"ಇದು ನಮ್ಮ ರಾಮನ ಕಥೆ.. ಟೀಸರ್‌ಗಿಂತ ಟ್ರೈಲರ್ ಉತ್ತಮ.. ಪ್ರಭಾಸ್‌ಗಲ್ಲ ಈ ಪಾತ್ರ": ನೆಟ್ಟಿಗರ ರೆಸ್ಪಾನ್ಸ್ ಏನು?
ಟೀಸರ್ ಹೆವಿ ಟ್ರೋಲ್ ಆದ ಬಳಿಕ 'ಆದಿಪುರುಷ್' ಟ್ರೈಲರ್ ಹೊರಬಿದ್ದಿದೆ. ನಿರ್ದೇಶಕ ಓಂ ರಾವತ್, ಪ್ರಭಾಸ್ ಇಬ್ಬರೂ ಟೀಸರ್‌ನಲ್ಲಿ ಟ್ರೋಲ್ ಆಗಿದ್ದರು. ಅದರಲ್ಲೂ ಹುನುಮಂತ ಹಾಗೂ ರಾವಣನ ಲುಕ್ ಹಿಂದೂಗಿಂತ ಮೊಘಲ್ ಪಾತ್ರಗಳಂತೆ ಇವೆ ಎಂದು ಟೀಕಿಸಿದ್ದರು.
'ಆದಿಪುರುಷ್' ಪಾತ್ರಗಳು ಕಾರ್ಟೂನ್‌ನಂತೆ ಇವೆ ಎಂದು ಮತ್ತೆ ಕೆಲವರು ಟ್ರೋಲ್ ಮಾಡಿದ್ದರು. ಸಿನಿಮಾದ ವಿಎಫ್‌ಎಕ್ಸ್‌ಗೆ ನೆಗೆಟಿವ್ ರೆಸ್ಪಾನ್ಸ್ ಸಿಗುತ್ತಿದ್ದಂತೆ ಸಿನಿಮಾ ರಿಲೀಸ್ ಅನ್ನು ಪೋಸ್ಟ್‌ಪೋನ್ ಮಾಡಲಾಗಿತ್ತು.

ಪ್ರಭಾಸ್ ಅಭಿಮಾನಿಗಳು ನಿರ್ದೇಶಕ ಓಂ ರಾವತ್ ವಿರುದ್ಧ ತಿರುಗಿಬಿದ್ದಿದ್ದರು. ಹೀಗಾಗಿ ನಿರ್ದೇಶಕರು ಸೇರಿದಂತೆ, ಇಡೀ ವಿಎಫ್‌ಎಕ್ಸ್ ತಂಡ ಮತ್ತೆ ರೀ-ವರ್ಕ್ ಮಾಡಿದೆ. ಇದು ಇಂದು (ಮೇ 9) ರಿಲೀಸ್ ಆಗಿರೋ ಟ್ರೈಲರ್‌ನಲ್ಲೂ ಕಾಣುತ್ತಿದೆ. ಟೀಸರ್ ನೋಡಿ ಮುನಿಸಿಕೊಂಡಿದ್ದ ಪ್ರಭಾಸ್ ಅಭಿಮಾನಿಗಳೂ ಟ್ರೈಲರ್ ನೋಡಿ ಏನಂದ್ರು? ಅವರ ರೆಸ್ಪಾನ್ಸ್ ಏನು? ಅನ್ನೋ ಡಿಟೈಲ್ಸ್ ಇಲ್ಲಿದೆ.
'ಆದಿಪುರುಷ್' ಪರ್ಪೆಕ್ಟ್ ಟ್ರೈಲರ್
ಬಹಳ ದಿನಗಳ ಬಳಿಕ ಪೌರಾಣಿಕ ಸಿನಿಮಾವೊಂದು ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಹಾಗಾಗಿ ಈ ಸಿನಿಮಾವನ್ನು ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದರು. ಆದರೆ, ಟೀಸರ್ ಸಿನಿಪ್ರಿಯರ ಆಸೆಗೆ ತಣ್ಣೀರು ಎರಚಿತ್ತು. ಆದ್ರೀಗ ಟ್ರೈಲರ್ ಹೊಸ ಹೋಪ್ ಕೊಟ್ಟಿದೆ.
" ಮೈಜುಂ ಎನಿಸುವ ಕ್ಷಣ. ಎಂತಹ ಅದ್ಭುತ ಟ್ರೈಲರ್. ಈ ಹಿಂದೆ ಬಂದಿದ್ದ ಟೀಸರ್ ತುಂಬಾನೇ ನಿರಾಸೆ ಮಾಡಿತ್ತು. ಆದ್ರೀಗ ಕಾಸ್ಟ್ಯೂಮ್, ವಿಜ್ಯೂವಲ್ಸ್, ಡೈಲಾಗ್ಸ್, ಮ್ಯೂಸಿಕ್ ಎಲ್ಲವೂ ಅದ್ಭುತವಾಗಿದೆ. ಖಂಡಿತವಾಗಿಯೂ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತೇವೆ." ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಟೀಸರ್‌ಗಿಂತ ಟ್ರೈಲರ್ ಅದ್ಭುತ
'ಆದಿಪುರುಷ್' ಟ್ರೈಲರ್ ನೋಡಿ ಪ್ರಭಾಸ್ ಅಭಿಮಾನಿಗಳಿಗೆ ಮತ್ತೆ ಜೀವ ಬಂದಂತಾಗಿದೆ. ಖುಷಿಯಾಗಿ ಟ್ರೈಲರ್ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. " ಟೀಸರ್‌ಗಿಂತ ಅದ್ಭುತ.. ಅದ್ಭುತ.. ಪ್ರಭಾಸ್ ಕಮ್‌ಬ್ಯಾಕ್ ಫೀಲ್ ಕೊಡುತ್ತೆ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. "ಆದಿಪುರುಷ್ ಟೀಸರ್ ಕಟ್ ಮಾಡಿದ್ದಕ್ಕಿಂತ ಅದ್ಭುತ" ಎಂದು ಮತ್ತೊಬ್ಬ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ಎಂತಹ ಮಹಾಕಾವ್ಯ?
"ಎಂತಹ ಮಹಾಕಾವ್ಯ. ಪ್ರೇಕ್ಷಕರಿಗೆ ಅದ್ಭುತವಾದ ಮನರಂಜನೆ ಕೊಡುವುದಕ್ಕೆ ಪ್ರಭಾಸ್‌ರಿಂದ ಮಾತ್ರ ಸಾಧ್ಯ. ಇಂತಹ ಪಾತ್ರಗಳನ್ನು ಮಾಡುತ್ತಿರುವುದಕ್ಕೆ ಧನ್ಯವಾದಗಳು. ಈ ವಿಚಾರಕ್ಕೆ ಯಾವಾಗಲೂ ಹೆಮ್ಮೆಯಿದೆ." ಎಂದು ಮತ್ತೊಬ್ಬ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
"ಪ್ರಭಾಸ್‌ಗೆ ಅಲ್ಲ ಈ ಪಾತ್ರ"
ಈ ಟ್ರೈಲರ್‌ನಲ್ಲಿ ಪ್ರಭಾಸ್ ದೊಡ್ಡ ನಿರಾಸೆ. ಈ ಪಾತ್ರಕ್ಕೆ ಅವರು ಸೂಟ್ ಆಗುತ್ತಿಲ್ಲ. ರಾಮಾಯಣ ಆಧಾರಿತ ಸಿನಿಮಾ ಆಗಿರುವುದರಿಂದ ವರ್ಕ್ ಆಗಬಹುದು ಅಷ್ಟೇ" ಎಂದು ಇನ್ನೊಬ್ಬ ನೆಟ್ಟಿಗರು ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ.


Click it and Unblock the Notifications











