ಪವನ್ ಕಲ್ಯಾಣ್ ಪುತ್ರ ಅಕಿರಾ ಪಿಯಾನೋ ನುಡಿಸುವುದರಲ್ಲಿ ಎಕ್ಸ್‌ಪರ್ಟ್!
ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಈಗ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲೇ ಬ್ಯುಸಿ. ಒಂದ್ಕಡೆ ಸಿನಿಮಾ, ಇನ್ನೊಂದು ರಾಜಕೀಯ ಅಂತಿದ್ದರೂ, ಮಕ್ಕಳೊಂದು ಸಮಯ ಕಳೆಯುವುದನ್ನು ಮಾತ್ರ ಮರೆಯುವುದಿಲ್ಲ. ಪವನ್ ಕಲ್ಯಾಣ್ ತನ್ನ ಮೊದಲ ಪತ್ನಿ ರೇಣು ದೇಸಾಯಿ ಹಾಗೂ ಪುತ್ರ ಅಕಿರಾ ಜೊತೆಗಿನ ಫೋಟೊವೊಂದು ವೈರಲ್ ಆಗುತ್ತಿದೆ.
ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿ ಪುತ್ರ ಅಕಿರಾ ನಂದನ್ ಇತ್ತೀಚೆಗಷ್ಟೇ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದಾನೆ. ಇಂಡಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಪದವಿ ಪಡೆದಿದ್ದು, ಆ ಸಮಾರಂಭದಲ್ಲಿ ತಂದೆಯಾಗಿ ಪವನ್ ಕಲ್ಯಾಣ್ ಭಾಗವಹಿಸಿದ್ದರು. ಇದೇ ವೇಳೆ ತಾಯಿ ರೇಣು ದೇಸಾಯಿ ಹಾಗೂ ತಂಗಿ ಕೂಡ ಸಂತೋಷದ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಕಿರಾ ಪಿಯಾನೋ ನುಡಿಸಿದ ವಿಡಿಯೋ ಕೂಡ ವೈರಲ್ ಆಗಿದೆ.

ಪವನ್ ಪುತ್ರ ಪಿಯಾನೋ ಪ್ರಿಯ
ಗ್ರ್ಯಾಜುವೇಷನ್ ಡೇಯಂದು ಅಕಿರಾ ನಂದನ್ ಪಿಯಾನೋ ನುಡಿಸಿದ್ದರು. ರಾಜಮೌಳಿ ನಿರ್ದೇಶನದ RRR ಸಿನಿಮಾದ 'ದೋಸ್ತಿ' ಸಾಂಗ್ ಅನ್ನು ಗ್ರ್ಯಾಜುವೇಷನ್ ದಿನ ನುಡಿಸಲಾಗಿತ್ತು. ಈ ಸಾಂಗ್ ಅನ್ನು ರೇಣು ದೇಸಾಯಿ ರೆಕಾರ್ಡ್ ಮಾಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ " ಗ್ರ್ಯಾಜುವೇಷನ್ ಡೇಯಂದು ಅಕಿತಾ RRR ಸಿನಿಮಾದ ಹಾಡನ್ನು ನುಡಿಸುವ ಮೂಲಕ ತನ್ನ ಶಾಲೆಯ ಸ್ನೇಹಿತರಿಗೆ ಬೀಳ್ಕೊಡುಗೆ ನೀಡಿದ್ದಾನೆ. 15 ವರ್ಷದ ಶಾಲಾ ದಿನಗಳು ಮುಗಿಯಿತು. ನನ್ನ ಲಿಟಲ್ ಬೇಬಿ ತುಂಬಾ ಬೇಗನೇ ಬೆಳೆದು ಬಿಟ್ಟ." ಎಂದು ಬರೆದುಕೊಂಡಿದ್ದಾರೆ.

ಭೇಷ್ ಎಂದ ಪ್ರಿನ್ಸ್ ಫ್ಯಾನ್ಸ್!
ಅಕಿರಾ ಪಿಯಾನೋ ನುಡಿಸುವುದರಲ್ಲಿ ಎಕ್ಸ್‌ಪರ್ಟ್ ಅನ್ನೋದು ಇಡೀ ಚಿತ್ರರಂಗಕ್ಕೆ ಗೊತ್ತಿದೆ. ಇತ್ತೀಚೆಗೆ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಚಿತ್ರದ ಕಲಾವತಿ ಸಾಂಗ್ ಅನ್ನು ಅಕಿರಾ ನುಡಿಸಿದ್ದ. ಆ ಸಾಂಗ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಾಡನ್ನು ಕೇಳಿ ಮಹೇಶ್ ಬಾಬು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು.
ಮಾರ್ಷಿಯಲ್ ಆರ್ಟ್ಸ್ ಗೊತ್ತು
ಪವನ್ ಕಲ್ಯಾಣ್ ಪುತ್ರ ಅಕಿರಾ ನಂದನ್ ಕೇವಲ ಪಿಯಾನೋ ನುಡಿಸುವುದರಲ್ಲಷ್ಟೇ ಅಲ್ಲ. ಮಾರ್ಷಿಯಲ್ ಆರ್ಟ್ಸ್ ಕೂಡ ಕಲಿತಿದ್ದಾನೆ. ಈ ವಿದ್ಯೆಯಲ್ಲೂ ಎಕ್ಸ್‌ಪರ್ಟ್ ಆಗಿದ್ದು, ಸಿನಿಮಾ ಎಂಟ್ರಿ ಕೊಡುತ್ತಾನಾ? ಇಲ್ಲವಾ ಅನ್ನೋ ಸುಳಿವನ್ನು ಇನ್ನು ಬಿಟ್ಟುಕೊಟ್ಟಿಲ್ಲ. ಸದ್ಯ ಪವನ್ ಕಲ್ಯಾಣ್, ಪುತ್ರಿ ಆದ್ಯಾ ಹಾಗೂ ಮೊದಲ ಪತ್ನಿ ರೇಣು ದೇಸಾಯಿ ಜೊತೆಗಿರುವ ಫೋಟೊ ವೈರಲ್ ಆಗಿತ್ತು.

ಪವನ್ ಕೈಯಲ್ಲಿರೋ ಸಿನಿಮಾ ಯಾವುದು?
ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದರೂ, ಸಿನಿಮಾವನ್ನು ಬಿಟ್ಟಿಲ್ಲ. ಸದ್ಯ 'ಹರಿ ಹರ ವೀರ ಮಲ್ಲು' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಿಶ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಐತಿಹಾಸಿಕ ಸಿನಿಮಾವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರೊಂದಿಗೆ ಇನ್ನೂ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.


Click it and Unblock the Notifications











