ಅಪರೂಪಕ್ಕೆ ಸಿನಿಮಾ ಮಾಡಿದರೂ ಪವನ್ ಕಲ್ಯಾಣ್‌ಗೆ ಭಾರೀ ಬೇಡಿಕೆ: 'ಹರಿ ಹರ ವೀರ ಮಲ್ಲು' ದಾಖಲೆ ಬ್ಯುಸಿನೆಸ್
ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್ ನಟಿಸಿರುವ ಐತಿಹಾಸಿ ಸಿನಿಮಾ 'ಹರಿ ಹರ ವೀರ ಮಲ್ಲು'. ಇದು ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಇದೇ ಜುಲೈ 24ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಆದ ಬಳಿಕ ರಿಲೀಸ್ ಆಗುತ್ತಿರುವ ಈ ಬಿಗ್ ಬಜೆಟ್ ಸಿನಿಮಾ ಮೇಲೆ ತೆಲುಗು ಮಂದಿ ಕಣ್ಣಿಟ್ಟು ಕೂತಿದ್ದಾರೆ. ಹೀಗಾಗಿ ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ದಾಖಲೆ ಬರೆದಿದೆ ಎನ್ನಲಾಗುತ್ತಿದೆ.
ಮೆಗಾ ಸೂರ್ಯ ಪ್ರೊಡಕ್ಷನ್ಸ್‌ನ ಎ. ದಯಾಕರ್ ರಾವ್ ಈ ಸಿನಿಮಾವನ್ನು ನಿರ್ಮಿಸಿದರೆ, ಖ್ಯಾತ ನಿರ್ಮಾಪಕ ಎ ಎಂ ರತ್ನಂ ಈ ಸಿನಿಮಾದ ಬೆನ್ನೆಲುಬಾಗಿ ನಿಂತಿದ್ದಾರೆ. ಪವನ್ ಕಲ್ಯಾಣ್ ಅವರ ಈ ಸಿನಿಮಾವನ್ನು ನಿರ್ದೇಶಕ ಕ್ರಿಶ್ ಜಾಗರ್ಲಮುಡಿ ಆರಂಭಿಸಿದ್ದರು. ಬಳಿಕ ಈ ಸಿನಿಮಾವನ್ನು ಮುಗಿಸಿದ್ದು ಎ.ಎಂ. ಜ್ಯೋತಿ. ಹೀಗಾಗಿ ಇಬ್ಬರು ನಿರ್ದೇಶಕರ 'ಹರಿ ಹರ ವೀರ ಮಲ್ಲು' ಸಿನಿಮಾ ಹೇಗಿರುತ್ತೋ ಅನ್ನೋದನ್ನು ಕುತೂಹಲದಿಂದ ನೋಡುತ್ತಿದ್ದಾರೆ.

ಪವನ್ ಕಲ್ಯಾಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಬಾಲಿವುಡ್‌ನ ಜನಪ್ರಿಯ ನಟ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಈ ಸಿನಿಮಾದ ಮತ್ತೊಂದು ಹೈಲೈಟ್. ಈ ಸಿನಿಮಾ ಕೇವಲ ತೆಲುಗಿನಲ್ಲಷ್ಟೇ ಅಲ್ಲ. ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ಪ್ರೀ-ರಿಲೀಸ್ ಬ್ಯುಸಿನೆಸ್ ಕೂಡ ದಾಖಲೆ ಬರೆದಿದೆ ಎಂದು ಹೇಳಲಾಗಿದೆ. ಪ್ರೀ ರಿಲೀಸ್ ಬ್ಯುಸಿನೆಸ್ ಎಷ್ಟಾಗಿದೆ ಎಂದು ನೋಡುವುದಾರೇ..
'ಹರಿ ಹರ ವೀರ ಮಲ್ಲು' ಸಿನಿಮಾ ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ಹಲವು ಬಾರಿ ಮುಂದೂಡಲ್ಪಟ್ಟಿದೆ. ಈ ಬಾರಿ ಜುಲೈ 24ರಂದು ಸಿನಿಮಾ ರಿಲೀಸ್‌ಗೆ ಮುಹೂರ್ತವನ್ನು ಫಿಕ್ಸ್ ಮಾಡಿದೆ. ಆದರೆ, ಇನ್ನೂ ಅಭಿಮಾನಿಗಳಲ್ಲಿ ಈ ಅನುಮಾನ ಇದ್ದೇ ಇದೆ. ಇದಕ್ಕೆ ಕಾರಣ ಎರಡು ಸಂಸ್ಥೆಗಳು ಬಿಡುಗಡೆಗೆ ಕೆಲವು ದಿನಗಳು ಬಾಕಿ ಇರುವಾಗಲೇ ನಿರ್ಮಾಪಕರ ವಿರುದ್ಧ ತೆಲುಗು ಫಿಲ್ಮ್ ಚೇಂಬರ್‌ನಲ್ಲಿ ದೂರು ಸಲ್ಲಿಸಿದ್ದಾರೆ. ಹೀಗಾಗಿ ಪವನ್ ಅಭಿಮಾನಿಗಳಲ್ಲಿ ಅನುಮಾನ ಮೂಡಿದೆ.
ಈ ಮಧ್ಯೆ ತೆಲುಗಿನ ವಿತರಕರು 'ಹರಿ ಹರ ವೀರ ಮಲ್ಲು'ವನ್ನು ದಾಖಲೆ ಬೆಲೆಗೆ ಖರೀದಿ ಮಾಡಿದ್ದಾರೆಂದು ಹೇಳಾಗುತ್ತಿದೆ. ಪವನ್ ಕಲ್ಯಾಣ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗದೇ ಹೋದರೂ, ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಿರುವುದರಿಂದ ವಿತರಕರು ಮುಗಿಬಿದ್ದು ಖರೀದಿ ಮಾಡಿದ್ದಾರೆ. ಸಿನಿಮಾ ಬಿಡುಗಡೆ ಬಗ್ಗೆ ವದಂತಿಗಳು ಆಗಾಗ ಕೇಳಿ ಬರುತ್ತಿರುವುದರಿಂದ ವಿತರಕರು ಕಡಿಮೆ ಕೇಳುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಇದರ ಹೊರತಾಗಿಯೂ ಸಿನಿಮಾ ಕೆಲವು ಏರಿಯಾಗಳಲ್ಲಿ ದಾಖಲೆ ಬೆಲೆಯಲ್ಲಿ ಮಾರಾಟ ಆಗಿದೆ.

'ಹರಿ ಹರ ವೀರ ಮಲ್ಲು' ಸಿನಿಮಾದ ಆಂಧ್ರ ಪ್ರದೇಶ ಹಾಗೂ ನಿಜಾಮ್ ಏರಿಯಾದ ಹಕ್ಕುಗಳು ಖರೀದಿ ಮಾಡಲಾಗಿದೆ. ಈ ಸಿನಿಮಾ ಥಿಯೇಟ್ರಿಕಲ್ ರೈಟ್ಸ್ ಭಾರಿ ಬೆಲೆಗೆ ಮಾರಾಟವಾಗಿದ್ದು, ಆಂಧ್ರ ಪ್ರದೇಶದ 6 ಪ್ರದೇಶಗಳಲ್ಲಿ ಸುಮಾರು 50 ಕೋಟಿ ರೂ.ಗಳಿಗೆ ಸೇಲ್ ಆಗಿದೆ. ನಿಜಾಮ್ ಏರಿಯಾದ ಹಕ್ಕುಗಳು 40 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ. ಹಾಗೇ ಓಟಿಟಿ ಹಕ್ಕುಗಳು ಸುಮಾರು 60 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎಂದು ಡೆಕನ್ ಕ್ರೋನಿಕಲ್ ವರದಿ ಮಾಡಿದೆ.
ಇನ್ನು ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ವಿದೇಶಗಳಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಉತ್ತರ ಅಮೆರಿಕದಲ್ಲಿ ಸೂಪರ್ ರೆಸ್ಪಾನ್ಸ್ ಸಿಗುತ್ತಿದೆ. ಹಾಗೇ ಪ್ರೀಮಿಯರ್ ಶೋಗಳಿಗೂ ಬೇಡಿಕೆ ಹೆಚ್ಚಿದೆ. ಇಷ್ಟೆಲ್ಲ ಬ್ಯುಸಿನೆಸ್ ಮಾಡಿದ್ದರೂ, 100 ಕೋಟಿ ರೂಪಾಯಿ ಲಾಭವನ್ನು ಗಳಿಸಬೇಕಾದರೆ, ತೆಲುಗಿನ ಎರಡೂ ರಾಜ್ಯಗಳಲ್ಲಿ 200 ಕೋಟಿ ರೂಪಾಯಿ ಕಲೆ ಹಾಕಬೇಕಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











