ಟ್ರೋಲ್ ಆಗಿದ್ದ 'ಆದಿಪುರುಷ್' ರಿಲೀಸ್ ಮುನ್ನ ₹432 ಕೋಟಿ ಬ್ಯುಸಿನೆಸ್: ಇಷ್ಟೊಂದು ಹಣ ಬಂದಿದ್ದು ಎಲ್ಲಿಂದ?

'ಆದಿಪುರುಷ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲೇ ಬೇಕಿದೆ. ಪ್ರಭಾಸ್ ವೃತ್ತಿ ಬದುಕಿನ ಮತ್ತೊಂದು ಬಿಗ್ ಬಜೆಟ್ ಸಿನಿಮಾವಿದು. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಗಲ್ಲಾ ಪಟ್ಟೆಗೆಯಲ್ಲಿ ಹೀನಾಯವಾಗಿ ಸೋತರೆ, ಪ್ರಭಾಸ್ ಕರಿಯರ್‌ಗೆ ಮತ್ತೊಂದು ಕಪ್ಪು ಚುಕ್ಕೆ ಪಕ್ಕಾ.

ಈ ಪೌರಾಣಿಕ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ಇಡೀ ಭಾರತೀಯ ಚಿತ್ರರಂಗ ನಿರೀಕ್ಷೆಯನ್ನು ಇಟ್ಟಿದೆ. ಈ ವರ್ಷ ಪ್ಯಾನ್ ಇಂಡಿಯಾ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಹೀಗಾಗಿ ಪ್ರಭಾಸ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.

Prabhas Adipurush Movie covered Rs. 432 crore out of Rs. 500 crore budget before release

'ಆದಿಪುರುಷ್' ಟೀಸರ್‌ಗೆ ಸಿಕ್ಕ ರೆಸ್ಪಾನ್ಸ್ ನೋಡಿ ಇಡೀ ಚಿತ್ರತಂಡವೇ ಅದುರಿ ಹೋಗಿತ್ತು. 500 ಕೋಟಿ ರೂ. ಬಜೆಟ್ ಸಿನಿಮಾ ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಮಾಡೋದೇ ಇಲ್ಲ ಅಂತ ಕೆಲವರು ಭವಿಷ್ಯ ನುಡಿದಿದ್ದರು. ಆದರೆ, ಆ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ. ಬಿಡುಗಡೆಗೂ ಮುನ್ನವೇ ಶೇ. 85ರಷ್ಟು ಬಜೆಟ್ ಕವರ್ ಆಗಿದೆ.

ಬಿಡುಗಡೆಗೂ ಮುನ್ನವೇ ₹432 ಕೋಟಿ ಕಲೆಕ್ಷನ್

ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೂ ಮುನ್ನ ಪ್ರಾಫಿಟ್‌ನಲ್ಲಿ ಇರುತ್ತೆ. ಇಲ್ಲಾ ನಷ್ಟದಲ್ಲಿರುತ್ತೆ. 'ಆದಿಪುರುಷ್' ನಷ್ಟದಲ್ಲೇ ಇರುತ್ತೆ. ಯಾರೂ ಈ ಸಿನಿಮಾವನ್ನು ಖರೀದಿ ಮಾಡುವ ಧೈರ್ಯ ಮಾಡೋದಿಲ್ಲ ಅಂತನೇ ಹೇಳಲಾಗಿತ್ತು. ಹಾಗಂದುಕೊಂಡಿದ್ದೆಲ್ಲ ಸುಳ್ಳಾಗಿದೆ. 500 ಕೋಟಿ ಬಜೆಟ್ ಸಿನಿಮಾ ರಿಲೀಸ್‌ಗೆ ಇನ್ನು 15 ದಿನ ಬಾಕಿ ಇರುವಾಗಲೇ ಶೇ.85ರಷ್ಟು ಕಲೆಕ್ಷನ್ ಮಾಡಿದೆ.

Prabhas Adipurush Movie covered Rs. 432 crore out of Rs. 500 crore budget before release

ಹೌದು, 'ಆದಿಪುರುಷ್' ಸಿನಿಮಾ ಈಗಾಗಲೇ 432 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಹಾಗಂತ ಇದು ಇಲ್ಲಿಗೆ ನಿಂತಿಲ್ಲ. ಇನ್ನೂ ಈ ಸಿನಿಮಾ ಬಿಡುಗಡೆಗೆ 14 ದಿನಗಳು ಬಾಕಿ ಇದೆ. ಅಷ್ಟರೊಳಗೆ ಹಾಕಿದ ಬಂಡವಾಳವನ್ನೆಲ್ಲಾ ಕವರ್ ಮಾಡುವ ಸಾಧ್ಯತೆಯಿದೆ.

₹432 ಕೋಟಿ ರೂ. ಬಂದಿದ್ದು ಎಲ್ಲಿಂದ?

ಹೆವಿ ಟ್ರೋಲ್ ಆಗಿದ್ದ ಸಿನಿಮಾ ಈ ಮಟ್ಟಿಗೆ ಬ್ಯುಸಿನೆಸ್ ಮಾಡಿದ್ದು ಹೇಗೆ? ಮೂಲಗಳ ಪ್ರಕಾರ, ಓಂ ರಾವತ್ ನಿರ್ದೇಶಿಸಿದ 'ಆದಿಪುರುಷ್' ಸ್ಯಾಟಲೈಟ್ ಹಕ್ಕು, ಮ್ಯೂಸಿಕ್ ಹಕ್ಕು, ಡಿಜಿಟಲ್ ಹಕ್ಕು, ಇನ್ನಿತರ ಹಕ್ಕುಗಳನ್ನು ಸೇಲ್ ಮಾಡಿದೆ. ಇದರಿಂದಾನೇ ಸುಮಾರು 247 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಪ್ರಭಾಸ್, ಕೃತಿ ಸೆನನ್, ಸೈಫ್ ಅಲಿ ಖಾನ್ ಅಂತಹ ಸ್ಟಾರ್ ನಟರು ಒಂದೇ ಸಿನಿಮಾ ನಟಿಸಿರೋದು ಒಳ್ಳೆ ಬ್ಯುಸಿನೆಸ್‌ಗೆ ಕಾರಣ. ಇನ್ನು 185 ಕೋಟಿ ರೂ. ಕೇವಲ ದಕ್ಷಿಣ ಭಾರತದ ಥಿಯೇಟ್ರಿಕ್ ಬ್ಯುಸಿನೆಸ್‌ನಿಂದಲೇ ಬಂದಿದೆ. ಒಟ್ಟು 432 ಕೋಟಿ ರೂ. ಕಲೆಕ್ಷನ್ ಆಗಿದ್ದು, ಈಗಾಗಲೇ ಶೇ.86.4ರಷ್ಟು ಕಲೆಕ್ಷನ್ ಆಗಿದೆ.

500 ಕೋಟಿ ಬಜೆಟ್.. ವಿಎಫ್‌ಎಕ್ಸ್‌ಗೆ ಖರ್ಚು

ಪ್ರಭಾಸ್ ಶ್ರೀ ರಾಮನ ಅವತಾರ ತಾಳಿದ್ದರೆ, ಅತ್ತ ಕೃತಿ ಸೆನನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿಖಾನ್ ರಾವಣನಾಗಿ ಟಕ್ಕರ್ ಕೊಡಲಿದ್ದಾರೆ. 'ಆದಿಪುರುಷ್' ಟೀಸರ್ ರಿಲೀಸ್ ಆಗುತ್ತಿದ್ದಂತೆ ವಿಎಫ್‌ಎಕ್ಸ್ ಬಗ್ಗೆ ಚಿತ್ರತಂಡ ಕಟು ಟೀಕೆಗಳನ್ನು ಎದುರಿಸಿತ್ತು. ಆ ಬಳಿಕ ಸಿನಿಮಾ ಬಿಡುಗಡೆಯನ್ನೂ ಮುಂದೂಡಿತ್ತು.

ಟೀಕೆಯ ಬಳಿಕ ನಿರ್ದೇಶಕ ಓಂ ರಾವತ್ 'ಆದಿಪುರುಷ್' ಸಿನಿಮಾದ ವಿಎಫ್‌ಎಕ್ಸ್ ಮೇಲೆ ಮತ್ತೆ ಕೆಲಸ ಶುರು ಮಾಡಿದ್ದರು. ಕೊನೆಗೂ ಜನವರಿಯಲ್ಲೇ ರಿಲೀಸ್ ಆಗಬೇಕಿದ್ದ ಸಿನಿಮಾ ಜೂನ್ 16ಕ್ಕೆ ಮುಂದೂಡಿತ್ತು. ಅದರಂತೆಯೇ ಈಗ 'ಆದಿಪುರುಷ್' ಇನ್ನು ಕೆಲವೇ ದಿನಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

More from Filmibeat

English summary
Prabhas Adipurush Movie covered Rs. 432 crore out of Rs. 500 crore budget before release, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X