For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್: ರಾಜಕೀಯನಾ.. ಸಿನಿಮಾ?

  |

  ಪವರ್‌ಸ್ಟಾರ್ ಸಿನಿಮಾ ಬರ್ತಿದೆ ಅಂದ್ರೆ, ಅವರ ಅಭಿಮಾನಿಗಳು ಥಿಯೇಟರ್ ಮುಂದೆ ಹಬ್ಬ ಮಾಡುತ್ತಾರೆ. ಮೆಗಾ ಕುಟುಂಬದಿಂದ ಬಂದಿದ್ದರೂ, ಪವನ್ ಕಲ್ಯಾಣ್ ತಮ್ಮದೇ ಆದ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಟಾಲಿವುಡ್‌ನ ಪವರ್‌ಸ್ಟಾರ್ ಆಗಿ ಬೆಳೆದಿದ್ದಾರೆ. ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್‌ಗಳಲ್ಲಿ ಇವರೂ ಕೂಡ ಒಬ್ಬರು.

  ವಿಶ್ವದ ಮೂಲೆ ಮೂಲೆಯಲ್ಲಿ ಪವನ್‌ ಕಲ್ಯಾಣ್‌ಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಹುಟ್ಟುಹಬ್ಬ ಬಂತು ಅಂದರೆ, ವಿಶ್ವದಾದ್ಯಂತ ಅಭಿಮಾನಿಗಳು ತಮ್ಮದೇ ಹಬ್ಬ ಎಂಬುವಂತೆ ಸಂಭ್ರಮಿಸುತ್ತಾರೆ. ಅದರಲ್ಲೂ ರಾಜಕೀಯ ಹಾಗೂ ಸಿನಿಮಾ ಎರಡೂ ಕ್ಷೇತ್ರದಲ್ಲೂ ಬ್ಯುಸಿಯಾಗಿರೋ ಪವನ್ ಈ ಬಾರಿಯ ಬರ್ತ್‌ಡೇ ಹೇಗಿರುತ್ತೆ ಅನ್ನೋದೇ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

  Puneeth Rajkumar Birthday : 5 ದಿನ ಅಭಿಮಾನಿಗಳಿಂದ ಪವರ್‌ಸ್ಟಾರ್ ಹುಟ್ಟುಹಬ್ಬ ಆಚರಣೆ: ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್Puneeth Rajkumar Birthday : 5 ದಿನ ಅಭಿಮಾನಿಗಳಿಂದ ಪವರ್‌ಸ್ಟಾರ್ ಹುಟ್ಟುಹಬ್ಬ ಆಚರಣೆ: ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

  'ವಕೀಲ್‌ಸಾಬ್', 'ಭೀಮ್ಲಾ ನಾಯಕ್' ಬಳಿಕ ಮುಂದೇನು?

  ಪವನ್‌ ಕಲ್ಯಾಣ್ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆದರೂ, ರಾಜಕೀಯ ಪಕ್ಷ ಕಟ್ಟಿದ ಬಳಿಕ ಸಿನಿಮಾದಿಂದ ದೂರ ಉಳಿದಿದ್ದರು. ಲಾಂಗ್ ಬ್ರೇಕ್ ಕೊಟ್ಟ ಬಳಿಕ 'ವಕೀಲ್ ಸಾಬ್' ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟಿದ್ದರು. ಆದರೆ, ಪವನ್ ಕಲ್ಯಾಣ್ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಬಿಗ್ ಬ್ರೇಕ್ ಸಿಕ್ಕಿರಲಿಲ್ಲ.

  ಟಾಲಿವುಡ್‌ನ ಟಾಪ್ ಹೀರೊ ಪವರ್ ಸ್ಟಾರ್ ಪವನ್ ಕಲ್ಯಾಣ್ ಇಲ್ಲಿಗೆ ಸುಮ್ಮನೆ ಕೂರಲಿಲ್ಲ. ಕೆಲ ದಿನಗಳ ಹಿಂದಷ್ಟೇ 'ಭೀಮ್ಲಾ ನಾಯಕ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ದಗ್ಗುಬಾಟಿ ರಾಣಾ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾಗರ್ ಕೆ ಚಂದ್ರು ನಿರ್ದೇಶಿಸಿದ ಈ ಸಿನಿಮಾ ಹಲವು ನಿರೀಕ್ಷೆಗಳನ್ನು ಹೊತ್ತು ಬಿಡುಗಡೆಯಾಗುತ್ತು. ಈ ಬಾರಿ 'ಭೀಮ್ಲಾ ನಾಯಕ್‌' ಬಾಕ್ಸಾಫೀಸ್‌ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು.

  'ಭೀಮ್ಲಾ ನಾಯಕ್' ಬಳಿಕ ಮುಂದೇನು?

  'ಭೀಮ್ಲಾ ನಾಯಕ್' ಮೊದಲ ವಾರದ ಬಳಿಕ ಎರಡನೇ ವಾರವ ಕಲೆಕ್ಷನ್ ಭಾರೀ ಇಳಿಕೆ ಕಾಣಲು ಶುರುವಾಗಿತ್ತು. ಸುಮಾರು 97 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಸದ್ಯ ಪವನ್ ಕಲ್ಯಾಣ್ 'ಭೀಮ್ಲಾ ನಾಯಕ್' ಯಶಸ್ಸಿನಿಂದ ಖುಷಿಯಾಗಿದ್ದು, ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಎರಡು ವರ್ಷಗಳ ಹಿಂದೆ ಪವನ್ ಕಲ್ಯಾಣ್ 'ಹರಿಹರ ವೀರಮಲ್ಲು' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಟ್ಯಾಲೆಂಟೆಡ್ ಡೈರೆಕ್ಟರ್ ಕ್ರಿಶ್ ಜಗರ್ಲಮುಡಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರೆ, ಎ ಎಂ ರತ್ನಂ ಬಿಗ್ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಮೊಘಲರ ಕಾಲಘಟ್ಟದ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ವಜ್ರದ ಕಳ್ಳನಾಗಿ ಕಾಣಿಸಿಕೊಳ್ತಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿವೆ.

  Power Star Pawan Kalyan Starrer Harihara Veeramallu Teaser On September 2nd

  ಸಿನಿಮಾ ಆರಂಭ ಆಗುತ್ತಿದ್ದಂತೆ ಬ್ರೇಕ್

  'ಹರಿಹರ ವೀರಮಲ್ಲು' ಸಿನಿಮಾದ ಶೂಟಿಂಗ್ ಶುರುವಾಗುತ್ತಿದ್ದಂತೆ ಹಲವು ಅಡೆತಡೆಗಳು ಎದುರಾಗಿದ್ದವು. ಹೀಗಾಗಿ ಪವನ್ ಕಲ್ಯಾಣ್ ಬ್ರೇಕ್ ತೆಗೆದುಕೊಂಡಿದ್ದರು. ಸದ್ಯ ರಾಜಕೀಯದತ್ತ ಗಮನ ಹರಿಸಿರೋ ಪವನ್ ಕಲ್ಯಾಣ್ ಆದಷ್ಟು ಬೇಗ ಸಿನಿಮಾ ಮುಗಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ.

  ದುಬಾರಿ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ 'ಹರಿಹರ ವೀರಮಲ್ಲು' ಸಿನಿಮಾ ಈ ಹಿಂದೆ ಸಾಕಷ್ಟು ಪ್ರಚಾರ ಮಾಡಿತ್ತು. ಪೋಸ್ಟರ್‌ಗಳೆಲ್ಲಾ ಬೇಜಾನ್ ಸದ್ದು ಮಾಡಿದ್ದವು. ಆದರೆ, ಅಂದ್ಕೊಂಡ ಸಮಯಕ್ಕೆ ಸಿನಿಮಾ ಬಾರದ ಕಾರಣ ಅಭಿಮಾನಿಗಳು ನಿರಾಸೆಗೊಂಡಿದ್ದರು. ಹೀಗಾಗಿ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಖುಷಿಪಡಿಸಲು ನಿರ್ದೇಶಕ ಕ್ರಿಶ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

  'ಹರಿಹರ ವೀರಮಲ್ಲು' ಟೀಸರ್ ರಿಲೀಸ್

  ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಪ್ರಕಾರ, ಪವನ್ ಕಲ್ಯಾಣ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು 'ಹರಿಹರ ವೀರಮಲ್ಲು' ಚಿತ್ರದ ಆಕ್ಷನ್ ಟೀಸರ್ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಇದೇ ಸೆಪ್ಟೆಂಬರ್ 2 ರಂದು 50 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪವರ್‌ಸ್ಟಾರ್ ಪವರ್‌ಫುಲ್ ಟೀಸರ್ ರಿಲೀಸ್ ಆಗಲಿದೆ ಎನ್ನಲಾಗಿದೆ.

  ಪವರ್ ಸ್ಟಾರ್ ಈ ಸಿನಿಮಾದಲ್ಲಿ ಮಾರ್ಷಲ್ ಆರ್ಟ್ಸ್ ತೋರಿಸಲಿದ್ದಾರೆ ಅನ್ನೋ ಮಾತಿದೆ. 'ಹರಿಹರ ವೀರಮಲ್ಲು' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ. ಸದ್ಯ ಈ ಸಿನಿಮಾದ ಶೇಕಡ 60ರಷ್ಟು ಚಿತ್ರೀಕರಣ ಮುಗಿದಿದ್ದು, ಸಂಗೀತ ನಿರ್ದೇಶಕ ಕೀರವಾಣಿ ಸಂಗೀತ ನೀಡುತ್ತಿದ್ದಾರೆ.

  English summary
  Power Star Pawan Kalyan Starrer Harihara Veeramallu Teaser On September 2nd, Know More
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X