ಸಿನಿಮಾ ಶಾಟ್‌ಗಾಗಿ ನಟಿ ಪಾಯಲ್ ರಜಪೂತ್ ರಿಸ್ಕ್ ತೆಗೆದುಕೊಂಡಿದ್ದರು; ಅದೇನು ಗೊತ್ತೇ?

ತೆಲುಗಿನ ಸೂಪರ್‌ ಹಿಟ್ ಸಿನಿಮಾ 'ಆರ್‌ಎಕ್ಸ್ 100' ಮೂಲಕ ಪಾಯಲ್ ರಾಜ್‌ಪುತ್ ದಕ್ಷಿಣ ಭಾರತದಲ್ಲಿ ಗಮನ ಸೆಳೆದಿದ್ದರು. ಅಜಯ್ ಭೂಪತಿ ನಿರ್ದೇಶನದಲ್ಲಿ ಕಾರ್ತಿಕೇಯ ಹೀರೋ ಆಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಪಾಯಲ್ ಅವರ ನಟನೆ ಹಾಗೂ ಗ್ಲಾಮರಸ್ ಲುಕ್ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಪಾಯಲ್ ರಜಪೂತ್ ಹೆಸರು ಕೇಳಿದರೆ, ಇಂದಿಗೂ ಯುವಕರ ಹೃದಯದಲ್ಲಿ ಕಂಪನ ಮೂಡುತ್ತೆ. ಈ ಸಿನಿಮಾ ಪಾಯಲ್‌ಗೆ ಕೇವಲ ತೆಲುಗು ಅಷ್ಟೇ ಅಲ್ಲ ದಕ್ಷಿಣ ಭಾರತದಲ್ಲಿಯೇ ಒಂದೊಳ್ಳೆ ಹೆಸರು ಸಿಕ್ಕಿತ್ತು.

'ಆರ್‌ಎಕ್ಸ್ 100' ಬ್ಲಾಕ್‌ಬಸ್ಟರ್ ಹಿಟ್ ಆದ ಬಳಿಕ ಅಂತಹದ್ದೇ ಪಾತ್ರಗಳಿಗೆ ಆಫರ್ ಬರುವುದಕ್ಕೆ ಶುರುವಾಗಿತ್ತು. ಪಾಯಲ್‌ಗೂ ಈ ಸಂದರ್ಭದಲ್ಲಿ ಗೊಂದಲಕ್ಕೊಳಗಿದ್ದರು. ಆದರೂ, ಆಪ್ತರ ಸಲಹೆಯಂತೆ, ಕಥೆ ಹಾಗೂ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಸಿಗುವ ಪಾತ್ರಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಯತ್ನಿಸಿದರು.

Payal Rajput took risk for shoots netizens advised actress

ಈ ಹಂತದಲ್ಲಿ 'ಎನ್‌ಟಿಆರ್ ಕಥಾನಾಯಕುಡು', 'ಸೀತಾ', 'ಆರ್‌ಡಿಎಕ್ಸ್ ಲವ್', 'ವೆಂಕಿ ಮಾಮಾ', 'ಡಿಸ್ಕೋ ರಾಜಾ', 'ಅನಗನಗಾ ಓಕ ಅತಿಥಿ', 'ತೀಸ್‌ಮಾರ್ ಖಾನ್', 'ಮಾಯಾಪೆಟಿಕಾ' ಮತ್ತು 'ರಕ್ಷಣ' ಮುಂತಾದ ಚಿತ್ರಗಳಲ್ಲಿ ಪಾಯಲ್ ನಟಿಸಿದ್ದಾರೆ. ಒಂದಿಷ್ಟು ಸಿನಿಮಾಗಳ ಬಳಿಕ ಸತತ ಸೋಲುಗಳನ್ನು ನೀಡಿದ್ದರು. ಹೀಗಾಗಿ ತೆಲುಗು ಚಿತ್ರರಂಗದಲ್ಲಿ ಪ್ರಾಮುಖ್ಯತೆ ಕಮ್ಮಿ ಆಯ್ತು ಎನ್ನುವಾಗಲೇ 'ಮಂಗಳವಾರಂ' ಸಿನಿಮಾದಲ್ಲಿ ನಟಿಸಿದರು.

ಈ ಸಿನಿಮಾ ಪಾಯಲ್ ರಾಜ್‌ಪುತ್ ಮತ್ತೆ ಭರ್ಜರಿ ಕಮ್‌ಬ್ಯಾಕ್ ಮಾಡುವಂತೆ ಮಾಡಿತ್ತು. ಸದ್ಯ ಅವರು ತಮಿಳಿನಲ್ಲಿ 'ಗೋಲ್‌ಮಾಲ್', 'ಏಂಜೆಲ್' ಹಾಗೂ ತೆಲುಗಿನಲ್ಲಿ 'ಕಿರಾಥಕ'ದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ, ಪಾಯಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ವೆಂಕಟಲಕ್ಷ್ಮಿ' ಎಂಬ ಕಂಪ್ಲೀಟ್ ಮಹಿಳಾ ಪ್ರಧಾನ ಸಿನಿಮಾ ಕೂಡ ಆರಂಭ ಆಗಿದೆ. ಎಲ್ಲ ಟ್ರ್ಯಾಕ್‌ಗೆ ಬರುತ್ತಿದ್ದಂತೆ ಪಾಯಲ್‌ಗೆ ಮಾರ್ಗದರ್ಶಕರಂತೆ ಇದ್ದ, ಪ್ರತಿಯೊಂದು ವಿಷಯಗಳಲ್ಲಿ ಬೆಂಬಲವಾಗಿ ನಿಂತ ತಮ್ಮ ತಂದೆಯನ್ನು ಕಳೆದುಕೊಂಡು ಖಿನ್ನತೆಗೆ ಜಾರಿದ್ದರು.

ಇನ್ನು ಪಾಯಲ್ ರಾಜ್‌ಪುತ್ ವೃತ್ತಿ ಜೀವನದ ಕಡೆಗೆ ಬರೋದಾರೆ, ಈಕೆ ಕೂಡ ಟ್ರೋಲ್‌ಗೆ ಸಿಕ್ಕಿಕೊಂಡಿದ್ದಾರೆ. ಇವರನ್ನೂ ಕೆಲವು ನಟರೊಂದಿಗೆ ಅಫೇರ್‌ಗಳನ್ನು ಅಂಟಿಸಲಾಗಿತ್ತು. ಆದಾಗ್ಯೂ, ಅವರು ಅಚಲ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದಾರೆ. ಇತ್ತೀಚೆಗೆ ಅವರ ವೃತ್ತಿಜೀವನದ ಕುರಿತು ಮಾಡಿದ ಪೋಸ್ಟ್ ವ್ಯಾಪಕ ಚರ್ಚೆಗೆ ಕಾರಣವಾಯಿತು. "ನನ್ನ ವೃತ್ತಿಜೀವನಕ್ಕೆ ವಿದಾಯ ಹೇಳಬೇಕೆ? ಬೇಡವೇ? ಎಂಬ ಬಗ್ಗೆ ನನಗೆ ಅನುಮಾನ ಮೂಡಿದೆ. ಆದರೆ, ಆ ಸಮಯದಲ್ಲಿ 12 ವರ್ಷಗಳ ನನ್ನ ಕಷ್ಟವನ್ನು ಅರಿತು ಸಮಾಧಾನ ತಂದುಕೊಂಡೆ. ವೃತ್ತಿಜೀವನದಲ್ಲಿ ಸೋತರೂ ಸಿನಿಮಾವನ್ನು ಬಿಡುವುದಿಲ್ಲ" ಎಂದು ಪಾಯಲ್ ಸ್ಪಷ್ಟಪಡಿಸಿದ್ದರು.

ಪಾಯಲ್ ರಜಪೂತ್ ಸಿನಿಮಾ ವಿಚಾರಕ್ಕೆ ಬಂದರೆ ನೂರಕ್ಕೆ ನೂರರಷ್ಟು ಎಫೆರ್ಟ್ ಹಾಕುತ್ತಾರೆ. ತಮ್ಮ ಸೀನ್‌ಗಾಗಿ ಕಷ್ಟ ಪಡುತ್ತಾರೆ. ಬೇರೆ ನಟಿಯರಂತೆ ಅಪಾಯಕಾರಿ ಸನ್ನಿವೇಶಗಳಲ್ಲಿ ಸಿಕ್ಕಿಕೊಳ್ಳುತ್ತಾರೆ. ಪಾಯಲ್ ರಾಜ್‌ಪುತ್ ಕೂಡ ಒಂದು ಅಪಾಯಕಾರಿ ಸನ್ನಿವೇಶವನ್ನು ಎದುರಿಸಿದ್ದರು. ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೆ ಸೆಟ್‌ನಲ್ಲಿ ಇರುವುದರಿಂದ ನಟರು ಧರಿಸುವ ಬಟ್ಟೆಗಳು ಕಲೆಯಾಗುವುದು ಅಥವಾ ಸುಕ್ಕುಗಟ್ಟುವುದು ಸಾಮಾನ್ಯ. ಇಂತಹದ್ದೇ ಒಂದು ಪರಿಸ್ಥಿತಿ ಪಾಯಲ್ ರಾಜ್‌ಪುತ್‌ಗೆ ಚಿತ್ರೀಕರಣದ ಮಧ್ಯೆ ಎದುರಾಯಿತು. ಶೂಟಿಂಗ್ ಗ್ಯಾಪ್ ಕಡಿಮೆ ಇದ್ದುದರಿಂದ ಬಟ್ಟೆಗಳನ್ನು ಇಸ್ತ್ರಿ ಮಾಡಬೇಕಾದ ಅನಿವಾರ್ಯತೆ ಇತ್ತು.

ಹೀಗಾಗಿ ಪಾಯಲ್ ಅವರ ತಂಡ ಚಾಣಾಕ್ಷತನ ಮೆರೆದರು. ಅವರು ಪಾಯಲ್ ಅವರ ಬಟ್ಟೆಗಳನ್ನು ತೆಗೆಯದೆ, ನಾಜೂಕಿನಿಂದ ದೇಹದ ಮೇಲೆಯೇ ಇಸ್ತ್ರಿ ಮಾಡಿ ಸುಕ್ಕುಗಳನ್ನು ಸರಿಪಡಿಸಿದರು. ಆ ಕ್ಷಣದಲ್ಲಿ ಪಾಯಲ್‌ಗೆ ಏನಾಗುತ್ತಿದೆ ಎಂದು ಅರ್ಥವಾಗದೆ ಆತಂಕಗೊಂಡಿದ್ದರು. ನಂತರ ಪರಿಸ್ಥಿತಿಯನ್ನು ಅರಿತು ನಕ್ಕರು. ಇಕ್ಕಟ್ಟಿಗೆ ಸಿಲುಕಿದ್ದ ವೇಳೆ ನೆರವಾದ ತಮ್ಮ ತಂಡಕ್ಕೆ ಧನ್ಯವಾದ ತಿಳಿಸಿದ್ದರು. ಸದ್ಯ ಪಾಯಲ್ ರಾಜ್‌ಪುತ್ ಅವರ ಡ್ರೆಸ್‌ಗೆ ಇಸ್ತ್ರಿ ಮಾಡುವ ವಿಡಿಯೋ ವೈರಲ್ ಆಗುತ್ತಿದ್ದು, ಯಾವುದೇ ಸಣ್ಣ ಎಡವಟ್ಟಾಗಿದ್ದರೂ ಗಂಭೀರ ಅಪಾಯಕ್ಕೆ ಸಿಲುಕಬೇಕಾಗುತ್ತಿತ್ತು ಎಂದು ನೆಟಿಜನ್‌ಗಳು ಎಚ್ಚರಿಸಿದ್ದಾರೆ.

More from Filmibeat

English summary
Payal Rajput took risk for shoots netizens advised actress.
Read more about: actress tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X