ತೆಲುಗು ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಕನ್ನಡ ಪವರ್‌ಸ್ಟಾರ್ ಅಪ್ಪು ನೆನಪಲ್ಲಿ ನೇತ್ರದಾನ

ಕನ್ನಡಕ್ಕೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೇಗೋ.. ಹಾಗೇ ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್. ಇಬ್ಬರ ವಯಸ್ಸಿನ ಅಂತರ ಕೂಡ ದೊಡ್ಡದೇನಿಲ್ಲ. ಪುನೀತ್ ರಾಜ್‌ಕುಮಾರ್‌ಗಿಂತ ಕೇವಲ ಪವನ್ ಕಲ್ಯಾಣ್ ಕೇವಲ 4 ವರ್ಷ ದೊಡ್ಡವರಷ್ಟೇ. ಸಿನಿಪ್ರೇಮಿಗಳ ಪಾಲಿಗೆ ಇಬ್ಬರೂ ಪವರ್‌ಸ್ಟಾರ್‌ಗಳೇ. ಇವರ ಸಿನಿಮಾ ನೋಡವುದಕ್ಕೆ ಇಬ್ಬರ ಅಭಿಮಾನಿಗಳೂ ಕಾದು ಕೂರುತ್ತಿದ್ದರು. ಅಪ್ಪು ಅಗಲಿದೆ ನೋವಿನಲ್ಲೇ ಪವನ್ ಕಲ್ಯಾಣ್ ಅಭಿಮಾನಿಗಳು ಸಮಾಜ ಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.

ಪವನ್ ಕಲ್ಯಾಣ್ ತೆಲುಗಿ ಸೂಪರ್‌ಸ್ಟಾರ್. ಇವರ ಸಿನಿಮಾಗಳನ್ನು ನೋಡುವುದಕ್ಕೆ ಅಭಿಮಾನಿಗಳು ಜೀವ ಬೇಕಾದರೂ ನೀಡುತ್ತಾರೆ. ಅಂತಹ ಹಾರ್ಡ್ ಕೋರ್ ಫ್ಯಾನ್ಸ್ ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್‌ಗಿದ್ದಾರೆ. ಅವರಿಗೆ ಕನ್ನಡದ ಪವರ್‌ಸ್ಟಾರ್ ಮೇಲೂ ಅಭಿಮಾನ ಹೆಚ್ಚು. ಹೀಗಾಗಿ ನೇತ್ರದಾನ ಹಾಗೂ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಹಾಗಿದ್ದರೆ, ಎಲ್ಲಿ? ಯಾವಾಗ? ಅನ್ನುವುದರ ಮಾಹಿತಿಗಾಗಿ ಮುಂದೆ ಓದಿ.

ಅಪ್ಪು ನೆನಪಿಗಾಗಿ ಪವನ್ ಕಲ್ಯಾಣ್ ಫ್ಯಾನ್ಸ್ ನೇತ್ರದಾನ

ಅಪ್ಪು ನೆನಪಿಗಾಗಿ ಪವನ್ ಕಲ್ಯಾಣ್ ಫ್ಯಾನ್ಸ್ ನೇತ್ರದಾನ

ವಿಶ್ವದ ಮೂಲೆ ಮೂಲೆಯಲ್ಲಿರುವ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಈಗಾಗಲೇ ತಮ್ಮ ನೆಚ್ಚಿನ ನಟನ ಅಗಲಿಕೆ ನೆನಪಿನಲ್ಲಿ ತಮ್ಮ ಅಭಿಮಾನ ತೋರುತ್ತಿದ್ದಾರೆ. ರಕ್ತದಾನ, ನೇತ್ರದಾನ ಶಿಬಿರಗಳನ್ನು ನಡೆಸುತ್ತಿದ್ದಾರೆ. ಈಗ ತೆಲುಗು ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಸರದಿ. ಕೋಲಾರದ ಚಿಂತಾಮಣಿಯ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಹಾಗೂ ನೇತ್ರದಾನಕ್ಕೆ ಮುಂದಾಗಿದ್ದಾರೆ. ಡಿಸೆಂಬರ್ 6ರಂದು ಅಪ್ಪು ನೆನಪಿನಲ್ಲಿ ನಡೆಯುತ್ತಿರುವ ಈ ಮಹತ್ ಕಾರ್ಯದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

ಅಪ್ಪು ಸುದ್ದಿ ಕೇಳಿ ಶಾಕ್ ಆಗಿದ್ದ ಪವನ್ ಕಲ್ಯಾಣ್

ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್ ಅಗಲಿದ ದಿನ. ಈ ಸುದ್ದಿ ಪವನ್ ಕಲ್ಯಾಣ್‌ಗೆ ಮುಟ್ಟುತ್ತಿದ್ದಂತೆ ಶಾಕ್ ಆಗಿದ್ದರು. " ಶ್ರೀ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ಮತ್ತು ದುರದೃಷ್ಟಕರ ನಿಧನದಿಂದ ನನಗೆ ಅತೀವ ದುಃಖವಾಗಿದೆ. 'ಬೆಟ್ಟದ ಹೂವು' ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ ಅವರ ಪಾತ್ರ ನನ್ನ ಮನಸ್ಸಿನಲ್ಲಿ ಆಳವಾಗಿ ಅಚ್ಚೊತ್ತಿದೆ. ಅಂದಿನಿಂದ ನಾನು ಅವರನ್ನು ಮೆಚ್ಚುತ್ತಿದ್ದೇನೆ." ಟ್ವಿಟರ್‌ನಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದರು.

ಶಿವಣ್ಣ ಅಪ್ಪು ಕುಟುಂಬ ಪವನ್ ಕಲ್ಯಾಣ್ ಧೈರ್ಯ

ಮತ್ತೊಂದು ಟ್ವೀಟ್ ಮಾಡಿ ಶಿವಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಪವನ್ ಕಲ್ಯಾಣ್ ಸಾಂತ್ವನ ಹೇಳಿದ್ದರು. " ನನ್ನ ಆತ್ಮೀಯ ಸಹೋದರ ಪುನೀತ್ ಅವರ ಅಂತಿಮ ಯಾತ್ರೆಯನ್ನು ಜಾಗೃತ ನಡೆಸಿಕೊಡುವಂತೆ ಆ ಪರಮಾತ್ಮನಲ್ಲಿ ಭಾರವಾದ ಹೃದಯದಿಂದ ಪ್ರಾರ್ಥಿಸುತ್ತೇನೆ. ಇದೇ ವೇಳೆ ಭಾರವಾದ ಹೃದಯದಿಂದ ಶ್ರೀ ಶಿವರಾಜ್‌ಕುಮಾರ್ ಹಾಗೂ ಶ್ರೀ ಪುನೀತ್ ರಾಜ್‌ಕುಮಾರ್ ಕುಟುಂಬ ಸದಸ್ಯರಿಗೆ ಭಾರವಾದ ಹೃದಯದಿಂದ ಸಂತಾಪ ಸೂಚಿಸುತ್ತೇನೆ." ಎಂದು ಎರಡನೇ ಬಾರಿ ಟ್ವೀಟ್ ಮಾಡಿದ್ದರು.

ಟಾಲಿವುಡ್‌ನಲ್ಲಿ ನಾನು ಪವಸ್ಟಾರ್ ಅಲ್ಪ ಎಂದಿದ್ದ ಅಪ್ಪು

ಟಾಲಿವುಡ್‌ನಲ್ಲಿ ನಾನು ಪವಸ್ಟಾರ್ ಅಲ್ಪ ಎಂದಿದ್ದ ಅಪ್ಪು

ಪುನೀತ್ ನಟಿಸಿದ ಕೊನೆಯ ಸಿನಿಮಾ 'ಯುವರತ್ನ' ತೆಲುಗಿನಲ್ಲೂ ತೆರೆಕಂಡಿತ್ತು. ಆಗ ಸಂದರ್ಶನದಲ್ಲಿ "ನಾನು ಇಲ್ಲಿ ಪವರ್‌ಸ್ಟಾರ್ ಅಲ್ಲ. ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರು ಮಾತ್ರ ಪವರ್ ಸ್ಟಾರ್. ಇದನ್ನು ತ್ಯಾಗ ಅಥವಾ ಬೇರೆ ಏನೋ ಅಂತ ಅಂದುಕೊಂಡಿಲ್ಲ. ಇದು ನನ್ನ ಜವಾಬ್ದಾರಿ, ನಾನು ಪವನ್ ಕಲ್ಯಾಣ್ ಹಾಗೂ ಅವರ ಅಭಿಮಾನಿಗಳ ಭಾವನೆಗಳನ್ನು ಗೌರವಿಸುತ್ತೇನೆ. ಹೀಗಾಗಿ ತೆಲುಗಿನ ಯುವರತ್ನ ಶೀರ್ಷಿಕೆಯಲ್ಲಿ ನನ್ನ ಟೈಟಲ್ ಇರುವುದಿಲ್ಲ." ಎಂದಿದ್ದರು ಅಪ್ಪು. ಪವನ್ ಕಲ್ಯಾಣ್ ಹಾಗೂ ಅವರ ಅಭಿಮಾನಿಗಳ ಮೇಲೆ ಅಪ್ಪು ಇಟ್ಟಿದ್ದ ಇದೇ ಅಭಿಮಾನಿದ ಮೇಲೆ ಚಿಂತಾಮಣಿಯಲ್ಲಿ ನೇತ್ರದಾನ ಹಾಗೂ ರಕ್ತದಾನ ಶಿಬಿರವನ್ನು ಪವನ್ ಕಲ್ಯಾಣ್ ಫ್ಯಾನ್ಸ್ ಹಮ್ಮಿಕೊಂಡಿದ್ದಾರೆ.

More from Filmibeat

English summary
Pawan Kalyan fans from Kolar Chintamani organizing eye and blood donation camp to remember Puneeth Rajkumar. It will be held at december 06th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X