ಕರಣ್‌ ಜೋಹರ್ ಕೊನೆಗೂ ಸಿಕ್ಕಿತು 'ಬಾಹುಬಲಿ' ಡೇಟ್: ಡೈರೆಕ್ಟರ್ ಯಾರು?

ಪ್ರಭಾಸ್ ಇಷ್ಟೊಂದು ಸಿನಿಮಾ ಅದ್ಯಾವಾಗ ಮಾಡುತ್ತಾರೋ ಗೊತ್ತಿಲ್ಲ. ಒಂದರ ಹಿಂದೊಂದು ಸಿನಿಮಾಗಳಿಗೆ ಸಹಿ ಹಾಕುತ್ತಲೇ ಇದ್ದಾರೆ. ಟಾಲಿವುಡ್ ಮೂಲಗಳ ಪ್ರಕಾರ, ಪ್ರಭಾಸ್ ಇನ್ನೂ 4 ರಿಂದ 5 ವರ್ಷ ಬ್ಯುಸಿಯಾಗಿದ್ದಾರೆ. ಕೈ ತುಂಬಾ ಸಿನಿಮಾಗಳಿದ್ದರೂ, ಒಂದೊಂದೇ ಹೊಸ ಸಿನಿಮಾಗೆ ಸಹಿ ಹಾಕುತ್ತಿದ್ದಾರೆ. ಲೆಟೆಸ್ಟ್ ವಿಷಯ ಏನಪ್ಪಾ ಅಂದರೆ, ಯಂಗ್ ರೆಬೆಲ್ ಸ್ಟಾರ್ ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್‌ ಜೋಹರ್‌ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

'ಬಾಹುಬಲಿ' ಸಿನಿಮಾ ಬಿಡುಗಡೆಯಾದಲ್ಲಿಂದ ಕರಣ್ ಜೋಹರ್ ಹಾಗೂ ಪ್ರಭಾಸ್ ಸಿನಿಮಾ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿತ್ತು. ಕೊನೆಗೂ ಪ್ರಭಾಸ್ ಜೊತೆ ಸಿನಿಮಾ ಮಾಡುವ ಬಾಲಿವುಡ್ ನಿರ್ಮಾಪಕನ ಕನಸು ಈಡೇರಿದೆ. ಇಬ್ಬರು ದೈತ್ಯರು ಒಂದೇ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದು, ಅಧಿಕೃತ ಮಾಹಿತಿ ಇಬ್ಬರಿಂದಲೂ ಹೊರಬೀಳಬೇಕಿದೆ ಅಷ್ಟೇ.

 ಕರಣ್‌ ಜೊತೆ 'ಬಾಹುಬಲಿ' ಪ್ರಭಾಸ್ ಸಿನಿಮಾ

ಕರಣ್‌ ಜೊತೆ 'ಬಾಹುಬಲಿ' ಪ್ರಭಾಸ್ ಸಿನಿಮಾ

'ಬಾಹುಬಲಿ' ಸಿನಿಮಾ ಬಿಡುಗಡೆಯಾದಲ್ಲಿಂದ ಕರಣ್ ಜೋಹರ್ ಯಂಗ್ ರೆಬೆಲ್ ಪ್ರಭಾಸ್ ಜೊತೆ ಸಿನಿಮಾ ಮಾಡುವುದಕ್ಕೆ ಕಾದು ಕೂತಿದ್ದರು. ಕರಣ್ ಹಾಗೂ ಪ್ರಭಾಸ್ ಇಬ್ಬರೂ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದರೂ, ಇಬ್ಬರೂ ಜೊತೆಯಾಗಿ ಸಿನಿಮಾ ಅನೌನ್ಸ್ ಮಾಡಲೇ ಇಲ್ಲ. ಐದಾರು ವರ್ಷದ ಬಳಿಕ ಕರಣ್ ಜೋಹರ್‌ಗೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಡೇಟ್ ಸಿಕ್ಕಿದೆ. ಇಬ್ಬರೂ ಅಧಿಕೃತ ಮಾಹಿತಿಯನ್ನು ನೀಡುವುದಷ್ಟೇ ಬಾಕಿ ಎಂದು ಹೇಳಲಾಗುತ್ತಿದೆ.

 ಕರಣ್‌-ಪ್ರಭಾಸ್ ಸಿನಿಮಾಗೆ ಡೈರೆಕ್ಟರ್ ಯಾರು?

ಕರಣ್‌-ಪ್ರಭಾಸ್ ಸಿನಿಮಾಗೆ ಡೈರೆಕ್ಟರ್ ಯಾರು?

ಬಾಲಿವುಡ್‌ನ ಟಾಪ್ ಪ್ರಡ್ಯೂಸರ್ ಕರಣ್ ಜೋಹರ್, ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಇಬ್ಬರು ದಿಗ್ಗಜರು ಒಟ್ಟಿಗೆ ಸೇರಿದ್ದಾರೆ. ಈ ಸಿನಿಮಾ ಟೇಕ್ ಆಫ್ ಆಗಿದ್ದೇ ಆದರೆ, ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಹೀಗಾಗಿಯೇ ಈ ಸಿನಿಮಾ ನಿರ್ದೇಶನ ಮಾಡುವುದು ಯಾರು? ಕರಣ್ ಜೋಹರ್ ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡುತ್ತಾರಾ? ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ, 'ಮಹಾನಟಿ' ನಿರ್ದೇಶಕ ನಾಗ ಅಶ್ವಿನ್ ಈ ಸಿನಿಮಾವನ್ನು ನಿರ್ದೇಶನ ಮಾಡಬಹುದು ಎನ್ನಲಾಗಿದೆ. ಈಗಾಗಲೇ ಪ್ರಭಾಸ್, ದೀಪಿಕಾ ನಟಿಸುತ್ತಿರುವ ಸಿನಿಮಾಗೆ ನಾಗ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

 ಪ್ರಭಾಸ್ ಸಂಭಾವನೆಗೆ ಬೆಚ್ಚಿಬಿದ್ದಿದ್ದ ಕರಣ್

ಪ್ರಭಾಸ್ ಸಂಭಾವನೆಗೆ ಬೆಚ್ಚಿಬಿದ್ದಿದ್ದ ಕರಣ್

ಬಾಹುಬಲಿ ಸಿನಿಮಾದ ಬಳಿಕ ಕರಣ್ ಜೋಹರ್ ಯಂಗ್ ರೆಬೆಲ್ ಪ್ರಭಾಸ್‌ಗೆ ಸಿನಿಮಾ ಆಫರ್ ಮಾಡಿದ್ದರು. ಯಶಸ್ಸಿನ ತುತ್ತತುದಿಯಲ್ಲಿದ್ದ ಪ್ರಭಾಸ್ ದುಬಾರಿ ಸಂಭಾವನೆಯನ್ನು ಕೇಳಿದ್ದರು ಎನ್ನಲಾಗಿದೆ. ಆದರೆ, ಕರಣ್ ಜೋಹರ್ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ನೀಡಲು ರೆಡಿಯಿರಲಿಲ್ಲ. ಹೀಗಾಗಿ ಪ್ರಭಾಸ್ ಕೇಳಿದ ಸಂಭಾವನೆ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ. ಹೀಗಾಗಿ ನಾಲ್ಕೈದು ವರ್ಷಗಳ ಹಿಂದೆನೇ ಸೆಟ್ಟೇರಬೇಕಿದ್ದ ಸಿನಿಮಾ, ಈ ವರ್ಷ ಆರಂಭ ಆಗಲಿದೆ ಎನ್ನುತ್ತಿದೆ ಬಾಲಿವುಡ್ ಮೂಲಗಳು.

 ಬಾಹುಬಲಿ ಗಳಿಕೆಗೆ ಬೆರಗಾಗಿದ್ದ ಕರಣ್

ಬಾಹುಬಲಿ ಗಳಿಕೆಗೆ ಬೆರಗಾಗಿದ್ದ ಕರಣ್

'ಬಾಹುಬಲಿ 2' ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 500 ಕೋಟಿಗೂ ಅಧಿಕ ಹಣವನ್ನು ಕಲೆಹಾಕಿತ್ತು. ಹಿಂದಿಯಲ್ಲಿ ಕರಣ್ ಜೋಹರ್ ಈ ಸಿನಮಾವನ್ನು ವಿತರಣೆ ಮಾಡಿದ್ದರು. ಅಲ್ಲಿಂದ ಪ್ರಭಾಸ್‌ ಜೊತೆಗೊಂದು ಸಿನಿಮಾ ಮಾಡಲು ಬಯಸಿದ್ದರು. ಆದರೆ, ಸಂಭಾವನೆ ವಿಷಯಕ್ಕೆ ಇಬ್ಬರಲ್ಲೂ ಒಮ್ಮತ ಮೂಡದ ಕಾರಣ ಇದು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಸದ್ಯ ಒಂದರ ಹಿಂದೊಂದು ಸಿನಿಮಾ ಮಾಡುತ್ತಿದ್ದರೂ ಪ್ರಭಾಸ್ ಬಾಲಿವುಡ್ ನಿರ್ಮಾಪಕನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದ್ಯಾವಾಗ ಇಬ್ಬರೂ ಒಟ್ಟಿಗೆ ಸಿನಿಮಾ ಅನೌನ್ಸ್ ಮಾಡುತ್ತಾರೋ ಅನ್ನುವ ಕುತೂಹಲ ಡಾರ್ಲಿಂಗ್ ಅಭಿಮಾನಿಗಳಲ್ಲಿದೆ.

More from Filmibeat

English summary
Prabhas agreed to work with Bollywood film maker Karan Johar. Finally Karana Johar locked Prabhas for his next project. The official confirmation is awaited regarding this project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X