'ಪ್ರಾಜೆಕ್ಟ್ ಕೆ' ಸೆಟ್ಟಲ್ಲಿ ಪ್ರಭಾಸ್, ಪವನ್ ಕಲ್ಯಾಣ್, ಅಮಿತಾಬ್ ಬಚ್ಚನ್: ಈ ಭೇಟಿಯ ಗುಟ್ಟೇನು?
ಸೂಪರ್‌ಸ್ಟಾರ್‌ಗಳು ಒಟ್ಟಿಗೆ ಸೇರುವುವುದು ತೀರಾ ವಿರಳ. ಎಲ್ಲವರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಆದರೂ, ಪ್ರಭಾಸ್, ಪವನ್ ಕಲ್ಯಾಣ್ ಹಾಗೂ ಅಮಿತಾಬ್ ಬಚ್ಚನ್ ಮೂವರು ದಿಗ್ಗಜರು ಒಂದೇ ಸಿನಿಮಾ ಸೆಟ್ಟಿನಲ್ಲಿ ಒಟ್ಟಿಗೆ ಸೇರಿದ್ದಾರೆ. ಈ ವಿಷಯ ಮುಟ್ಟುತ್ತಿದ್ದಂತೆ ಟಾಲಿವುಡ್‌ನಲ್ಲಿ ಹೊಸ ಸಂಚಲನ ಶುರುವಾಗಿದೆ. ಈ ಮೂವರು ಸೂಪರ್‌ಸ್ಟಾರ್‌ಗಳು ಒಂದೇ ಸೆಟ್ಟಿನಲ್ಲಿ ಏನು ಮಾಡುತ್ತಿದ್ದಾರೆ? ಯಾಕಾಗಿ ಒಟ್ಟಿಗೆ ಸೇರಿದರು ಅನ್ನುವ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಇದೆ.
ಪ್ರಭಾಸ್ ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲಿ ಬ್ಯುಸಿ. ಇತ್ತ ಅಮಿತಾಬ್ ಬಚ್ಚನ್ ಕೂಡ ಸಿನಿಮಾ, ಜಾಹೀರಾತು ಅಂತ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಪವನ್ ಕಲ್ಯಾಣ್ ಕೂಡ 'ಭೀಮ್ಲಾ ನಾಯಕ್' ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಈ ಮೂವರು ನಟಿಯರು ಒಟ್ಟಿಗೆ ಭೇಟಿ ಮಾಡಿದ್ದಾರೆ. ಈ ವಿಷಯ ಹರಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗುತ್ತಿದೆ. ಅಸಲಿಗೆ ಮೂವರು ಸ್ಟಾರ್ ನಟಿ ಒಟ್ಟಿಗೆ ಭೇಟಿ ಮಾಡಿದ್ದೇಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.
Recommended Video

ಪ್ರಭಾಸ್, ಪವನ್ ಕಲ್ಯಾಣ್, ಅಮಿತಾಬ್ ಭೇಟಿ
ಯಂಗ್ ರೆಬೆಲ್ ಪ್ರಭಾಸ್, ಪವರ್‌ಸ್ಟಾರ್ ಪವನ್ ಕಲ್ಯಾಣ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಮೂವರು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭೇಟಿಯಾಗಿದ್ದಾರೆ. ಪ್ರಭಾಸ್ ನಟಿಸುತ್ತಿರುವ 'ಪ್ರಾಜೆಕ್ಟ್ ಕೆ' ಸೆಟ್ಟಿನಲ್ಲಿ ಈ ಮೂವರು ದಿಗ್ಗಜರು ಭೇಟಿಯಾಗಿದ್ದಾರೆ. ಕೆಲವ ಹೊತ್ತು ತೆಲುಗು ಚಿತ್ರರಂಗದ ಬಗ್ಗೆ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಪ್ರಭಾಸ್, ಪವನ್ ಹಾಗೂ ಅಮಿತಾಬ್ ಭೇಟಿ ವಿಷಯ ಹೊರ ಬೀಳುತ್ತಿದ್ದಂತೆ ಮೂವರು ಒಟ್ಟಿಗೆ ಸಿನಿಮಾ ಮಾಡುತ್ತಿರಬಹುದೆಂಬ ಸುದ್ದಿ ಹರಿದಾಡಲು ಆರಂಭಿಸಿತ್ತು. ಆದರೆ, ಇವರು ಸಿನಿಮಾಗಾಗಿ ಭೇಟಿ ಮಾಡಿಲ್ಲ ಅನ್ನುವ ರಹಸ್ಯ ಕೊನೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಭಾಸ್, ಪವನ್, ಅಮಿತಾಬ್ ಭೇಟಿ ಮಾಡಿದ್ದೇಕೆ?
ನಾಗ ಅಶ್ವಿನ್ ನಿರ್ದೇಶಿಸುತ್ತಿರುವ 'ಪ್ರಾಜೆಕ್ಟ್ ಕೆ' ಸಿನಿಮಾದ ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಈ ಸಿನಿಮಾದ ಚಿತ್ರೀಕರಣದಲ್ಲಿ ಪ್ರಭಾಸ್ ಹಾಗೂ ಅಮಿತಾಬ್ ಬಚ್ಚನ್ ಭಾಗವಹಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಪವನ್ ಕಲ್ಯಾಣ್ 'ಪ್ರಾಜೆಕ್ಟ್ ಕೆ' ಶೂಟಿಂಗ್ ಸ್ಟಾಟ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಮಿತಾಬ್, ಪ್ರಭಾಸ್ ಹಾಗೂ ಪವನ್ ಮೂವರು ಒಟ್ಟಿಗೆ ಕೂತು ಉಪಹಾರ ಸೇವಿಸಿ, ಕೆಲ ಹೊತ್ತು ತೆಲುಗು ಚಿತ್ರರಂಗದ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ರಾಮೋಜಿ ಸಿಟಿಯಲ್ಲಿ ಪವನ್ ಶೂಟಿಂಗ್
ಇನ್ನೊಂದು ಮೂಲಗಳ ಪ್ರಕಾರ, ಪ್ರಭಾಸ್ ಹಾಗೂ ಅಮಿತಾಬ್ 'ಪ್ರಾಕೆಜ್ಟ್ ಕೆ' ಶೂಟಿಂಗ್ ಮಾಡುತ್ತಿದ್ದರು. ಮತ್ತೊಂದು ಕಡೆ ಪವನ್ ಕಲ್ಯಾಣ್ ರಾಮೋಜಿ ಫಿಲ್ಮ್ ಸಿಟಿಯಲ್ಲಿಯೇ ಭೀಮ್ಲಾ ನಾಯಕ್ ಚಿತ್ರದಲ್ಲಿ ಉಳಿದುಕೊಂಡಿದ್ದ ಕೆಲವು ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಮಿತಾಬ್ ಬಚ್ಚನ್ ಭೇಟಿ ಮಾಡಲು ತೆರಳಿದ್ದಾರೆ ಎನ್ನಲಾಗಿದೆ. ಹಾಗಂತ ಪವನ್ ಕಲ್ಯಾಣ್ ಹಲವು ಭಾರಿ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಮೂವರ ಭೇಟಿ ಆಕಸ್ಮಿಕ ಅಂತಲೂ ಹೇಳುತ್ತಿದ್ದಾರೆ.

ಮೂವರು ದಿಗ್ಗಜರೂ ಸಿನಿಮಾದಲ್ಲಿ ಬ್ಯುಸಿ
ಪ್ರಭಾಸ್, ಪವನ್ ಕಲ್ಯಾಣ್ ಹಾಗೂ ಅಮಿತಾಬ್ ಬಚ್ಚನ್ ಮೂವರೂ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್', ಓಂ ರಾವತ್ ನಿರ್ದೇಶನ ಆದಿಪುರುಷ್ ಹಾಗೂ ನಾಗ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ಪವನ್ ಕಲ್ಯಾಣ್ 'ಭೀಮ್ಲಾ ನಾಯಕ್' ಫೆಬ್ರವರಿ 25ಕ್ಕೆ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಒಂದೆರಡಲ್ಲ ಬರೋಬ್ಬರಿ 6 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











