'ಸಲಾರ್' ಸಿನಿಮಾ ಬಗ್ಗೆ ಪ್ರಭಾಸ್ ಅಭಿಮಾನಿಗಳಿಗೆ ಆ ಸಿಕ್ಕ ಸುಳಿವು ಏನು?

'ಕೆಜಿಎಫ್ 2' ಮುಗಿಯುತ್ತಿದ್ದಂತೆ ಪ್ರಶಾಂತ್ ನೀಲ್ ಬಿಡುವೇ ಕೊಡದೆ ಅಖಾಡಕ್ಕಿಳಿದಿದ್ದರು. 'ಸಲಾರ್' ಅಡ್ಡಾದಲ್ಲಿ ಸರಸರನೇ ಕೆಲಸ ಶುರುಮಾಡಿದ್ದರು. ಪ್ರಶಾಂತ್ ನೀಲ್ ವೇಗ ನೋಡಿ ಈ ವರ್ಷ ಸಿನಿಮಾ ಮುಗಿಸೋದು ಗ್ಯಾರಂಟಿ ಅಂತಲೇ ನಂಬಲಾಗಿತ್ತು.

ಪ್ರಶಾಂತ್ ನೀಲ್ ಸೆಟ್ಟು ಪ್ರಿಪೇರ್ ಮಾಡುವುದನ್ನು ನೋಡಿ ಥ್ರಿಲ್ ಆಗಿದ್ದ ಪ್ರಭಾಸ್ ಅಭಿಮಾನಿಗಳು ಈ ವರ್ಷ ಸಿನಿಮಾ ನೋಡಬಹುದೆಂಬ ಆಶಾ ಭಾವನೆಯಲ್ಲಿದ್ದರು. ಆದ್ರೀಗ ಅವರಿಗೆ ಈ ವರ್ಷ 'ಸಲಾರ್' ರಿಲೀಸ್ ಆಗಲ್ಲ ಅನ್ನೋದು ಗೊತ್ತಾಗಿ ಹೋಗಿದೆ.

'ಸಲಾರ್' ಈ ವರ್ಷ ಬಿಡುಗಡೆಯಾಗಲ್ಲ ಅನ್ನುವ ಬೇಸರ ಅವರ ಅಭಿಮಾನಿಗಳಿಗೆ ಇಲ್ಲ. ಯಾಕಂದ್ರೆ, ಅವರಿಗೆ ಈ ಸಿನಿಮಾ ಬಗ್ಗೆ ಅವರಿಗೇ ಒಂದು ಸುಳಿವು ಸಿಕ್ಕಿದೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಪ್ರಭಾಸ್ ಫ್ಯಾನ್ಸ್‌ಗೆ ಸಿಕ್ಕ ಆ ಸುಳಿವು ಯಾವುದು? ನೀವೇ ನೋಡಿ.

'ಸಲಾರ್' ಮೇಲೆ ಎಲ್ಲರ ಕಣ್ಣು

'ಸಲಾರ್' ಮೇಲೆ ಎಲ್ಲರ ಕಣ್ಣು

'ಕೆಜಿಎಫ್ 2' ದಾಖಲೆಗಳನ್ನು ಮುರಿಯುತ್ತಿದ್ದಂತೆ ಎಲ್ಲರ ಕಣ್ಣು ಈಗ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ಮೇಲಿದೆ. ಒಂದು ಕಡೆ ಪ್ಯಾನ್ ಇಂಡಿಯಾ ಸೂಪರ್‌ ಸ್ಟಾರ್ ಪ್ರಭಾಸ್. ಇನ್ನೊಂದು ಕಡೆ ಮೆಗಾ ಬ್ಲಾಕ್‌ಬಸ್ಟರ್‌ ನೀಡಿದ ಪ್ರಶಾಂತ್ ನೀಲ್. ಇವರಿಬ್ಬರೂ ಒಟ್ಟಿಗೆ ಸೇರಿದರೆ, ಆ ಸಿನಿಮಾ ಹೇಗಿರಬಹುದು ಎಂಬ ಕುತೂಹಲವಂತೂ ಇದ್ದೇ ಇದೆ. ಇನ್ನೊಂದು ಕಡೆ ಡಾರ್ಲಿಂಗ್ ಫ್ಯಾನ್ಸ್ ಈ ಸಿನಿಮಾ ಬಗ್ಗೆ ಅವರದ್ದೇ ಕಲ್ಪನೆಯಲ್ಲಿದ್ದಾರೆ.

ಪ್ರಭಾಸ್ ಫ್ಯಾನ್ಸ್‌ಗೆ ಸಿಕ್ಕ ಸುಳಿವೇನು?

ಪ್ರಭಾಸ್ ಫ್ಯಾನ್ಸ್‌ಗೆ ಸಿಕ್ಕ ಸುಳಿವೇನು?

ಡಾರ್ಲಿಂಗ್ ಅಭಿಮಾನಿಗಳಿಗೆ ಒಂದು ಸುಳಿವು ಸಿಕ್ಕಿದೆ. ಈಗಾಗಲೇ 'ಸಲಾರ್' ಸಿನಿಮಾದಲ್ಲಿ 5 ಆಕ್ಷನ್ ಸೀನ್‌ಗಳನ್ನು ಶೂಟ್ ಮಾಡಲಾಗಿದೆಯಂತೆ. ಈಗ 6ನೇ ಆಕ್ಷನ್ ಸೀನ್‌ ಅನ್ನು ಶೂಟ್ ಮಾಡುತ್ತಿದ್ದಾರೆ ಎಂದು ಅವರಿಗೆ ಮಾಹಿತಿ ಸಿಕ್ಕಿದೆ. ಅಲ್ಲದೆ ಪೃಥ್ವಿರಾಜ್ ಇನ್ನೂ 'ಸಲಾರ್' ಟೀಮ್ ಸೇರಿಕೊಂಡಿಲ್ಲ. ಹಾಗಾಗಿ ಅವರೊಂದಿಗೂ ಮಾಸ್ ಆಕ್ಷನ್ ಸೀನ್ ಅನ್ನು ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ. ಇದನ್ನೆಲ್ಲಾ ಕೇಳಿ ಒಂದು ಸಿನಿಮಾ ಇಷ್ಟೊಂದು ಆಕ್ಷನ್ ಸೀನ್ ಇದ್ಮೇಲೆ ಇನ್ನೊಂದು ಪಾರ್ಟ್ ಬರೋದು ಪಕ್ಕಾ ಎಂದು ಗುಲ್ಲೆಬ್ಬಿಸಿದ್ದಾರೆ.

'ಸಲಾರ್' ಎರಡೂ ಪಾರ್ಟ್ ಒಮ್ಮೆಗೆ ಶೂಟಿಂಗ್!

'ಸಲಾರ್' ಎರಡೂ ಪಾರ್ಟ್ ಒಮ್ಮೆಗೆ ಶೂಟಿಂಗ್!

'ಸಲಾರ್' ಮೇಕಿಂಗ್ ನೋಡಿ ಪ್ರಶಾಂತ್ ನೀಲ್ ಒಮ್ಮೆಗೆ ಎರಡೂ ಪಾರ್ಟ್ ಅನ್ನೂ ಒಟ್ಟಿಗೆ ಶೂಟ್ ಮಾಡುತ್ತಿದ್ದಾರೆ ಎಂದು ಫ್ಯಾನ್ಸ್ ನಂಬಿಕೆ. ಹೀಗಾಗಿ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಈ ಬಗ್ಗೆ ಇನ್ನು ಪ್ರಶಾಂತ್ ನೀಲ್ ಆಗಲಿ, ಸಿನಿಮಾ ಸಂಸ್ಥೆಯಾಗಲಿ ಅಥವಾ ಪ್ರಭಾಸ್ ಆಗಲಿ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಿಲ್ಲ. ಫ್ಯಾನ್ಸ್ ಇಷ್ಟೆಲ್ಲಾ ಹೇಳಿದ ಮೇಲೆ 'ಸಲಾರ್' ಎರಡು ಭಾಗಗಳಲ್ಲಿ ರಿಲೀಸ್ ಆದರೂ ಆಗಬಹುದು ಎಂಬ ಲೆಕ್ಕಾಚಾರ ಹಾಕುತ್ತಿದೆ ಟಾಲಿವುಡ್.

ಹೈದರಾಬಾದ್‌ನಲ್ಲಿ ಪ್ರಶಾಂತ್ ನೀಲ್

ಹೈದರಾಬಾದ್‌ನಲ್ಲಿ ಪ್ರಶಾಂತ್ ನೀಲ್

ಸದ್ಯ ಪ್ರಶಾಂತ್ ನೀಲ್ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದಾರೆ. 'ಸಲಾರ್' ಸಿನಿಮಾ ಮುಗಿಸುವವರೆಗೂ ಕನ್ನಡ ಸಿನಿಮಾಗಳತ್ತ ಮರಳುವುದು ತೀರಾ ಅನುಮಾನ. ಇದರೊಂದಿಗೆ ಜೂ.ಎನ್‌ಟಿಆರ್ ಸಿನಿಮಾ ಕೈಗೆತ್ತಿಗೊಳ್ಳಲಿದ್ದಾರೆ. ಆ ಬಳಿಕ ಮತ್ತೆ 'ಕೆಜಿಎಫ್ 3' ಸಿನಿಮಾಗೆ ಪ್ರಶಾಂತ್ ನೀಲ್ ಮರಳಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇದ್ಯಾವುದರ ಬಗ್ಗೆನೂ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.

More from Filmibeat

English summary
Prabhas Fans Find Clues That Prashanth Neel Making Salaar In Two Parts, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X