Bro Box Office Collection Day 4: ಪವನ್ ಕಲ್ಯಾಣ್-ಸಾಯಿ ಧರಂ ತೇಜ್ ಸಿನಿಮಾ ಕಲೆಕ್ಷನ್ ಹೇಗಿದೆ? ಗೆಲ್ಲುತ್ತಾ?
ಪವನ್ ಕಲ್ಯಾಣ್ ಮತ್ತು ಸಾಯಿ ಧರಂ ತೇಜ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಬ್ರೋ' ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಈ ಕ್ರೇಜಿ ಕಾಂಬಿನೇಷನ್ ನೋಡುವುದಕ್ಕೆ ಮೆಗಾ ಪ್ಯಾನ್ಸ್ ಕೂಡ ತುದಿಗಾಲಲ್ಲಿ ನಿಂತಿದ್ದರು. ಸದ್ಯ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಕೇವಲ ನಾಲ್ಕು ದಿನಗಳಲ್ಲೇ ಸಿನಿಮಾ ಕಲೆಕ್ಷನ್ 100 ಕೋಟಿ ರೂ. ಸಮೀಪದಲ್ಲಿದೆ.
ಬಹಳ ದಿನಗಳಿಂದ ಪವನ್ ಕಲ್ಯಾಣ್ ಸಿನಿಮಾ ನೋಡೋಕೆ ಅವರ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದರು. ಇತ್ತ ಸಾಯಿ ಧರಂ ತೇಜ್ 'ವಿರೂಪಾಕ್ಷ' ಅನ್ನೋ 100 ಕೋಟಿ ರೂ. ಸಿನಿಮಾ ನೀಡಿದ್ದರು. ಹೀಗಾಗಿ ಇಬ್ಬರು ಮೆಗಾ ಫ್ಯಾಮಿಲಿ ತಾರೆಯರನ್ನು ತೆರೆಮೇಲೆ ನೋಡುವುದಕ್ಕೆ ಫ್ಯಾನ್ಸ್ ಕಾದು ಕೂತಿದ್ದರು.

'ಬ್ರೋ' ರಿಲೀಸ್ ಆದ ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ರಿಮೇಕ್ ಆಗಿದ್ದರೂ, ಈ ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ವೀಕ್ ಡೇಸ್‌ನಲ್ಲೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗಿದ್ರೆ, ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಬ್ರೋ' ನಾಲ್ಕು ದಿನಗಳ ಕಲೆಕ್ಷನ್ ಎಷ್ಟು?
ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಹಾಗೂ ಸಾಯಿ ಧರಂ ತೇಜ್ ಸಿನಿಮಾ ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಬಂಪರ್ ಕಲೆಕ್ಷನ್ ಮಾಡಿತ್ತು. ಮೊದಲ ದಿನ 'ಬ್ರೋ' ಕಲೆ ಹಾಕಿದ್ದು ಬರೋಬ್ಬರಿ 30.05 ಕೋಟಿ ರೂ. ಅದೇ ಎರಡನೇ ದಿನ 17.05 ಕೋಟಿ ಹಾಗೇ ಮೂರನೇ ದಿನ 16.90 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ, ಈ ಸಿನಿಮಾಗೆ ರಿಯಲ್ ಚಾಲೆಂಜ್ ಅಂತಿದ್ದ ಸೋಮವಾರ (ಜುಲೈ 31) ಭಾರತದಲ್ಲಿ 5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಇಲ್ಲಿವರೆಗೂ ಕೇವಲ ಭಾರತದಲ್ಲಿ ಸುಮಾರು 70 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಯುಕೆ ಟಾಪ್ 10 ಸಿನಿಮಾದಲ್ಲಿ 'ಬ್ರೋ'
ಪವನ್ ಕಲ್ಯಾಣ್-ಸಾಯಿ ಧರಂ ಜೋಡಿಯ 'ಬ್ರೋ' ಸಿನಿಮಾದ ಕಲೆಕ್ಷನ್ ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಚೆನ್ನಾಗಿದೆ. ಅದರಲ್ಲೂ ಯುಕೆಯಲ್ಲಿ 'ಬ್ರೋ'ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಇವರ ಪ್ರಕಾರ, ಯುಕೆಯಲ್ಲಿ ಭಾರತದ ಎರಡೇ ಸಿನಿಮಾಗಳು ಟಾಪ್ 10 ಸಿನಿಮಾಗಳಲ್ಲಿ ಪಟ್ಟಿಯಲ್ಲಿವೆ. ಅದರಲ್ಲೊಂದು 'ಬ್ರೋ'. ಇನ್ನೊಂದು ಆಲಿಯಾ ಭಟ್, ರಣ್‌ವೀರ್ ಸಿಂಗ್ ಸಿನಿಮಾ 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ'. 'ಬ್ರೋ' ಯುಕೆ-ಐರ್ಲ್ಯಾಂಡ್ ಬಾಕ್ಸಾಫೀಸ್‌ನಲ್ಲಿ 1 ಕೋಟಿ 7 ಲಕ್ಷದ 49 ಬ್ರಿಟಿಷ್ ಪೌಂಡ್ಸ್ ಕೆಲಕ್ಷನ್ ಮಾಡಿದೆ.

'ಬ್ರೋ' 100 ಕೋಟಿ ರೂ. ಕಲೆಕ್ಷನ್
ಪವನ್ ಕಲ್ಯಾಣ್ ಹಾಗೂ ಸಾಯಿ ಧರಂ ತೇಜ್ ಸಿನಿಮಾ 'ಬ್ರೋ' ಮೊದಲ ವೀಕೆಂಡ್‌ನಲ್ಲಿ ವಿಶ್ವದಾದ್ಯಂತ ಸುಮಾರು 100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದು 100 ಕೋಟಿ ಕ್ಲಬ್ ಸೇರಿದ ಪವನ್ ಕಲ್ಯಾಣ್ ನಟನೆಯ 6ನೇ ಸಿನಿಮಾ. ಈ ಹಿಂದೆ 'ಭೀಮ್ಲಾ ನಾಯಕ್','ವಕೀಲ್ ಸಾಬ್','ಕಾಟಮರಾಯುಡು','ಸರ್ದಾರ್ ಗಬ್ಬರ್ ಸಿಂಗ್' ಹಾಗೂ 'ಅತ್ತಾರಿಂಟಿಕಿ ದಾರೇದಿ' ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿತ್ತು.
'ಬ್ರೋ' ತೆಲುಗು ರಿಮೇಕ್
'ಬ್ರೋ' ತಮಿಳಿನ 'ವಿನೋದಾಯ ಸೀತಂ' ಸಿನಿಮಾದ ರಿಮೇಕ್. ಈ ಸಿನಿಮಾವನ್ನು ಸಮುತಿರಕಣಿ ನಿರ್ದೇಶನ ಮಾಡಿ ನಟಿಸಿದ್ದರು. ಇವರೊಂದಿಗೆ ತಂಬಿ ರಾಮಯ್ಯ ಜೊತೆಯಾಗಿ ಕಾಣಿಸಿಕೊಂಡಿದ್ದರು. ತೆಲುಗಿನಲ್ಲೂ ಅವರೇ ಸಮುತಿರಕಣಿಯೇ ನಿರ್ದೇಶನ ಮಾಡಿದ್ದು, ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕಥೆ ಬರೆದಿದ್ದಾರೆ. ಪವನ್ ಕಲ್ಯಾಣ್, ಸಾಯಿ ಧರಂ ತೇಜ್ ಜೊತೆ ಪ್ರಿಯಾ ಪ್ರಕಾಶ್ ವಾರಿಯರ್, ಕೆತಿಕಾ ಶರ್ಮಾ, ವೆನ್ನೆಲಾ ಕಿಶೋರ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.


Click it and Unblock the Notifications











