OG Movie:14 ವರ್ಷಗಳಲ್ಲಿ 'ಎ' ಸರ್ಟಿಫಿಕೇಟ್ ಪಡೆದ ಮೊದಲ ಪವನ್ ಸಿನಿಮಾ ಕರ್ನಾಟಕದಲ್ಲಿ ಮಾಡಿದ ಬ್ಯುಸಿನೆಸ್ ಎಷ್ಟು?

ಟಾಲಿವುಡ್‌ನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತೊಂದು ಸಿನಿಮಾ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಆಂಧ್ರ-ತೆಲಂಗಾಣದಲ್ಲಿ ಪವನ್ ಸಿನಿಮಾಗೆ ಕ್ರೇಜ್ ಮುಗಿಲು ಮುಟ್ಟಿದೆ. ಸಿನಿಮಾ ಬಿಡುಗಡೆಗೆ ಕೆಲವು ಗಂಟೆಗಳು ಉಳಿದಿರುವಾಗಲೇ ಥಿಯೇಟರ್ ಮುಂದೆ ಸಂಭ್ರಮಾಚರಣೆ ಶುರುವಾಗಿದೆ. RRR ಸಿನಿಮಾ ನಿರ್ಮಿಸಿದ್ದ ಡಿವಿವಿ ದಾನಯ್ಯ ನಿರ್ಮಿಸಿರುವ ಹಾಗೂ 'ಸಾಹೋ' ನಿರ್ದೇಶಕ ಸುಜಿತ್ ಆಕ್ಷನ್ ಕಟ್ ಹೇಳಿರುವ ಸಿನಿಮಾ ಸಂಚಲನ ಮೂಡಿಸುತ್ತಿದೆ.

ಟಾಲಿವುಡ್ ಮೂಲಗಳ ಪ್ರಕಾರ, 'ಓಜಿ' (OG) ಪವನ್ ಕಲ್ಯಾಣ್ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ಸಿನಿಮಾವೆಂದು ಹೇಳಲಾಗುತ್ತಿದೆ. ಸುಮಾರು 172 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ 'ಓಜಿ' ಪ್ರೀ ರಿಲೀಸ್ ಬ್ಯುಸಿನೆಸ್ ಬಗ್ಗೆನೂ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕರ್ನಾಟಕದಲ್ಲೂ ಈ ಸಿನಿಮಾವನ್ನು ಬಾರೀ ಮೊತ್ತಕ್ಕೆ ಕೊಂಡುಕೊಂಡಿದ್ದಾರೆಂಬ ಮಾಹಿತಿ ಇದೆ.

Pawan Kalyan Priyanka Mohan Emraan Hashmi movie They Call Him OG Karnataka Business Report

ಪವನ್ ಕಲ್ಯಾಣ್ ಸಿನಿಮಾ ಅಂದರೆ ಸಹಜವಾಗಿ ಹೈಪ್ ಕ್ರಿಯೇಟ್ ಆಗುತ್ತೆ. ಅದರಲ್ಲೂ ಕರ್ನಾಟಕದಲ್ಲಿ ಬೆಂಗಳೂರು ಹಾಗೂ ತೆಲುಗು ಮಂದಿ ಇರುವ ಏರಿಯಾಗಳಲ್ಲಿ ಸಿನಿಮಾಗೆ ಬೇಡಿಕೆ ಇದೆ. ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಅನ್ನು ಮಾಡುತ್ತವೆ. ಈ ಕಾರಣಕ್ಕೆ ಸಿನಿಮಾ ಕರ್ನಾಟಕದಲ್ಲೂ ಒಳ್ಳೆಯ ಬ್ಯುಸಿನೆಸ್ ಆಗಿದೆ ಎಂದು ಹೇಳಾಗುತ್ತಿದೆ. ಅಷ್ಟಕ್ಕೂ 'ಓಜಿ' ಸಿನಿಮಾವನ್ನು ಕರ್ನಾಟಕದಲ್ಲಿ ಖರೀದಿಸಿದ್ದು ಯಾರು? ಎಷ್ಟು ಮೊತ್ತಕ್ಕೆ ಸಿನಿಮಾವನ್ನು ಖರೀದಿ ಮಾಡಲಾಗಿದೆ? ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಮೊತ್ತಕ್ಕೆ ಖರೀದಿ? ತಿಳಿಯುವುದಕ್ಕೆ ಮುಂದೆ ಓದಿ.

'ಓಜಿ' (OG) ಬಜೆಟ್ ಎಷ್ಟು?

'ಹರಿಹರ ವೀರಮಲ್ಲು' ಸಿನಿಮಾದ ಹೀನಾಯ ಸೋಲಿನ ಬಳಿಕ 'ಓಜಿ' ರಿಲೀಸ್ ಆಗುತ್ತಿದೆ. ಕೆಲವು ತಿಂಗಳ ಅಂತರದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಆರಂಭದಲ್ಲಿ ಹೆಚ್ಚೇನು ನಿರೀಕ್ಷೆಯಿರಲಿಲ್ಲ. ಆದರೆ, ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಎನ್ನುವಾಗಲೇ ದಿಢೀರನೇ ಹೈಪ್ ಪಡೆದುಕೊಂಡಿದೆ. ಇನ್ನು ಡಿವಿವಿ ದಾನಯ್ಯ ಈ ಸಿನಿಮಾವನ್ನು ಸುಮಾರು ₹172 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ಜೋರಾಗಿಯೇ ಆಗಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಬ್ಯುಸಿನೆಸ್ ಎಷ್ಟು?

ಪವನ್ ಕಲ್ಯಾಣ್ ಅವರ 'ಓಜಿ (OG)' ಸಿನಿಮಾವನ್ನು ಕರ್ನಾಟಕದಲ್ಲಿ ಸ್ವಾಗತ್ ಎಂಟರ್‌ಪ್ರೈಸಸ್‌ ಖರೀದಿ ಮಾಡಿದ್ದಾರೆ. ಆರಂಭದಲ್ಲಿ ಈ ಸಿನಿಮಾದ ವಿತರಣೆ ಯಾರು ಮಾಡುತ್ತಾರೆಂಬ ಗೊಂದಲವಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಈ ಗೊಂದಲ ಬಗೆಹರಿದಿದೆ. 'ಓಜಿ (OG)' ದಾನಯ್ಯರಿಂದ ಕರ್ನಾಟಕದ ವಿತರಣೆ ಹಕ್ಕನ್ನು ಸುಮಾರು 4.5 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.

Pawan Kalyan Priyanka Mohan Emraan Hashmi movie They Call Him OG Karnataka Business Report

ಯಾವ್ಯಾವ ಏರಿಯಾಗೆ ಎಷ್ಟೆಷ್ಟಕ್ಕೆ ಸೇಲ್?

ಪವನ್ ಕಲ್ಯಾಣ್ ಸಿನಿಮಾ ಕರ್ನಾಟಕದಲ್ಲಿ ಒಂದು ರೇಂಜ್‌ಗೆ ಹೈಪ್ ಇರುತ್ತೆ. 'ಓಜಿ (OG)' ಕೂಡ ಹಾಗೇ ಹೈಪ್ ಸಿಕ್ಕಿದೆ. ಬೆಂಗಳೂರಿನಲ್ಲಿಯೂ ಅಡ್ವಾನ್ಸ್ ಬುಕಿಂಗ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೇ ಒಂದೂವರೆಯಿಂದ ಎರಡು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಏರಿಯಾಗಳ ಆಧಾರದ ಮೇಲೆ ಸಿನಿಮಾವನ್ನು ಮಾರಾಟ ಮಾಡಲಾಗಿದೆ. ಕರ್ನಾಟಕದ ವಿತರಕರಲ್ಲಿ ಆಗುತ್ತಿರುವ ಚರ್ಚೆಯ ಪ್ರಕಾರ, ಈ ಏರಿಯಾಗಳಲ್ಲಿ ಇಷ್ಟು ಮೊತ್ತಕ್ಕೆ ಸಿನಿಮಾ ಬಿಕರಿಯಾಗಿದೆ.

ಕರ್ನಾಟಕದ ಏರಿಯಾ ಬ್ಯುಸಿನೆಸ್

ಬೆಂಗಳೂರು ಸಿಟಿ ₹2 ಕೋಟಿ
ಕೋಲಾರ,ತುಮಕೂರು ₹1.80 ಕೋಟಿ
ಎಂಎಂಸಿಎಚ್ ₹25 ಲಕ್ಷ
ಹುಬ್ಬಳ್ಳಿ ₹20 ಲಕ್ಷ
ಚಿತ್ರದುರ್ಗ, ದಾವಣಗೆರೆ ₹15 ಲಕ್ಷ

ಮೊದಲ ದಿನದ ಲೆಕ್ಕಾಚಾರವೇನು?

ಪವನ್‌ ಕಲ್ಯಾಣ್ ಸಿನಿಮಾವನ್ನು ಸುಮಾರು 175ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗಿದ್ದು, ಮೊದಲ ದಿನ ಕರ್ನಾಟಕದಲ್ಲಿ 2 ರಿಂದ 3 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಆಗಬಹುದೆಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಸರ್ಕಾರ ₹200 ಟಿಕೆಟ್ ದರ ಜಾರಿಗೆ ತಂದಿತ್ತು. ಈ ವೇಳೆ ಮೊದಲ ದಿನದ ಅಡ್ವಾನ್ಸ್ ಬುಕಿಂಗ್ ಅನ್ನು ಓಪನ್ ಮಾಡಲಾಗಿತ್ತು. ಆದ್ರೀಗ ಹೈಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ತಡೆ ಹಿಡಿದಿದೆ. ಒಂದು ವೇಳೆ ಹೈ ಕೋರ್ಟ್ ಆದೇಶ ಬಳಿಕ ಅಡ್ವಾನ್ಸ್ ಬುಕಿಂಗ್ ಒಪನ್ ಮಾಡಿದ್ದರೆ, ಟಿಕೆಟ್ ಬೆಲೆ ಏರಿಕೆಯಾಗುತ್ತಿತ್ತು. ಜೊತೆಗೆ ಕಲೆಕ್ಷನ್ ಕೂಡ ಹೆಚ್ಚಾಗುತ್ತಿತ್ತು ಎನ್ನಲಾಗಿದೆ.

More from Filmibeat

English summary
Pawan Kalyan, Priyanka Mohan, Emraan Hashmi movie They Call Him OG Karnataka Business Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X