ಪವನ್‌ಸ್ಟಾರ್ ಪವನ್ ಕಲ್ಯಾಣ್‌ಗೆ ಅನಾರೋಗ್ಯ: ಜನವಾಣಿ ಕಾರ್ಯಕ್ರಮ ರದ್ದು!

ಟಾಲಿವುಡ್‌ನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಪವನ್ ಕಲ್ಯಾಣ್ ಆರೋಜಿಸಿದ್ದ ಜನವಾಣಿ ಜನಸೇನಾ ಭರೋಸ ಕಾರ್ಯಕ್ರಮವನ್ನು ಒಂದು ವಾರಗಳ ಕಾಲ ಮುಂದೂಡಲಾಗಿದೆ.

ಇತ್ತೀಚೆಗೆ ಪವನ್ ಕಲ್ಯಾಣ್ ಜನವಾಣಿ ಕಾರ್ಯಕ್ರಮದ ಅಂಗವಾಗಿ ಎರಡೂ ಗೋದಾವರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಪವನ್ ಕಲ್ಯಾಣ್ ಆರೋಗ್ಯ ಹದಗೆಟ್ಟಿದೆ ಎಂದು ಹೇಳಲಾಗಿದೆ.

ಪವನ್ ಕಲ್ಯಾಣ್‌ಗೆ ವೈರಲ್ ಫೀವರ್

ಪವನ್ ಕಲ್ಯಾಣ್ ಒಬ್ಬರೇ ಅಲ್ಲ ಇವರೊಂದಿಗೆ ಪಕ್ಷದ ಕೆಲ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರು, ಭದ್ರತಾ ಸಿಬ್ಬಂದಿ ಕೂಡ ಜ್ವರದಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಜನವಾಣಿ ಜನಸೇನಾ ಭರೋಸ ಕಾರ್ಯಕ್ರಮವನ್ನು ಜುಲೈ 24ರ ಬದಲಿಗೆ ಜುಲೈ 31ರಂದು ನಡೆಸಲಾಗುವುದು ಜನಸೇನಾ ರಾಜಕೀಯ ಪಕ್ಷ ತೀರ್ಮಾನಿಸಿದೆ. ಜನವಾಣಿಯ ಸ್ಥಳ, ಮತ್ತಿತರ ವಿವರಗಳನ್ನು ಅತೀ ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಹೇಳಿದೆ.

Power Star Pawan Kalyan Suffering From Viral Fever Janavani Janasena Bharosa Program Postponed

ಪವನ್ ಕಲ್ಯಾಣ್ ಪ್ರತಿ ಭಾನುವಾರ ಜನವಾಣಿ-ಜನಸೇನಾ ಭರೋಸಾ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದರೆ ವೈರಲ್ ಫೀವರ್‌ನಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ವಿಜಯವಾಡ ಮತ್ತು ಭೀಮಾವರಂನಲ್ಲಿ ಈಗಾಗಲೇ ಮೂರು ಹಂತದಲ್ಲಿ ಜನವಾಣಿ ಕಾರ್ಯಕ್ರಮ ಪೂರ್ಣಗೊಂಡಿದೆ. ರಾಯಲಸೀಮಾ ಮತ್ತು ಉತ್ತರಾಂಧ್ರದಲ್ಲಿ ಇನ್ನೆರಡು ಕಾರ್ಯಕ್ರಮಗಳನ್ನು ಪವನ್ ಕಲ್ಯಾಣ್ ಹಮ್ಮಿಕೊಂಡಿದ್ದರು. ಆದರೆ ಅಷ್ಟರಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

Recommended Video

KGF2 100 Days | ಶತಕ ಬಾರಿಸಿದರೂ ಹವಾ ಮಾತ್ರ ಕಡಿಮೆಯಾಗಿಲ್ಲ | Yash | Prashanth Neel *Sandalwood | Filmibeat Kannada

More from Filmibeat

English summary
Power Star Pawan Kalyan Suffering From Viral Fever Janavani Janasena Bharosa Program Postponed, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X