'ಆದಿಪುರುಷ'ನಾದ್ಮೇಲೆ ವಿಷ್ಣುವಿನ ಅವತಾರದಲ್ಲಿ ಪ್ರಭಾಸ್? ₹600 ಕೋಟಿ 'ಪ್ರಾಜೆಕ್ಟ್‌ ಕೆ'ಗೆ ದುಬಾರಿ ಟ್ವಿಸ್ಟ್?

'ಬಾಹುಬಲಿ' ಬಳಿಕ ಪ್ರಭಾಸ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿಲ್ಲ. ನಿರ್ದೇಶಕರು ಡಾರ್ಲಿಂಗ್ ಪ್ಯಾನ್ ಇಂಡಿಯಾ ಇಮೇಜ್ ಬಳಸಿಕೊಳ್ಳುವಲ್ಲಿ ಸೋತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆನೇ 'ಆದಿಪುರುಷ್'.

'ಆದಿಪುರುಷ್' ಈ ವರ್ಷದ ಮೆಗಾ ಬ್ಲಾಕ್‌ಬಸ್ಟರ್ ಆಗುವ ಎಲ್ಲಾ ಸಾಧ್ಯತೆಗಳೂ ಇತ್ತು. ಆದರೆ, ನಿರ್ದೇಶಕರ ತಪ್ಪು ಹೆಜ್ಜೆ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ಆದರೂ, ಪ್ರಭಾಸ್ ಇಮೇಜ್‌ನಿಂದ 'ಆದಿಪುರುಷ್' ವಿಶ್ವದಾದ್ಯಂತ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಹೀಗಿದ್ದರೂ ನಿರ್ಮಾಪಕರ ಭಾರೀ ನಷ್ಟದಲ್ಲಿರೋದು ಅಷ್ಟೇ ಸತ್ಯ.

'ಆದಿಪುರುಷ್' ಬಳಿಕ ಪ್ರಭಾಸ್ ಅಭಿಮಾನಿಗಳ ಫೋಕಸ್ 'ಸಲಾರ್' ಹಾಗೂ 'ಪ್ರಾಜೆಕ್ಟ್ ಕೆ' ಮೇಲಿದೆ. ಅದರಲ್ಲೂ ನಾಗ ಅಶ್ವಿನ್ ನಿರ್ದೇಶಿಸುತ್ತಿರುವ 'ಪ್ರಾಜೆಕ್ಟ್ ಕೆ' ಸಿನಿಮಾ ಒಂದೊಂದು ಅಚ್ಚರಿಗಳು ಹೊರಬೀಳುತ್ತಿವೆ. ಸದ್ಯ ಈ ಸಿನಿಮಾದಲ್ಲಿ ಪ್ರಭಾಸ್ ಪಾತ್ರವೇನು? ಅನ್ನೋದನ್ನು ಕೆಲವು ತೆಲುಗು ಮಾಧ್ಯಮಗಳು ಹುಡುಕಿ ತೆಗೆದಿವೆ. ಅದೇನು ಅಂತ ನೋಡುವುದಕ್ಕೆ ಮುಂದೆ ಓದಿ.

Prabhas Project K Vishnu Role

ಪ್ರಭಾಸ್ ಮತ್ತೊಂದು ಪೌರಾಣಿಕ ಪಾತ್ರ

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್‌ಗೀಗ ಚಿಕ್ಕ ಪುಟ್ಟ ಸಿನಿಮಾ ಮಾಡೋಕೆ ಸಾಧ್ಯವಿಲ್ಲ. ದೊಡ್ಡ ದೊಡ್ಡ ಬಜೆಟ್ ಸಿನಿಮಾಗಳನ್ನೇ ಮಾಡಬೇಕಿದೆ. ಆ ನಿಟ್ಟಿನಲ್ಲೇ ನಿರ್ಮಾಣ ಸಂಸ್ಥೆಗಳು ಕೂಡ ಬಿಗ್ ಬಜೆಟ್ ಸಿನಿಮಾಗಳನ್ನೇ ನಿರ್ಮಿಸುತ್ತಿವೆ. ಅದರಲ್ಲೊಂದು ನಾಗ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್ ಕೆ'. 'ಆದಿಪುರುಷ್' ಸೋಲಿನ ಬೆನ್ನಲ್ಲೇ ಈ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ.

'ಆದಿಪುರುಷ್' ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಪ್ರಭಾಸ್ ಶ್ರೀರಾಮನಾಗಿ ದರ್ಶನ ಕೊಟ್ಟಿದ್ದರು. ಆದರೆ, ಸಿನಿಮಾ ಜನರಿಗೆ ಇಷ್ಟ ಆಗಿಲ್ಲ. ಪ್ರಭಾಸ್ ಶ್ರೀರಾಮ ಅವತಾರ ಇಷ್ಟ ಆಗಿತ್ತು. ಈಗ ಮತ್ತೊಂದು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಿವೆ ಟಾಲಿವುಡ್ ಮೂಲಗಳು. 'ಪ್ರಾಜೆಕ್ಟ್ ಕೆ'ನಲ್ಲಿ ಪ್ರಭಾಸ್ ವಿಷ್ಣುವಿನ ಅವತಾರದಲ್ಲೂ ಕಾಣಿಸಿಕೊಳ್ಳುತ್ತಾರಂತೆ.

'ಪ್ರಾಜೆಕ್ಟ್ ಕೆ'ನಲ್ಲಿ ವಿಷ್ಣುವಿನ ಅವತಾರ

'ಪ್ರಾಜೆಕ್ಟ್ ಕೆ' ಸಿನಿಮಾ ವೈಜ್ಞಾನಿಕ ಯುಗ ಹಾಗೂ ಪೌರಾಣಿಕ ಯುಗ ಎರಡರ ಸಂಮಿಶ್ರಣ ಅನ್ನೋ ಮಾತು ಕೇಳಿಬರುತ್ತಿದೆ. ಹೀಗಾಗಿ ಪ್ರಭಾಸ್ ಮತ್ತೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಆದಿಪುರುಷ್‌'ನಲ್ಲಿ ರಾಮನಾದರೆ, ಪ್ರಾಜೆಕ್ಟ್‌ನಲ್ಲಿ ವಿಷ್ಣುವಿನ ಅವತಾರವೆತ್ತಲಿದ್ದಾರೆ ಎಂದು ವರದಿಯಾಗಿದೆ.

ವೈಜ್ಞಾನಿಕ ಯುಗದಲ್ಲಿ ಪ್ರಭಾಸ್ ವಿಷ್ಣುವಿನ ಅವತಾರವೆತ್ತಿ ದುಷ್ಟರವಿರುದ್ಧ ಹೋರಾಟ ಮಾಡಲಿದ್ದಾರೆ. ಇದೇ ಇನ್ನೊಂದು ಸನ್ನಿವೇಶಗಳಲ್ಲಿ ಪ್ರಭಾಸ್ ಸಾಕ್ಷಾತ್ ವಿಷ್ಣು ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ಯುಗದ ಕಥೆಯನ್ನು ನಾಗ ಅಶ್ವಿನ್ ಮಿಶ್ರಣ ಮಾಡಿ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇನಾದ್ರೂ ನಿಜವಾದ್ರೆ, ಪ್ರೇಕ್ಷಕರಿಗೆ ಅದ್ಭುತ ವಿಜ್ಯೂವಲ್ ಟ್ರೀಟ್ ಸಿಗೋದಂತೂ ಪಕ್ಕಾ.

Prabhas Project K Vishnu Role

ತೆಲುಗಿನ ದುಬಾರಿ ಸಿನಿಮಾ 'ಪ್ರಾಜೆಕ್ಟ್ ಕೆ'

'ಪ್ರಾಜೆಕ್ಟ್ ಕೆ' ತೆಲುಗು ಚಿತ್ರರಂಗದ ದುಬಾರಿ ಸಿನಿಮಾ. 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿದ್ದು, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಕಮಲ್ ಹಾಸನ್ ಅಂತಹ ದಿಗ್ಗಜರು ನಟಿಸಿದ್ದಾರೆ. ಹೀಗಾಗಿ ದೊಡ್ಡ ಕ್ಯಾನ್ವಸ್‌ನಲ್ಲೇ ಸಿನಿಮಾ ನಿರ್ಮಾಣ ಆಗುತ್ತಿದೆ.

ಮೂಲ ಭಾಷೆ ತೆಲುಗು ಆಗಿದ್ದರೂ, ಕನ್ನಡ, ತಮಿಳು,ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. 2024, ಜನವರಿ 12ರಂದು ಸಿನಿಮಾ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಈ ಮಧ್ಯೆ 'ಸಲಾರ್' ಕೂಡ ಕ್ಯೂನಲ್ಲಿದೆ. ಹೀಗಾಗಿ ಕೇವಲ ಮೂರು ತಿಂಗಳ ಅಂತರದಲ್ಲಿ ಪ್ರಾಜೆಕ್ಟ್ ಕೆ ರಿಲೀಸ್ ಮಾಡುತ್ತಾರಾ? ಅನ್ನೋ ಆತಂಕವಿದೆ.

More from Filmibeat

English summary
Prabhas another mythological role, playing Lord Vishnu in Naga Ashwin's Project K, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X