ಡಾರ್ಲಿಂಗ್ ಪ್ರಭಾಸ್‌ಗೆ 97 ಬಾರಿ ಕಿಸ್ ಮಾಡಿದ ಪೂಜಾ ಹೆಗ್ಡೆ: ಸೆಂಚುರಿ ಜಸ್ಟ್ ಮಿಸ್

ಈ ವರ್ಷದ ಬಹುನೀರಿಕ್ಷೆಯ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಇದೇ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ ರಾಧೆ ಶ್ಯಾಮ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಒಂದು ವರ್ಷದಿಂದ ಇದೊಂದು ಟ್ರೈಲರ್‌ಗಾಗಿ ಕಾದುಕೂತಿದ್ದ ಅಭಿಮಾನಿಗಳಿಗೆ ರಾಧೆ ಶ್ಯಾಮ್ ಥ್ರಿಲ್ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ರೊಮ್ಯಾಂಟಿಕ್ ಸಿನಿಮಾ ಇಷ್ಟ ಪಡುವವರಿಗೆ ಸಿನಿಮಾದ ಒಂದು ಡೈಲಾಗ್ ಕಿಕ್ ಕೊಟ್ಟಿದೆ.

ಒಂದು ಸಿನಿಮಾ ಹಿಟ್ ಆಗಬೇಕು ಅಂದರೆ, ಆ ಚಿತ್ರದ ಮೊದಲ ಅಟ್ರ್ಯಾಕ್ಷನ್ ಹೀರೋ ಮತ್ತು ಹೀರೋಯಿನ್. 'ರಾಧೆ ಶ್ಯಾಮ್' ಸಿನಿಮಾದ ಹೈಲೈಟ್ ಕೂಡ ಇದೆನೇ. ಇವರಿಬ್ಬರ ಲವ್ ಸ್ಟೋರಿ ಬಿಗ್ ಸ್ಕ್ರೀನ್‌ನಲ್ಲಿ ಹೇಗೆ ಮೂಡಿರಬಹುದು ಎಂಬ ಕುತೂಹಲ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಫ್ಯಾನ್ಸ್‌ಗೆ ಇದ್ದೇ ಇರುತ್ತೆ. ಸಾಲದ್ದಕ್ಕೆ ಈ ಸಿನಿಮಾ ಪೂಜಾ ಹೆಗ್ಡೆ ಡಾರ್ಲಿಂಗ್ ಪ್ರಭಾಸ್‌ಗೆ 97 ಬಾರಿ ಕಿಸ್ ಮಾಡಿರುವ ಸಂಗತಿ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ.

ಪ್ರಭಾಸ್‌ಗೆ 97 ಬಾರಿ ಪೂಜಾ ಕಿಸ್

ಪ್ರಭಾಸ್‌ಗೆ 97 ಬಾರಿ ಪೂಜಾ ಕಿಸ್

'ರಾಧೆ ಶ್ಯಾಮ್' ಸಿನಿಮಾದ ಟ್ರೈಲರ್ ಸಾಕಷ್ಟು ಕುತೂಹಲಗಳನ್ನು ಹುಟ್ಟಾಕಿದೆ. ಇದು ಕೇವಲ ರೊಮ್ಯಾಂಟಿಕ್ ಸಿನಿಮಾ ಅಷ್ಟೇ ಅಲ್ಲ. ಇದೊಂದು ಥ್ರಿಲ್ಲರ್ ಸಿನಿಮಾ ಅನ್ನುವಂತಹ ಸಾಕಷ್ಟು ಅಂಶಗಳು ಈ ಸಿನಿಮಾದಲ್ಲಿ ಇವೆ. ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ಪ್ರಭಾಸ್ ಪ್ರೀತಿ ಪ್ರೇಮದಲ್ಲಿ ಬೀಳುವ ವ್ಯಕ್ತಿಯೇ ಅಲ್ಲ. ಆದರೂ, ಪೂಜಾ ಹೆಗ್ಡೆ ಪ್ರೀತಿಯಲ್ಲಿ ಬಿದ್ದಿದ್ದ ಸನ್ನಿವೇಶಗಳು ರೊಮ್ಯಾಂಟಿಕ್ ಆಗಿ ಇರುತ್ತವೆ ಅನ್ನುವ ಗುಟ್ಟನ್ನು ಟ್ರೈಲರ್ ಬಿಟ್ಟುಕೊಟ್ಟಿದೆ. ಈ ಮಧ್ಯೆ ಪೂಜಾ ಹೆಗ್ಡೆ 97 ಬಾರಿ ಪ್ರಭಾಸ್ ಕಿಸ್ ಮಾಡಿದ್ದಾಗಿಯೂ ಟ್ರೈಲರ್‌ನಲ್ಲಿ ಸಾರಿ ಸಾರಿ ಹೇಳಿದ್ದಾರೆ. ಟ್ರೈಲರ್‌ನಲ್ಲಿ 97 ಕಿಸ್ ಅನ್ನುವ ಪದ ಹಲವು ಬಾರಿ ಬಂದು ಹೋಗುತ್ತೆ. ಯಾಕಂದ್ರೆ, ಪೂಜಾ ಹೆಗ್ಡೆ 97 ಬಾರಿ ಕಿಸ್ ಮಾಡಿದ ಮೇಲೆ ಪ್ರಭಾಸ್, ಪೂಜಾ ಹೆಗ್ಡೆ ಪ್ರೀತಿಯಲ್ಲಿ ಬೀಳುವುದು. ಹೀಗಾಗಿ ರಾಧೆ ಶ್ಯಾಮ್ ಟ್ರೈಲರ್ ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ಗೆದ್ದಿದೆ.

ಪ್ರಭಾಸ್ ಲವರ್ ಬಾಯ್ ಅಷ್ಟೇ ಅಲ್ಲ

ಪ್ರಭಾಸ್ ಲವರ್ ಬಾಯ್ ಅಷ್ಟೇ ಅಲ್ಲ

'ರಾಧೆ ಶ್ಯಾಮ್' ಸಿನಿಮಾ ವಿಕ್ರಮಾದಿತ್ಯ ಹಾಗೂ ಪ್ರೇರಣಾ ಎಂಬ ಎರಡು ಪಾತ್ರಗಳ ಕಥೆ. ಪ್ರೀತಿಯಲ್ಲಿ ನಂಬಿಕೆ ಇರದ ವಿಕ್ರಮಾದಿತ್ಯ ಫ್ಲರ್ಟ್ ಮಾಡುವುದಷ್ಟೇ ಗೊತ್ತು. ಪ್ರೇರಣಾಗೆ ಪ್ರೀತಿ ಮೇಲೆ ಎಲ್ಲಿಲ್ಲದ ನಂಬಿಕೆ. ಇಬ್ಬರು ಪ್ರೀತಿಯಲ್ಲಿ ಬಿದ್ದಾಗ ಏನಾಗುತ್ತೆ? ಇಬ್ಬರ ಪ್ರೀತಿಯ ಬಗ್ಗೆ ವಿಕ್ರಮಾದಿತ್ಯಗೆ ಕಾಣುವ ಭವಿಷ್ಯವೇನು? ವಿಕ್ರಮಾದಿತ್ಯನಲ್ಲಿರುವ ಆಗಾಧ ಶಕ್ತಿ ಏನು ಹೇಳುತ್ತೆ? ಅನ್ನುವುದನ್ನೇ ಟ್ರೈಲರ್‌ನಲ್ಲಿ ತೋರಿಸಿದ್ದಾರೆ. ಹೀಗಾಗಿ ಈ ಟ್ರೈಲರ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಡಾವಿಂಚಿ ಹಡುಗು ಮುಳುಗಿಸಿದ ಟ್ರೈಲರ್!

ಡಾವಿಂಚಿ ಹಡುಗು ಮುಳುಗಿಸಿದ ಟ್ರೈಲರ್!

ಡಾರ್ಲಿಂಗ್ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಟ್ರೈಲರ್ ಹಲವು ಕಾರಣಕ್ಕೆ ಅಭಿಮಾನಿಗಳ ಗಮನ ಸೆಳೆದಿದೆ. ಈ ಟ್ರೈಲರ್‌ ಪ್ರೀತಿ ಬಗ್ಗೆ ಸಾಕಷ್ಟು ಪೀಠಿಕೆ ಹಾಕಿದ್ದರೂ, ಹಡಗು ಮುಳುವ ಸನ್ನಿವೇಶವಿದೆ. ಇದು ರಾಧೆ ಶ್ಯಾಮ್ ಸಿನಿಮಾದ ಬಹುಮುಖ್ಯ ಭಾಗ ಎನ್ನಲಾಗಿದೆ. ವಿಕ್ರಮಾದಿತ್ಯ ಹಾಗೂ ಪ್ರೇರಣಾ ಲವ್ ಸ್ಟೋರಿಯಲ್ಲಿ ಟ್ವಿಸ್ಟ್ ಕೊಡುವುದೇ ಈ ಸಿನಿಮಾ ಎನ್ನಲಾಗಿದೆ. ಹೀಗಾಗಿ ಡಾವಿಂಚಿ ಹಡಗು ಮುಳುಗುವ ಸನ್ನಿವೇಶ ಅಸಲಿ ರಹಸ್ಯ ತಿಳಿಯಲು ಸಿನಿಮಾ ನೋಡಲೇಬೇಕಿದೆ.

 ಬಾಹುಬಲಿ ಇಮೇಜ್‌ನಿಂದ ಹೊರ ಬಂದ ಪ್ರಭಾಸ್

ಬಾಹುಬಲಿ ಇಮೇಜ್‌ನಿಂದ ಹೊರ ಬಂದ ಪ್ರಭಾಸ್

ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಸಿನಿಮಾ ಪ್ರಭಾಸ್‌ಗೆ ಹೊಸ ಇಮೇಜ್ ಕೊಟ್ಟಿದ್ದರೂ, ಅದರಿಂದ ಹೊರ ಬರಲು ಡಾರ್ಲಿಂಗ್ ಸಾಕಷ್ಟು ಪ್ರಯತ್ನ ಪಡಬೇಕಾಗಿತ್ತು. ಬಾಹುಬಲಿ ಗುಂಗಿನಲ್ಲೇ ಇದ್ದ ಪ್ರಭಾಸ್‌ ಅಭಿಮಾನಿಗಳಿಗೆ 'ಸಾಹೋ' ಇಷ್ಟ ಆಗಿರಲಿಲ್ಲ. ಹೀಗಾಗಿ ಆಕ್ಷನ್ ಸಿನಿಮಾಗಳಿಗೆ ಬ್ರೇಕ್ ಹಾಕಿ ಪಕ್ಕಾ ರೊಮ್ಯಾಂಟಿಕ್ ಸಿನಿಮಾ ಕಡೆ ವಾಲಿದ್ದಾರೆ. ಈ ಸಿನಿಮಾ ಪ್ರಭಾಸ್ ಪ್ಯಾನ್ ಇಂಡಿಯಾ ಇಮೇಜ್ ಅನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೆ ಎನ್ನುವುದು ಇನ್ನು ಕೆಲವು ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Pooja Hegde wins Prabhas heart by kissing 97 times in Radhe Shyam Trailer. The trailer of Radhe Shyam, starring Prabhas and Pooja Hegde, is out now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X