ವರ್ಕ್‌ಔಟ್‌ಗೆ ಹೊಸ ವಿಧಾನ ಕಂಡುಕೊಂಡ ಪೂಜಾ ಹೆಗ್ಡೆ: ಸ್ಲೋ ಮೋಷನ್ ವಿಡಿಯೋ ವೈರಲ್

ಪೂಜಾ ಹೆಗ್ಡೆ ದೇಹ ಸೌಂದರ್ಯದ ಬಗ್ಗೆ ಹೇಳಬೇಕಿಲ್ಲ. ಈಕೆಯ ಸ್ಮಿಮ್ ದೇಹ ಕಂಡು ಹೆಣ್ಣು ಮಕ್ಕಳು ಹೊಟ್ಟೆ ಉರಿದುಕೊಂಡರೆ. ಪೂಜಾ ಹೆಗ್ಡೆ ದೇಹ ಸೌಂದರ್ಯಕ್ಕೆ ಮಾರು ಹೋದ ಯುವಕರು ಅದೆಷ್ಟೋ ಮಂದಿ. ಇನ್ನು ಬಹುಭಾಷಾ ನಟಿ ಪೂಜಾ ಹೆಗ್ಡೆ ಕೂಡ ಫಿಟ್ನೆಸ್ ಫ್ರೀಕ್. ಬಿಡುವಿದ್ದಾಗಲೆಲ್ಲಾ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಲೇ ಇರುತ್ತಾರೆ. ಸದ್ಯ ದೇಹ ದಂಡಿಸುವುದಕ್ಕೆ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ.

ಪೂಜಾ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಬಿಡುವಿದ್ದಾಗಲೆಲ್ಲಾ ದಕ್ಷಿಣ ಭಾರತದ ಬ್ಯೂಟಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಗೂ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈಗ ಪೂಜಾ ಹೆಗ್ಡೆ ನಿಧಾನ ಗತಿಯಲ್ಲಿ ವ್ಯಾಯಾಮ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದೇ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪೂಜಾ ಹೆಗ್ಡೆ ಸ್ಲೋ ಮೋಷನ್ ವಿಡಿಯೋ

ಪೂಜಾ ಹೆಗ್ಡೆ ಸ್ಲೋ ಮೋಷನ್ ವಿಡಿಯೋ

ದಕ್ಷಿಣ ಭಾರತದ ಬ್ಯೂಟಿಫುಲ್ ನಟಿ ಪೂಜಾ ಹೆಗ್ಡೆ. ಜನವರಿ 7ರಂದು ಪೂಜಾ ಹೆಗ್ಡೆ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಪೂಜಾ ಹೆಗ್ಡೆ ಶೇರ್ ಮಾಡಿದ ವಿಡಿಯೋದಲ್ಲಿ ಸ್ಲೋ ಮೋಷನ್ ವರ್ಕ್‌ಔಟ್ ಮಾಡುವುದು ಹೇಗೆ ಎಂಬುದನ್ನು ತೋರಿಸಿದ್ದಾರೆ. ಇದು ಈ ವರ್ಷದ ಹೊಸ ಫಿಟ್ನೆಸ್ ಗೋಲ್ ಆಗಿದ್ದು, ಫಿಟ್ನೆಸ್ ಬಗ್ಗೆ ಆಸಕ್ತಿ ಇರುವವರಿಗೆ ವಿಡಿಯೋ ಖಂಡಿತಾ ಇಷ್ಟ ಆಗುತ್ತೆ.

ಪೂಜಾ ಹೆಗ್ಡೆ ಫಿಟ್ನೆಸ್ ವಿಡಿಯೋ

ಪೂಜಾ ಹೆಗ್ಡೆ ಫಿಟ್ನೆಸ್ ವಿಡಿಯೋ

ಸೆಲೆಬ್ರೆಟಿಗಳು ಯಾವಾಗಲೂ ಫಿಟ್ನೆಸ್ ಫ್ರೀಕ್ ಆಗಿರಲೇಬೇಕು. ಹೀಗಾಗಿ ಫಿಟ್ ಆಗಿರಲು ಹೊಸ ಹೊಸ ತಂತ್ರಗಳನ್ನು ಕಂಡುಕೊಳ್ಳಲೇ ಇರುತ್ತಾರೆ. ಈ ಬಾರಿ ಪೂಜಾ ಹೆಗ್ಡೆ ವರ್ಕ್‌ಔಟ್ ಅನ್ನು ನಿಧಾನ ಗತಿಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ವೀಡಿಯೋ ಮಾಡಿದ್ದಾರೆ. ರೆಡ್ ಸ್ಪೋರ್ಟ್ಸ್ ಡ್ರೆಸ್‌ನಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದು, ಫಿಟ್ನಸ್ ಬಗ್ಗೆ ಆಸಕ್ತಿ ಇರುವವರಿಗೆ ಪೂಜಾ ಮಾದರಿಯಾಗಿದ್ದಾರೆ. ಈ ವಿಡಿಯೋವನ್ನು ಪೂಜಾ ಫಿಟ್ನೆಸ್ ಎಕ್ಸ್‌ಪರ್ಟ್ ಸಮೀರ್ ಪುರೋಹಿತ್‌ಗೆ ಟ್ಯಾಗ್ ಮಾಡಿದ್ದಾರೆ. ಅಂದ್ಹಾಗೆ, ಪೂಜಾ ಶೇರ್ ಮಾಡಿದ ವಿಡಿಯೋದಲ್ಲಿ ಸ್ಲೋ ಮೋಷನ್ ವರ್ಕ್ ಔಟ್ ಅನ್ನು ಸಮೀರ್ ಪುರೋಹಿತ್‌ ಹೇಳಿಕೊಟ್ಟಿದ್ದಾರೆ.

ಪೂಜಾ ಹೆಗ್ಡೆ 'ರಾಧೆ ಶ್ಯಾಮ್' ಮುಂದೂಡಿಕೆ

ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ಜೊತೆ ನಟಿಸಿದ 'ರಾಧೆ ಶ್ಯಾಮ್' ಸಿನಿಮಾ ಇದೇ ಜನವರಿ 14ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಹಾಗೂ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಭಾರತದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರ ಬಂದ್ ಆಗಿದೆ. ಕೆಲವೆಡೆ ಶೇ.50 ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ 'ರಾಧೆ ಶ್ಯಾಮ್' ಸಿನಿಮಾವನ್ನು ಚಿತ್ರತಂಡ ಮುಂದೂಡಿದೆ.

2022ರಲ್ಲಿ ಪೂಜಾ ಹೆಗ್ಡೆ ಫುಲ್ ಬ್ಯುಸಿ

2022ರಲ್ಲಿ ಪೂಜಾ ಹೆಗ್ಡೆ ಫುಲ್ ಬ್ಯುಸಿ

ಪೂಜಾ ಹೆಗ್ಡೆ ಕೇವಲ ತೆಲುಗು ಚಿತ್ರರಂಗದಲ್ಲಷ್ಟೇ ಅಲ್ಲ. ಬಾಲಿವುಡ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಮೂರು ವರ್ಷಗಳ ಬಳಿಕ ಬಾಲಿವುಡ್‌ಗೆ ಮರಳಿರುವ ಪೂಜಾ ಹೆಗ್ಡೆ ರೋಹಿತ್ ಶೆಟ್ಟಿ ನಿರ್ದೇಶನದ 'ಸರ್ಕಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಜುಲೈ 2022ಗೆ ಬಿಡುಗಡೆಯಾಗಲಿದೆ. 2019ರಲ್ಲಿ 'ಹೌಸ್‌ಫುಲ್ 4' ಸಿನಿಮಾ ಬಿಡುಗಡೆಯಾಗಿತ್ತು. ಆ ಬಳಿಕ ಮತ್ತೊಂದು ಸಿನಿಮಾ ರಿಲೀಸ್ ಆಗಿರಲಿಲ್ಲ.

More from Filmibeat

English summary
Pooja Hegde Slow and controlled workout movements video going Viral. Pooja Hegde drops major fitness goals in her latest workout video she shared on her Instagram handle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X