OG movie First Review: ಹಿಂಸೆ, ರಕ್ತಪಾತ ಇದ್ರೂ ಹೈವೋಲ್ಟೇಜ್ ಆಕ್ಷನ್,ಪವನ್ ಕಲ್ಯಾಣ್ ಖದರೇ ಹೈಲೈಟ್
ಈ ವಾರ ತೆಲುಗು ಚಿತ್ರರಂಗಕ್ಕೆ ಮತ್ತೆ ಹಬ್ಬ. ಯಾಕಂದ್ರೆ, ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್ ನಟನೆ 'ಓಜಿ' (OG) ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಸೆಪ್ಟೆಂಬರ್ 25ಕ್ಕೆ ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಪ್ರಭಾಸ್ ಸಿನಿಮಾ 'ಸಾಹೋ'ಗೆ ಆಕ್ಷನ್ ಕಟ್ ಹೇಳಿದ್ದ ಸುಜಿತ್ 'ಓಜಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೇನು ಎರಡು ದಿನಗಳಲ್ಲಿ ಸಿನಿಮಾ ರಿಲೀಸ್ ಆಗುವಾಗಲೇ ಮೊದಲ ವಿಮರ್ಶೆ ಹೊರಬಿದ್ದಿದೆ.
ಪವನ್ ಕಲ್ಯಾಣ್ ಸಿನಿಮಾಗೆ ಕೇವಲ ಆಂಧ್ರ, ತೆಲಂಗಾಣದಲ್ಲಷ್ಟೇ ಅಲ್ಲ. ಕರ್ನಾಟಕ ಸೇರಿದಂತೆ ವಿದೇಶದಲ್ಲಿಯೂ ಕ್ರೇಜ್ ಇದೆ. ಹೀಗಾಗಿ ಅಡ್ವಾನ್ಸ್ ಬುಕಿಂಗ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. 'ಓಜಿ' ಪವನ್ ಕಲ್ಯಾಣ್ ಆಂಧ್ರದ ಉಪಮುಖ್ಯಮಂತ್ರಿ ಆದ ಬಳಿಕ ರಿಲೀಸ್ ಆಗುತ್ತಿರುವ ಮಾಸ್ ಸಿನಿಮಾ. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಆಗಿದ್ದು, ತೆಲುಗು ಮಂದಿ ಹೇಗೆ ಸ್ವೀಕರಿಸುತ್ತಾರೆ? ಅನ್ನೋ ಕುತೂಹಲವಿದೆ.

ಇತ್ತೀಚೆಗೆ 'ಓಜಿ' ಸಿನಿಮಾವನ್ನು ಸೆನ್ಸಾರ್ ಮಂಡಳಿಯ ಅಧಿಕಾರಿಗಳು ವೀಕ್ಷಣೆ ಮಾಡಿದ್ದಾರೆ. ಪವನ್ ಕಲ್ಯಾಣ್ ಸಿನಿಮಾದಲ್ಲಿ ರಕ್ತಪಾತ ಹೆಚ್ಚಿರುವುದರಿಂದ 'ಎ' ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ವರದಿಗಳಾಗಿವೆ. ಡಿವಿವಿ ಎಂಟರ್‌ಟೈನರ್ಸ್ ಬ್ಯಾನರ್‌ನಲ್ಲಿ ದಾನಯ್ಯ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತೆ ಅಂತ ಭವಿಷ್ಯ ನುಡಿಯುತ್ತಿದ್ದಾರೆ. ಅದಕ್ಕೂ ಮುನ್ನ ಮೊದಲ ವಿಮರ್ಶೆ ಏನು ಹೇಳುತ್ತಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಓಜಿ' ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ಪ್ರಿಯಾಂಕಾ ಮೋಹನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೇ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಈ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ಮಲಯಾಳಂ ನಟ ಅರ್ಜುನ್ ದಾಸ್, ಹಿರಿಯ ಕಲಾವಿದರಾದ ಪ್ರಕಾಶ್ ರಾಜ್, ಶುಭಲೇಖಾ ಸುಧಾಕರ್, ಶ್ರೀಯಾ ರೆಡ್ಡಿ, ಹರೀಶ್ ಉತ್ತಮನ್, ಅಭಿಮನ್ಯು ಸಿಂಗ್ ಮತ್ತು ಅಜಯ್ ಘೋಷ್ ಅಂತಹ ಬೇರೆ ಬೇರೆ ಚಿತ್ರರಂಗದ ಜನಪ್ರಿಯರ ನಟರು ಇದ್ದಾರೆ.
ಪವನ್ ಕಲ್ಯಾಣ್ ಸಿನಿಮಾವನ್ನು ಇತ್ತೀಚೆಗೆ ಸೆನ್ಸಾರ್ ಮಂಡಳಿ ವೀಕ್ಷಣೆ ಮಾಡಿದೆ. ಈ ವೇಳೆ ಸೀನ್‌ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದೆ. ಹಿಂಸೆ, ರಕ್ತಪಾತ ಹಾಗೂ ಅತಿಯಾದ ಆಕ್ಷನ್ ದೃಶ್ಯಗಳ ಬಗ್ಗೆ ಸೆನ್ಸಾರ್ ಮಂಡಳಿ ಕೆಲವು ಸೂಚನೆಗಳನ್ನು ನೀಡಿದೆ ಎನ್ನಲಾಗಿದೆ. ಇನ್ನು ಕೆಲವು ಸೀನ್‌ಗಳು ರಕ್ತಸಿಕ್ತ ಮಗು, ಪೊಲೀಸ್ ಜೀಪ್ ದೃಶ್ಯಗಳು, ಕೈ ಕತ್ತರಿಸುವ ಹಾಗೂ ಶಿರಚ್ಛೇದನ ಸೀನ್‌ಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ತೀರಾ ಹಿಂಸಾತ್ಮಕವಾಗಿರುವ ದೃಶ್ಯಗಳನ್ನು ತೆಗೆದು ಹಾಕುವಂತೆ ಸಲಹೆ ನೀಡಿದ್ದು, ಅದರಲ್ಲಿ ಕೈ ಕತ್ತರಿಸುವ ದೃಶ್ಯಗಳು, ಹಿಂಸೆ ಮಾಡುವಾಗಿನ ಕ್ಲೋಸಪ್ ಸೀನ್‌ಗಳನ್ನು ತೆಗೆದು ಹಾಕುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ. ತೆಲುಗು ಮಾಧ್ಯಮಗಳ ವರದಿ ಪ್ರಕಾರ, 1 ನಿಮಿಷ 55 ಸೆಕೆಂಡುಗಳ ದೃಶ್ಯಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಲಾಗಿದೆ. ಈ ಸೀನ್‌ಗಳಿಗೆ ಕತ್ತರಿ ಹಾಕಿ 'ಎ' ಸರ್ಟಿಫಿಕೇಟ್ ನೀಡಿದೆ ಎನ್ನಲಾಗಿದೆ.
ಇನ್ನು ಸಿನಿಮಾದ ಕೆಲವು ಸೀನ್‌ಗಳನ್ನು ತೆಗೆದು ಹಾಕಿದ್ದರೂ, ಸುಜಿತ್ ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅದರಲ್ಲೂ ಆಕ್ಷನ್ ಎಪಿಸೋಡ್‌ಗಳ ಬಗ್ಗೆ ಸೆನ್ಸಾರ್ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಹಾಗೇ ಪವನ್ ಕಲ್ಯಾಣ್ ಮಾಸ್ ಅಪಿಯರೆನ್ಸ್ ರೋಮಾಂಚನಕಾರಿಯಾಗಿದೆ ಎಂದು ಹೇಳಿದೆ. ಇಮ್ರಾನ್ ಹಶ್ಮಿ ಪಾತ್ರಕ್ಕೆ ಮೆಚ್ಚಿಗೆ ಸೂಚಿಸಿದ್ದು, ಅರ್ಜುನ್ ದಾಸ್ ಮತ್ತು ಶ್ರೀಯಾ ರೆಡ್ಡಿ ಹೊಗಳಿದೆ. ಪ್ರಿಯಾಂಕಾ ಮೋಹನ್ ಈ ಸಿನಿಮಾಗೆ ಫೀಲ್ ಗುಡ್ ಅನುಭವವನ್ನು ನೀಡುತ್ತಾರೆಂದು ಅಭಿಪ್ರಾಯ ಪಟ್ಟಿದೆ ಎಂದು ವರದಿ ಮಾಡಲಾಗಿದೆ.
ಇನ್ನು 'ಓಜಿ' ಸಿನಿಮಾದ ಉದ್ದ 2 ಗಂಟೆ 34 ನಿಮಿಷ 15 ಸೆಕೆಂಡುಗಳಷ್ಟಿದೆ. ಸೆನ್ಸಾರ್ ಮಂಡಳಿ ನೀಡಿರುವ ಸರ್ಟಿಫಿಕೇಟ್‌ಗೆ ಚಿತ್ರತಂಡದಿಂದ ಆಕ್ಷೇಪಣೆ ಇಲ್ಲ. ಹೀಗಾಗಿ ಯಾವುದೇ ಅಡೆತಡೆ ಇಲ್ಲದೆ ಸಿನಿಮಾ ರಿಲೀಸ್ ಆಗುತ್ತಿದೆ. ಜೊತೆ ಸೆನ್ಸಾರ್ ಮಂಡಳಿಯ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರತಂಡಕ್ಕೆ ಬಲ ಬಂದಂತೆ ಆಗಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











