ಮಹೇಶ್ ಬಾಬು ಸಿನಿಮಾ ಶೂಟಿಂಗ್‌ಗೂ ಮುನ್ನ 1 ತಿಂಗಳು, 3 ಖಂಡಕ್ಕೆ ಪ್ರವಾಸಕ್ಕೆ ಹೊರಟ ಪೂಜಾ ಹೆಗ್ಡೆ!

ಪೂಜಾ ಹೆಗ್ಡೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ಬ್ಲ್ಯಾಕ್ ಟು ಬ್ಲ್ಯಾಕ್ ಸಿನಿಮಾಗಳಿಗೆ ಸಹಿ ಮಾಡುತ್ತಲೇ ಬೇಡಿಕೆಯ ನಟಿ ಎನ್ನುವ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಈಗಾಗಲೇ ಪೂಜಾ ಹೆಗ್ಡೆ ಬತ್ತಳಿಕೆಯಲ್ಲಿ ಹಲವು ಸಿನಿಮಾಗಳಿದ್ದು, ಬ್ಯುಸಿಯಾಗಿದ್ದಾರೆ. ಈ ಹೊತ್ತಲ್ಲೂ ಪೂಜಾ ಹೆಗ್ಡೆ ಬಿಡುವು ಮಾಡಿಕೊಂಡು ಪ್ರವಾಸಕ್ಕೆ ಹೊರಟಿದ್ದಾರೆ.

ಪೂಜಾ ಹೆಗ್ಡೆ ಸದ್ಯ ಟೂರ್ ಮಾಡುತ್ತಿದ್ದಾರೆ. ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೂಜಾ ಹೆಗ್ಡೆ ಈ ಹಿಂದೆ ಪೂಜಾ ಹೆಗ್ಡೆ ಇಷ್ಟು ದಿನಗಳ ಕಾಲ ರಜೆ ಹಾಕಿ ಟೂರು ಮಾಡಿದ್ದೇ ಇಲ್ಲ. ಆದ್ರೀಗ ಬುಟ್ಟಮೊಮ್ಮ ಟ್ರಾವೆಲಿಂಗ್ ಮೂಡ್‌ನಲ್ಲಿಇದ್ದಾರೆ.

ಪೂಜಾ ಹೆಗ್ಡೆ ಬ್ಯಾಂಕಾಕ್ ಟೂರ್

ಪೂಜಾ ಹೆಗ್ಡೆ ಬ್ಯಾಂಕಾಕ್ ಟೂರ್

ಪೂಜಾ ಹೆಗ್ಡೆ ಸದ್ಯ ಬ್ಯಾಂಕಾಕ್‌ ಕಡೆ ಪ್ರಯಣ ಬೆಳೆಸಿದ್ದಾರೆ. ವಿಮಾನ ಏರಿರುವ ಮುನ್ನ ತೆಗೆದುಕೊಂಡ ಫೋಟೊವನ್ನು ಪೂಜಾ ಹೆಗ್ಡೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಗಾಗಲೇ ಬ್ಯಾಂಕಾಕ್ ತಲುಪಿರುವ ಪೂಜಾ ಹೆಗ್ಡೆ ಅಲ್ಲಿನ ಸಂಗೀತವನ್ನು ಎಂಜಾಯ್ ಮಾಡುತ್ತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ಕೆಲವು ಸ್ನ್ಯಾಪ್‌ಶಾಟ್ಸ್ ಅನ್ನು ಹಂಚಿಕೊಂಡಿದ್ದಾರೆ.

ಒಂದು ತಿಂಗಳು.. 3 ಖಂಡ.. 4 ನಗರ!

ಒಂದು ತಿಂಗಳು.. 3 ಖಂಡ.. 4 ನಗರ!

'ರಾಧೆ ಶ್ಯಾಮ್' ಸಿನಿಮಾದ ಬಳಿಕ ಪೂಜಾ ಹೆಗ್ಡೆಯ ಕೆಲವು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ. ಇನ್ನೊಂದು ಕಡೆ ಹೊಸ ಸಿನಿಮಾ ಸೆಟ್ಟೇರುತ್ತಿದೆ. ಸದ್ಯ ಪೂಜೆ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿರುವ ಪ್ರಕಾರ, ಒಂದು ತಿಂಗಳು ಟ್ರಾವೆಲ್ ಮಾಡಲಿದ್ದಾರೆ. ಅಲ್ಲದೆ ಮೂರು ಖಂಡಗಳ ಪ್ರವಾಸ ಮಾಡಲಿದ್ದಾರೆ. ಅಲ್ಲದೆ ನಾಲ್ಕು ನಗರಗಳನ್ನು ಪೂಜಾ ಹೆಗ್ಡೆ ಸುತ್ತಲಿದ್ದಾರೆ.

ಮಹೇಶ್ ಬಾಬು ಸಿನಿಮಾದಲ್ಲಿ ನಟನೆ

ಮಹೇಶ್ ಬಾಬು ಸಿನಿಮಾದಲ್ಲಿ ನಟನೆ

ಪೂಜಾ ಹೆಗ್ಡೆ ಒಂದು ತಿಂಗಳ ಸುದೀರ್ಘ ಪ್ರವಾಸದ ಬಳಿಕ ಸೀದಾ ಶೂಟಿಂಗ್‌ಗೆ ಮರಳಲಿದ್ದಾರೆ. ಆಗಸ್ಟ್ ತಿಂಗಳಿಂದ ಪೂಜಾ ಹೆಗ್ಡೆ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾ ನಟಿಸಲಿದ್ದಾರೆ. ತ್ರಿವಿಕ್ರಮ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಮಹೇಶ್ ಬಾಬು ಹಾಗೂ ಪೂಜಾ ಹೆಗ್ಡೆ ಈಗಾಗಲೇ ಹಿಟ್ ಸಿನಿಮಾ ಕೊಟ್ಟಿರುವುದರಿಂದ ಈ ಮೂವರು ಕಾಂಬಿನೇಷನ್ ಸಿನಿಮಾ ಮೇಲೆ ಕುತೂಹಲ ದುಪ್ಪಟ್ಟಾಗಿದೆ.

ಸೋಲಿಗೆ ತಲೆಕೆಡಿಸಿಕೊಳ್ಳದ ಪೂಜಾ

ಪೂಜಾ ಹೆಗ್ಡೆ ಅಭಿನಯದ ಮೂರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡಿವೆ. ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್', ವಿಜಯ್ ಸೇತುಪತಿ ಅಭಿನಯದ 'ಬೀಸ್ಟ್' ಹಾಗೂ 'ಆಚಾರ್ಯ' ಸಿನಿಮಾ ಸೋಲುಂಡಿದ್ದವು. ಆದರೆ ಸೋಲಿಗೆ ತಲೆಕೆಡಿಸಿಕೊಳ್ಳದ ಪೂಜಾ ಹೆಗ್ಡೆ ಮತ್ತಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. 'ಕಭಿ ಈದ್ ಕಭಿ ದಿವಾಲಿ', ವಿಜಯ್ ದೇವರಕೊಂಡ ಜೊತೆ 'ಜನ ಗನ ಮನ' ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ಕ್ಯೂ ನಲ್ಲಿವೆ.

More from Filmibeat

English summary
Pooja Hegde Went To Vacation Across Three Continents before Mahesh Babu Movie Starts, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X