ಈ ನಟಿಗೆ ದಿಂಬೇ ಬಟ್ಟೆಯಂತೆ!: ಹೊಸ 'ಫ್ಯಾಷನ್' ಕಂಡುಹಿಡಿದ ಪಾಯಲ್

ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ? ಕೆಲವರು ಸಮಯ ಕಳೆಯಲು ಸಿನಿಮಾ, ಫೇಸ್‌ಬುಕ್, ಪುಸ್ತಕ ಮುಂತಾದವುಗಳ ಮೊರೆ ಹೋಗಿದ್ದಾರೆ. ಇನ್ನು ಕೆಲವರು ಅಕ್ಕಿಕಾಳು, ರಾಗಿ ಕಾಳಿನ ಲೆಕ್ಕ ಮಾಡುವ ತಮಾಷೆಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿಯೂ ಹಾಸ್ಯ ಹುಡುಕುವ ಪ್ರವೃತ್ತಿ ನಮ್ಮದು. ಇನ್ನು ಹೆಚ್ಚಿನವರಿಗೆ ವರ್ಷ ಪೂರ್ತಿ ಸಾಕಾಗುವಷ್ಟು ಟಿಕ್‌ಟಾಕ್ ವಿಡಿಯೋಗಳನ್ನು ಮಾಡುವಷ್ಟು ಸಮಯ ಸಿಕ್ಕಿದೆ.

ಆದರೆ ನಟಿ ಪಾಯಲ್ ರಜಪೂತ್ ಹೊಸ ಅನ್ವೇಷಣೆ ನಡೆಸಿದ್ದಾರೆ. ಅದು ಉಡುಪು ವಿನ್ಯಾಸಕ್ಕೆ ಸಂಬಂಧಿಸಿದ್ದು. ಫ್ಯಾಷನ್ ಜಗತ್ತಿನಲ್ಲಿ ಕಣ್ಣಾಡಿಸಿದರೆ ಚಿತ್ರವಿಚಿತ್ರವಾದ ಉಡುಗೆಗಳನ್ನು ವಿನ್ಯಾಸ ಮಾಡುವುದು ಗೊತ್ತಾಗುತ್ತದೆ. ನಮ್ಮ ಹಿಂದಿನ ಕಾಲದ ಜನರ ಉಡುಗೆಗಳು ಈಗ ಫ್ಯಾಷನ್ ಆಗಿ ಬದಲಾಗಿದೆ. ಅನುಪಯುಕ್ತ ಎನಿಸುವ ವಸ್ತುಗಳು ಇಂದು ಫ್ಯಾಷನ್ ಸ್ವರೂಪ ಪಡೆದುಕೊಳ್ಳುತ್ತಿವೆ. ಹಿಂದಿ, ಪಂಜಾಬಿ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ಪಾಯಲ್ ಕಂಡುಹಿಡಿದಿರುವ ಹೊಸ ಫ್ಯಾಷನ್, ಪಡ್ಡೆಹುಡುಗರ ಹೃದಯದಲ್ಲಿ ಕಚಗುಳಿ ಇರಿಸುವಂತಿದೆ. ಮುಂದೆ ಓದಿ...

ಹೊಸ ಬಗೆಯ ಫ್ಯಾಷನ್

ಹೊಸ ಬಗೆಯ ಫ್ಯಾಷನ್

ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತು ಸಮಯ ಕಳೆಯಲು ಪಾಯಲ್ ರಜಪೂತ್, ತಮ್ಮ ಫೋಟೊಗಳನ್ನು, ನಾಯಿಗಳ ಫೋಟೊಗಳನ್ನು ಹಂಚಿಕೊಳ್ಳುತ್ತಾ ಖುಷಿ ಪಡುತ್ತಿದ್ದರು. ಸಿನಿಮಾ ಚಟುವಟಿಕೆಗಳಿದ್ದಾಗ ದಿನಕ್ಕೆ ಬಗೆ ಬಗೆಯ ಉಡುಪುಗಳನ್ನು ಧರಿಸುತ್ತಿದ್ದ ಅವರು, ಅದಕ್ಕೀಗ ಅವಕಾಶವಿಲ್ಲದ ಕಾರಣ ಹೊಸ ಉಡುಪು ವಿನ್ಯಾಸ ಮಾಡಿಕೊಂಡಿದ್ದಾರೆ.

ದಿಂಬಿನ ಹೊರತಾಗಿ ಬೇರೇನೂ ಇಲ್ಲ

ದಿಂಬಿನ ಹೊರತಾಗಿ ಬೇರೇನೂ ಇಲ್ಲ

ತಮ್ಮ ದೇಹದ ಮೇಲೆ ದಿಂಬಿನ ಹೊರತು ಬೇರೇನೂ ಇಲ್ಲ ಎಂದು ಪಾಯಲ್ ಹೇಳಿಕೊಂಡಿದ್ದಾರೆ. ಹಳದಿ ಬಣ್ಣದ ದಿಂಬಿಗೆ ಬಿಳಿಬಣ್ಣದ ಸೊಂಟದ ಬೆಲ್ಟ್‌ಅನ್ನು ಕಟ್ಟಿಕೊಂಡಿದ್ದಾರೆ. ಈ ವಿಚಿತ್ರವಾದ ಡ್ರೆಸ್ ಅನೇಕರನ್ನು ಅಚ್ಚರಿಗೊಳಿಸಿದೆ. ಹೀಗೂ ಫ್ಯಾಷನ್ ಮಾಡಬಹುದೇ ಎಂದು ಕೇಳಿದ್ದಾರೆ.

ಹೊಸ ಫ್ಯಾಷನ್ ಇದು

ಹೊಸ ಫ್ಯಾಷನ್ ಇದು

'ದಿಂಬು- ಈ ದಿನದ ಉಡುಗೆ. ಕ್ವಾರೆನ್ ಕ್ವೀನ್. ಇದನ್ನು ಫ್ಯಾಷನ್ ಆಗಿ ಮಾಡಿ. ಏಕೆಂದರೆ ನನಗೆ ಮನೆಯಲ್ಲಿ ಬೇಸರವಾಗುತ್ತಿತ್ತು. ಹಾಗೆಯೇ ಬೇಸರಗೊಂಡಿರುವ ಮನೆಯಲ್ಲಿ ನಾನಿದ್ದೇನೆ' ಎಂದು ಬರೆದುಕೊಂಡಿರುವ ಪಾಯಲ್, ಅದಕ್ಕೆ 'ಪಿಲ್ಲೋ ಚಾಲೆಂಜ್' ಎಂದು ಬರೆದುಕೊಂಡಿದ್ದಾರೆ. ಇದು ಮುಂದೆ ಫ್ಯಾಷನ್ ಜಗತ್ತಿನ ಹೊಸ ಡಿಸೈನ್ ಆದರೂ ಅಚ್ಚರಿಯಿಲ್ಲ.

ಇದೇನು ಹೊಸ ಚಾಲೆಂಜ್?

ಇದೇನು ಹೊಸ ಚಾಲೆಂಜ್?

ಇದಕ್ಕೆ ಅನೇಕ ಸೆಲೆಬ್ರಿಟಿಗಳೂ ಪ್ರತಿಕ್ರಿಯಿಸಿದ್ದಾರೆ. ಇದೇನು ಹೊಸ ಚಾಲೆಂಜಾ ಎಂದು ಕೇಳಿದ್ದಾರೆ. ಸೀರೆ ಚಾಲೆಂಜ್ ಆಯ್ತು, ಇನ್ನು ದಿಂಬು ಚಾಲೆಂಜ್ ಬಂದರೆ ಮುಗಿದೇ ಹೋಯ್ತು ಎಂದು ತಮಾಷೆ ಮಾಡಿದ್ದಾರೆ. ನಿಜಕ್ಕೂ ದಿಂಬು ಮಾತ್ರವೇ ಇದೆಯೇ? ಸ್ವಲ್ಪ ತಿರುಗಿ ನೋಡೋಣ ಎಂದು ಅನೇಕ ಪಡ್ಡೆಹುಡುಗರು ಅನುಮಾನ ವ್ಯಕ್ತಪಡಿಸಿದ್ದಾರೆ.

More from Filmibeat

English summary
Actress Payal Rajput has shared photos wearing yellow pillow as dress and said pillow outfit of the day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X