'ಕಬ್ಜ' ಟ್ರೈಲರ್ ಲಾಂಚ್ ಕಥೆಯೇನು? ಉಪ್ಪಿ, ಕಿಚ್ಚನಿಗೆ ಕ್ಷಮೆ ಕೇಳಿದ ಪವನ್ ಕಲ್ಯಾಣ್!
ಉಪೇಂದ್ರ, ಸುದೀಪ್ ಸಿನಿಮಾ 'ಕಬ್ಜ'ವನ್ನು ಥಿಯೇಟರ್‌ನಲ್ಲೇ ಯಾಕೆ ನೋಡ್ಬೇಕು? 5 ಪ್ರಮುಖ ಕಾರಣಗಳಿವು! ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಗ್ರ್ಯಾಂಡ್ ರಿಲೀಸ್‌ಗೆ ವೇದಿಕೆ ಸಿದ್ಧವಾಗಿದೆ. ಈ ಬಾರಿ ಭೂಗತಲೋಕದ ಕಥೆಯನ್ನೇ ಇಟ್ಟುಕೊಂಡು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಬ್ಬರಿಸುವುದಕ್ಕೆ ರೆಡಿಯಾಗಿದೆ. ರಿಯಲ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟಿಸಿರೋ ಈ ಸಿನಿಮಾ ದೇಶದೆಲ್ಲಡೆ ಕುತೂಹಲವನ್ನು ಕೆರಳಿಸಿದ್ದು, ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸುವುದಕ್ಕೆ ಎದುರು ನೋಡುತ್ತಿದೆ. ಹೀಗಾಗಿ 'ಕಬ್ಜ'ದ ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು ಭರ್ಜರಿ ಪ್ರಚಾರ ಮಾಡುವುದಕ್ಕೆ ಮುಂದಾಗಿದ್ದಾರೆ.
ಕರ್ನಾಟಕ, ಆಂಧ್ರ, ಮುಂಬೈ ಅಂತ ದೊಡ್ಡ ದೊಡ್ಡ ಇವೆಂಟ್‌ಗಳನ್ನು ಮಾಡಿ ಭರ್ಜರಿಯಾಗಿ ಪ್ರಚಾರ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯ ಕಬ್ಬ ಸಿನಿಮಾ ತಂಡ ಟ್ರೈಲರ್ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. ವಿಶ್ವದಾದ್ಯಂತ ಅತೀ ಕುತೂಹಲದಿಂದ ಕಾದು ಕೂತಿರುವ 'ಕಬ್ಜ' ಸಿನಿಮಾ ಇದೇ ಮಾರ್ಚ್ 4ರಂದು ರಿಲೀಸ್ ಆಗುತ್ತಿರುವ ಎಲ್ಲಾ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡಲಾಗುತ್ತಿದೆ. 'ಕೆಜಿಎಫ್' ಬಳಿಕ ಮತ್ತೆ ಎಲ್ಲರಲ್ಲೂ ಕುತೂಹಲ ಕೆರಳಿಸಿರುವ ಸಿನಿಮಾ 'ಕಬ್ಜ' ಟ್ರೈಲರ್ ಮೇಲೆ ಎಲ್ಲರ ಸಿನಿಮಾದ ಭವಿಷ್ಯ ನಿಂತಿದೆ.

ಈಗಾಗಲೇ 'ಕಬ್ಜ' ಸಿನಿಮಾದ ಟೀಸರ್ ಹಾಗೂ ಹಾಡುಗಳು ಸಿನಿಪ್ರಿಯರ ಮನಗೆದ್ದಿದೆ. ಜಗತ್ತಿನಾದ್ಯಂತ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಜನಪ್ರಿಯವಾಗಿದೆ. ಬಹಳ ದಿನಗಳಿಂದಲೂ 'ಕಬ್ಜ' ಟ್ರೈಲರ್ ಯಾವಾಗ ಅಂತ ಅಭಿಮಾನಿಗಳು ಪ್ರಶ್ನೆ ಮಾಡುತ್ತಲೇ ಇದ್ದರು. ಆದರೆ, ನಿರ್ದೇಶಕ ಆರ್ ಚಂದ್ರು ಮಾತ್ರ ಆ ಬಗ್ಗೆ ಸುಳಿವನ್ನು ಬಟ್ಟುಕೊಟ್ಟಿಲ್ಲ. ಈಗ ಕೊನೆಗೂ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದು, ಕುತೂಹಲದಿಂದ ಕಾದು ಕೂತಿದ್ದವರಿಗೆ ಸರ್ಪ್ರೈಸ್ ನೀಡಲು ಮುಂದಾಗಿದ್ದಾರೆ. ಮಾರ್ಚ್ 4ರಂದು ಶನಿವಾರ ಸಂಜೆ 5.02ಕ್ಕೆ ಎಲ್ಲಾ ಭಾಷೆಗಳಲ್ಲೂ ಟ್ರೈಲರ್ ರಿಲೀಸ್ ಆಗಲಿದೆ.
'ಕಬ್ಜ' ಟ್ರೈಲರ್ ಬಗ್ಗೆ ಆರ್ ಚಂದ್ರು ಹೇಳಿದ್ದೇನು?
ಕೆಲವು ದಿನಗಳಿಂದ 'ಕಬ್ಜ' ಟ್ರೈಲರ್ ಅನ್ನು ಮುಂಬೈನಲ್ಲಿ ರಿಲೀಸ್ ಮಾಡುವುದಕ್ಕೆ ಆರ್ ಚಂದ್ರು ಸ್ಕೆಚ್ ಹಾಕಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದ್ರೀಗ ಟ್ರೈಲರ್ ಲಾಂಚ್ ಈವೆಂಟ್ ಮುಂಬೈನಲ್ಲಿ ಕ್ಯಾನ್ಸಲ್ ಆಗಿದ್ದು, ನೇರವಾಗಿ ಯೂಟ್ಯೂಬ್‌ನಲ್ಲಿಯೇ ರಿಲೀಸ್ ಮಾಡುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಆರ್ ಚಂದ್ರು ಅಧಿಕೃತವಾಗಿ ಫಿಲ್ಮಿಬೀಟ್‌ಗೆ ಮಾಹಿತಿಯನ್ನು ನೀಡಿದ್ದಾರೆ.

'ಕಬ್ಜ' ಟ್ರೈಲರ್ ಲಾಂಚ್ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇದರೊಂದಿಗೆ ವಿದೇಶದ ನಾಲ್ಕು ಭಾಷೆಗಳಲ್ಲಿ ಸಬ್‌ಟೈಟಲ್ ಹಾಕಿ ರಿಲೀಸ್ ಮಾಡಲಾಗುತ್ತಿದೆ ಎಂದು ಆರ್ ಚಂದ್ರ ಹೇಳಿದ್ದಾರೆ. " ಟ್ರೈಲರ್ ಲಾಂಚ್‌ಗೆ ಅಂತ ಇವೆಂಟ್ ಮಾಡುತ್ತಿಲ್ಲ. ಮೊದಲು ಟ್ರೈಲರ್ ಅನ್ನು 5 ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡುತ್ತಿದ್ದೇವೆ. ಮಾರ್ಚ್ 11ರ ನಂತರ ಎಲ್ಲಾ ಕಡೆ ಒಂದೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಆಗ ಎಲ್ಲಾ ಕಡೆಗೂ ಹೋಗಿ ಬರುತ್ತೇವೆ" ಎಂದು ಆರ್ ಚಂದ್ರು ಮಾಹಿತಿಯನ್ನು ನೀಡಿದ್ದಾರೆ.
ಉಪ್ಪಿ, ಕಿಚ್ಚನಿಗೆ ಪವನ್ ಕಲ್ಯಾಣ್ ಕ್ಷಮೆ.. ಆರ್ ಚಂದ್ರು ಹೇಳಿದ್ದೇನು?
ನಿರ್ದೇಶಕ ಆರ್ ಚಂದ್ರು ಶಿಡ್ಲಘಟ್ಟದಲ್ಲಿ 'ಕಬ್ಜ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಪವನ್ ಕಲ್ಯಾಣ್ ಅವರಿಗೆ ಆಹ್ವಾನವನ್ನು ನೀಡಿದ್ದರು. ಆಗ ಅವರ ಮ್ಯಾನೇಜರ್ ಅಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದರು. ಈ ವೇಳೆ ಅಲ್ಲಿಗೆ ಹೋದಾಗ "ರಾಜಕೀಯ ಹಾಗೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ. ಸ್ವಲ್ಪ ಬೇಗ ಹೇಳಿದ್ದರೆ, ನಾನು ಖಂಡಿತವಾಗಿಯೂ ಬರುತ್ತಿದೆ. ಮುಂದೆ ಯಾವುದೇ ಕಾರ್ಯಕ್ರಮವಿದ್ದರೂ, 10 ಮುಂಚೆ ಹೇಳಿದರೆ ಸಾಕು ಬರುತ್ತೇನೆ." ಎಂದು ಭರವಸೆ ನೀಡಿದ್ದಾರೆಂದು ಆರ್ ಚಂದ್ರು ಹೇಳಿದ್ದಾರೆ.
ಇದೇ ವೇಳೆ 'ಕಬ್ಜ' ಸಿನಿಮಾದ ಟೀಸರ್ ಹಾಗೂ ಸಾಂಗ್‌ಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಇಬ್ಬರು ಕಾರ್ಯಕ್ರಮಕ್ಕೆ ಬರಲಾಗದಿದ್ದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ ಎಂದು ಟಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಏನೇ ಇದ್ದರೂ 'ಕಬ್ಜ' ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲೂ ಗಮನ ಸೆಳೆಯುತ್ತಿದೆ.


Click it and Unblock the Notifications











