ಮಹಾಶಿವರಾತ್ರಿಯಂದು 'ಸಂಕ್ರಾಂತಿ' ಸಮರದ ಸುಳಿವು: ಪ್ರಭಾಸ್ 'Project K'ರಿಲೀಸ್‌ಗೆ ಮುಹೂರ್ತ!
ಈ ವರ್ಷ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಅಭಿಮಾನಿಗಳಿಗೆ ಹಬ್ಬ. ಯಾಕಂದ್ರೆ, 2023ಯಲ್ಲಿ ಕಮ್ಮಿ ಅಂದ್ರೂ ಪ್ರಭಾಸ್ ನಟನೆಯ ಎರಡು ಸಿನಿಮಾ ರಿಲೀಸ್ ಆಗೋದು ಫಿಕ್ಸ್. ಇದೇ ಖುಷಿಯಲ್ಲಿ ಮೂರನೇ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.
ಪ್ರಭಾಸ್, ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ಕಾಂಬಿನೇಷನ್ ಸಿನಿಮಾ ನೋಡುವುದಕ್ಕೆ ಇಡೀ ದೇಶವೇ ಕಾದುಕೂತಿದೆ. ಈ ಹೊತ್ತಲ್ಲೇ ಮಹಾಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ 'Project K' ತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
'ಮಹಾನಟಿ' ಸಿನಿಮಾ ನಿರ್ದೇಶಿಸಿದ್ದ ನಾಗ ಅಶ್ವಿನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂವರೆಗೂ ಹೆಚ್ಚಿನದ್ದೇನನ್ನೂ ಅನೌನ್ಸ್ ಮಾಡದ ತಂಡ ನೇರವಾಗಿ ರಿಲೀಸ್ ಡೇಟ್ ಅನ್ನೇ ಅನೌನ್ಸ್ ಮಾಡಿದೆ. 2024 ಜನವರಿ 12ಕ್ಕೆ ಈ 'ಪ್ರಾಜೆಕ್ಟ್ ಕೆ' ರಿಲೀಸ್ ಆಗಲಿದ್ದು, ಅದೇ ಡೇಟ್ ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'Project K' ಸಂಕ್ರಾಂತಿ ಕ್ಲ್ಯಾಶ್
ಮಹಾಶಿವರಾತ್ರಿ ಹಬ್ಬದ ಈ ಶುಭ ಸಂದರ್ಭದಲ್ಲಿ 'Project K' ತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. 2024 ಜನವರಿ 12ರಂದು ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿಕೊಂಡಿದೆ. ಅಷ್ಟಕ್ಕೂ ಇದೇ ಡೇಟ್ ಯಾಕೆ? ಹೆಚ್ಚು ಕಡಿಮೆ ಒಂದು ವರ್ಷದ ಮುನ್ನ ಬಿಡುಗಡೆ ದಿನವನ್ನು ಅನೌನ್ಸ್ ಮಾಡಿದ್ದು ಯಾಕೆ? ಅನ್ನೋದಕ್ಕೆ ಉತ್ತರ ಸಿಂಪಲ್ ಸಂಕ್ರಾಂತಿ ಬಾಕ್ಸಾಫೀಸ್.
'Project K' ಸಂಕ್ರಾಂತಿ ಲೆಕ್ಕಾಚಾರ
ಪ್ಯಾನ್ ಇಂಡಿಯಾ ಸಿನಿಮಾ 'Project K' ಸಂಕ್ರಾಂತಿ ಮೇಲೆ ಕಣ್ಣಿಟ್ಟಿದೆ. ಟಾಲಿವುಡ್ ಮಂದಿಗೆ ಸಂಕ್ರಾಂತಿ ಹಬ್ಬ ತುಂಬಾನೇ ಸ್ಪೆಷಲ್. ಈ ವೇಳೆ ರಿಲೀಸ್ ಆದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನೇ ಬರೆಯುತ್ತವೆ. ಈ ವರ್ಷ ಕೂಡ ಚಿರಂಜೀವಿ ಹಾಗೂ ಬಾಲಕೃಷ್ಣ ಕಾಂಪಿಟೇಷನ್‌ಗೆ ಬಿದ್ದು ಸಿನಿಮಾ ರಿಲೀಸ್ ಮಾಡಿದ್ದರು. ಮುಂದಿನ ಸಂಕ್ರಾಂತಿಗೆ 'Project K' ಬಾಕ್ಸಾಫೀಸ್ ಅಖಾಡಕ್ಕೆ ಇಳಿಯಲಿದೆ.

'Project K' Vs 'ಫೈಟರ್'
ಪ್ರಭಾಸ್ 'ಪ್ರಾಜೆಕ್ಟ್ ಕೆ' 2024 ಜನವರಿ 12ಕ್ಕೆ ರಿಲೀಸ್ ಆಗುತ್ತಿದೆ. ಅದೇ ಹೃತಿಕ್ ರೋಷನ್ ಅಭಿನಯದ 'ಫೈಟರ್' ಸಿನಿಮಾ ಕೂಡ ಎರಡು ವಾರ ಗ್ಯಾಪ್ ಕೊಟ್ಟು ಬಿಡುಗಡೆಯಾಗುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಬಾರಿ ದೊಡ್ಡ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎರಡೂ ಸಿನಿಮಾಗಳಲ್ಲೂ ದೀಪಿಕಾ ಪಡುಕೋಣೆಯೇ ನಾಯಕಿಯಾಗಿರೋದ್ರಿಂದ ಎರಡೂ ಸಿನಿಮಾಗಳ ಮೇಲೂ ಎಫೆಕ್ಟ್ ಆಗುವ ಸಾಧ್ಯತೆಯಿದೆ.

'Project K'ನಲ್ಲಿ ವಿಎಫ್‌ಎಕ್ಸ್ ಹೈಲೈಟ್
'ಪ್ರಾಜೆಕ್ಟ್ ಕೆ' ಸಿನಿಮಾದ ಬಜೆಟ್ ಸುಮಾರು 500 ಕೋಟಿ ರೂ. ಇಡೀ ಸಿನಿಮಾ ಬಹುತೇಕ ವಿಎಫ್‌ಎಕ್ಸ್ ಹೆಚ್ಚಿರುತ್ತೆ. ಅಲ್ಲದೆ 'ಪ್ರಾಜೆಕ್ಟ್ ಕೆ' ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೆ ದೊಡ್ಡ ಸ್ಟಾರ್ ಕಾಸ್ಟ್ ಇರುವುದರಿಂದ ಸಿನಿಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಿದೆ. ಇನ್ನು ರಿಲೀಸ್ ಡೇಟ್ ಅನೌನ್ಸ್ ಆಗಿರೋದ್ರಿಂದ ಬೇರೆ ತೆಲುಗು ಸಿನಿಮಾವೇನಾದ್ರೂ ಟಕ್ಕರ್ ಕೊಡುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.


Click it and Unblock the Notifications











