್ಟಕ್ಕೆ ಚರ್ಚೆಯಾಗಿತ್ತು.

Also Read
ಇದ್ದಿದ್ದು 12 ವರ್ಷ ಲಿವಿಂಗ್ ಟುಗೆದರ್..ಸುಚೇಂದ್ರ ಪ್ರಸಾದ್ ಜೊತೆ ಪವಿತ್ರಾ ಲೋಕೇಶ್ ಡಿವೋರ್ಸ್ ಏಕೆ? ಕಾನೂನು ಇದೆಯೇ?
ಇದ್ದಿದ್ದು 12 ವರ್ಷ ಲಿವಿಂಗ್ ಟುಗೆದರ್..ಸುಚೇಂದ್ರ ಪ್ರಸಾದ್ ಜೊತೆ ಪವಿತ್ರಾ ಲೋಕೇಶ್ ಡಿವೋರ್ಸ್ ಏಕೆ? ಕಾನೂನು ಇದೆಯೇ?

ನರೇಶ್ ಬಳಿ ಇರುವ ಆಸ್ತಿಗಾಗಿಯೇ ಪವಿತ್ರಾ ಲೋಕೇಶ್ ವಿವಾಹವಾದರು ಎಂಬ ಟೀಕೆಗಳೂ ಕೂಡ ಕೇಳಿ ಬಂದಿದ್ದವು. ಆದರೆ, ಪವಿತ್ರಾ ಲೋಕೇಶ್ ಇಂತಹ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈಗ ಇದ್ದಕ್ಕಿದ್ದ ಹಾಗೇ ಮದುವೆ ಬಳಿಕ ಪವಿತ್ರಾ ಲೋಕೇಶ್ ಅವರ ಆಸ್ತಿ ಬಗ್ಗೆ ಚರ್ಚೆಯಾಗುತ್ತಿದೆ. ತೆಲುಗು ಮಾಧ್ಯಮಗಳು ವರದಿ ಮಾಡಿರುವಂತೆ ಪವಿತ್ರಾ ಲೋಕೇಶ್ ತಮ್ಮ ವೃತ್ತಿ ಜೀವನದಿಂದ ಸುಮಾರು 70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆಂದು ವರದಿಯಾಗಿದೆ.

Pavithra Lokesh net worth details after marriage with Naresh is trending

ಇಷ್ಟೇ ಅಲ್ಲದೆ, ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳು, ಹಲವು ಕಡೆಗಳಲ್ಲಿ ಜಮೀನು ಖರೀದಿಸಿದ್ದಾರೆ. ಹೈದರಾಬಾದ್‌ನಲ್ಲಿ ಸ್ವಂತ ಮನೆ ಸೇರಿದಂತೆ ಅವರ ಹೆಸರು ಕೆಲವು ಆಸ್ತಿಗಳು ಇವೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇಷ್ಟು ಆಸ್ತಿಯನ್ನು ಸಿನಿಮಾ, ಸೀರಿಯಲ್‌ಗಳಿಂದಲೇ ಸಂಪಾಧಿಸಿದ್ದಾರೆಂದು ಹೇಳಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಮದುವೆ ಬಳಿಕ ಇವರ ಆಸ್ತಿಯಲ್ಲಿ ದಿಢೀರನೇ ದೊಡ್ಡ ಬದಲಾವಣೆ ಆದಂತೆ ಕಾಣುತ್ತಿಲ್ಲ.

ಅಂದ್ಹಾಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ 'ಸಮ್ಮೋಹನಂ' ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅಲ್ಲಿಂದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಅದು ಪ್ರೀತಿಗೆ ತಿರುಗಿತ್ತು. ಕೆಲವು ವರ್ಷಗಳ ಕಾಲ ಇಬ್ಬರೂ ಈ ಸಂಬಂಧವನ್ನು ಗೌಪ್ಯವಾಗಿಯೇ ಇಟ್ಟಿದ್ದರು. ನರೇಶ್ ಮೂರನೇ ಪತ್ನಿ ರಮ್ಯಾ ಅವರಿಂದ ಈ ಸಂಬಂಧ ಜಗತ್ತಿಗೆ ಗೊತ್ತಾಗುವಂತಾಗಿತ್ತು. ಈ ಜೋಡಿ ವಿವಾಹವಾಗಿದ್ದು, ತಮ್ಮದೇ ಪ್ರೇಮಕಥೆಯನ್ನು ಆಧರಿಸಿ 'ಮಳ್ಳಿ ಪೆಳ್ಳಿ' ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು. ಆದರೆ, ಸಿನಿಮಾ ನಿರೀಕ್ಷೆ ಮಾಡಿದಷ್ಟು ಸದ್ದು ಮಾಡಲಿಲ್ಲ. ಸದ್ಯ ಪವಿತ್ರಾ ಲೋಕೇಶ್ ಆಸ್ತಿ ದೊಡ್ಡ ಮಟ್ಟಕ್ಕೆ ಚರ್ಚೆಯನ್ನು ಹುಟ್ಟಾಕುತ್ತಿದೆ.

English summary
Pavithra Lokesh net worth details after marriage with Naresh is trending.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X