Kalki 2898 AD:ಹಾಲಿವುಡ್ ಸಿನಿಮಾಗಳಿಗೇನು ಕಮ್ಮಿಯಿಲ್ಲ; 'ಕಲ್ಕಿ 2898 AD'ಟ್ರೈಲರ್ ಚಿಂದಿ
ಈ ವರ್ಷದ ಬಹು ನಿರೀಕ್ಷೆಯ ಸಿನಿಮಾ 'ಕಲ್ಕಿ 2898 ಎಡಿ' ಬಿಡುಗಡೆ ಇನ್ನೇನು ಕೆಲವೇ ದಿನಗಳಿ ಬಾಕಿ ಉಳಿದಿವೆ. 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಆ ಕುತೂಹಲಕ್ಕೆ ಮುನ್ನುಡಿ ಬರೆಯುವುದಕ್ಕೆ ಟ್ರೈಲರ್ ರಿಲೀಸ್ ಆಗಿದೆ.
'ಕಲ್ಕಿ 2898 ಎಡಿ' ನೋಡಿದವರಿಗೆ ಇದ್ಯಾವುದೇ ಹಾಲಿವುಡ್ ಸಿನಿಮಾಗೂ ಕಮ್ಮಿಯಿಲ್ಲ ಅನ್ನುವಂತಿದೆ. ದಕ್ಷಿಣ ಭಾರತದ ಸಿನಿಮಾವೊಂದರ ಟ್ರೈಲರ್ ಹಾಲಿವುಡ್‌ನ ಬಹುಕೋಟಿ ವೆಚ್ಚದ ಟ್ರೈಲರ್‌ಗಳಿಗೆ ಸೆಡ್ಡು ಹೊಡೆಯುವಂತಿದೆ. ಸದ್ಯ ಈ ಟ್ರೈಲರ್ ನೋಡಿ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಕಲ್ಕಿ 2898 AD' ಸಿನಿಮಾದ ಟ್ರೈಲರ್ ಅಮೆಜಾನ್ ಪ್ರೈಮ್‌ನಲ್ಲಿ ಬಿ&ಬಿ ಬುಜ್ಜಿ ಮತ್ತು ಭೈರವ ಮುನ್ನುಡಿ ರಿಲೀಸ್ ಆದ ಬಳಿಕ ಬಿಡುಗಡೆಯಾಗಿದೆ. ಕಳೆದ ಹಲವು ತಿಂಗಳಿನಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ವೈಜಯಂತಿ ಮೂವೀಸ್ ಬಿಗ್ ಸರ್ಪ್ರೈಸ್ ಕೊಟ್ಟಿದೆ. ಯೂಟ್ಯೂಬ್ ಚಾನಲ್‌ನಲ್ಲಿ ಈ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ.
'ಕಲ್ಕಿ 2898 AD' ಇದೊಂದು ವೈಜ್ಞಾನಿಕ ಕಾಲ್ಪನಿಕ ಮಹಾಕಾವ್ಯ. ಎರಡು ನಿಮಿಷ ಮತ್ತು ಐವತ್ತೊಂದು ಸೆಕೆಂಡ್‌ಗಳ ಈ ಸಿನಿಮಾ ಟ್ರೈಲರ್ ಸಿನಿಪ್ರಿಯರಿಗೆ ಮಸ್ತ್ ಮನರಂಜನೆ ಕೊಟ್ಟಿದೆ. ಸಿನಿಮಾ ವಿಎಫ್‌ಎಕ್ಸ್ ಹಾಲಿವುಡ್ ಲೆವೆಲ್‌ನಲ್ಲಿದೆ. ಅಂದ್ಹಾಗೆ ಈ ಸಿನಿಮಾ ತೆಲುಗು ಅಷ್ಟೇ ಅಲ್ಲದೆ ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನು ಸಿನಿಮಾದ ಟ್ರೈಲರ್ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್, "ಇಂದು ನನ್ನ ಹೃದಯವು ಹಲವು ಮಿಕ್ಸ್‌ಡ್ ಭಾವನೆಗಳಿಂದ ತುಂಬಿದೆ. ಒಬ್ಬ ಚಲನಚಿತ್ರ ನಿರ್ದೇಶಕನಾಗಿ, ನಾನು ಯಾವಾಗಲೂ ಭಾರತೀಯ ಪುರಾಣ ಮತ್ತು ವೈಜ್ಞಾನಿಕ ಕಾದಂಬರಿಗಳಿಂದ ಆಕರ್ಷಿತನಾಗಿದ್ದೇನೆ. 'ಕಲ್ಕಿ 2898 AD' ಸಿನಿಮಾದಲ್ಲಿ ಈ ಎರಡು ಅಂಶಗಳನ್ನು ವಿಲೀನಗೊಳಿಸಿದ್ದೇವೆ. ನಮ್ಮ ಕಲಾವಿದರು ಮತ್ತು ತಂಡದ ಅಸಾಧಾರಣ ಪ್ರತಿಭೆ ಮತ್ತು ಸಮರ್ಪಣಾ ಮನೋಭಾವದಿಂದ ಕನಸೊಂದು ನನಸಾಗಿದೆ." ಎಂದು ಹೇಳಿಕೊಂಡಿದ್ದಾರೆ.
'ಕಲ್ಕಿ 2898 AD' ಈ ವರ್ಷದ ಅತೀ ನಿರೀಕ್ಷಿತ ಸಿನಿಮಾ ಆಗಿದ್ದು, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಪಾತ್ರಗಳು ಇಂಟ್ರೆಸ್ಟಿಂಗ್ ಆಗಿವೆ. ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಕೂಡ ಗಮನ ಸೆಳೆದಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್ 600 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶಿಸಿರುವ ಈ ಸಿನಿಮಾ ವಿಶ್ವದಾದ್ಯಂತ ಜೂನ್ 27ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.


Click it and Unblock the Notifications











